ಯಾರು ಈ ಪ್ರಾಣಿ ಹಂತಕರು ???
. ವನ್ಯ ಜೀವಿ ಸಂರಕ್ಷಣೆ ಎಂದು ಒಂದೆಡೆ ಸರ್ಕಾರಗಳು ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ! ಪ್ರಾಣಿ ಪ್ರಿಯರಂತೂ ಸಾಮಾಜಿಕ ಜಾಲತಾಣಗಳಲ್ಲಿ ದಿನಂಪ್ರತಿ ಇದರ ಬಗ್ಗೆ ಚರ್ಚೆಗಳನ್ನು ನಡೆಸುತ್ತಾರೆ ! ನಿಜವಾದ ಕಾಳಜಿ ಇರುವವರು ಬೀದಿಗಿಳಿದು ಹೋರಾಟವನ್ನೂ ಮಾಡುತ್ತಾರೆ !! ಇದರೆಲ್ಲದರ ನಡುವೆಯೇ ಇತ್ತೀಚಿಗೆ ಫೇಸ್ ಬುಕ್ ನಲ್ಲಿ ಅಪ್ಲೋಡ್ ಆದ ಕೆಲವು ಇಮೇಜ್ ಗಳು ನಿಜಕ್ಕೂ ಗಾಬರಿಯನ್ನುಂಟು ಮಾಡಿದವು
. ಕೋವಿಗಳನ್ನು ಹಿಡಿದುಕೊಂಡು ಕಾಡಲೆಯುತ್ತಾ, ಮೊಲವೊಂದನ್ನು ಹಿಡಿದು ಪೋಸ್ ಕೊಡುತ್ತಾ ರಾಜಾರೋಷವಾಗಿ 'ವನ್ಯ ಜೀವಿ ಸಂರಕ್ಷಣಾ ಕಾಯ್ದೆ' ಗೆ ಸೆಡ್ಡು ಹೊಡೆದು ತಮ್ಮ ಸಾಹಸವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ ಆ 'ಮನುಷ್ಯರು???' ನ್ನು ನೋಡಿದ ಯಾವುದೇ ಪ್ರಾಣಿ ಪ್ರಿಯನ ರಕ್ತ ಕುದಿಯದೆಯೇ ಇದ್ದದ್ದಿಲ್ಲ
. ಇದನ್ನು ನೋಡಿದ ಕೂಡಲೇ ನಮ್ಮ ಸಾಮಾಜಿಕ ಜಾಲ ತಾಣದ ವನ್ಯ ಜೀವಿ ಸಂರಕ್ಷಕರು ಇವರ ಕಾರ್ಯದ ವಿರುದ್ದ ಮುಗಿಬಿದ್ದರು..ಸಾಧ್ಯವಾದಷ್ಟು ಪೇಜ್ ಗಳಲ್ಲಿ ಅದನ್ನು ಶೇರ್ ಮಾಡಿದರು. ಅವರ 'ಪೋಸ್ಟ್ ಶೇರ್' ಪ್ರಭಾವದಿಂದಲೋ ಏನೋ ಇದು ಅರಣ್ಯ ಇಲಾಖೆಯ ಗಮನಕ್ಕೆ ಹೋಗಿ ಇಂದು ಮೀಡಿಯಾಗಳಲ್ಲಿ ಅದರ ಬಗ್ಗೆ ಪ್ರಸ್ತಾಪವಾಗಿದೆ
.ಈ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ವನ್ಯ ಜೀವಿ ಪ್ರಧಾನ ಸಂರಕ್ಷಣಾಧಿಕಾರಿ ವಿನಯ್ ಲೂತ್ರಾರವರು ತಕ್ಷಣವೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ವನ್ಯ ಜೀವಿ ಸಂರಕ್ಷಣಾ ಖಾಯಿದೆಯಡಿಯಲ್ಲಿ ಕೇಸ್ ದಾಖಲಿಸುವುದಾಗಿ ತಿಳಿಸಿದ್ದಾರೆ. ಕರ್ನಾಟಕದ ಭಾಗದಲ್ಲಿರುವ ನೀಲಗಿರಿ Biosphere ನಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ
. ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಇದರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ರಾಜಾರೋಷವಾಗಿ ವನ್ಯ ಜೀವಿ ಸಂರಕ್ಷಣೆಗೆ ಸೆಡ್ಡು ಹೊಡೆಯುವ ಇಂತಹ ಜನರು ಬೆಳೆಯುವುದರಲ್ಲಿ ಸಂಶಯವಿಲ್ಲ
. ಇವರ ಕೃತ್ಯಗಳನ್ನು ಫೇಸ್ ಬುಕ್ ಪೋಸ್ಟ್ ನಲ್ಲಿ ವಿರೋಧಿಸಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ ಸಾಮಾಜಿಕ ಜಾಲತಾಣ ವನ್ಯ ಜೀವಿ ಪ್ರಿಯರಿಗೊಂದು ನಮ್ಮ ಕಡೆಯಿಂದ ಥ್ಯಾಂಕ್ಸ್ ಹೇಳೋಣ ಅಲ್ಲವೇ....
ಚಿತ್ರ ಕೃಪೆ - Internet

Comments
Post a Comment