ಅಬ್ಬಬ್ಬಾ ಇದೆಂತಹಾ ಸೆಖೆ....
ಅಬ್ಬಬ್ಬಾ ಇದೆಂತಾ ಸೆಖೆ..ಹಿಂದೆಂದಿಗಿಂತಲೂ ಸಹಿಸಲಸಾಧ್ಯವಾದ ಸೆಖೆ..ಎಂತಾ ಬಿಸಿಲು..ಒಂದು ಮಳೆಯಾದರೂ ಬರಬಾರದೇ...! ಹೀಗೆ ಮಾತನಾಡುತ್ತಾ ಇದೇ ಸಮಯದಲ್ಲಿ ಕರೆಂಟ್ ತೆಗುವುವವರಿಗೆ ಒಂದಷ್ಟು ಹಿಡಿ ಶಾಪ ಹಾಕುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ .ಇಂತಹ ಮಾತುಗಳನ್ನು ಕೇಳಿದಾಗ ನನಗನ್ನಿಸುವುದು ಜನಗಳು ಸಮ್ಮನೆ ಸೆಖೆ ,ಮಳೆ ಎನ್ನುತ್ತಾರೆಯೇ ವಿನಃ ಇಂತಹ ಹವಾಮಾನ ವೈಪರೀತ್ಯದ ಮೂಲಗಳ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲವಲ್ಲವೆಂದು .ಹೌದು ಬೇಸಿಗೆ ಬಂತೆಂದರೆ ಇಂತಹ ಮಾತುಗಳನ್ನು ನಾವು ಕೇಳುವುದು ಸಹಜವೇ..ಅದರಲ್ಲಿ ವಿಶೇಷವೇನು ಇಲ್ಲ ಬಿಡಿ ಅನ್ನುತ್ತಿರಾ... ಇದೆ ಖಂಡಿತವಾಗಿಯೂ ವಿಶೇಷವಿದೆ .ಇತ್ತೀಚಿನ ವರ್ಷಗಳ ಬೇಸಿಗೆಗಳು ಹಿಂದೆಂದಿಗಿಂತಲೂ ಹೆಚ್ಚು ಉಷ್ಣತೆಯನ್ನು ಹೊಂದುತ್ತಿರುವುದಲ್ಲದೇ ಸಹಿಸಲು ಅಸಾಧ್ಯವಾದ ಪರಿಸ್ಥಿತಿಯನ್ನು ತಂದಿರುವುದರಲ್ಲಿ ಸಂಶಯವಿಲ್ಲ .ನೀವೀ ಲೇಖನವನ್ನು ಆಫೀಸ್ ನ ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ಓದುತ್ತಿರುವುದಾದರೆ ನಾನು ಹೇಳಿದ ಮಾತು 'ಹೌದಾ' ಎಂದೆನಿಸಬಹುದು .ಆದರೆ ಸ್ವಲ್ಪ ಹೊರ ಬಂದು ಬಿಸಿಲಿಗೆ ಮೈ ಒಡ್ಡಿ ನಿಂತುಕೊಳ್ಳಿ...ನಾನು ಹೇಳುತ್ತಿರುವ ಉರಿ ಭೇಸಿಗೆಯ ಅನುಭವ ಕೆಲವೇ ನಿಮಿಷಗಳಲ್ಲಿ ನಿಮಗೆ ಉಂಟಾಗುತ್ತದೆ .ನಮ್ಮ ಶಿವಮೊಗ್ಗದಲ್ಲೇ ಒಂದು ವಾರದ ಹಿಂದೆ ದಾಖಲಾದ 40 ಡಿಗ್ರೀ ಉಷ್ಣಾಂಶ ಇಲ್ಲಿಯವರನ್ನು ಒಮ್ಮೆ ತಬ್ಬಿಬ್ಬು ಮಾಡಿದ್ದು ಸುಳ್ಳಲ್ಲ .ನೀವು ಮಲೆನಾಡಿ...