ಫ್ಲೈಯಿಂಗ್ ಸ್ನೇಕ್
.ಪ್ರಿಯ ಓದುಗ ಮಿತ್ರರೇ ಹಲವು ತಿಂಗಳುಗಳ ಬಳಿಕ i am back with ಫ್ಲೈಯಿಂಗ್ ಸ್ನೇಕ್ .ಈ ಹಾವನ್ನು ನೀವು ಸಾಧಾರಣವಾಗಿ ನೋಡಿರುತ್ತಿರಾ. ಹಳ್ಳಿ,ಕೆಲವೊಮ್ಮೆ ನಗರ ಪ್ರದೇಶಗಳಲ್ಲೂ ಇದು ಕಂಡುಬರುತ್ತದೆ.ಮರದ ಮೇಲೆ ವಾಸ ಮಾಡುವ ಈ ಹಾವು ಕೀಟ ಮತ್ತು ಕಪ್ಪೆಗಳನ್ನು ತಿಂದು ಬದುಕುತ್ತವೆ .ಮಲೆನಾಡಿನ ಭಾಗದ ಜನರು ಈ ಹಾವನ್ನು ಹಾರುಂಬೆ ಹಾವು ಎಂದು ಕರೆಯುತ್ತಾರೆ.ಇದರ ಬಗೆಯ ಕತೆಗಳು ನಂಬಿಕೆಗಳು ತೀರಾ ಉತ್ಪ್ರೇಕ್ಷೆ ಎನ್ನಿಸುವಷ್ಟರ ಮಟ್ಟಿಗೆ ಇದೆ .ಈ ಹಾವು ಸಾಧಾರಣವಾಗಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಕೆಲವೊಮ್ಮೆ ಗಾಳಿಯಲ್ಲಿ ಹಾರುವುದರಿಂದ (Gliding) ಇದರ ಬಗ್ಗೆ ವಿಶೇಷ ಕತೆಗಳು ಸೃಷ್ಟಿಯಾಗಿವೆ.ಈ ಹಾವಿನ ವಿಷ ಅದು ಕೇವಲ ತನ್ನ ಬಲಿಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆಯೇ ಹೊರತು ಮನುಷ್ಯರಿಗೆ ಇದರ ವಿಷದಿಂದ ಯಾವ ತೊಂದರೆಯೂ ಸಂಭವಿಸುವುದಿಲ್ಲ .ಹಲವರ ಪ್ರಕಾರ ಇದು ವಿಷಯುಕ್ತ ಹಾವಾಗಿದ್ದು,ಇದು ತಲೆಯ ಮಧ್ಯ ಭಾಗಕ್ಕೆ ಕಚ್ಚುತ್ತದೆ,ಸಾವು ಸಂಭವಿಸುತ್ತದೆ ಎಂದು ನಂಬಿದ್ದಾರೆ. ಜನರ ಈ ನಂಬಿಕೆಯಿಂದ ಈ ಹಾವನ್ನು ಸಾಧಾರಣವಾಗಿ ಕಂಡಲ್ಲಿ ಸಾಯಿಸಲಾಗುತ್ತದೆ ಜನರ ಮನಸ್ಸಿನಲ್ಲಿರುವ ಈ ಸುಳ್ಳು ನಂಬಿಕೆಗಳು ಈ ಹಾವಿಗೆ ಮಾರಕವಾಗಿರುವುದು ನಿಜಕ್ಕೂ ದುರಾದೃಷ್ಟಕರ .ಹಲವು ಕಡೆ ನಾನು ನೋಡಿದ್ದೀನಿ ಈ ಹಾವನ್ನು ವಿಷಜಂತು ಎಂದು ಎಂದು ಹೊಡೆದು ಕೊಲ್ಲುವುದನ್ನು.ಆ ಸಂಧರ್ಭಗಳಲ್ಲಿ ಅವರಿಗೆ ಎಷ್ಟೇ ಹೇ...