Posts

Showing posts from January, 2018

"ಕೊರಲ್ ಬ್ಲೀಚಿಂಗ್"

Image
ಹೀಗೆ ಅಂತರ್ಜಾಲದಲ್ಲಿ ಸುತ್ತುವಾಗ ನಾನು ನೋಡಿದ ಒಂದು ಚಿತ್ರ ಮನಸ್ಸಿಗೆ ಬಹಳ ಬೇಸರವನ್ನು ತಂದೊಡ್ಡಿತು.ಈ ಬಗ್ಗೆ ಒಂದಷ್ಟು ಬರೆಯಬೇಕೆನ್ನಿಸಿ ಬರೆದಿದ್ದೇನೆ ಮೇಲೆ ಇರುವ ಚಿತ್ರ 2017 ರಲ್ಲಿ ನಡೆದ (ಈಗಲೂ ನಡೆಯುತ್ತಿರುವ )ಕೊರಲ್ ಬ್ಲೀಚಿಂಗ್ ಎಂಬ ಕೊರಲ್ ಗಳ ದಾರುಣ ಕತೆಯ ಬಗ್ಗೆ ನೀವೆಲ್ಲಾ ಎನ್ ಜಿ ಸಿ ಅನಿಮಲ್ ಪ್ಲಾನೆಟ್ ಚಾನೆಲ್ ಗಳಲ್ಲಿ ಸಮುದ್ರಗಳಲ್ಲಿ ಇರುವ ಅತ್ಯಂತ ಬಣ್ಣ ಬಣ್ಣಗಳಿಂದ ಕುಡಿದ ಹವಳದ ಬಂಡೆಗಳನ್ನು ನೋಡಿರಬಹುದು.ಇವುಗಳೇ ಕೊರಲ್ ರೀಫ್. ಈ ಕೊರಲ್ ರೀಫ್ ಇರುವಲ್ಲಿ ಸಾವಿರಾರು ಜಾತಿಯ ಕಣ್ಮನ ತಣಿಸುವ ಜೀವಿಗಳು ವಾಸಿಸುತ್ತವೆ. ಏನಿದು ಕೊರಲ್ ರೀಫ್ ?? ಸಮುದ್ರಗಳಲ್ಲಿ ವಾಸಿಸುವ ಜೀವಿ. ಪ್ರತೀ ಕೊರಲ್ ಕೂಡ ಹಲವಾರು ಪಾಲಿಪ್ ಎಂದು ಕರೆಯಲ್ಪಡುವ ಜೀವಿಗಳಿಂದ ಮಾಡಲ್ಪಟ್ಟದ್ದಾಗಿರುತ್ತದೆ. ಈ ಪಾಲಿಪ್ ಗಳು calcium carbonate ಸ್ರವಿಸಿ ರಕ್ಷಣೆಗೆ ಶೆಲ್ ಗಳನ್ನು ನಿರ್ಮಿಸಿ ದಿಬ್ಬಗಳ ಆಕಾರ ನೀಡಿರುತ್ತದೆ ( ಕೊರಲ್ ಗಳಲ್ಲಿ ಮತ್ತೆ ಹಲವು ಬಗೆಗಳಿವೆ) ಈ ಕೊರಲ್ ಗಳಲ್ಲಿ ವಾಸಿಸುವ zooxanthellae ಎಂಬ ಆಲ್ಗೆಯಿಂದ ಕೂಡಾ ಇವು ಆಹಾರವನ್ನು ಪಡೆಯುತ್ತವೆ.ಸಮುದ್ರದ ಭಾಗದ ಕೇವಲ 1 ಪ್ರತಿಶತ ಇದ್ದರೂ ಕೂಡಾ ಇಡೀ ಸಾಗರ ಪರಿಸರ ವ್ಯವಸ್ಥೆಯ 25 ಪ್ರತಿಶತ ಜೀವಿಗಳು ಈ ಕೊರಲ್ ರೀಫ್ ಗಳಲ್ಲಿ ಕಂಡುಬರುತ್ತದೆ. ಇದಕ್ಕಾಗಿಯೇ ಇವುಗಳನ್ನು ಸಾಗರದ ಮಳೆಕಾಡು ಎನ್ನಬಹುದು     ಏನಿದು ಬ್ಲೀಚಿಂಗ್ ...