-ದಿ ಪ್ಯಾಕ್- .ಇಂಗ್ಲೀಷಿನಲ್ಲಿ ಧೋಳ್ (Dhole) ಎಂದು ಕರೆಯುವ ಸೀಳು ನಾಯಿಗಳ ಕುರಿತು ಕನ್ನಡದ ಖ್ಯಾತ ವನ್ಯಜೀವಿ ಛಾಯಗ್ರಾಹಕ ಜೋಡಿ ಕೃಪಾಕರ್-ಸೇನಾನಿ ನಿರ್ಮಿಸಿರುವ ಸಾಕ್ಷ್ಯಚಿತ್ರ(ಡಾಕ್ಯುಮೆಂಟರಿ) “ದಿ ಪ್ಯಾಕ್” ೨೦೧೦ರ ಸಾಲಿನ ಗ್ರೀನ್ ಆಸ್ಕರ್ ಪಡೆದುಕೊಂಡಿತು .ಅಂತರರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟ ದಕ್ಷಿಣ ಪೂರ್ವ ಏಶಿಯವನ್ನು ವಾಸಸ್ಥಾನವಾಗಿಸಿಕೊಂಡ ಧೋಳ್ ಜಾತಿಯ ಸೀಳುನಾಯಿಗಳನ್ನು ಅವಸಾನದ ಅಂಚಿನಲ್ಲಿರುವ ಪ್ರಾಣಿಗಳು ಎಂದು ಗುರುತಿಸಿದೆ. ಧೋಳ್, ತೋಳ ಎಂಬ ಪದದಿಂದ ಉತ್ಪತ್ತಿಯಾಗಿರಬಹುದು ಎನ್ನುವ ಅಂದಾಜು ಇದೆ. ಕರ್ನಾಟಕ, ತಮಿಳುನಾಡು, ಕೇರಳಗಳಲ್ಲಿ ವ್ಯಾಪಿಸಿರುವ ನೀಲಗಿರಿ ಬೆಟ್ಟದ ತಪ್ಪಲಿನ ದಟ್ಟವಾದ ಅರಣ್ಯಗಳಲ್ಲಿ ಕಂಡು ಬರುವ ಸೀಳುನಾಯಿಗಳು ಕುಗ್ಗುತ್ತಿರುವ ಅರಣ್ಯ ಪ್ರದೇಶ, ಬೇಟೆಯ ಅಭಾವ, ರೋಗ ರುಜಿನಗಳು ಅಲ್ಲದೆ ಬೇಟೆಗಾರರ ಹಾವಳಿಯಿಂದ ಅಳಿವಿನ ಅಂಚಿನಲ್ಲಿ ಜೀವನ ದೂಡುತ್ತಿವೆ .ಸೀಳುನಾಯಿಗಳ ವರ್ತನೆ, ಸಾಮಾಜಿಕ ಜೀವನವನ್ನು ಆಧರಿಸಿ ಕೃಪಾಕರ್ ಹಾಗೂ ಸೇನಾನಿ ನಿರ್ಮಿಸಿದ ನೂರ ಐವತ್ತು ನಿಮಿಷಗಳ ಸಾಕ್ಷ್ಯಚಿತ್ರವೇ “ದಿ ಪ್ಯಾಕ್”. ನ್ಯಾಶನಲ್ ಜಿಯಾಗ್ರಫಿಕ್, ಅನಿಮಲ್ ಪ್ಲಾನೆಟ್ ಮೊದಲದಾದ ಟಿವಿ ವಾಹಿನಿಗಳಲ್ಲಿ ನೀವು ವನ್ಯಜೀವಿಗಳಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರಗಳನ್ನು ಗಮನಿಸಿರಬಹುದು. ಇಂತಹ ಸಾಕ್ಷ್ಯಚಿತ್ರಗಳು ತಮ್ಮ ಉತ್ಕೃಷ್ಟ ತಾಂತ್ರಿಕ ಗುಣಮಟ್ಟದಿಂದ ನಮ್ಮ ಗಮನ ಸೆಳೆಯುವುದು ಹೆಚ್ಚು. ಎಲ್ಲೋ ಕೆಲವು ...