-Great Migration In Serengati-
.ಮೊದಲ ಬಾರಿಗೆ ನನ್ನ ಬ್ಲಾಗ್ ನಲ್ಲಿ ಒಂದು ವಿಶಿಷ್ಟ ಪ್ರಯತ್ನ ಮಾಡಿದ್ದೇನೆ
.BBC ಯವರು ನಿರ್ಮಿಸಿದ Great Events ಸರಣಿಯ 'Great Migration ' ಎಂಬ Documentary ಯನ್ನು ನಾನು ಕತೆಯ ರೂಪದಲ್ಲಿ ಈ ಪೋಸ್ಟ್ ನಲ್ಲಿ ಬರೆದಿದ್ದೇನೆ
.David Attenborough ರವರು ನಿರೂಪಣೆ ಮಾಡಿರುವ ಈ Documentary ಯಲ್ಲಿ ಪ್ರಕೃತಿಯಲ್ಲಿ ನಡೆಯುವ ವಿಸ್ಮಯ ಘಟನೆ 'ಪ್ರಾಣಿಗಳ ವಲಸೆ ಪ್ರಕ್ರಿಯೆ' ಯನ್ನು ಅದ್ಭುತವಾಗಿ ಚಿತ್ರಿಸಲಾಗಿದೆ .ಈ ವಲಸೆ ಪ್ರಕ್ರಿಯೆಯನ್ನು ಆಧರಿಸಿ ಬದುಕುವ ಮಾಂಸಾಹಾರಿ ಪ್ರಾಣಿಗಳ ಜೀವನವನ್ನು ಅತ್ಯಂತ ಮನಮುಟ್ಟುವಂತೆ ಚಿತ್ರಿಸಲಾಗಿದೆ
.ಈ Documentary ಯನ್ನು ನೋಡಿದ ಮೇಲೆ ಇದನ್ನು ಒಂದು ಕತೆಯ ರೂಪದಲ್ಲಿ ಬರೆಯಬೇಕ್ಕೆನ್ನೆಸಿ ಅದಕ್ಕೆ ತಯಾರಿಗಳನ್ನು ಮಾಡಿಕೊಂಡು ಇಡೀ Documentary ಯನ್ನು ಈ ಪೋಸ್ಟ್ ನಲ್ಲಿ ಬರಹಗಳ ರೂಪದಲ್ಲಿ ಬರೆದಿದ್ದೇನೆ
.ನೀವು ಈಗಾಗಲೇ ಈ Documentary ನೋಡಿರುವವರಾದರೆ ಇದನ್ನು ಓದಿ ಮತ್ತೊಮ್ಮೆ ಆನಂದಿಸಿ.ಇದು ತುಂಬಾ ದೊಡ್ಡ ಪೋಸ್ಟ್ ಆಗಿರುವುದರಿಂದ ಪುರ್ಸೊತ್ ಮಾಡಿಕೊಂಡು ಓದಿ
.ಸರಿ ಹಾಗಾದರೆ ನೂರೆಂಟು ವಿಷಯಗಳಲ್ಲಿ ಸುತ್ತುತ್ತಿರುವ ನಿಮ್ಮ ಮನಸನ್ನು ಈಗ ಆಫ್ರಿಕಾದ ಈ ಮಹಾ ವಿಸ್ಮಯ ನಡೆಯುವ ತಾಣ Serengati ಎಂಬ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತೇನೆ .........ತಯಾರಾಗಿ..ರೆಡಿ 1 ...2 ...3
.ದೇಶ ಭಾಷೆಗಳನ್ನು ಮೀರಿ ಈಗ ನಿಮ್ಮ ಮನಸ್ಸು East ಆಫ್ರಿಕಾದ Serengati ಎಂಬ ಪ್ರದೇಶಕ್ಕೆ ಬಂದಿಳಿದಿದೆ
.ಎತ್ತ ನೋಡಿದರೂ ಹಸಿರು ಹುಲ್ಲು,ಆ ಹುಲ್ಲನ್ನು ಆನಂದಿಸುತ್ತಾ ತಿನ್ನುತ್ತಿರುವ ಲಕ್ಷಾಂತರ ಪ್ರಾಣಿಗಳು,ಇದನ್ನೆಲ್ಲಾ ನೋಡುತ್ತಾ ನಿಂತಿರುವಂತೆ ಕಾಣುವ Serengati ಯ Mountain Of ಗಾಡ್ ಎಂದು ಕರೆಸಿಕೊಳ್ಳುವ ಜ್ವಾಲಾಮುಖಿ ಪರ್ವತ Ol Doinyo Lengai .ಒಟ್ಟಾರೆ ಸ್ವರ್ಗವೇ ಧರೆಗೆ ಬಂದಿಳಿದಂತ ದೃಶ್ಯ....
. Ol Doinyo Lengai ನ ಪಶ್ಚಿಮಕ್ಕೆ ಈ ಪ್ರಾಣಿಗಳೆಲ್ಲಾ ಮೇಯುತ್ತಿರುವ ಪ್ರದೇಶದ ಹೆಸರು 'Short Grass Plain '
.ವರ್ಷಕ್ಕೊಂದು ಬಾರಿ ಇದೇ ಪ್ರದೇಶದಲ್ಲಿ ಬರೋಬ್ಬರಿ 30 ಲಕ್ಷ ಪ್ರಾಣಿಗಳು ಒಟ್ಟಿಗೆ ಸೇರಿ ಹಲವು ತಿಂಗಳುಗಳ ಕಾಲ ಇಲ್ಲಿನ ಹಸಿರು ಹುಲ್ಲನ್ನು ತಿಂದು ಬದುಕುತ್ತವೆ.ಇಷ್ಟೊಂದು ಪ್ರಾಣಿಗಳು ಒಟ್ಟಿಗೆ ಸೇರಿ ಹುಲ್ಲನ್ನು ಮೇಯುವ ಭೂಮಿಯ ಏಕೈಕ ಪ್ರದೇಶವಿದು.
ಇದು ನಿಜವಾಗಿಯೂ 'Savannah paradise '
.ಇಷ್ಟೊಂದು ಸಸ್ಯಾಹಾರಿಗಳು ಸೇರುವ ಈ ಸಮಯ ಇಲ್ಲಿನ ಮಾಂಸಾಹಾರಿ ಪ್ರಾಣಿಗಳಿಗೆ ಸುಸಮಯ.ಇಲ್ಲಿನ ಸಿಂಹಗಳಿಗೆ ತಮ್ಮ ಮುಂದಿನ ವಂಶದ ಕುಡಿಯನ್ನು ಭೂಮಿಗೆ ತರಲು ಇದು ಅತ್ಯುತ್ತಮ ಸಮಯ
.ಸಿಂಹಗಳಿಗೆ ತಮ್ಮದೇ ಆದ ಪ್ರದೇಶವಿರುತ್ತದೆ,ಈ ಪ್ರದೇಶದೊಳಗೆ ಬಂದ ತಮ್ಮ ಭೇಟೆಯನ್ನಷ್ಟೆ ಅವು ಭೇಟೆಯಾಡುತ್ತವೆ
.ವಿಸ್ಮಯ ವಲಸೆ ಈಗ ಪ್ರಾರಂಭವಾಗಿದೆ.ಈ ವಲಸೆ ಹೋಗುವ ಅತ್ಯಂತ ಶಕ್ತಿಶಾಲಿ ಜೀವಿ Wildebeest (ಕಾಡೆಮ್ಮೆ ಜಾತಿಯ ಪ್ರಾಣಿ) ಇವುಗಳು ಅತ್ಯಂತ ಸೂಕ್ಷ್ಮ ಪ್ರಾಣಿಗಳಾಗಿದ್ದು ಮಳೆಯ ಗುಡುಗಿನ ಸದ್ದನ್ನು 30 ಮೈಲಿ ದೂರದಿಂದಲೇ ಕೇಳಿಸಿಕೊಳ್ಳುತ್ತವೆ
.ಮಳೆಯ ಮೋಡಗಳು ಚಲಿಸಿದ ದಿಕ್ಕಿನತ್ತ ಹೊರಡುವ ಇವು ನಿಧಾನವಾಗಿ Short Grass Plane ಅನ್ನು ಖಾಲಿ ಮಾಡುತ್ತವೆ,ಅವುಗಳಿಗೆ ತಿನ್ನಲು ಹೊಸ ಹಸಿರು ಹುಲ್ಲು ಬೇಕು,ಆದ್ದರಿಂದ ಏಳು ತಿಂಗಳುಗಳ ಈ ವಿಸ್ಮಯ ವಲಸೆ ಪ್ರಾರಂಭವಾಗುತ್ತದೆ
.ಒಂದು ವಾರದೊಳಗೆ Short Grass Plain ನಲ್ಲಿದ್ದ 90 % ಪ್ರಾಣಿಗಳು ಆ ಜಾಗದಿಂದ ಖಾಲಿಯಾಗುತ್ತವೆ.ಲಕ್ಷಗಟ್ಟಲೆ ಇದ್ದ Wildebeest ಗಳು ಈಗ ಅಲ್ಲಿ ಒಂದೂ ಇಲ್ಲ......
.ಆಗಸ್ಟ್ ಸಮಯ.....
.ಇಲ್ಲಿನ ದಕ್ಷಿಣ ಭಾಗದಲ್ಲಿ ಬರುವ Ndutu ಸಿಂಹಗಳ ಗುಂಪಿಗೆ ಇದು ಕಷ್ಟಕಾಲ.ಈ Ndutu ಸಿಂಹಗಳ ಗುಂಪೇ ಈ ಕತೆಯ ಪ್ರಮುಖ ಪಾತ್ರದಾರಿಗಳು
.4 ಸಿಂಹಿಣಿಗಳು,7 ಮರಿಗಳು ಈ Ndutu ಗುಂಪಿನಲ್ಲಿವೆ
.ಹಸಿರು ಸ್ವರ್ಗವಾಗಿದ್ದ Short Grass Plain ಈಗ ಕಂದು ಬಣ್ಣಕ್ಕೆ ತಿರುಗಿದೆ.Ndutu ಸಿಂಹಗಳು ನೀರು ಮತ್ತು ಆಹಾರಕ್ಕೆ ಹೋರಾಟವನ್ನೇ ಮಾಡಬೇಕಾದ ಸ್ಥಿತಿ
.ಈ ಸಮಯದಲ್ಲೇ ಒಂದು ಗಂಡು ಮರಿ ಖಾಯಿಲೆಗೆ ಬೀಳುತ್ತದೆ
.ಆಹಾರವನ್ನರಸುತ್ತಾ ಸಾಗುವ ನಮ್ಮ ಸಿಂಹಗಳ ಗುಂಪು ಹಲವು ಮೈಲಿಗಳವರೆಗೆ ನಡೆಯುತ್ತಿವೆ.ಖಾಯಿಲೆ ಬಿದ್ದ ಮರಿ ವೇಗವಾಗಿ ನಡೆಯಲಾಗದೆ ನಿಧಾನವಾಗಿ ನಡೆದು ಹಿಂದುಳಿದಿದೆ.ಆದರೆ ಅದನ್ನು ಹೆಣ್ಣು ಸಿಂಹಗಳು ಕಾಯುವುದಿಲ್ಲ.ಏಕೆಂದರೆ ಅವುಗಳು ಈಗ ಜೀವವನ್ನು ಉಳಿಸಿಕೊಳ್ಳಬೇಕಿದೆ
.ಮುಂದುವರಿದ ಸಿಂಹಗಳಿಗೆ ಒಂದು ನೀರಿನ ಹೊಂಡದ ಬಳಿ warthog (ಕೊರೆಯುಳ್ಳ ಕಾಡು ಹಂದಿ ಜಾತಿಯ ಪ್ರಾಣಿ)
ಕಾಣಸಿಗುತ್ತದೆ.ನಮ್ಮ 4 ಸಿಂಹಿಣಿಗಳು ಪ್ರಕೃತಿ ಅವಕ್ಕೆ ಕಳಿಸಿಕೊಟ್ಟ ಚಾಕಚಕ್ಯತೆಯಿಂದ ಅದರ ಮೇಲೆ ಮುಗಿ ಬಿದ್ದು ಅದನ್ನು ಕೊಂದು ತಿನ್ನಲು ಶುರು ಮಾಡುತ್ತವೆ.Ndutu ಸಿಂಹಗಳ ಗುಂಪಿಗೆ ಇಂಥ ಕಾಲದಲ್ಲಿ ಇದು ಒಳ್ಳೆಯ ಭೋಜನ
.ದಾರಿಯಲ್ಲಿ ನಿಧಾನವಾಗಿ ನಡೆದು ಬರುತ್ತಿದ್ದ ಗಂಡು ಮರಿ ಮುಂದೆ ನಡೆಯಲಾಗದೆ ಒಂದೆಡೆ ಮಲಗಿರುತ್ತದೆ.ನಿಧಾನವಾಗಿ ಅದರ ಪ್ರಾಣ ಪಕ್ಷಿ ಹಾರಿಹೋಗುತ್ತದೆ.......
.Short Grass Plain ನಲ್ಲಿ ಒಣ ಹವಾಮಾನ ಬಂದು ಮೂರು ತಿಂಗಳು ಕಳೆದಿವೆ........
ಈಗ Ndutu ಸಿಂಹಗಳ ಗುಂಪಿನಲ್ಲಿ 4 ಸಿಂಹಿಣಿ ಹಾಗು 6 ಮರಿಗಳು ಮಾತ್ರ ಉಳಿದಿವೆ
.ಲಕ್ಷಾಂತರ Wildebeest ಗಳು ನಡೆಯುತ್ತಾ ಸಾಗಿವೆ....
.ಇತ್ತ Ndutu ವಿನಲ್ಲಿ ಸಿಂಹಗಳಿಗೆ ಆಹಾರ ಸಿಗುವುದು ಕಷ್ಟವಾದರೂ ಜಿರಾಫೆ,ಇಂಪಾಲ, ಕಾಡು ಬೆಕ್ಕು,ಇಲಿಗಳಿಗೆ ಇನ್ನೂ ಆಹಾರ ಉಳಿದಿದೆ.ಅಕೇಶಿಯ ಎಲೆಗಳನ್ನು ತನ್ನ ಉದ್ದನೆಯ ಕತ್ತುಗಳನ್ನು ಬಳಸುತ್ತಾ ,ತಿನ್ನುತ್ತಾ ಜಿರಾಫೆಗಳು ಬದುಕುತ್ತಿವೆ
.ಸೆಪ್ಟೆಂಬರ್ ತಿಂಗಳ ಮೊದಲ ದಿನಗಳು....
.Ndutu ಸಿಂಹಗಳ ಗುಂಪಿನಲ್ಲಿ ಸಿಂಹಿಣಿಗಳ ಜೊತೆ ಕೇವಲ 2 ಮರಿಗಳು ಮಾತ್ರ ಉಳಿದಿವೆ,ಅವು ತೀರ ಬಳಲಿವೆ.ದೇಹದಲ್ಲಿ ಚರ್ಮ ಮತ್ತು ಮೂಳೆಗಳು ಮಾತ್ರ ಕಾಣುತ್ತಿವೆ.ದುರಾದೃಷ್ಟವಶಾತ್ ಉಳಿದ ಮರಿಗಳು ಹಿಂದೆ ಬಿದ್ದಿವೆ .ಇದರಲ್ಲಿ ಒಂದು ಹೆಣ್ಣು ಮರಿ ಕೇವಲ ಎರಡು ಮೈಲಿಗಳ ದೊರದಲ್ಲಿ ಉಳಿದು ದಿಕ್ಕು ಕಾಣದೆ ತನ್ನ ಗುಂಪನ್ನು ಸೇರಲು ಕೂಗುತ್ತಿದೆ.ಅದರ ಮುಖದಲ್ಲಿ ಕಪ್ಪು ಕಲೆಗಳು ಬರಲಾರಂಭಿಸಿವೆ..ಹೀಗೆ ಬಳಲಿ ಕೂಗುತ್ತಿರಬೇಕಾದರೆ ಅದರ ಕೂಗಿಗೆ ಹತ್ತಿರದಲ್ಲೇ ಇದ್ದ ಅದರ ಇನ್ನೊಂದು ತಮ್ಮ ಕ್ಷೀಣವಾದ ದನಿಯಲ್ಲಿ ಉತ್ತರಿಸುತ್ತದೆ.ಕೂಗು ಬಂದ ದಿಕ್ಕಿಗೆ ಸಾಗಿ ತನ್ನ ತಮ್ಮನ ಜೊತೆ ಸೇರುತ್ತದೆ ಈ ಮರಿ
.ಎಂತಾ ವಿಪರ್ಯಾಸ ನೋಡಿ..ಈ ಎರಡು ಮರಿಗಳ ಸಮೀಪದಲ್ಲೇ ಒಂದು ಇಂಪಾಲಗಳ ಗುಂಪು ಮೇಯುತ್ತಿವೆ.ಆದರೆ ಇವಕ್ಕೆ ಭೇಟೆಯಾಡಲು ಬರುವುದಿಲ್ಲ...ಬಳಲಿ ಬೆಂಡಾದ ಇವು ತಮ್ಮ ಗುಂಪನ್ನು ಸೇರಲು ಕೂಗುತ್ತಿವೆ........ಅತ್ತ ಹಿಂದುಳಿದ ತಮ್ಮ ಮರಿಗಳನ್ನು ಹುಡುಕಲು ಸಿಂಹಿಣಿಗಳು ಕೂಗುತ್ತಿರುತ್ತವೆ,ಇವುಗಳ ಜೊತೆ ಬಳಲಿದ ಒಂದು ಗಂಡು ಮರಿಯು ಕಳೆದು ಹೋದ ತನ್ನ ಜೊತೆಗಾರರನ್ನು ಹುಡುಕಲು ಕ್ಷೀಣ ದ್ವನಿಯಲ್ಲಿ ಕೂಗುತ್ತಿರುತ್ತದೆ....ಆದರೆ ಇವುಗಳ ಕೂಗಿಗೆ ಅತ್ತಕಡೆಯಿಂದ ಉತ್ತರ ಬಾರದ ಕಾರಣ ತಮ್ಮ ಮುಂದಿನ ಆಹಾರ ಅರಸುತ್ತ ಮುಂದೆ ಸಾಗುತ್ತವೆ.....
.ಸೆಪ್ಟೆಂಬರ್ ತಿಂಗಳ ಮಧ್ಯದ ದಿನಗಳು
.ವರ್ಷದ ಅತ್ಯಂತ ಒಣ ದಿನಗಳು Ndutuವಿನಲ್ಲಿ
.ಇತ್ತ ಹೊಸ ಹುಲ್ಲು ಅರಸುತ್ತಾ ಸಾಗಿರುವ Wildebeest ಗಳು Serengeti ಯ ಉತ್ತರಕ್ಕೆ 100 ಮೈಲಿ ದೂರಕ್ಕೆ ಸಾಗಿವೆ
.ಈಗ ಇವುಗಳಿಗೆ ಒಂದು ದೊಡ್ಡ ಸವಾಲು ಎದುರಾಗಿದೆ.ಮುಂದೆ ಸಾಗಲು ಇವುಗಳು 'Mara' ನದಿಯನ್ನು ದಾಟಬೇಕು.ಎಲ್ಲಾ Wildebeest ಗಳು ಈ ನದಿಯ ದಡಕ್ಕೆ ಬಂದು ನಿಲ್ಲುತ್ತವೆ.ಇವುಗಳಿಗೆ ಆ ನದಿಯಲ್ಲಿ ಅಡಗಿರುವ ಅಪಾಯ ಗೊತ್ತು.....
ದೈತ್ಯಾಕಾರದ ಮೊಸಳೆಗಳು ಇವುಗಳ ರಕ್ತಕ್ಕಾಗಿ ಹೊಂಚು ಹಾಕಿ ಕುಳಿತಿವೆ....ಆದರೆ Wildebeest ಗಳು ದೃತಿ ಗೆಡುವುದಿಲ್ಲ
ಅವುಗಳು ಒಟ್ಟಿಗೆ ಅಪಾಯವನ್ನು ಎದುರಿಸಲು ಸಿದ್ದವಾಗಿರುತ್ತವೆ. ಒಮ್ಮೆಲೇ ಅಷ್ಟೂ Wildebeest ಗಳು ನದಿಯನ್ನು ದಾಟಲು ಶುರು ಮಾಡುತ್ತವೆ.ಕೆಲವನ್ನು ಮೊಸಳೆಗಳು ಹಿಡಿದು ಬಾಯಿಗೆಳೆದುಕೊಳ್ಳುತ್ತವೆ.ಒಮ್ಮೆಲೇ ಒಂದು Wildebeest ಅನ್ನು ಮಾತ್ರ ಅದು ಹಿಡಿಯಬಲ್ಲದಾದ್ದರಿಂದ ಹೆಚ್ಚಿನ Wildebeest ಗಳು ಇವುಗಳಿಂದ ತಪ್ಪಿಸಿಕೊಂಡು ಮುಂದಿನ ದಡಕ್ಕೆ ಬಂದು ತಮ್ಮ ಪಯಣ ಮುಂದುವರಿಸುತ್ತವೆ...
.ಇತ್ತ Ndutu ವಿನಲ್ಲಿ ಭೀಕರ ಭೇಸಿಗೆ .....
.ಸಣ್ಣ ಸಣ್ಣ ಕೀಟಗಳನ್ನು ತಿನ್ನುವ ಪ್ರಾಣಿಗಳಿಗೆ ಇನ್ನೂ ಆಹಾರ ಉಳಿದಿದೆ.ತಾಯಿ ಚೀತಾವೊಂದು ತನ್ನ ಶಕ್ತಿಯನ್ನೆಲ್ಲಾ ಬಳಸಿ ಸಿಕ್ಕುವ ಭೇಟೆಯನ್ನು ಕೊಂದು ತನ್ನ ಆರು ಮರಿಗಳನ್ನು ಆರೋಗ್ಯವಂತವಾಗಿರಿಸಿದೆ
.Ndutu ಸಿಂಹಗಳ ಗುಂಪಿನಲ್ಲಿದ್ದ ಹಲವು ಮರಿಗಳು ಆಹಾರ ಸಿಗದೆ ,ನಡೆದೂ ನಡೆದೂ ಕಳೆದು ಹೋಗಿ ಪ್ರಾಣ ಬಿಟ್ಟಿವೆ.ಆದರೆ ಪವಾಡವಶಾತ್ ಕಳೆದು ಹೋಗಿದ್ದ ನಮ್ಮ ಕಪ್ಪು ಕಲೆಯಿದ್ದ ಹೆಣ್ಣು ಮರಿ ಮತ್ತೆ ಗುಂಪನ್ನು ಸೇರಿಕೊಂಡಿದೆ.ಈಗ Ndutu ಸಿಂಹಗಳ ಗುಂಪಿನಲ್ಲಿ ಸಿಂಹಿಣಿ ಗಳ ಜೊತೆ ಕೇವಲ ಎರಡು ಮರಿಗಳು ಮಾತ್ರ ಉಳಿದಿವೆ .ಒಂದು ಹೆಣ್ಣು ಮತ್ತೊಂದು ಗಂಡು
.ಇದೇ ಸಮಯದಲ್ಲಿ Ndutu ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಅಲ್ಪ ಸ್ವಲ್ಪ ಉಳಿದಿದ್ದ ಹುಲ್ಲು ಹಾಗು ಪೊದೆ ಗಳನ್ನು ಸುಟ್ಟು ಬೂದಿ ಮಾಡುತ್ತದೆ.ಈ ಬೆಂಕಿ ಸಸ್ಯಾಹಾರಿ ಹಾಗು ಮಾಂಸಾಹಾರಿ ಪ್ರಾಣಿಗಳಿಗೆರಡಕ್ಕೂ ಮಾರಾಕವಾಗಿ ಪ್ರಭಾವ ಬೀರುತ್ತದೆ.ಮರೆ ನೀಡುತ್ತಿದ್ದ ಪೊದೆಗಳು ಸುಟ್ಟು ಬೂದಿಯಾಗಿರುವುದೇ ಇದಕ್ಕೆ ಕಾರಣ
.ಬೆಂಕಿಯಿಂದ ಬಚಾವಾದ Ndutu ಸಿಂಹಗಳು ಈಗ ಮತ್ತೊಂದು warthog ಅನ್ನು ಭೇಟೆಯಾಡುವ ಮೂಲಕ ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತವೆ
.ಮೊದಲೇ ಆಹಾರಕ್ಕಾಗಿ ದಣಿದ ಪ್ರಾಣಿಗಳಿಗೆ ಈಗ ಮತ್ತೊಂದು ಆಘಾತ.....4o ವರ್ಷಗಳ ನಂತರ ಈಗ Mountain Of God ತನ್ನ ಒಡಲಿನಿಂದ ಆರ್ಭಟಿಸಿ ಜ್ವಾಲಾಮುಖಿಯ ಬೂದಿಯನ್ನು Short Grass Plain ನ ಮೇಲೆಲ್ಲಾ ಹಬ್ಬಿಸುತ್ತದೆ
.ಇಡೀ Short Grass Plain ಬೂದಿಯಿಂದ ಆವೃತವಾಗುತ್ತದೆ
.ನವೆಂಬರ್ ತಿಂಗಳು ...
.Ndutu ಸಿಂಹಗಳು ಬಿಸಿಲಿನ ಶಾಖ ತಡೆಯಲಾಗದೆ ಸಿಕ್ಕ ನೆರಳಿನ ಪ್ರದೇಶದಲ್ಲಿ ಸುಸ್ತಾಗಿ ಮಲಗಿವೆ.ಮರಿಗಳು ತಮ್ಮ ಚೈತನ್ಯವನ್ನು ಕಳೆದುಕೊಂಡಿವೆ.ಅವುಗಳ ದೇಹದ ಬ್ಯಾಟರಿಯ ಶಕ್ತಿ ಕ್ಷೀಣಿಸುತ್ತಿದೆ............
.Ndutu ಸಿಂಹಗಳ ಕಷ್ಟ ಕಾಲವನ್ನು ದೂರ ಮಾಡಲೋ ಎಂಬಂತೆ ಗಾಳಿಯು ತನ್ನ ಪಥವನ್ನು ಬದಲಿಸಿ ಕಾಲಚಕ್ರದ ಬದಲಾವಣೆಯ ಮುನ್ಸೂಚನೆಯನ್ನು ನೀಡುತ್ತಿದೆ....
.ಈಗಾಗಲೇ ಬಹುದೂರ ಸಾಗಿರುವ ಸುಮಾರು 15 ಲಕ್ಷ Wildebeest ಗಳಿಗೆ ಮುಂದೇನು ಆಗುತ್ತದೆ ಎಂಬುದು ಗೊತ್ತು....ತಮ್ಮ ಬಹುದೂರ ಪ್ರಯಾಣವನ್ನು ನಿಲ್ಲಿಸಿ ಮಳೆ ಮೋಡಗಳನ್ನು ಹಿಂಬಾಲಿಸಿ ಈಗ ಮತ್ತೆ ದಕ್ಷಿಣದ ಕಡೆ ಅಂದರೆ Short Grass Plains ನ ಕಡೆ ತಮ್ಮ ಪ್ರಯಾಣವನ್ನು ಮುಂದುವರಿಸಿವೆ....
.ಭೂಮಿಯಲ್ಲಿ ನೆಲದ ಮೇಲೆ ಬದುಕಿರುವ ಪ್ರಾಣಿಗಳಲ್ಲೇ ಅತ್ಯಂತ ಸುದೀರ್ಘವಾದ ವಲಸೆ ಹೋಗುವ ಪ್ರಾಣಿಗಳು ಈ Wildebeest ಗಳು.ಮಳೆಯ ಮೋಡಗಳನ್ನು ಅರಸುತ್ತಾ ಇವು ಸಾವಿರಕ್ಕೂ ಹೆಚ್ಚು ಮೈಲಿ ವಲಸೆ ಹೋಗುತ್ತವೆ
.Short Grass Plain ನ ಮೇಲೆ ನಿಧಾನವಾಗಿ ಮೋಡಗಳು ಗುಂಪುಗೂಡುತ್ತವೆ.ಮಳೆಯ ನಿರೀಕ್ಷೆಯಲ್ಲಿ ಇಡೀ Short Grass Plain ನಲ್ಲಿ ಇರುವ ಪ್ರಾಣಿಗಳು ಕಾಲ ಕಳೆಯುತ್ತಿರುತ್ತವೆ
**ಮಳೆಯ ಮೊದಲ ಹನಿಗಳ ಸಿಂಚನ Short Grass Plain ನ ಮೇಲಾಗುತ್ತದೆ.ಬಿಸಿಲಿನಲ್ಲಿ ಬೆಂದು ಹೋಗಿದ್ದ ಪ್ರಾಣಿಗಳು ಮಳೆಯಿಂದ ಪುಳಕಗೊಳ್ಳುತ್ತವೆ.Ndutu ಸಿಂಹಗಳು ಕೂಡ ಈ ಮಳೆಯನ್ನು ಅನಂದಿಸುತ್ತವೆ ,ಅವುಗಳಿಗೆ ಮಳೆಯೆಂದರೆ ಹೊಸ ಭರವಸೆ
.ಮಳೆಯೇನೂ ತನ್ನ ಆರ್ಭಟವನ್ನು ಆರಂಭಿಸಿದ್ದರೂ ಕೂಡ Ndutu ಸಿಂಹಗಳು Short Grass Plain ನಲ್ಲಿ ಹೊಸ ಹಸಿರು ಹುಲ್ಲು ಬೆಳೆಯುವವರೆಗೆ ಕಾಯಲೇ ಬೇಕು
.ಮಳೆಯೇ ಭೂಮಿಗಿಳಿದ ಮೇಲೆ ಹಸಿರು ಬಾರದೇ ಇರುತ್ತದೆಯೇ???....ಮಳೆ ಆರಂಭವಾದ ವರದೊಳಗೆಲ್ಲಾ ಭೂಮಿಯಿಂದ ಹಸಿರು ಹುಲ್ಲು ಹುಟ್ಟಲು ಪ್ರಾರಂಭಿಸುತ್ತದೆ.ಕೆಲವೇ ದಿನದೊಳಗೆ Short Grass Plain ಹಸಿರಿನಿಂದ ಕಂಗೊಳಿಸುತ್ತದೆ
.7 ತಿಂಗಳ ನಂತರ ಮತ್ತೆ Wildebeest ಗಳ ಸಂಪೂರ್ಣ ಗುಂಪು Short Grass Plain ಗೆ ಆಗಮಿಸಲು ಇನ್ನೂ ಒಂದು ವಾರ ಬೇಕು....
.Mountain Of God ತನ್ನ ಆರ್ಭಟವನ್ನು ಇನ್ನೂ ನಿಲಿಸಿಲ್ಲ.ಸುಮಾರು 15 ,೦೦೦ ಮೀಟರ್ ಎತ್ತರಕ್ಕೆ ಬೂದಿಯನ್ನು ಚಿಮ್ಮಿಸುತ್ತಿದೆ Mountain Of God .ಆದರೆ ನಾವು ತಿಳಿದಂತೆ ಇದು Short Grass Plain ನಲ್ಲಿ ಸೇರಲಿರುವ ಪ್ರಾಣಿಗಳ ಜಾತ್ರೆಗೆ ಮಾರಕವಾಗುವುದಿಲ್ಲ.ಏಕೆಂದರೆ ವರ್ಷಾನು ವರ್ಷಗಳಿಂದ Mountain Of God ಹೊರಹಾಕುವ ಈ Mineral ಯುಕ್ತ ಬೂದಿಯು ನೆಲವನ್ನು ಫಲವತ್ತಾಗಿ ಮಾಡುವ ಮೂಲಕ ಪ್ರಾಣಿಗಳನ್ನು ಈ ಭಾಗಕ್ಕೆ ಬರಲು ಪ್ರೇರೇಪಿಸುತ್ತದೆ.ಈ ಬೂದಿಯು ಮರಗಳನ್ನು ಬೆಳೆಯಲು ಬಿಡದ ಕಾರಣ ಫಲವತ್ತಾದ ಹುಲ್ಲು ಯೆತೇಚ್ಚವಾಗಿ ಬೆಳೆಯುತ್ತದೆ .ಈ ಅಂಶವೇ Short Grass Plain ಅನ್ನು ಆಫ್ರಿಕಾದ ಅತ್ಯಂತ ಉತ್ತಮವಾದ Grazing Land ಆಗಿ ಮಾಡಿರುವುದು ಹಾಗು ಭೂಮಿಯ ಮೇಲೆಯೇ ಅಷ್ಟೊಂದು ಪ್ರಮಾಣದ ಪ್ರಾಣಿಗಳು ಒಂದೆಡೆ ಸೇರಿ ಬದುಕಲು ಸಹಕಾರ ನೀಡುವುದು
.Wildebeest ಗಳು ಆಗಮಿಸುವುದರೊಂದಿಗೆ Short Grass Plain ಮತ್ತೊಮ್ಮೆ Savannah Paradise ಆಗಿ ಪರಿವರ್ತನೆಗೊಂಡಿದೆ
.ಈ ಸಮಯದಲ್ಲೇ ಮುಂದಿನ ಪೀಳಿಗೆಯನ್ನು ತಮ್ಮ ಹೊಟ್ಟೆಯಲ್ಲಿ ಇಟ್ಟುಕೊಂಡಿದ್ದ ಹೆಣ್ಣು Wildebeest ಗಳು ಮರಿಗಳಿಗೆ ಜನ್ಮ ನೀಡುತ್ತವೆ.ಕೇವಲ 2 ರಿಂದ 3 ವಾರಗಳೊಳಗಾಗಿ ಸುಮಾರು 5 ಲಕ್ಷ Wildebeest ಕರುಗಳು (ಮರಿ) ಜನ್ಮ ತಾಳುತ್ತವೆ.
Mountain Of God ಹೊರಹಾಕಿದ ಫಲವತ್ತಾದ ಬೂದಿಯಲ್ಲಿನ Mineral ಗಳು ಹುಲ್ಲುಗಳಲ್ಲಿ ಸೇರಿ ಅವನ್ನು ತಿನ್ನುವ ತಾಯಿ Wildebeest ಗಳ ಹಾಲಿನಲ್ಲಿ ಸೇರಿ ಮರಿಗಳಿಗೆ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತವೆ .ಹಾಗಾಗಿ Wildebeest ಕರುಗಳಿಗೆ ಇದಕ್ಕಿಂತ ಉತ್ತಮ ಆರಂಭ ಬೇರೆಲ್ಲೂ ಸಿಗುವುದಿಲ್ಲ
.Wildebeest ಗಳ ಜೊತೆ ಇತರ ಪ್ರಾಣಿಗಳು ಕೂಡ ಸೇರಲಾರಂಭಿಸುತ್ತವೆ,ಸಹಸ್ರಾರು Antelopes ಗಳು,2 ,೦೦,೦೦೦ ಜೀಬ್ರಾಗಲು Short Grass Plain ನಲ್ಲಿ ಹಸಿರು ಹುಲ್ಲನ್ನು ಅಸ್ವಾಧಿಸುತ್ತಿರುತ್ತವೆ
. Short Grass Plain ನ ಮಾಂಸಾಹಾರಿ ಪ್ರಾಣಿಗಳಿಗೆ ಈಗ ಹಬ್ಬದ ಸಮಯ.ಸುತ್ತ ಮುತ್ತ ಇರುವ ಲಕ್ಷಾಂತರ ಸಸ್ಯಾಹಾರಿಗಳು ಇವುಗಳ ಜೀವನವನ್ನು ಸಂತೋಷಗೊಳಿಸಿವೆ
.ನಿಧಾನವಾಗಿ ಪ್ರಾಣಿಗಳ ಗುಂಪು ದಕ್ಷಿಣಕ್ಕೆ ಸಾಗುತ್ತಾ Ndutu ಪ್ರದೇಶದಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸುತ್ತವೆ
.ಇಷ್ಟೆಲ್ಲಾ ಬದಲಾವಣೆಯಾಗುವ ಹೊತ್ತಿಗೆ ನಮ್ಮ Ndutu ಸಿಂಹಗಳ ಗುಂಪು ಯಾವ ಸ್ಥಿತಿಯಲ್ಲಿವೆ?? ಮರಿಗಳು ತಮ್ಮ ಕಷ್ಟ ಕಾಲದ ದಿನಗಳನ್ನು ಸಮರ್ಥವಾಗಿ ಎದುರಿಸಿವೆಯೇ??
.ಅದೃಷ್ಟವಶಾತ್ Ndutu ಸಿಂಹಗಳು ಆರೋಗ್ಯವಂತವಾಗಿವೆ.ಒಟ್ಟಿಗೆ ಇವೆ.ಎರಡು ಮರಿಗಳು ತಮ್ಮ ಕಷ್ಟ ಕಾಲದ ದಿನಗಳನ್ನು ಸಮರ್ಥವಾಗಿ ಎದುರಿಸಿವೆ.ಈಗ ಅವು ಚೆನ್ನಾಗಿ ಬೆಳೆದಿವೆ.ಹೆಣ್ಣು ಮರಿಯ ಮುಖದ ಮೇಲೆ ಇದ್ದ ಕಪ್ಪು ಕಲೆಗಳು ಮಾಗಿ ಹೊಸ ಚರ್ಮ ಬೆಳೆಯುತ್ತಿದೆ.ಗಂಡು ತನ್ನ ಗುಂಪನ್ನು ಕಾಪಾಡುವಷ್ಟು ಶಕ್ತವಾಗಿದೆ...ಆದರೆ ಅವುಗಳು ಸ್ವತಂತ್ರವಾಗಿ ಭೇಟೆಯಾಡಲು ಇನ್ನೂ ಆರು ತಿಂಗಳು ಬೇಕು
.Ndutu ವಿನಲ್ಲಿ ಸಿಂಹಗಳು ಈಗ ತಮ್ಮ ಸಂತೋಷದ ದಿನಗಳನ್ನು ಕಳೆಯುತ್ತಿವೆ.ಆರಾಮವಾಗಿ ತಿಂದು ಮಲಗಿ ದಿನಗಳನ್ನು ಆನಂದಿಸುತ್ತಿವೆ
.ಇದು ಕೇವಲ Ndutu ಸಿಂಹಗಳ ಕತೆಯಷ್ಟೇ ಅಲ್ಲ.Wildebeest ಗಳ ವಲಸೆಯನ್ನು ನಂಬಿ ಬದುಕುವ ಹಲವಾರು ಸಿಂಹಗಳ ಗುಂಪಿನ ಕತೆಯೂ ಹೆಚ್ಚು ಕಡಿಮೆ ಹೀಗೇ ಇರುತ್ತವೆ
.ಸತ್ತ ಪ್ರಾಣಿಗಳನ್ನು ತಿನ್ನುವ ರಣಹದ್ದುಗಳಿಗೆ,ಹೈನಾಗಳಿಗೆ ಇದು ಅತ್ಯುತ್ತಮ ಕಾಲ...
.ಹುಲ್ಲು ಹೂವು ಬಿಡಲು ಶುರು ಮಾಡಿ ಕಾಳುಗಳನ್ನು ಉತ್ಪತ್ತಿ ಮಾಡುವುದರಿಂದ ಹಸಿರು ಎಲೆ ಮಾಯವಾಗುತ್ತದೆ.ಹಸಿರು ಹುಲ್ಲನು ಇಷ್ಟ ಪಡುವ Wildebeest ಹಾಗು ಇತರ ಪ್ರಾಣಿಗಳಿಗೆ ಈಗ ಅವು ಬಯಸಿದ್ದು ಸಿಗುತ್ತಿಲ್ಲ
.ಈ ಕಾರಣಕ್ಕಾಗಿ ಮತ್ತೊಮ್ಮೆ Wildebeest ಗಳು ಮೋಡವನ್ನು ಹಿಂಬಾಲಿಸುತ್ತಾ..ಹಸಿರು ಹುಲ್ಲನ್ನು ಹುಡುಕುತ್ತಾ Short Grass Plain ನ ಉತ್ತರಕ್ಕೆ ತಮ್ಮ ಮಹಾ ವಲಸೆಯನ್ನು ಆರಂಭಿಸುತ್ತವೆ
.Short Grass Plain ನಲ್ಲಿ ಸೇರಿದ್ದ 'ಪ್ರಾಣಿಗಳ ಮೇಳ' ನಿಧಾನವಾಗಿ Short Grass Plain ಅನ್ನು ಖಾಲಿ ಮಾಡತೊಡಗುತ್ತವೆ
.ಮೊದಲ ಬಾರಿಗೆ ನನ್ನ ಬ್ಲಾಗ್ ನಲ್ಲಿ ಒಂದು ವಿಶಿಷ್ಟ ಪ್ರಯತ್ನ ಮಾಡಿದ್ದೇನೆ
.BBC ಯವರು ನಿರ್ಮಿಸಿದ Great Events ಸರಣಿಯ 'Great Migration ' ಎಂಬ Documentary ಯನ್ನು ನಾನು ಕತೆಯ ರೂಪದಲ್ಲಿ ಈ ಪೋಸ್ಟ್ ನಲ್ಲಿ ಬರೆದಿದ್ದೇನೆ
.David Attenborough ರವರು ನಿರೂಪಣೆ ಮಾಡಿರುವ ಈ Documentary ಯಲ್ಲಿ ಪ್ರಕೃತಿಯಲ್ಲಿ ನಡೆಯುವ ವಿಸ್ಮಯ ಘಟನೆ 'ಪ್ರಾಣಿಗಳ ವಲಸೆ ಪ್ರಕ್ರಿಯೆ' ಯನ್ನು ಅದ್ಭುತವಾಗಿ ಚಿತ್ರಿಸಲಾಗಿದೆ .ಈ ವಲಸೆ ಪ್ರಕ್ರಿಯೆಯನ್ನು ಆಧರಿಸಿ ಬದುಕುವ ಮಾಂಸಾಹಾರಿ ಪ್ರಾಣಿಗಳ ಜೀವನವನ್ನು ಅತ್ಯಂತ ಮನಮುಟ್ಟುವಂತೆ ಚಿತ್ರಿಸಲಾಗಿದೆ
.ಈ Documentary ಯನ್ನು ನೋಡಿದ ಮೇಲೆ ಇದನ್ನು ಒಂದು ಕತೆಯ ರೂಪದಲ್ಲಿ ಬರೆಯಬೇಕ್ಕೆನ್ನೆಸಿ ಅದಕ್ಕೆ ತಯಾರಿಗಳನ್ನು ಮಾಡಿಕೊಂಡು ಇಡೀ Documentary ಯನ್ನು ಈ ಪೋಸ್ಟ್ ನಲ್ಲಿ ಬರಹಗಳ ರೂಪದಲ್ಲಿ ಬರೆದಿದ್ದೇನೆ
.ನೀವು ಈಗಾಗಲೇ ಈ Documentary ನೋಡಿರುವವರಾದರೆ ಇದನ್ನು ಓದಿ ಮತ್ತೊಮ್ಮೆ ಆನಂದಿಸಿ.ಇದು ತುಂಬಾ ದೊಡ್ಡ ಪೋಸ್ಟ್ ಆಗಿರುವುದರಿಂದ ಪುರ್ಸೊತ್ ಮಾಡಿಕೊಂಡು ಓದಿ
.ಸರಿ ಹಾಗಾದರೆ ನೂರೆಂಟು ವಿಷಯಗಳಲ್ಲಿ ಸುತ್ತುತ್ತಿರುವ ನಿಮ್ಮ ಮನಸನ್ನು ಈಗ ಆಫ್ರಿಕಾದ ಈ ಮಹಾ ವಿಸ್ಮಯ ನಡೆಯುವ ತಾಣ Serengati ಎಂಬ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತೇನೆ .........ತಯಾರಾಗಿ..ರೆಡಿ 1 ...2 ...3
.ದೇಶ ಭಾಷೆಗಳನ್ನು ಮೀರಿ ಈಗ ನಿಮ್ಮ ಮನಸ್ಸು East ಆಫ್ರಿಕಾದ Serengati ಎಂಬ ಪ್ರದೇಶಕ್ಕೆ ಬಂದಿಳಿದಿದೆ
.ಎತ್ತ ನೋಡಿದರೂ ಹಸಿರು ಹುಲ್ಲು,ಆ ಹುಲ್ಲನ್ನು ಆನಂದಿಸುತ್ತಾ ತಿನ್ನುತ್ತಿರುವ ಲಕ್ಷಾಂತರ ಪ್ರಾಣಿಗಳು,ಇದನ್ನೆಲ್ಲಾ ನೋಡುತ್ತಾ ನಿಂತಿರುವಂತೆ ಕಾಣುವ Serengati ಯ Mountain Of ಗಾಡ್ ಎಂದು ಕರೆಸಿಕೊಳ್ಳುವ ಜ್ವಾಲಾಮುಖಿ ಪರ್ವತ Ol Doinyo Lengai .ಒಟ್ಟಾರೆ ಸ್ವರ್ಗವೇ ಧರೆಗೆ ಬಂದಿಳಿದಂತ ದೃಶ್ಯ....
. Ol Doinyo Lengai ನ ಪಶ್ಚಿಮಕ್ಕೆ ಈ ಪ್ರಾಣಿಗಳೆಲ್ಲಾ ಮೇಯುತ್ತಿರುವ ಪ್ರದೇಶದ ಹೆಸರು 'Short Grass Plain '
.ವರ್ಷಕ್ಕೊಂದು ಬಾರಿ ಇದೇ ಪ್ರದೇಶದಲ್ಲಿ ಬರೋಬ್ಬರಿ 30 ಲಕ್ಷ ಪ್ರಾಣಿಗಳು ಒಟ್ಟಿಗೆ ಸೇರಿ ಹಲವು ತಿಂಗಳುಗಳ ಕಾಲ ಇಲ್ಲಿನ ಹಸಿರು ಹುಲ್ಲನ್ನು ತಿಂದು ಬದುಕುತ್ತವೆ.ಇಷ್ಟೊಂದು ಪ್ರಾಣಿಗಳು ಒಟ್ಟಿಗೆ ಸೇರಿ ಹುಲ್ಲನ್ನು ಮೇಯುವ ಭೂಮಿಯ ಏಕೈಕ ಪ್ರದೇಶವಿದು.
ಇದು ನಿಜವಾಗಿಯೂ 'Savannah paradise '
.ಇಷ್ಟೊಂದು ಸಸ್ಯಾಹಾರಿಗಳು ಸೇರುವ ಈ ಸಮಯ ಇಲ್ಲಿನ ಮಾಂಸಾಹಾರಿ ಪ್ರಾಣಿಗಳಿಗೆ ಸುಸಮಯ.ಇಲ್ಲಿನ ಸಿಂಹಗಳಿಗೆ ತಮ್ಮ ಮುಂದಿನ ವಂಶದ ಕುಡಿಯನ್ನು ಭೂಮಿಗೆ ತರಲು ಇದು ಅತ್ಯುತ್ತಮ ಸಮಯ
.ಸಿಂಹಗಳಿಗೆ ತಮ್ಮದೇ ಆದ ಪ್ರದೇಶವಿರುತ್ತದೆ,ಈ ಪ್ರದೇಶದೊಳಗೆ ಬಂದ ತಮ್ಮ ಭೇಟೆಯನ್ನಷ್ಟೆ ಅವು ಭೇಟೆಯಾಡುತ್ತವೆ
.ಈಗ ಮೇ ತಿಂಗಳು
Short Grass Plain ನ ಹಸಿರು ಹುಲ್ಲು ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತಿದೆ.ಮಳೆಯ ಮೋಡಗಳು ನಿಧಾನವಾಗಿ ಉತ್ತರಕ್ಕೆ ಚಲಿಸಲಾರಂಭಿಸಿದೆ....ವಿಸ್ಮಯ ವಲಸೆ ಈಗ ಪ್ರಾರಂಭವಾಗಿದೆ.ಈ ವಲಸೆ ಹೋಗುವ ಅತ್ಯಂತ ಶಕ್ತಿಶಾಲಿ ಜೀವಿ Wildebeest (ಕಾಡೆಮ್ಮೆ ಜಾತಿಯ ಪ್ರಾಣಿ) ಇವುಗಳು ಅತ್ಯಂತ ಸೂಕ್ಷ್ಮ ಪ್ರಾಣಿಗಳಾಗಿದ್ದು ಮಳೆಯ ಗುಡುಗಿನ ಸದ್ದನ್ನು 30 ಮೈಲಿ ದೂರದಿಂದಲೇ ಕೇಳಿಸಿಕೊಳ್ಳುತ್ತವೆ
.ಮಳೆಯ ಮೋಡಗಳು ಚಲಿಸಿದ ದಿಕ್ಕಿನತ್ತ ಹೊರಡುವ ಇವು ನಿಧಾನವಾಗಿ Short Grass Plane ಅನ್ನು ಖಾಲಿ ಮಾಡುತ್ತವೆ,ಅವುಗಳಿಗೆ ತಿನ್ನಲು ಹೊಸ ಹಸಿರು ಹುಲ್ಲು ಬೇಕು,ಆದ್ದರಿಂದ ಏಳು ತಿಂಗಳುಗಳ ಈ ವಿಸ್ಮಯ ವಲಸೆ ಪ್ರಾರಂಭವಾಗುತ್ತದೆ
.ಒಂದು ವಾರದೊಳಗೆ Short Grass Plain ನಲ್ಲಿದ್ದ 90 % ಪ್ರಾಣಿಗಳು ಆ ಜಾಗದಿಂದ ಖಾಲಿಯಾಗುತ್ತವೆ.ಲಕ್ಷಗಟ್ಟಲೆ ಇದ್ದ Wildebeest ಗಳು ಈಗ ಅಲ್ಲಿ ಒಂದೂ ಇಲ್ಲ......
.ಆಗಸ್ಟ್ ಸಮಯ.....
.ಇಲ್ಲಿನ ದಕ್ಷಿಣ ಭಾಗದಲ್ಲಿ ಬರುವ Ndutu ಸಿಂಹಗಳ ಗುಂಪಿಗೆ ಇದು ಕಷ್ಟಕಾಲ.ಈ Ndutu ಸಿಂಹಗಳ ಗುಂಪೇ ಈ ಕತೆಯ ಪ್ರಮುಖ ಪಾತ್ರದಾರಿಗಳು
.4 ಸಿಂಹಿಣಿಗಳು,7 ಮರಿಗಳು ಈ Ndutu ಗುಂಪಿನಲ್ಲಿವೆ
.ಹಸಿರು ಸ್ವರ್ಗವಾಗಿದ್ದ Short Grass Plain ಈಗ ಕಂದು ಬಣ್ಣಕ್ಕೆ ತಿರುಗಿದೆ.Ndutu ಸಿಂಹಗಳು ನೀರು ಮತ್ತು ಆಹಾರಕ್ಕೆ ಹೋರಾಟವನ್ನೇ ಮಾಡಬೇಕಾದ ಸ್ಥಿತಿ
.ಈ ಸಮಯದಲ್ಲೇ ಒಂದು ಗಂಡು ಮರಿ ಖಾಯಿಲೆಗೆ ಬೀಳುತ್ತದೆ
.ಆಹಾರವನ್ನರಸುತ್ತಾ ಸಾಗುವ ನಮ್ಮ ಸಿಂಹಗಳ ಗುಂಪು ಹಲವು ಮೈಲಿಗಳವರೆಗೆ ನಡೆಯುತ್ತಿವೆ.ಖಾಯಿಲೆ ಬಿದ್ದ ಮರಿ ವೇಗವಾಗಿ ನಡೆಯಲಾಗದೆ ನಿಧಾನವಾಗಿ ನಡೆದು ಹಿಂದುಳಿದಿದೆ.ಆದರೆ ಅದನ್ನು ಹೆಣ್ಣು ಸಿಂಹಗಳು ಕಾಯುವುದಿಲ್ಲ.ಏಕೆಂದರೆ ಅವುಗಳು ಈಗ ಜೀವವನ್ನು ಉಳಿಸಿಕೊಳ್ಳಬೇಕಿದೆ
.ಮುಂದುವರಿದ ಸಿಂಹಗಳಿಗೆ ಒಂದು ನೀರಿನ ಹೊಂಡದ ಬಳಿ warthog (ಕೊರೆಯುಳ್ಳ ಕಾಡು ಹಂದಿ ಜಾತಿಯ ಪ್ರಾಣಿ)
ಕಾಣಸಿಗುತ್ತದೆ.ನಮ್ಮ 4 ಸಿಂಹಿಣಿಗಳು ಪ್ರಕೃತಿ ಅವಕ್ಕೆ ಕಳಿಸಿಕೊಟ್ಟ ಚಾಕಚಕ್ಯತೆಯಿಂದ ಅದರ ಮೇಲೆ ಮುಗಿ ಬಿದ್ದು ಅದನ್ನು ಕೊಂದು ತಿನ್ನಲು ಶುರು ಮಾಡುತ್ತವೆ.Ndutu ಸಿಂಹಗಳ ಗುಂಪಿಗೆ ಇಂಥ ಕಾಲದಲ್ಲಿ ಇದು ಒಳ್ಳೆಯ ಭೋಜನ
.ದಾರಿಯಲ್ಲಿ ನಿಧಾನವಾಗಿ ನಡೆದು ಬರುತ್ತಿದ್ದ ಗಂಡು ಮರಿ ಮುಂದೆ ನಡೆಯಲಾಗದೆ ಒಂದೆಡೆ ಮಲಗಿರುತ್ತದೆ.ನಿಧಾನವಾಗಿ ಅದರ ಪ್ರಾಣ ಪಕ್ಷಿ ಹಾರಿಹೋಗುತ್ತದೆ.......
.Short Grass Plain ನಲ್ಲಿ ಒಣ ಹವಾಮಾನ ಬಂದು ಮೂರು ತಿಂಗಳು ಕಳೆದಿವೆ........
ಈಗ Ndutu ಸಿಂಹಗಳ ಗುಂಪಿನಲ್ಲಿ 4 ಸಿಂಹಿಣಿ ಹಾಗು 6 ಮರಿಗಳು ಮಾತ್ರ ಉಳಿದಿವೆ
.ಆಗಸ್ಟ್ ನ ಅಂತ್ಯದ ದಿನಗಳು
.ಮಳೆಯ ಮೋಡಗಳು ಉತ್ತರಕ್ಕೆ ಮುಂದುವರಿಯುತ್ತಲೇ ಹಸಿರು ಹುಲ್ಲು ಹಾಗು Wildebeest ಗಳನ್ನು ತನ್ನೊಂದಿದೆ ಕರೆದೊಯ್ಯುತ್ತಿವೆ.......ಲಕ್ಷಾಂತರ Wildebeest ಗಳು ನಡೆಯುತ್ತಾ ಸಾಗಿವೆ....
.ಇತ್ತ Ndutu ವಿನಲ್ಲಿ ಸಿಂಹಗಳಿಗೆ ಆಹಾರ ಸಿಗುವುದು ಕಷ್ಟವಾದರೂ ಜಿರಾಫೆ,ಇಂಪಾಲ, ಕಾಡು ಬೆಕ್ಕು,ಇಲಿಗಳಿಗೆ ಇನ್ನೂ ಆಹಾರ ಉಳಿದಿದೆ.ಅಕೇಶಿಯ ಎಲೆಗಳನ್ನು ತನ್ನ ಉದ್ದನೆಯ ಕತ್ತುಗಳನ್ನು ಬಳಸುತ್ತಾ ,ತಿನ್ನುತ್ತಾ ಜಿರಾಫೆಗಳು ಬದುಕುತ್ತಿವೆ
.ಸೆಪ್ಟೆಂಬರ್ ತಿಂಗಳ ಮೊದಲ ದಿನಗಳು....
.Ndutu ಸಿಂಹಗಳ ಗುಂಪಿನಲ್ಲಿ ಸಿಂಹಿಣಿಗಳ ಜೊತೆ ಕೇವಲ 2 ಮರಿಗಳು ಮಾತ್ರ ಉಳಿದಿವೆ,ಅವು ತೀರ ಬಳಲಿವೆ.ದೇಹದಲ್ಲಿ ಚರ್ಮ ಮತ್ತು ಮೂಳೆಗಳು ಮಾತ್ರ ಕಾಣುತ್ತಿವೆ.ದುರಾದೃಷ್ಟವಶಾತ್ ಉಳಿದ ಮರಿಗಳು ಹಿಂದೆ ಬಿದ್ದಿವೆ .ಇದರಲ್ಲಿ ಒಂದು ಹೆಣ್ಣು ಮರಿ ಕೇವಲ ಎರಡು ಮೈಲಿಗಳ ದೊರದಲ್ಲಿ ಉಳಿದು ದಿಕ್ಕು ಕಾಣದೆ ತನ್ನ ಗುಂಪನ್ನು ಸೇರಲು ಕೂಗುತ್ತಿದೆ.ಅದರ ಮುಖದಲ್ಲಿ ಕಪ್ಪು ಕಲೆಗಳು ಬರಲಾರಂಭಿಸಿವೆ..ಹೀಗೆ ಬಳಲಿ ಕೂಗುತ್ತಿರಬೇಕಾದರೆ ಅದರ ಕೂಗಿಗೆ ಹತ್ತಿರದಲ್ಲೇ ಇದ್ದ ಅದರ ಇನ್ನೊಂದು ತಮ್ಮ ಕ್ಷೀಣವಾದ ದನಿಯಲ್ಲಿ ಉತ್ತರಿಸುತ್ತದೆ.ಕೂಗು ಬಂದ ದಿಕ್ಕಿಗೆ ಸಾಗಿ ತನ್ನ ತಮ್ಮನ ಜೊತೆ ಸೇರುತ್ತದೆ ಈ ಮರಿ
.ಎಂತಾ ವಿಪರ್ಯಾಸ ನೋಡಿ..ಈ ಎರಡು ಮರಿಗಳ ಸಮೀಪದಲ್ಲೇ ಒಂದು ಇಂಪಾಲಗಳ ಗುಂಪು ಮೇಯುತ್ತಿವೆ.ಆದರೆ ಇವಕ್ಕೆ ಭೇಟೆಯಾಡಲು ಬರುವುದಿಲ್ಲ...ಬಳಲಿ ಬೆಂಡಾದ ಇವು ತಮ್ಮ ಗುಂಪನ್ನು ಸೇರಲು ಕೂಗುತ್ತಿವೆ........ಅತ್ತ ಹಿಂದುಳಿದ ತಮ್ಮ ಮರಿಗಳನ್ನು ಹುಡುಕಲು ಸಿಂಹಿಣಿಗಳು ಕೂಗುತ್ತಿರುತ್ತವೆ,ಇವುಗಳ ಜೊತೆ ಬಳಲಿದ ಒಂದು ಗಂಡು ಮರಿಯು ಕಳೆದು ಹೋದ ತನ್ನ ಜೊತೆಗಾರರನ್ನು ಹುಡುಕಲು ಕ್ಷೀಣ ದ್ವನಿಯಲ್ಲಿ ಕೂಗುತ್ತಿರುತ್ತದೆ....ಆದರೆ ಇವುಗಳ ಕೂಗಿಗೆ ಅತ್ತಕಡೆಯಿಂದ ಉತ್ತರ ಬಾರದ ಕಾರಣ ತಮ್ಮ ಮುಂದಿನ ಆಹಾರ ಅರಸುತ್ತ ಮುಂದೆ ಸಾಗುತ್ತವೆ.....
.ಸೆಪ್ಟೆಂಬರ್ ತಿಂಗಳ ಮಧ್ಯದ ದಿನಗಳು
.ವರ್ಷದ ಅತ್ಯಂತ ಒಣ ದಿನಗಳು Ndutuವಿನಲ್ಲಿ
.ಇತ್ತ ಹೊಸ ಹುಲ್ಲು ಅರಸುತ್ತಾ ಸಾಗಿರುವ Wildebeest ಗಳು Serengeti ಯ ಉತ್ತರಕ್ಕೆ 100 ಮೈಲಿ ದೂರಕ್ಕೆ ಸಾಗಿವೆ
.ಈಗ ಇವುಗಳಿಗೆ ಒಂದು ದೊಡ್ಡ ಸವಾಲು ಎದುರಾಗಿದೆ.ಮುಂದೆ ಸಾಗಲು ಇವುಗಳು 'Mara' ನದಿಯನ್ನು ದಾಟಬೇಕು.ಎಲ್ಲಾ Wildebeest ಗಳು ಈ ನದಿಯ ದಡಕ್ಕೆ ಬಂದು ನಿಲ್ಲುತ್ತವೆ.ಇವುಗಳಿಗೆ ಆ ನದಿಯಲ್ಲಿ ಅಡಗಿರುವ ಅಪಾಯ ಗೊತ್ತು.....
ದೈತ್ಯಾಕಾರದ ಮೊಸಳೆಗಳು ಇವುಗಳ ರಕ್ತಕ್ಕಾಗಿ ಹೊಂಚು ಹಾಕಿ ಕುಳಿತಿವೆ....ಆದರೆ Wildebeest ಗಳು ದೃತಿ ಗೆಡುವುದಿಲ್ಲ
ಅವುಗಳು ಒಟ್ಟಿಗೆ ಅಪಾಯವನ್ನು ಎದುರಿಸಲು ಸಿದ್ದವಾಗಿರುತ್ತವೆ. ಒಮ್ಮೆಲೇ ಅಷ್ಟೂ Wildebeest ಗಳು ನದಿಯನ್ನು ದಾಟಲು ಶುರು ಮಾಡುತ್ತವೆ.ಕೆಲವನ್ನು ಮೊಸಳೆಗಳು ಹಿಡಿದು ಬಾಯಿಗೆಳೆದುಕೊಳ್ಳುತ್ತವೆ.ಒಮ್ಮೆಲೇ ಒಂದು Wildebeest ಅನ್ನು ಮಾತ್ರ ಅದು ಹಿಡಿಯಬಲ್ಲದಾದ್ದರಿಂದ ಹೆಚ್ಚಿನ Wildebeest ಗಳು ಇವುಗಳಿಂದ ತಪ್ಪಿಸಿಕೊಂಡು ಮುಂದಿನ ದಡಕ್ಕೆ ಬಂದು ತಮ್ಮ ಪಯಣ ಮುಂದುವರಿಸುತ್ತವೆ...
.ಇತ್ತ Ndutu ವಿನಲ್ಲಿ ಭೀಕರ ಭೇಸಿಗೆ .....
.ಸಣ್ಣ ಸಣ್ಣ ಕೀಟಗಳನ್ನು ತಿನ್ನುವ ಪ್ರಾಣಿಗಳಿಗೆ ಇನ್ನೂ ಆಹಾರ ಉಳಿದಿದೆ.ತಾಯಿ ಚೀತಾವೊಂದು ತನ್ನ ಶಕ್ತಿಯನ್ನೆಲ್ಲಾ ಬಳಸಿ ಸಿಕ್ಕುವ ಭೇಟೆಯನ್ನು ಕೊಂದು ತನ್ನ ಆರು ಮರಿಗಳನ್ನು ಆರೋಗ್ಯವಂತವಾಗಿರಿಸಿದೆ
.ಅಕ್ಟೋಬರ್ ತಿಂಗಳು....
.ಭೇಸಿಗೆ ತನ್ನ ಅತೀ ಉನ್ನತ ಸ್ಥಿತಿಯಲ್ಲಿದೆ.Ndutu ಸಿಂಹಗಳ ಗುಂಪಿನಲ್ಲಿದ್ದ ಹಲವು ಮರಿಗಳು ಆಹಾರ ಸಿಗದೆ ,ನಡೆದೂ ನಡೆದೂ ಕಳೆದು ಹೋಗಿ ಪ್ರಾಣ ಬಿಟ್ಟಿವೆ.ಆದರೆ ಪವಾಡವಶಾತ್ ಕಳೆದು ಹೋಗಿದ್ದ ನಮ್ಮ ಕಪ್ಪು ಕಲೆಯಿದ್ದ ಹೆಣ್ಣು ಮರಿ ಮತ್ತೆ ಗುಂಪನ್ನು ಸೇರಿಕೊಂಡಿದೆ.ಈಗ Ndutu ಸಿಂಹಗಳ ಗುಂಪಿನಲ್ಲಿ ಸಿಂಹಿಣಿ ಗಳ ಜೊತೆ ಕೇವಲ ಎರಡು ಮರಿಗಳು ಮಾತ್ರ ಉಳಿದಿವೆ .ಒಂದು ಹೆಣ್ಣು ಮತ್ತೊಂದು ಗಂಡು
.ಇದೇ ಸಮಯದಲ್ಲಿ Ndutu ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಅಲ್ಪ ಸ್ವಲ್ಪ ಉಳಿದಿದ್ದ ಹುಲ್ಲು ಹಾಗು ಪೊದೆ ಗಳನ್ನು ಸುಟ್ಟು ಬೂದಿ ಮಾಡುತ್ತದೆ.ಈ ಬೆಂಕಿ ಸಸ್ಯಾಹಾರಿ ಹಾಗು ಮಾಂಸಾಹಾರಿ ಪ್ರಾಣಿಗಳಿಗೆರಡಕ್ಕೂ ಮಾರಾಕವಾಗಿ ಪ್ರಭಾವ ಬೀರುತ್ತದೆ.ಮರೆ ನೀಡುತ್ತಿದ್ದ ಪೊದೆಗಳು ಸುಟ್ಟು ಬೂದಿಯಾಗಿರುವುದೇ ಇದಕ್ಕೆ ಕಾರಣ
.ಬೆಂಕಿಯಿಂದ ಬಚಾವಾದ Ndutu ಸಿಂಹಗಳು ಈಗ ಮತ್ತೊಂದು warthog ಅನ್ನು ಭೇಟೆಯಾಡುವ ಮೂಲಕ ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತವೆ
.ಮೊದಲೇ ಆಹಾರಕ್ಕಾಗಿ ದಣಿದ ಪ್ರಾಣಿಗಳಿಗೆ ಈಗ ಮತ್ತೊಂದು ಆಘಾತ.....4o ವರ್ಷಗಳ ನಂತರ ಈಗ Mountain Of God ತನ್ನ ಒಡಲಿನಿಂದ ಆರ್ಭಟಿಸಿ ಜ್ವಾಲಾಮುಖಿಯ ಬೂದಿಯನ್ನು Short Grass Plain ನ ಮೇಲೆಲ್ಲಾ ಹಬ್ಬಿಸುತ್ತದೆ
.ಇಡೀ Short Grass Plain ಬೂದಿಯಿಂದ ಆವೃತವಾಗುತ್ತದೆ
.ನವೆಂಬರ್ ತಿಂಗಳು ...
.Ndutu ಸಿಂಹಗಳು ಬಿಸಿಲಿನ ಶಾಖ ತಡೆಯಲಾಗದೆ ಸಿಕ್ಕ ನೆರಳಿನ ಪ್ರದೇಶದಲ್ಲಿ ಸುಸ್ತಾಗಿ ಮಲಗಿವೆ.ಮರಿಗಳು ತಮ್ಮ ಚೈತನ್ಯವನ್ನು ಕಳೆದುಕೊಂಡಿವೆ.ಅವುಗಳ ದೇಹದ ಬ್ಯಾಟರಿಯ ಶಕ್ತಿ ಕ್ಷೀಣಿಸುತ್ತಿದೆ............
.Ndutu ಸಿಂಹಗಳ ಕಷ್ಟ ಕಾಲವನ್ನು ದೂರ ಮಾಡಲೋ ಎಂಬಂತೆ ಗಾಳಿಯು ತನ್ನ ಪಥವನ್ನು ಬದಲಿಸಿ ಕಾಲಚಕ್ರದ ಬದಲಾವಣೆಯ ಮುನ್ಸೂಚನೆಯನ್ನು ನೀಡುತ್ತಿದೆ....
.ಈಗಾಗಲೇ ಬಹುದೂರ ಸಾಗಿರುವ ಸುಮಾರು 15 ಲಕ್ಷ Wildebeest ಗಳಿಗೆ ಮುಂದೇನು ಆಗುತ್ತದೆ ಎಂಬುದು ಗೊತ್ತು....ತಮ್ಮ ಬಹುದೂರ ಪ್ರಯಾಣವನ್ನು ನಿಲ್ಲಿಸಿ ಮಳೆ ಮೋಡಗಳನ್ನು ಹಿಂಬಾಲಿಸಿ ಈಗ ಮತ್ತೆ ದಕ್ಷಿಣದ ಕಡೆ ಅಂದರೆ Short Grass Plains ನ ಕಡೆ ತಮ್ಮ ಪ್ರಯಾಣವನ್ನು ಮುಂದುವರಿಸಿವೆ....
.ಭೂಮಿಯಲ್ಲಿ ನೆಲದ ಮೇಲೆ ಬದುಕಿರುವ ಪ್ರಾಣಿಗಳಲ್ಲೇ ಅತ್ಯಂತ ಸುದೀರ್ಘವಾದ ವಲಸೆ ಹೋಗುವ ಪ್ರಾಣಿಗಳು ಈ Wildebeest ಗಳು.ಮಳೆಯ ಮೋಡಗಳನ್ನು ಅರಸುತ್ತಾ ಇವು ಸಾವಿರಕ್ಕೂ ಹೆಚ್ಚು ಮೈಲಿ ವಲಸೆ ಹೋಗುತ್ತವೆ
.Short Grass Plain ನ ಮೇಲೆ ನಿಧಾನವಾಗಿ ಮೋಡಗಳು ಗುಂಪುಗೂಡುತ್ತವೆ.ಮಳೆಯ ನಿರೀಕ್ಷೆಯಲ್ಲಿ ಇಡೀ Short Grass Plain ನಲ್ಲಿ ಇರುವ ಪ್ರಾಣಿಗಳು ಕಾಲ ಕಳೆಯುತ್ತಿರುತ್ತವೆ
**ಮಳೆಯ ಮೊದಲ ಹನಿಗಳ ಸಿಂಚನ Short Grass Plain ನ ಮೇಲಾಗುತ್ತದೆ.ಬಿಸಿಲಿನಲ್ಲಿ ಬೆಂದು ಹೋಗಿದ್ದ ಪ್ರಾಣಿಗಳು ಮಳೆಯಿಂದ ಪುಳಕಗೊಳ್ಳುತ್ತವೆ.Ndutu ಸಿಂಹಗಳು ಕೂಡ ಈ ಮಳೆಯನ್ನು ಅನಂದಿಸುತ್ತವೆ ,ಅವುಗಳಿಗೆ ಮಳೆಯೆಂದರೆ ಹೊಸ ಭರವಸೆ
.ಮಳೆಯೇನೂ ತನ್ನ ಆರ್ಭಟವನ್ನು ಆರಂಭಿಸಿದ್ದರೂ ಕೂಡ Ndutu ಸಿಂಹಗಳು Short Grass Plain ನಲ್ಲಿ ಹೊಸ ಹಸಿರು ಹುಲ್ಲು ಬೆಳೆಯುವವರೆಗೆ ಕಾಯಲೇ ಬೇಕು
.ಮಳೆಯೇ ಭೂಮಿಗಿಳಿದ ಮೇಲೆ ಹಸಿರು ಬಾರದೇ ಇರುತ್ತದೆಯೇ???....ಮಳೆ ಆರಂಭವಾದ ವರದೊಳಗೆಲ್ಲಾ ಭೂಮಿಯಿಂದ ಹಸಿರು ಹುಲ್ಲು ಹುಟ್ಟಲು ಪ್ರಾರಂಭಿಸುತ್ತದೆ.ಕೆಲವೇ ದಿನದೊಳಗೆ Short Grass Plain ಹಸಿರಿನಿಂದ ಕಂಗೊಳಿಸುತ್ತದೆ
.ಡಿಸೆಂಬರ್ ತಿಂಗಳು...
.Short Grass Plain ನ ಉತ್ತರ ಭಾಗದ ಸರಹದ್ದಿನಲ್ಲಿ Wildebeest ಗಳ ಆಗಮನ ಆರಂಭವಾಗಿರುತ್ತದೆ.ಇವುಗಳೀಗ Ndutu ಪ್ರದೇಶದಿಂದ ಕೇವಲ 30 ಮೈಲಿ ದೂರದಲ್ಲಿವೆ.7 ತಿಂಗಳ ನಂತರ ಮತ್ತೆ Wildebeest ಗಳ ಸಂಪೂರ್ಣ ಗುಂಪು Short Grass Plain ಗೆ ಆಗಮಿಸಲು ಇನ್ನೂ ಒಂದು ವಾರ ಬೇಕು....
.Mountain Of God ತನ್ನ ಆರ್ಭಟವನ್ನು ಇನ್ನೂ ನಿಲಿಸಿಲ್ಲ.ಸುಮಾರು 15 ,೦೦೦ ಮೀಟರ್ ಎತ್ತರಕ್ಕೆ ಬೂದಿಯನ್ನು ಚಿಮ್ಮಿಸುತ್ತಿದೆ Mountain Of God .ಆದರೆ ನಾವು ತಿಳಿದಂತೆ ಇದು Short Grass Plain ನಲ್ಲಿ ಸೇರಲಿರುವ ಪ್ರಾಣಿಗಳ ಜಾತ್ರೆಗೆ ಮಾರಕವಾಗುವುದಿಲ್ಲ.ಏಕೆಂದರೆ ವರ್ಷಾನು ವರ್ಷಗಳಿಂದ Mountain Of God ಹೊರಹಾಕುವ ಈ Mineral ಯುಕ್ತ ಬೂದಿಯು ನೆಲವನ್ನು ಫಲವತ್ತಾಗಿ ಮಾಡುವ ಮೂಲಕ ಪ್ರಾಣಿಗಳನ್ನು ಈ ಭಾಗಕ್ಕೆ ಬರಲು ಪ್ರೇರೇಪಿಸುತ್ತದೆ.ಈ ಬೂದಿಯು ಮರಗಳನ್ನು ಬೆಳೆಯಲು ಬಿಡದ ಕಾರಣ ಫಲವತ್ತಾದ ಹುಲ್ಲು ಯೆತೇಚ್ಚವಾಗಿ ಬೆಳೆಯುತ್ತದೆ .ಈ ಅಂಶವೇ Short Grass Plain ಅನ್ನು ಆಫ್ರಿಕಾದ ಅತ್ಯಂತ ಉತ್ತಮವಾದ Grazing Land ಆಗಿ ಮಾಡಿರುವುದು ಹಾಗು ಭೂಮಿಯ ಮೇಲೆಯೇ ಅಷ್ಟೊಂದು ಪ್ರಮಾಣದ ಪ್ರಾಣಿಗಳು ಒಂದೆಡೆ ಸೇರಿ ಬದುಕಲು ಸಹಕಾರ ನೀಡುವುದು
.Wildebeest ಗಳು ಆಗಮಿಸುವುದರೊಂದಿಗೆ Short Grass Plain ಮತ್ತೊಮ್ಮೆ Savannah Paradise ಆಗಿ ಪರಿವರ್ತನೆಗೊಂಡಿದೆ
.ಈ ಸಮಯದಲ್ಲೇ ಮುಂದಿನ ಪೀಳಿಗೆಯನ್ನು ತಮ್ಮ ಹೊಟ್ಟೆಯಲ್ಲಿ ಇಟ್ಟುಕೊಂಡಿದ್ದ ಹೆಣ್ಣು Wildebeest ಗಳು ಮರಿಗಳಿಗೆ ಜನ್ಮ ನೀಡುತ್ತವೆ.ಕೇವಲ 2 ರಿಂದ 3 ವಾರಗಳೊಳಗಾಗಿ ಸುಮಾರು 5 ಲಕ್ಷ Wildebeest ಕರುಗಳು (ಮರಿ) ಜನ್ಮ ತಾಳುತ್ತವೆ.
Mountain Of God ಹೊರಹಾಕಿದ ಫಲವತ್ತಾದ ಬೂದಿಯಲ್ಲಿನ Mineral ಗಳು ಹುಲ್ಲುಗಳಲ್ಲಿ ಸೇರಿ ಅವನ್ನು ತಿನ್ನುವ ತಾಯಿ Wildebeest ಗಳ ಹಾಲಿನಲ್ಲಿ ಸೇರಿ ಮರಿಗಳಿಗೆ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತವೆ .ಹಾಗಾಗಿ Wildebeest ಕರುಗಳಿಗೆ ಇದಕ್ಕಿಂತ ಉತ್ತಮ ಆರಂಭ ಬೇರೆಲ್ಲೂ ಸಿಗುವುದಿಲ್ಲ
.Wildebeest ಗಳ ಜೊತೆ ಇತರ ಪ್ರಾಣಿಗಳು ಕೂಡ ಸೇರಲಾರಂಭಿಸುತ್ತವೆ,ಸಹಸ್ರಾರು Antelopes ಗಳು,2 ,೦೦,೦೦೦ ಜೀಬ್ರಾಗಲು Short Grass Plain ನಲ್ಲಿ ಹಸಿರು ಹುಲ್ಲನ್ನು ಅಸ್ವಾಧಿಸುತ್ತಿರುತ್ತವೆ
. Short Grass Plain ನ ಮಾಂಸಾಹಾರಿ ಪ್ರಾಣಿಗಳಿಗೆ ಈಗ ಹಬ್ಬದ ಸಮಯ.ಸುತ್ತ ಮುತ್ತ ಇರುವ ಲಕ್ಷಾಂತರ ಸಸ್ಯಾಹಾರಿಗಳು ಇವುಗಳ ಜೀವನವನ್ನು ಸಂತೋಷಗೊಳಿಸಿವೆ
.ನಿಧಾನವಾಗಿ ಪ್ರಾಣಿಗಳ ಗುಂಪು ದಕ್ಷಿಣಕ್ಕೆ ಸಾಗುತ್ತಾ Ndutu ಪ್ರದೇಶದಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸುತ್ತವೆ
.ಇಷ್ಟೆಲ್ಲಾ ಬದಲಾವಣೆಯಾಗುವ ಹೊತ್ತಿಗೆ ನಮ್ಮ Ndutu ಸಿಂಹಗಳ ಗುಂಪು ಯಾವ ಸ್ಥಿತಿಯಲ್ಲಿವೆ?? ಮರಿಗಳು ತಮ್ಮ ಕಷ್ಟ ಕಾಲದ ದಿನಗಳನ್ನು ಸಮರ್ಥವಾಗಿ ಎದುರಿಸಿವೆಯೇ??
.ಅದೃಷ್ಟವಶಾತ್ Ndutu ಸಿಂಹಗಳು ಆರೋಗ್ಯವಂತವಾಗಿವೆ.ಒಟ್ಟಿಗೆ ಇವೆ.ಎರಡು ಮರಿಗಳು ತಮ್ಮ ಕಷ್ಟ ಕಾಲದ ದಿನಗಳನ್ನು ಸಮರ್ಥವಾಗಿ ಎದುರಿಸಿವೆ.ಈಗ ಅವು ಚೆನ್ನಾಗಿ ಬೆಳೆದಿವೆ.ಹೆಣ್ಣು ಮರಿಯ ಮುಖದ ಮೇಲೆ ಇದ್ದ ಕಪ್ಪು ಕಲೆಗಳು ಮಾಗಿ ಹೊಸ ಚರ್ಮ ಬೆಳೆಯುತ್ತಿದೆ.ಗಂಡು ತನ್ನ ಗುಂಪನ್ನು ಕಾಪಾಡುವಷ್ಟು ಶಕ್ತವಾಗಿದೆ...ಆದರೆ ಅವುಗಳು ಸ್ವತಂತ್ರವಾಗಿ ಭೇಟೆಯಾಡಲು ಇನ್ನೂ ಆರು ತಿಂಗಳು ಬೇಕು
.Ndutu ವಿನಲ್ಲಿ ಸಿಂಹಗಳು ಈಗ ತಮ್ಮ ಸಂತೋಷದ ದಿನಗಳನ್ನು ಕಳೆಯುತ್ತಿವೆ.ಆರಾಮವಾಗಿ ತಿಂದು ಮಲಗಿ ದಿನಗಳನ್ನು ಆನಂದಿಸುತ್ತಿವೆ
.ಇದು ಕೇವಲ Ndutu ಸಿಂಹಗಳ ಕತೆಯಷ್ಟೇ ಅಲ್ಲ.Wildebeest ಗಳ ವಲಸೆಯನ್ನು ನಂಬಿ ಬದುಕುವ ಹಲವಾರು ಸಿಂಹಗಳ ಗುಂಪಿನ ಕತೆಯೂ ಹೆಚ್ಚು ಕಡಿಮೆ ಹೀಗೇ ಇರುತ್ತವೆ
.ಮಾರ್ಚ್ ತಿಂಗಳು....
.Short Grass Plain ನಲ್ಲಿ ಪ್ರಾಣಿಗಳ ಜಾತ್ರೆಯ ಹವಾ ಉತ್ತುಂಗದಲ್ಲಿದೆ.ಸತ್ತ ಪ್ರಾಣಿಗಳನ್ನು ತಿನ್ನುವ ರಣಹದ್ದುಗಳಿಗೆ,ಹೈನಾಗಳಿಗೆ ಇದು ಅತ್ಯುತ್ತಮ ಕಾಲ...
.ಏಪ್ರಿಲ್ ತಿಂಗಳು...
.ಗಂಡು Wildebeest ಗಳು ಯುದ್ದಕ್ಕಿಳಿದಿವೆ.ಗೆದ್ದ Wildebeest ಜೊತೆ ಹೆಣ್ಣು Wildebeest ಒಂದಾಗುತ್ತದೆ .ಮುಂದಿನ ವರ್ಷದ ಹೊಸ Wildebeest ಪೀಳಿಗೆಗಾಗಿ ಪ್ರಕೃತಿ ನಿಯೋಜಿಸಿರುವ ಈ ಆಟ ಈಗ Short Grass Plain ನಲ್ಲಿ ಸಾಮಾನ್ಯವಾಗಿಬಿಟ್ಟಿದೆ...ಬದಲಾವಣೆ ಪ್ರಕೃತಿ ನಿಯಮ.....
.Short Grass Plain ನ ಹವಾಮಾನ ನಿಧಾನವಾಗಿ ಬದಲಾಗುತ್ತದೆ .ಕಾಳು ತಿನ್ನುವ ಸಾವಿರಾರು ಹಕ್ಕಿಗಳ ಆಗಮನದಿಂದಾಗಿ Short Grass Plain ನ ಹುಲ್ಲು ಬದಲಾಗುತ್ತಿರುವುದು ಸ್ಪಷ್ಟವಾಗುತ್ತಿದೆ.ಹುಲ್ಲು ಹೂವು ಬಿಡಲು ಶುರು ಮಾಡಿ ಕಾಳುಗಳನ್ನು ಉತ್ಪತ್ತಿ ಮಾಡುವುದರಿಂದ ಹಸಿರು ಎಲೆ ಮಾಯವಾಗುತ್ತದೆ.ಹಸಿರು ಹುಲ್ಲನು ಇಷ್ಟ ಪಡುವ Wildebeest ಹಾಗು ಇತರ ಪ್ರಾಣಿಗಳಿಗೆ ಈಗ ಅವು ಬಯಸಿದ್ದು ಸಿಗುತ್ತಿಲ್ಲ
.ಈ ಕಾರಣಕ್ಕಾಗಿ ಮತ್ತೊಮ್ಮೆ Wildebeest ಗಳು ಮೋಡವನ್ನು ಹಿಂಬಾಲಿಸುತ್ತಾ..ಹಸಿರು ಹುಲ್ಲನ್ನು ಹುಡುಕುತ್ತಾ Short Grass Plain ನ ಉತ್ತರಕ್ಕೆ ತಮ್ಮ ಮಹಾ ವಲಸೆಯನ್ನು ಆರಂಭಿಸುತ್ತವೆ
.Short Grass Plain ನಲ್ಲಿ ಸೇರಿದ್ದ 'ಪ್ರಾಣಿಗಳ ಮೇಳ' ನಿಧಾನವಾಗಿ Short Grass Plain ಅನ್ನು ಖಾಲಿ ಮಾಡತೊಡಗುತ್ತವೆ
.ಮಾಂಸಾಹಾರಿ ಪ್ರಾಣಿಗಳಿಗೆ,Ndutu ಸಿಂಹಗಳಿಗೆ ಮತ್ತೆ ಕಷ್ಟಕಾಲ ಆರಂಭವಾಗುತ್ತದೆ.....''ಮತ್ತೊಮ್ಮೆ Short Grass Plain ಗೆ Wildebeest ಗಳ ಮಹಾವಲಸೆ ಬರುವವರೆಗೆ ''
ನಿಮ್ಮ ಪ್ರಯತ್ನ ಉತ್ತಮವಾಗಿದೆ. ಆದರೆ ಆಂಗ್ಲ ಪದಗಳ ಬಳಕೆ ಆದಷ್ಟು ಕಡಿಮೆ ಮಾಡಿದ್ದರೆ ಒಳ್ಳೆಯದಿತ್ತೆಂದು ನನ್ನ ಅಭಿಪ್ರಾಯ.
ReplyDelete'Great Migration ' ನೋಡಿದ್ದೆ . ಪ್ರಕೃತಿಯಲ್ಲಿನ ಬದಲಾವಣೆಗಳು , ಅದನ್ನವಲಂಬಿಸಿರುವ ಪ್ರಾಣಿಗಳ ಜೀವನದ ಏರಿಳಿತಗಳು ಎಲ್ಲವನ್ನು ನಿರೂಪಿಸಿದ್ದಾರೆ.
ಧನ್ಯವಾದಗಳು ಸುಮ.ನಿಮ್ಮ ಸಲಹೆಯನ್ನು ಸ್ವೀಕರಿಸುತ್ತೇನೆ ..
ReplyDeletetumba channagide. innu ondashtu photo hakabEkittu anta nanna anisike.
ReplyDeletedhanyvadagalu.
ನಿಮ್ಮ ಅಭಿಪ್ರಾಯಕ್ಕಾಗಿ ಧನ್ಯವಾದಗಳು ಜಗದೀಶ್..Copy Right ಕಾರಣಗಳಿಗಾಗಿ ಹೆಚ್ಚಿನ ಚಿತ್ರ ದೊರೆಯಲಿಲ್ಲ..ಆದ್ದರಿಂದ ಸಿಕ್ಕ ಚಿತ್ರಗಳನ್ನಷ್ಟೇ ಇಲ್ಲಿ ಪೋಸ್ಟ್ ಮಾಡಿದ್ದೇನೆ ....
ReplyDelete