-ಮಾಕಲಿದುರ್ಗ TREK-
ನಾವು ಅಂದುಕೊಂಡತೆ ಎಲ್ಲಾ ಸಮಯಗಳಲ್ಲೂ ನಡೆಯುವುದಿಲ್ಲ.ನಾವು ಹೊರಡುವ ಎಲ್ಲಾ Trekking ಗಳು Success ಆಗುವುದಿಲ್ಲ.ಹಾಗೆಯೇ ಈಗ ನಾನು ಬರೆಯಲು ಹೊರಟಿರುವ Trekking ಕತೆ ಕೂಡ Success ಆಗದೆ ಒಂದು Flop Show ಕತೆ
.ಇದೇಕೆ ನಾನು ಯಶಸ್ವಿಯಾಗದ Trekking ಕತೆ ಬರೆದಿದ್ದೇನೆ ಎಂದು ನೀವು ಕೇಳಬಹುದು.ಆದರೆ ಇದು Flop Show ಆದರೂ ಕೂಡ ಇದರಿಂದ ಪಡೆದ ಅನುಭವಗಳು ಮರೆಯಲಾರದವು
.ಬೆಂಗಳೂರಿಗೆ ನಾನು ಬಂದಾಗ ಇಲ್ಲಿನ ಸ್ನೇಹಿತರ ಜೊತೆ Weekend ಗಳಲ್ಲಿ ಸಾಧ್ಯವಾದ ಪ್ರಕೃತಿ ರಮಣೀಯತೆಯಿಂದ ಕೂಡಿರುವ ಪ್ರದೇಶಗಳಿಗೆ ಭೇಟಿ ಕೊಡುತ್ತೇನೆ.ಈ ಸಾರಿಯೂ ಅಷ್ಟೇ ಡಿಸೆಂಬರ್ ತಿಂಗಳ ಒಂದು ಶನಿವಾರ ಯಾವ ಪ್ರದೇಶಕ್ಕೆ ಹೋಗಬಹುದೆಂದು ಅಂತರ್ಜಾಲದಲ್ಲಿ ಹುಡುಕಾಡುತ್ತಿದ್ದಾಗ ನಮಗೆ ಸಿಕ್ಕ ಸ್ಥಳವೇ ಮಾಕಲಿದುರ್ಗ
.ಬೆಂಗಳೂರಿನಿಂದ 50km ದೂರದಲ್ಲಿರುವ ಮಾಕಲಿದುರ್ಗ Trekking ಮಾಡಲು ಒಂದು ಸುಂದರ ಸ್ಥಳ.ಬೆಟ್ಟದ ಮೇಲೆ ಒಂದು ಕೋಟೆ ಇದೆ.1350mts ಎತ್ತರದಲ್ಲಿರುವ ಇದನ್ನು ಹತ್ತಿ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಆನಂದಿಸಬಹುದು ಎಂಬುದನ್ನು ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯಿಂದ ತಿಳಿದುಕೊಂಡು ಅಲ್ಲಿಗೆ ಹೊರಡಲು ನಿರ್ಧರಿಸಿ ಮಧ್ಯಾನದ ಹೊತ್ತಿಗೆ ನಮ್ಮ (ನಾನು,ರಾಜು,ಸುಮಂತ್) ಸ್ನೇಹಿತನೊಬ್ಬನ (ರಾಜೇಶ್) ಮನೆಗೆ ಹೊರೆಟೆವು
.ನಾವು ಅಂತರ್ಜಾಲದಲ್ಲಿ ಮಾಕಲಿದುರ್ಗದ ಬಗ್ಗೆ ಮಾಹಿತಿ ಹುಡುಕುತ್ತಿರಬೇಕಾದರೆ ಒಂದುಕಡೆ ಮಾಕಲಿದುರ್ಗವನ್ನು ರಾತ್ರಿಯ ಹೊತ್ತು ಹತ್ತಿದ್ದ ಒಂದು ತಂಡದ ಬಗ್ಗೆ ಮಾಹಿತಿ ಸಿಕ್ಕಿತ್ತು.ಅದನ್ನು ಓದಿ ನಾವು ಕೂಡ ರಾತ್ರಿಯ ಹೊತ್ತೇ Trek ಮಾಡಬೇಕೆಂದು ಅಂದುಕೊಂಡು ಹೊರಟಿದ್ದು
.ರಾಜೇಶ್ ನ ಮನೆಗೆ ಹೋಗಿ ಅಲ್ಲಿ ಒಂದು ನಿರ್ದಿಷ್ಟ ಯೋಜನೆ ರೂಪಿಸಿ ದೊಡ್ಡಬಳ್ಳಾಪುರದ ಕಡೆಗೆ ಬೈಕ್ ನಲ್ಲಿ ಹೊರಟಾಗ ಸಮಯ ಅದಾಗಲೇ 5pm ಮೀರಿತ್ತು
.ಈ ಬಾರಿಯೂ ನಾವು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರಲಿಲ್ಲ,ಚಳಿಯಿಂದ ಸಾಕಷ್ಟು ರಕ್ಷಣೆ ನೀಡುವ ವಸ್ತುಗಳಾಗಲಿ,ಒಳ್ಳೆಯ ಟಾರ್ಚ್ ಆಗಲಿ ಯಾವುದೊಂದು ನಮ್ಮ ಬಳಿ ಇರಲಿಲ್ಲ.ಕುಟ್ಟಿ ಕುಂದಾಪುರಕ್ಕೆ ಹೋದ ಕತೆಯಂತಾಗಿತ್ತು ನಮ್ಮ ಪರಿಸ್ಥಿತಿ.ಹಿಂದೊಮ್ಮೆ ನಾನು ರಾಜೇಶ್ ಹೀಗೆ 'ಹಸಿರು ಹಾದಿಯಲ್ಲಿ' ಪ್ರಯಾಣಿಸಿ ಯಶಸ್ವಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು
.ನಾವು ದೊಡ್ಡಬಳ್ಳಾಪುರ ತಲುಪುವ ಹೊತ್ತಿಗೆ ಅದಾಗಲೇ ಕತ್ತಲಾಗಿತ್ತು.ಚಳಿ ತನ್ನ ರೌದ್ರವತೆಯ ಮುನ್ಸೂಚನೆಯನ್ನು ಕೊಡಲಾರಂಭಿಸಿತ್ತು.ದೊಡ್ಡಬಳ್ಳಾಪುದಲ್ಲಿ ಮಾಕಲಿದುರ್ಗದ ಬಗ್ಗೆ ವಿಚಾರಿಸಿದಾಗ ಹೆಚ್ಚೇನೂ ಮಾಹಿತಿ ಸಿಗಲಿಲ್ಲ.ಅಲ್ಲಿಂದ ಹತ್ತು ಕಿಲೋಮೀಟರ್ ಮುಂದೆ ಹೋದರೆ ಸಿಗುವುದೇ ಮಾಕಲಿದುರ್ಗ ಎಂಬ ಮಾಹಿತಿ ಮಾತ್ರ ಸಿಕ್ಕಿದ್ದು
.ದೊಡ್ಡಬಳ್ಳಾಪುರದಿಂದ ಮುಂದೆ ಸಾಗಿದಂತೆ ಅಲ್ಲಿನ ಬೆಟ್ಟ ಗುಡ್ಡಗಳು ಕತ್ತಲಲ್ಲಿ ಅಸ್ಪಷ್ಟವಾಗಿ ಕಾಣಲಾರಂಭಿಸಿದವು.ಆಗಲೇ ಮನಸ್ಸಿನ ಮೂಲೆಯಲ್ಲಿ ನಮಗೆ ಈ ರಾತ್ರಿ ಮಾಕಲಿದುರ್ಗ ಬೆಟ್ಟ ಹತ್ತುವುದು ಸುಲಭವಲ್ಲ ಎಂಬ ಅನುಮಾನ ಕಾಡಲಾರಂಭಿಸಿತ್ತು
.ಮಕಲಿದುರ್ಗ ಇದ್ದ ಬೆಟ್ಟದ ಹತ್ತಿರದ ಒಂದು ಹಳ್ಳಿಗೆ ಬಂದ ನಾವು ಅಲ್ಲಿ ಒಬ್ಬರು ಆಟೋದವರನ್ನು ವಿಚಾರಿಸಿದಾಗ ಅವರು ಆ ಬೆಟ್ಟದ ಬಗ್ಗೆ ಕೆಲವು ಮಾಹಿತಿ ಕೊಟ್ಟರು.ಆದರೆ ನಾವು ರಾತ್ರಿ ಆ ಬೆಟ್ಟವನ್ನು ಹತ್ತುವುದೆಂದು ತಿಳಿದು ದಾರಿ ಸರಿಯಾಗಿ ಗೊತ್ತಾಗುವುದಿಲ್ಲವೆಂಬ ಮಾಹಿತಿ ನೀಡಿದರು.ಆದರೆ ಕಾಡು ಪ್ರಾಣಿಗಳ ಭಯವಿಲ್ಲವೆಂಬುದನ್ನು ಅವರು ಹೇಳಿದ್ದು ನಮಗೆ ಕೊಂಚ ಮಟ್ಟಿಗೆ ನೆಮ್ಮದಿ ತಂದಿತ್ತು.ಮುಂದೆ ನಾವು ಅದೇ ಹಳ್ಳಿಯ ರಸ್ತೆ ಬದಿಯ ಒಂದು ಹೋಟೆಲ್ ನಲ್ಲಿ ಊಟ ಮುಗಿಸಿ,ರಾತ್ರಿಗೆ ಬೇಕಾಗಬಹುದೆಂದು ನೀರು ಹಾಗು ಕೆಲವು ಬಿಸ್ಕೆಟ್ ಪ್ಯಾಕ್ ಗಳನ್ನು ಕೊಂಡೆವು
.ಈ ನಡುವೆ ಬೆಳಿಗ್ಗೆಯಿಂದಲೂ ಶೀತ ನನ್ನನ್ನು ಕಾಡುತಿತ್ತು,ಜ್ವರ ಬರುವ ಮುನ್ಸೂಚನೆ ಇದ್ದ ಕಾರಣ ನಾನು ಮಾತ್ರೆಯನ್ನು ತೆಗೆದುಕೊಂಡೆ
.ಮಾಕಲಿದುರ್ಗ ಬೆಟ್ಟ ಹತ್ತಬೇಕಾದರೆ ಇಲ್ಲಿಂದ (ಹೋಟೆಲ್ ರಸ್ತೆ) ಯಿಂದ ಹಿಂದೆ ಬಂದು ಬಲ ಭಾಗದಲ್ಲಿರುವ ಒಂದು ಮಣ್ಣು ರಸ್ತೆಯಲ್ಲಿ ಹೋಗಬೇಕು.ಆ ಮಣ್ಣು ರಸ್ತೆ ಒಂದು ರೈಲ್ವೆ ಹಳಿಯ ಬಳಿ ಸಾಗುತ್ತದೆ.ಇಲ್ಲಿ ನಾನು ನಮ್ಮ ಬೈಕ್ ಗಳನ್ನು ಪಾರ್ಕ್ ಮಾಡಿ ರೈಲ್ವೆ ಹಳಿ ದಾಟಿ ಬೆಟ್ಟ ಹತ್ತಲು ಪ್ರಾರಂಭಿಸಬೇಕು
.ನಾವು ರೈಲ್ವೆ ಹಳಿ ಸಮೀಪ ಬಂದು ಬೈಕ್ ಪಾರ್ಕ್ ಮಾಡಿ ಒಮ್ಮೆ ಎದುರಿನ ಬೆಟ್ಟ ನೋಡಿದಾಗ ನಮ್ಮ Trekking ಯೋಜನೆ ಬಗ್ಗೆ ನಮಗೇ ನಗು ಬರಲು ಶುರುವಾಯಿತು.ಸುತ್ತಲೂ ದಟ್ಟವಾದ ಕತ್ತಲು,ಎದುರಿಗೆ ವಿಸ್ತಾರವಾದ ಬೆಟ್ಟ,ದಾರಿಯೇ ಗೋಚರಿಸುತ್ತಿಲ್ಲ,ಬೆಟ್ಟ ಹತ್ತಲು ನಮ್ಮ ಬಳಿಯಿದ್ದ ಮಾಹಿತಿಗೂ,ಕಣ್ಣ ಮುಂದೆ ಗೋಚರಿಸುತ್ತಿದ್ದ ದೃಶ್ಯಗಳಿಗೂ ಹೊಂದಾಣಿಕೆಯೇ ಬರುತ್ತಿಲ್ಲ.ನಾವು ಹಗಲಿನಲ್ಲಿ ನೋಡಿದ ಜಾಗ ಕತ್ತಲಲ್ಲಿ ಹಗಲಲ್ಲಿ ಕಂಡಂತೆ ಕಾಣದೆ ಬೇರೆ ರೀತಿಯಾಗಿ ಕಾಣುತ್ತದೆ.ಈ ಬೆಟ್ಟ ಹತ್ತಲು ಸರಿಯಾಗಿ ದಾರಿ ಗೊತ್ತಿಲ್ಲದ ನಮಗೆ ಅಲ್ಲಿನ ಚಳಿ ಹಾಗು ಬೆಟ್ಟದ ಆಕೃತಿ ಭಯ ಹುಟ್ಟಿಸಿದವು
.ಆಗಿದ್ದಾಗಲಿ ಎಂದು ಒಂದು ಅಂದಾಜಿನ ಪ್ರಕಾರ ರೈಲ್ವೆ ಹಳಿಯನ್ನು ದಾಟಿ ಬೆಟ್ಟ ಹತ್ತಲು ಶುರು ಮಾಡಿದೆವು.ಅಲ್ಲೇ ಇದ್ದ ಒಂದು ನಾಯಿ ನಮ್ಮ ಜೊತೆ ಬಾಲ ಅಲ್ಲಾಡಿಸಿಕೊಂಡು ಬಂತು
.ಈ ಬೆಟ್ಟದ ಕೆಳಗೆ ರೈಲ್ವೆ ಹಳಿ ಹಾದು ಹೂಗಿರುವುದರಿಂದ ನಮಗೇ ಬೆಟ್ಟಕ್ಕೆ ಹೋಗುವ ಮಧ್ಯೆ ದಾರಿ ತಪ್ಪಿದರೆ ಕೆಳಕ್ಕೆ ಇಳಿಯಲು ಭಯವಿರಲಿಲ್ಲ .ಅದೂ ಅಲ್ಲದೆ ನಾವು ಅಲ್ಲಿಗೆ ಬಂದ ಕೆಲವೇ ಗಂಟೆಗಳೊಳಗೆ ಅಲ್ಲಿ ಹಲವು ರೈಲುಗಳು ಸಂಚರಿಸಿದ್ದರಿಂದ ನಮಗೆ ಅಷ್ಟೊಂದು ಭಯವೆನ್ನಿಸಲಿಲ್ಲ
.ಕಾಲುದಾರಿಯೊಂದನ್ನು ಹಿಡಿದು ಹೊರಟ ನಾವು ಹಲವಾರು ದೂರ ನಡೆದಿದ್ದೆವು.ಚಳಿ ಕ್ಷಣ ಕ್ಷಣ ಕಳೆದಂತೂ ಹೆಚ್ಚಾಗತೊಡಗಿತು.ನಾವು ನಡೆಯುತ್ತಿದ್ದ ದಾರಿ ಸುತ್ತೀ ಬಳಸಿ ಬೆಟ್ಟದ ಮೇಲಕ್ಕೆ ಹೋಗುವಂತೆ ಕಂಡಿತು.ಹೀಗೆ ನಡೆಯುತ್ತಿದ್ದ ನಮಗೆ ಸುಮಾರು 10.30 ರ ಸಮಯಕ್ಕೆ ಒಂದು ಸಮಸ್ಯೆ ಶುರುವಾಯಿತು.ನಾವು ಸಾಗುತ್ತಿದ್ದ ರಸ್ತೆ ಸ್ವಲ್ಪ ದೂರ ಮೇಲಕ್ಕೆ ಹೋಗಿ ಅಲ್ಲೊಂದು ಕಡೆ ಕೊನೆಗೊಂಡಿತ್ತು.ನಂತರದ ಹಲವು ಸಮಯವನ್ನು ನಾವು ಬೆಟ್ಟದ ಮೇಲಕ್ಕೆ ಸಾಗುವ ಬೇರೆ ದಾರಿ ಹುಡುಕಲು ಕಳೆದೆವು.ಆದರೆ ಎಲ್ಲಾ ದಾರಿಗಳು ಸ್ವಲ್ಪ ಮುಂದೆ ಹೋದಂತಾಗಿ ಭಯಾನಕವಾದ ಪೊದೆಗಳಲ್ಲಿ ಕೊನೆಗೊಳ್ಳುತ್ತಿದ್ದವು.ಲಂಟಾನ ಪೊದೆಯ ಮುಳ್ಳೆಲ್ಲಾ ಮೈಗೆ ಚುಚ್ಚಲು ಶುರುವಾಯಿತು.ದಾರಿ ಕಾಣದೆ ಸುಸ್ತಾದ ನಾವು ಅಲ್ಲೊಂದು ಸಣ್ಣ ಬಂಡೆಯ ಕೆಳಗೆ ಸ್ವಲ್ಪ ಹೊತ್ತು ವಿಶ್ರಮಿಸಿ ಮುಂದೇನು ಮಾಡಬಹುದೆಂಬ ಬಗ್ಗೆ ಯೋಚಿಸಿದೆವು
.ಈ ನಡುವೆ ನಮ್ಮ ಹತಿರವಿದ್ದ ಬೆಳಕಿನ ವ್ಯವಸ್ಥೆ ಎಂದರೆ ನನ್ನ ಮೊಬೈಲ್,ಹಾಗು ರಾಜು ಬಳಿ ಇದ್ದ ಒಂದು Trekking Torch
ನನ್ನ ಮೊಬೈಲ್ ನಲ್ಲಿ ಸಾಕಷ್ಟು ಚಾರ್ಜ್ ಇರಲಿಲ್ಲ ಜೊತೆಗೆ ರಾಜು ಬಳಿ ಇದ್ದ ಟಾರ್ಚ್ ಕೂಡ ಕೈ ಕೊಡುವ ಸೂಚನೆ ಕೊಡುತಿತ್ತು
.ನಾವು ಸರಿಯಾಗಿ ನಿರ್ಧಾರ ಮಾಡದೆ ಮುಂದುವರಿಯುವಂತಿರಲಿಲ್ಲ.ಅಲ್ಲಿದ್ದ ಅಗಧವಾದ ಲಂಟಾನ ಪೊದೆಗಳು ನಮ್ಮನ್ನು ಇನ್ನಷ್ಟು ಕಂಗೆಡಿಸಿದವು.ಅಕಸ್ಮಾತ್ ನಾವು ಧೈರ್ಯ ಮಾಡಿ ಮುಂದುವರೆಯೋಣ ಎಂದು ಯೋಚಿಸಿದರೆ ಹಲವು ಸಮಸ್ಯೆಗಳು ಎದುರಾಗುತ್ತಿದ್ದವು.ನಾವು ಆ ಪೊದೆ ಕಾಡಿನ ನಡುವೆ ದಾರಿ ತಪ್ಪಿದರೆ ಮತ್ತೆ ಕೆಳಗೆ ಹೋಗಲು ಬಹಳ ಶ್ರಮ ಪಡಬೇಕಾಗಿತ್ತು.ಜೊತೆಗೆ ನಮಗಿದ್ದ ಪ್ರಮುಖ ಸಮಸ್ಯೆ ಎಂದರೆ ನಮ್ಮ ಬಳಿ ಸರಿಯಾದ ಬೆಳಕಿನ ವ್ಯವಸ್ಥೆ ಇರಲಿಲ್ಲ.ಅಕಸ್ಮಾತ್ ನಾವು ಕತ್ತಲಲ್ಲಿ ದಾರಿ ತಪ್ಪಿ ಬಿಟ್ಟರೆ ಇಡೀ ರಾತ್ರಿ ಮುಳ್ಳು ಪೊದೆಗಳ ನಡುವೆ ಕಾಲ ಕಳೆಯಬೇಕಿತ್ತು.ಅಷ್ಟಲ್ಲದೇ ಚಳಿ ಈ ರಾತ್ರಿ ನಿಮ್ಮನ್ನು ಬೆಟ್ಟ ಹತ್ತಲು ಬಿಡುವುದಿಲ್ಲವೆಂದು ನಿರ್ಧರಿಸಿ ಬಿಟ್ಟಿತ್ತು.ಬೆಟ್ಟದ ಆ ಪರಿಸರ ಹಲವು ಹಾವುಗಳಿಗೂ ಅವಾಸ ಸ್ಥಾನವಾಗಿರುತ್ತದೆ ಎಂಬುದರಲ್ಲಿ ಅನುಮಾನವಿರಲಿಲ್ಲ
.ಇಂತಹ ಹಲವು ಅಪಾಯಗಳು ಎದುರಾಗುವ ಸಾಧ್ಯತೆ ಅರಿತ ನಾವು ಸುರಕ್ಷತೆ ದೃಷ್ಟಿಯಿಂದ ಈ ರಾತ್ರಿ ಮಾಕಲಿದುರ್ಗ ಬೆಟ್ಟ ಹತ್ತುವ ನಮ್ಮ ಯೋಜನೆಗೆ ಇತಿಶ್ರೀ ಹಾಡಲು ತೀರ್ಮಾನಿಸಿದೆವು.ಕತ್ತಲಲ್ಲಿ ಕೆಳಗಿಳಿಯುವಾಗಲೂ ದಾರಿ ತಪ್ಪಿಸಿಕೊಂಡ ನಾವು ನಾನು ಮೊದಲೇ ಹೇಳಿದಂತೆ ರೈಲ್ವೆ ಹಳಿಯ ಗುರುತಿನ ಸಹಾಯದಿಂದ ಕೆಳಗಿಳಿದೆವು.ಅಲ್ಲೊಂದು ಕಡೆ ಮತ್ತೆ ವಿಶ್ರಮಿಸಿ ತಂದ ಅಹಾರವನ್ನು ಮತ್ತೊಮ್ಮೆ ತಿಂದು ಮತ್ತೆ ರೈಲ್ವೆ ಹಳಿಗಳ ಮೇಲೆ ನಾವು ಬೈಕ್ ಪಾರ್ಕ್ ಮಾಡಿದ ಸ್ಥಳದತ್ತ ಹೆಜ್ಜೆ ಹಾಕಿದೆವು.ಈ ನಡುವೆ ನನಗೆ ನಿಧಾನವಾಗಿ ಜ್ವರ ಆವರಿಸಿತ್ತು
.ಸಮಯ ಸುಮಾರು 12.30. ಮುಂದೇನು ಮಾಡುವುದೆಂದು ತಿಳಿಯದ ನಾವು ಸದ್ಯಕ್ಕೆ ದೊಡ್ಡಬಳ್ಳಾಪುರದ ಕಡೆಗೆ ಹೋಗಿ ಆಮೇಲೆ ಯೋಚಿಸೋಣವೆಂದು ನಮ್ಮ ಬೈಕ್ ತೆಗೆದುಕೊಂಡು ಹೊರಟೆವು.ಆಗ ನಮಗೆ ನಿಜವಾದ ಚಳಿಯ ಭೀಕರತೆ ಗೊತ್ತಾದದ್ದು
.ದೊಡ್ಡಬಳ್ಳಾಪುರಕ್ಕೆ ಬಂದ ನಾವು ಅಲ್ಲಿನ ರೈಲ್ವೆ ನಿಲ್ದಾಣಕ್ಕೆ ಬಂದೆವು.ರೈಲ್ವೆ ನಿಲ್ದಾಣ ಖಾಲಿ ಹೊಡೆಯುತಿತ್ತು
.ಈ ನಡುವೆ ನಮ್ಮ ಮುಂದೆ ಹಲವು ಆಯ್ಕೆ ಬಂದವು.ಮೊದಲನೆಯದಾಗಿ ಬೆಂಗಳೂರಿಗೆ ವಾಪಾಸ್ ಮರಳುವುದು.ಎರಡನೆಯದಾಗಿ ಅಲ್ಲೇ ರೈಲ್ವೆ ನಿಲ್ದಾಣದಲ್ಲಿ ಮಲಗಿ ಬೆಳಗ್ಗೆ ಮತ್ತೆ ಮಾಕಲಿದುರ್ಗ ಬೆಟ್ಟ ಹತ್ತುವುದು.ಮೂರನೆಯದಾಗಿ ರೈಲ್ವೆ ನಿಲ್ದಾಣದಲ್ಲೇ ಒಂದೆರಡು ಘಂಟೆ ಕಳೆದು ಮತ್ತೆ ನಂದಿ ಬೆಟ್ಟದ ಕಡೆ ತೆರಳುವುದು
.ಆದರೆ ಯಾವ ನಿರ್ಧಾರಕ್ಕೂ ಒಮ್ಮತ ಬರಲಿಲ್ಲ.ರೈಲ್ವೆ ನಿಲ್ಧಾಣದಲ್ಲಿ ಮಲಗೋಣವೆಂದರೆ ಅಲ್ಲಿ ಹಲವು ರೈಲುಗಳು ಸಂಚರಿಸುತ್ತಿದ್ದ ಕಾರಣ ನಿದ್ರೆ ಬರುವ ಸಾಧ್ಯತೆಗಳಿರಲಿಲ್ಲ.ಜೊತೆಗೆ ಚಳಿ ಬೇರೆ.ನಿದ್ರೆ ಇಲ್ಲದೆ ಮುಂದಿನ ದಿನ ಮಾಕಲಿದುರ್ಗ ಹತ್ತುವುದು ಸಾಧ್ಯವಿರಲಿಲ್ಲ.ನಂದಿ ಬೆಟ್ಟಕ್ಕೆ ಹೋಗೋಣವೆಂದರೆ ಚಳಿಯ ಕಾಟ.ನದಿ ಬೆಟ್ಟ ಮೇಲೆ ಹತ್ತುವುದರೊಳಗೆ ನಮ್ಮ ದೇಹ ಹೆಪ್ಪುಗಟ್ಟಿ ಹೋಗುವುದರಲ್ಲಿ ಅನುಮಾನವಿರಲಿಲ್ಲ.ಹಾಗೆಂದು ಬೆಂಗಳೂರಿನ ಕಡೆ ವಾಪಾಸ್ ಮರಳೋಣವೆಂದರೆ ರಾಜು ಹಾಗು ರಾಜೇಶ್ ಮನಸಿಲ್ಲ
.ಕೊನೆಗೂ ಚಳಿ ಎಲ್ಲರ ಮನಸನ್ನು ಒಂದು ಮಾಡಿ ಬೆಂಗಳೂರಿಗೆ ಹೊರಡಲು ಪ್ರೆರೀಪಿಸಿತು
.ತಡ ರಾತ್ರಿ ೦2.೦0 ರ ಸುಮಾರಿಗೆ ಬೆಂಗಳೂರಿನ ಕಡೆಗೆ ವಾಪಾಸ್ ಹೊರಟೆವು.ಇಲ್ಲಿಯೂ ಚಳಿ ತನ್ನ ಶಕ್ತಿ ಪ್ರದರ್ಶಿಸಿತು,ಪರಿಣಾಮ ನಾವು ಚಳಿಗೆ ಸಿಲುಕಿ ತತ್ತರಿಸಿ ಹೋಗಿದ್ದೆವು,ನನಗಂತೂ Hypothermia ಆದಂತೆ ಅನ್ನಿಸುತಿತ್ತು
.ಅಂತೂ ಒಂದು ಕರಾಬ್ ಅನುಭವ ಅನುಭವಿಸಿ ರಾತ್ರಿ 3 ಘಂಟೆಯ ಹೊತ್ತಿಗೆ ರಾಜೇಶನ ಮನೆ ತಲುಪಿದೆವು.ನನಗಾಗಲೇ ಜ್ವರ ಚಳಿಯಲ್ಲೂ ಮೈ ಬಿಸಿ ಮಾಡಿತ್ತು
.ರಾತ್ರಿ ಒಳ್ಳೆಯ ನಿದ್ರೆಯ ನಂತರ ಭಾನುವಾರ ಬೆಳಗ್ಗೆ ತಡವಾಗಿ ಎದ್ದ ನಾವು ಅಂದು ಸಂಜೆಯವರೆಗೆ ರಾಜೇಶನ ಮನೆಯಲ್ಲಿದ್ದು ನಂತರ ನಮ್ಮ ಮನೆಯ ಕಡೆ ಹೊರಟೆವು.ಸಂಜೆ ವೇಳೆಗೆ ನನಗೆ ಜ್ವರ ಕೂಡ ಇಳಿದಿತ್ತು..ಹಿಂದಿನ ದಿನ ಸೂರ್ಯ ಮುಳುಗಲು ಹೊರಟ ಸಮಯಕ್ಕೆ ಮಾಕಲಿದುರ್ಗದ ಕಡೆಗೆ ಹೊರಟ ನಾವು ಇಂದು ಅದೇ ಸಮಯಕ್ಕೆ ಒಂದು ವಿಶೇಷ ಅನುಭವದೊಂದಿಗೆ ಮನೆಯ ಕಡೆ ಹೊರಟಿದ್ದೆವು
-ಪ್ರಕೃತಿಯನ್ನು ಉಳಿಸಿ-

ha ha ha kutti kundapurakke hog bandh haage agirodanthu nija.... next time hogtha full plan madkond hogi
ReplyDeleteಕೆಲವು ವರ್ಷಗಳ ಹಿಂದೆ ರಾತ್ರಿ ಮೇರ್ತಿ ಬುಡ ತಲುಪಿ ಮದ್ಯರಾತ್ರಿ ಹತ್ತಲು ಹೋಗಿ ಹತ್ತಲಾಗದೆ ಗುಡ್ಡದ ಬುಡದ ಗುಹೆಯಲ್ಲಿ ಬಾಣಲಿ ರೊಟ್ಟಿ ಮಾಡಿ ತಿಂದು ಗುಹೆಯಲ್ಲಿ ಬೆಚ್ಚಗೆ ಮಲಗಿದ್ದು ಜ್ಞಾಪಕಕ್ಕೆ ಬಂತು.
ReplyDeleteಸುಬ್ರಮಣ್ಯರವರೆ ನೀವಾದರೂ ಪುಣ್ಯವಂತರು ನಿಮಗೆ ಅಂದು ರಾತ್ರಿ ಕಳೆಯಲು ಗುಹೆ ಸಿಕ್ಕಿತ್ತು..
ReplyDeleteಆದರೂ ಇಂತಹ ಸನ್ನಿವೇಶಗಳು ಮರೆಯಲಾಗದಂತಹ ಅನುಭವಗಳನ್ನು ದಕ್ಕಿಸಿಕೊಡುತ್ತವೆ...ಅಲ್ಲವೇ..???
ಸುಂದರ ಬ್ಲಾಗ್, ಇಷ್ಟವಾಯಿತು.
ReplyDeleteಡಾ.ಜೆ.ಬಾಲಕೃಷ್ಣ
http://antaragange.blogspot.com
ರಾಘವೇಂದ್ರ,
ReplyDeleteನಿಮ್ಮ ಬ್ಲಾಗ್ ಮತ್ತು ಪ್ರಕೃತಿ ಪರಿಸರದ ಬಗ್ಗೆ ನಿಮಗಿರುವ ಕಾಳಜಿ ಬಹಳ ಇಷ್ಟವಾಯಿತು. ಅದರಲ್ಲೂ ಕಾಳಿಂಗಸರ್ಪದ, ಮನೆಗೆ ಬಂದ ನಾಗರಹಾವಿನ ಮತ್ತು ರಸ್ತೆ ದಾಟುವ ಹೆಬ್ಬಾವಿನ ಪೋಸ್ಟ್‌ಗಳು ಬಹಳ ಹಿಡಿಸಿದವು. ಎಲ್ಲೂ ನೋಡಲು ಸಿಗದ ಚಿತ್ರಗಳವು. ಧನ್ಯವಾದ.
Thank you Rajesh sir...
ReplyDelete