
-ಬಿಸಿಲ ದಗೆಗೆ ಬೇಯುತ್ತಿದೆ ಜೀವ ಸಂಕುಲ- .ಅಬ್ಬಾ....ಏನು ಸೆಖೆ ರೀ ಈ ವರ್ಷ...ಹಿಂದೆಂದೂ ನೋಡಿರಲಿಲ್ಲ ಇಂತಹ ಸೆಖೆ ಯನ್ನು.... ಇಂಥ ಮಾತುಗಳು ಈಗ ಸರ್ವೆ ಸಾಮಾನ್ಯವಾಗಿದೆ.ಇಡೀ ಜೀವ ಸಂಕುಲವೇ ಈ ಬಾರಿಯ ಬಿರು ಭೇಸಿಗೆಗೆ ತತ್ತರಿಸಿಹೋಗಿದೆ .ಭಾರತದ ಹಲವು ಪ್ರದೇಶಗಳಲ್ಲಿ ಭೇಸಿಗೆ ಈ ಬಾರಿ ತನ್ನ ರುದ್ರರೂಪವನ್ನು ತೋರಿಸಿದೆ.ಕರ್ನಾಟಕದಲ್ಲಂತೂ ಬರ ಪರಿಸ್ಥಿತಿ ತಲೆದೂರಿದೆ .ಸಾಧಾರಣವಾಗಿ ಉತ್ತರ ಕರ್ನಾಟಕದಲ್ಲಿ ಹಾಗು ಕರಾವಳಿ ಜಿಲ್ಲೆಗಳಲ್ಲಿ ಯಾವಾಗಲು ಹೆಚ್ಚಿನ ತಾಪಮಾನವಿರುತ್ತದೆ.ಆದರೆ ಈ ಬಾರಿ ಆ ತಾಪಮಾನವನ್ನೂ ಮೀರಿ ಉಷ್ಣಾಂಶ ದಾಖಲಾಗುತ್ತಿದೆ .ಇನ್ನು ಮಲೆನಾಡಿನಲ್ಲಿ ಮಿತಿ ಮೀರಿದ ಉಷ್ಣಾಂಶ ಇಲ್ಲಿನ ಜನರ ಬದುಕಿನ ಮೇಲೆ ನೇರ ಪರಿಣಾಮವನ್ನು ಬೀರಲಾರಂಭಿಸಿದೆ .ಇಂತಹ ಹೆಚ್ಚಿನ ಉಷ್ಣಾಂಶವನ್ನು ನಾನು ಕೂಡ ಈ ಹಿಂದೆ ನೋಡಿರಲಿಲ್ಲ.ಶುಭ್ರ ನೀಲಿ ಆಕಾಶದಲ್ಲಿ ಮಧ್ಯಾನ್ಹದ ನಂತರ ಮೋಡಗಳು ಕಾಣುತ್ತವೆಯಾದರೂ ಅವುಗಳ ಮಳೆಯಾಗಿ ಪರಿವರ್ತನೆಗೊಳುತ್ತಿಲ್ಲ .ಎಲ್ಲೊ ಒಂದೆರಡು ಕಡೆ ಮಳೆ ಬಂದರೂ ಕೂಡ ಮಳೆ ಬಂದು ಹೋದ ನಂತರದ ದಿನಗಳಲ್ಲಿ ತಾಪಮಾನ ಅತ್ಯಧಿಕವಾಗಿರುತ್ತದೆ .ಮಲೆನಾಡಿನ ಜೀವ ನದಿ ತುಂಗೆಯಂತೂ ಬಳಲಿ ಬೆಂಡಾಗಿ ಹೋಗಿದ್ದಾಳೆ.ಹೆಚ್ಚಿನ ಕಡೆಯಲ್ಲಿ ಅವಳನ್ನು ನದಿ ಎಂದು ಕರೆಯಲು ಸಹ ಆಗದ ಸ್ಥಿತಿಯಲ್ಲಿದ್ದಾಳೆ .ಇನ್ನು ಉದ್ಯಾನನಗರಿ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆಯುತ್ತಿರುವ ಮರಗಳ ಮಾರಣ ಹೋಮದಿಂದ ಉಷ್ಣಾಂ...