ನೇಚರ್ wrap-up

.ಪ್ರಿಯ ಪರಿಸರ ಪ್ರೇಮಿ ಮಿತ್ರರೇ ತಮಗೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು

.2013 ನೇ ವರ್ಷದಲ್ಲಿ ನಮ್ಮ ಬ್ಲಾಗ್ ನಲ್ಲಿ ಪ್ರಕಟಗೊಳ್ಳುತ್ತಿರುವ ಪ್ರಥಮ ಪೋಸ್ಟ್ ಇದು.ಸದಾ ಏನಾದರೊಂದು ಹೊಸ ವಿಷಯವನ್ನು ಹೊತ್ತು ತರುವ ನಮ್ಮ ಬ್ಲಾಗ್ ಈ ವರ್ಷದಲ್ಲೂ ಕೂಡಾ ಹಲವು ಹೊಸ ಪ್ರಕೃತಿಯ ಹೊಸ ವಿಷಯಗಳೊಂದಿಗೆ ಪ್ರಕಟಗೊಳ್ಳಲಿದೆ

.ನೇಚರ್ wrap-up ಅನ್ನುವ ಹೊಸ ಸರಣಿಯ ಪೋಸ್ಟ್ ಗಳ ಮೂಲಕ ಪ್ರಪಂಚದ ಪ್ರಕೃತಿ ಸಂಭಂದ ವಿಚಾರಗಳನ್ನು ಸರಳವಾಗಿ ನಿಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೇವೆ

.ಈ ನೇಚರ್ wrap-up ಸರಣಿಯ ಪೋಸ್ಟ್ ಗಳು ನಿಮಗೆ ಇಷ್ಟವಾಗಬಹುದು ಎಂದು ಭಾವಿಸಿದ್ದೇವೆ.ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಗಳ ಮೂಲಖ ಬರೆಯಲು ಮರೆಯದಿರಿ


                                ನೇಚರ್ wrap-up  -1

-ವಿಮಾನದಲ್ಲಿ ಪ್ರಯಾಣಿಸಿ ಪ್ರಾಣ ತೆತ್ತ ಹಾವು -
.ಆಸ್ಟ್ರೇಲಿಯಾ ದ Scrub python ಹಾವೊಂದು  ಹೇಗೋ  ವಿಮಾನವನ್ನು ಏರಿ ಸುಮಾರು ಒಂದು ಗಂಟೆ ಐವತ್ತು ನಿಮಿಷಗಳ ಕಾಲ ಪ್ರಾಣ ಉಳಿಸಿಕೊಳ್ಳಲು ಹೋರಾಡಿ ಕೊನೆಗೆ ಮರಣವನ್ನಪ್ಪಿದೆ

.ಈ ಹಾವು ಆಸ್ಟ್ರೇಲಿಯಾ ದ Cairns ಹಾಗು Papua New Guinea ದ Port Moresby ನಗರ ಗಳ ನಡುವೆ ಹಾರಾಡುವ ವಿಮಾನವೊಂದರ ರೆಕ್ಕೆ ಮೇಲೆ ಹತ್ತಿ ಕುಳಿತಿತ್ತು

.ವಿಮಾನ ಟೇಕ್ ಅಪ್ ಆದ ಇಪ್ಪತ್ತು ನಿಮಿಷಗಳ ತರುವಾಯ ಒಬ್ಬಳು ಮಹಿಳೆ ಇದನ್ನು ಮೊದಲು ನೋಡಿದಳು

.ರೆಕ್ಕೆಗಳ ಮೇಲೆ ಪ್ರಾಣ ಉಳಿಸಿಕೊಳ್ಳಲು ಹೊರಡುತ್ತಿದ್ದ ಅದಕ್ಕೆ ಅಡ್ಡಿಯಾಗಿದ್ದು 400 ಕಿಲೋಮೀಟರ್ ವೇಗದ ಗಾಳಿ ಹಾಗು -12 ಡಿಗ್ರಿ ತಾಪಮಾನ

. Port Moresby ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ದಾವಿಸುವಾಗ ಹಾವು ಪ್ರಾಣ ಬಿಟ್ಟಿತ್ತು

.ಈ Scrub python ಗಳು ಆಸ್ಟ್ರೇಲಿಯಾದ ಅತ್ಯಂತ ಉದ್ದನೆಯ ಹಾವುಗಳು


-ಕಿಲ್ಲರ್ ಐಸ್ ಟ್ರಾಪ್ ಗಳಿಂದ ಪಾರಾದ ಕಿಲ್ಲರ್ ವೇಲ್ಸ್
.ಸುಮಾರು 12 ಕ್ಕೂ ಹೆಚ್ಚು ಕಿಲ್ಲರ್ ವೇಲ್ಸ್ ಗಳು Cost of Canada ದ ಹಿಮ ಗೆಡ್ಡೆ ಗಳ ನಡುವೆ ಸಿಕ್ಕಿ ಹಾಕಿಕೊಂಡು ಸತತ ಎರಡು ದಿನ ಹೋರಾಡಿ ಕೊನೆಗೂ ಪ್ರಾಣ ಉಳಿಸಿಕೊಂಡಿವೆ

.ಉಸಿರಾಟಕ್ಕಾಗಿ ಹಿಮ ಗೆಡ್ಡೆಯಲ್ಲಿದ್ದ ಸಣ್ಣ  ರಂದ್ರವನ್ನು ಉಪಯೋಗಿಸಿಕೊಂಡು ಅಂತೂ ಎರಡು ದಿನಗಳ ನಂತರ ಎಲ್ಲಾ ವೇಲ್ ಗಳು ಹಿಮಗೆಡ್ಡೆ ಯಿಂದ ಪಾರಾಗಿ ಪ್ರಾಣ ಉಳಿಸಿಕೊಂಡಿವೆ 


 -ಭೇಟೆ ಬ್ಯಾನ್ ಮಾಡಿದ Zambia-
.ಸತತವಾಗಿ ಇಳಿಮುಖವಾಗುತ್ತಿರುವ ಸಿಂಹ ಹಾಗು ಚಿರತೆಗಳ ಸಂತತಿಯನ್ನು ಉಳಿಸಲು ನಿರ್ಧರಿಸಿರುವ Zambia ಅವುಗಳ ಭೇಟೆಯಾಡುವಿಕೆಯನ್ನು ನಿಷೇಧಿಸಿದೆ

.ಸಿಂಹಗಳ ಭೇಟೆಯಾಡುವಿಕೆ ಅಲ್ಲಿನ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿರುವುದರಿಂದ ಹಾಗು ಇವುಗಳ ಸಂತತಿಯನ್ನು ಉಳಿಸುವ ನಿರ್ಧಾರದಿಂದ Zambia ಈ ನಿರ್ಧಾರಕ್ಕೆ  ಬಂದಿದೆ

.ಸುಮಾರು 3000 ದಿಂದ 3,500 ಸಿಂಹ ಹಾಗು ಚಿರತೆಗಳು Zambia ದಲ್ಲಿದೆ. ಪ್ರತೀ ವರ್ಷ ಸುಮಾರು 55 ಸಿಂಹ ಮತ್ತು ಚಿರತೆಗಳನ್ನು ಭೇಟೆಯಾಡಲಾಗುತ್ತಿದೆ 



-ಕಿನ್ಯಾದಲ್ಲಿ ಅಟ್ಟಹಾಸ ಮೆರೆದ ಕಳ್ಳ ಭೇಟೆಗಾರರ ದಂಡು
.ಕಿನ್ಯಾದಲ್ಲಿ ಕಳ್ಳ ಭೇಟೆಗಾರರ ಗುಂಪೊಂದು ಒಂದೇ ಕುಟುಂಬದ ಸುಮಾರು 11 ನೆಗಳನ್ನು ಭೇಟೆಯಾಡಿದ್ದಾರೆ

.ಆನೆಗಳ ದಂತಕ್ಕೆ ಮಾರುಕಟ್ಟೆಯಲ್ಲಿ ಆಕರ್ಷಕ ಭೆಲೆ ಇರುವುದೇ ಈ ಕೃತ್ಯಕ್ಕೆ ಕಾರಣ ಎಂದು ಕೀನ್ಯ ವೈಲ್ಡ್ ಲೈಫ್ ಸರ್ವಿಸ್ ನ ಅಧಿಕಾರಿಗಳು ತಿಳಿಸಿದ್ದಾರೆ.ಹಂತಕರ ಹುಡುಕಾಟ ತೀವ್ರಗತಿಯಲ್ಲಿ ಸಾಗಿದೆ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ


-ಕೊನೆಗೂ ಕಾಣಿಸಿಕೊಂಡ ಹಾಡುವ ನಾಯಿ??-
.ಇಂಡೋನೇಶಿಯಾದ ಪಶ್ಚಿಮ Papua ದ ಗುಡ್ಡ ಪ್ರದೇಶದಲ್ಲಿ ನಾಶವಾಗಿ ಹೋಗಿವೆ ಎಂದು ಭಾವಿಸಿದ್ದ ಬಹಳ ಅಪರೂಪದ ನ್ಯೂಗಿನಿಯಾ ಹಾಡುವ ನಾಯಿ ( New Guinea singing dog) ಯನ್ನು 23 ವರ್ಷಗಳ ನಂತರ ಮತ್ತೆ ಅದೇ ಗುಡ್ಡಗಳಲ್ಲಿ  ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ

.ಕಳೆದ ಸೆಪ್ಟೆಂಬರ್ ನಲ್ಲಿ Adventure Alternative Borneo ಕ್ಲಬ್ ನ ಸದಸ್ಯರು  ಪಶ್ಚಿಮPapuaವಾದ ಮಂಡಾಲಾ ಗುಡ್ಡ ಪ್ರದೇಶದಲ್ಲಿ  ಈ ನಾಯಿಯನ್ನು ನೋಡಿದ್ದಾರೆ

.ಸುಮಾರು 15 ನಿಮಿಷಗಳ ಕಾಲ ಇವರನ್ನೇ ನೋಡುತ್ತಿದ್ದ ಅದು ಯಾವುದೇ ಹೆದರಿಕೆಗೆ ಒಳಗಾದಂತೆ ಕಂಡುಬಂದಿಲ್ಲ ಎಂದು ಪ್ರತ್ಯಕ್ಷದರ್ಶಿಗಳಲೊಬ್ಬರು ತಿಳಿಸಿದ್ದಾರೆ 

.ಸುಮಾರು 200 ಈ ತರಹದ ನಾಯಿಗಳು zoo ಗಳಲ್ಲಿವೆ .ಆದರೆ ವನ್ಯವಾಗಿ ಈಗ ಕಾಣಿಸಿಕೊಂಡಿವೆ.ಇದು ಅವುಗಳ ಸಂರಕ್ಷನೆಗೆ ಹೆಚ್ಚು ಬೆಳಕನ್ನು ಚೆಲ್ಲಿದೆ

.ಈ ನಾಯಿಗಳು ತೋಳಗಳ ಸ್ವರದಲ್ಲಿ ಹಾಡುವಂತೆ ಕೂಗುತ್ತವೆ ಆದ್ದರಿಂದಲೇ ಇದಕ್ಕೆ ಹಾಡುವ ನಾಯಿ ಎನ್ನುವ ಹೆಸರು ಬಂದಿರುವುದು


-ಹೆಚ್ಚಿದೆ ಹುಲಿರಾಯನ ಸಂತತಿ-
.ಹುಲಿರಾಯನ ಭಕ್ತರಿಗೊಂದು ಸಿಹಿ ಸುದ್ದಿ. ಏಷ್ಯಾದ ಕೆಲ ಭಾಗಗಳಲ್ಲಿ ಹುಲಿ ಸಂತತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ ಎಂದು  Asia Programs at the Wildlife Conservation Society (WCS) ಯ ಡೈರೆಕ್ಟರ್ Joe Walston ತಿಳಿಸಿದ್ದಾರೆ

.ಇಂಡಿಯಾ ತೈಲ್ಯಾಂಡ್  ಹಾಗು ರಷ್ಯಾ ದೇಶಗಳು ತಮ್ಮ ದೇಶದಲ್ಲಿ ನಶಿಸುತ್ತಿರುವ ಹುಲಿ ಸಂತತಿಯನ್ನು ಉಳಿಸಿಕೊಳ್ಳಲು ಹಮ್ಮಿಕೊಂಡ ಕಾರ್ಯಕ್ರಮಗಳು ಈ ಯಶಸ್ಸಿಗೆ ಕಾರಣವಾಗಿದೆ ಎಂದು ಅವರು ಈ ಸಂಧರ್ಭದಲ್ಲಿ ತಿಳಿಸಿದ್ದಾರೆ

.ಕರ್ನಾಟಕದ ಬಂಡೀಪುರ ಹಾಗು ನಾಗರಹೊಳೆಯಲ್ಲಿ ಯಶಸ್ವಿ ಕಳ್ಳ ಭೇಟೆ ತಡೆ, ಹುಲಿ ಅವಾಸಸ್ಥಾನದ ಗ್ರಾಮಗಳ ಪುನರ್ವಸತಿ ಹಾಗು ವಿಜ್ನ್ಯಾನಿಗಳ ವೈಜ್ನ್ಯಾನಿಕ ನೇತೃತ್ವ ಇಲ್ಲಿ ಹುಲಿಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ

.ಇದಲ್ಲದೆ ರಷ್ಯಾ ಸರ್ಕಾರ ಅಳಿವನಂಚಿನಲ್ಲಿರುವ ಪ್ರಾಣಿಗಳ ಭೇಟೆಯನ್ನು ಕ್ರಿಮಿನಲ್ ಅಪರಾವಾಗಿ ಪರಿಗಣಿಸುವ ಕಾನೂನನ್ನು ಜಾರಿಗೆ ತರಲು ಚಿಂತನೆ ನಡೆಸಿದೆ

.ಸುಮಾರು 6 ಉಪ ಜಾತಿಯ ಹುಲಿಗಳು ಇಂದು 13 ಏಷ್ಯಾದ ದೇಶಗಳಲ್ಲಿವೆ. ಈ ದೇಶಗಳಲ್ಲಿನ ಒಟ್ಟು ಹುಲಿಗಳ ಸಂಖ್ಯೆ ಸುಮಾರು 3200 ಎಂದು ಅಂದಾಜಿಸಲಾಗಿದೆ



-20 ಲಕ್ಷದ ಪ್ರಾಣಿಗೆ ನಡೆಯುತ್ತಿದೆ ಅವ್ಯಾಹತ ಭೇಟೆ-
.ಭಾರತದ North-East ರಾಜ್ಯಗಳ ಕಾಡುಗಳಲ್ಲಿ ಕಂಡು ಬರುವ ಹಲ್ಲಿ ಜಾತಿಯ  tokay gecko â ಎಂಬ ಚಿಕ್ಕ ಜೀವಿಯ ಬದುಕು ಈಗ ದುಸ್ತರವಾಗಿದೆ

.ಇದಕ್ಕೆ ಕಾರಣ ಇದನ್ನು ಹಣದ ಆಸೆಗೆ ಭೇಟೆಯಾಡುತ್ತಿರುವ ಭೇಟೆಗಾರರ ಗುಂಪು

.ಸುಮಾರು 40cm ಉದ್ದ ಹಾಗು 200 ಗ್ರಾಂ ತೂಗುವ ಇವುಗಳಿಗೆ  ಏಷ್ಯಾದ ಕೆಲ ದೇಶಗಳ ಮಾರುಕಟ್ಟೆಯಲ್ಲಿ ಔಷಧೀಯ ಪ್ರಾಮುಖ್ಯತೆ ಇದೆ  

.ಬೆಳೆದ ಒಂದು  tokay gecko â ಗೆ ಇಂದು 20 ಲಕ್ಷದವರೆಗೆ ಭೇಡಿಕೆ ಇದೆ.ಇದನ್ನೇ ಬಂಡವಾಳವಾಗಿಸಿಕೊಂಡ ಭೇಟೆಗಾರರು ಇದನ್ನು ಎಗ್ಗಿಲ್ಲದೆ ಭೇಟೆಯಾಡುತ್ತಿದ್ದಾರೆ

.ಮಣಿಪುರದ ಕಾಡುಗಳಲ್ಲಿ ಹೆಚ್ಚಾಗಿ ಇವುಗಳನ್ನು ಭೇಟೆಯಾಡಲಾಗುತ್ತಿದೆ

.ವನ್ಯ ಜೀವಿ ಪರಿಣಿತರ ಪ್ರಕಾರ ಇವುಗಳ ಸಂಖ್ಯೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.ಆದರೆ ಕಳೆದ ಆರು ತಿಂಗಳಲ್ಲಿ ಸುಮಾರು 70 tokay gecko â  ಗಳನ್ನು ಪೊಲೀಸರು,ಅರಣ್ಯ ಅಧಿಕಾರಿಗಳು ಹಾಗು PFA ಸಂಘದವರು ಭೇಟೆಗಾರರಿಂದ ಉಳಿಸಿದ್ದಾರೆ



-Borneo ದ ಕಾಡಿನಲ್ಲಿವೆ ವಿಷಕಾರಿ ಸಸ್ತನಿಗಳು-
 .Borneo ದ ಕಾಡುಗಳಲ್ಲಿ ವಿಜ್ನ್ಯಾನಿಗಳು ವಿಷಕಾರಿ ಸಸ್ತನಿಯೊಂದನ್ನು ಕಂಡುಹಿಡಿದಿದ್ದಾರೆ

.Slow Loris ಎಂದು ಕರೆಯಲ್ಪಡುವ ಇದರ ವೈಜ್ನ್ಯಾನಿಕ ಹೆಸರು Nycticebus kayan

.ದಕ್ಷಿಣ ಹಾಗು ದಕ್ಷಿಣ-ಪೂರ್ವ ಏಷ್ಯಾದ ಕೆಲವು ಕಡೆ ಕಂಡುಬರುವ ಇವುಗಳ ಬಗ್ಗೆ ಹೆಚ್ಚು ಅಧ್ಯಯನ ನಡೆದಿಲ್ಲ.ಕಾರಣ ಇವುಗಳ ನಿಧಾನಗತಿಯ ಚಲನೆ ಹಾಗು ಇವುಗಳ ನಿಶಾಚರ ಜೀವಿನ ವಿಧಾನ

.ಮುಖದ ಮೇಲಿನ ಗುರುತಗಳ ಮೂಲಖ  ಇವುಗಳನ್ನು Slow Loris ಎಂದು ಗುರುತಿಸಬಹುದಾಗಿದೆ

.ಎಲ್ಲಾ Slow Loris ಗಳಂತೆಯೇ Nycticebus kayan ನ ಕಡಿತವೂ ಕೊಡ ವಿಷಕಾರಿಯಾಗಿದ್ದು.ಇದು ಕಚ್ಚಿದರೆ ಶತ್ರುಗಳ ದೇಹದಲ್ಲಿ  allergic ಗುಣಲಕ್ಷಣಗಳು ಕಂಡು ಬರುತ್ತದೆ.ಕೆಲವೊಮ್ಮೆ ಸಾವು ಕೂಡ ಸಂಭವಿಸಬಹುದು 

.ಇವಿಷ್ಟು ಈ ಬಾರಿಯ ನೇಚರ್ wrap-up ಸುದ್ದಿಗಳು
.ಹೇಗಿತ್ತು ನಮ್ಮ ನೇಚರ್ wrap-up ಸುದ್ದಿಗಳು?? ನಿಮ್ಮ ಅಭಿಪ್ರಾಯ ಬರೆಯಿರಿ .ನೇಚರ್ wrup-up -೨ ನೊಂದಿಗೆ ಮತ್ತೆಬರುತ್ತೇವೆ ಅಲ್ಲಿಯವರೆಗೂ......... TAKE CARE OF MOTHER NATURE 


-ಪ್ರಕೃತಿಯನ್ನು ರಕ್ಷಿಸಿ-






Comments

  1. Interesting informations which we were really not aware of.... Thanks...

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....