
- ಮಸ್ತಿ AT ಊಟಿ- . ನೀವು ನನ್ನ ಬ್ಲಾಗಿಗೆ ಇದೇ ಮೊದಲು ವಿಸಿಟ್ ಮಾಡಿದ್ದರೆ ನಾನು ಬರೆದ ' ಹಸಿರು ಹಾದಿಯ ಹುಚ್ಚು ಪ್ರಯಾಣ ' ಪೋಸ್ಟ್ ಅನ್ನು ಓದಲು ಮರೆಯದಿರಿ .ಆ ಪೋಸ್ಟ್ ಓದಿದ ಮೇಲೆ ನಿಮಗೆ ನಮ್ಮ ಪ್ರವಾಸಗಳ ಕತೆ ಹೇಗಿರುತ್ತದೆ ಎಂಬ ಬಗ್ಗೆ ಒಂದು ಐಡಿಯಾ ಬರುತ್ತದೆ . ಈ ಬಾರಿ ನಮ್ಮ ಹುಚ್ಚು ಪ್ರಯಾಣ ಹೊರಟಿದ್ದು ಊಟಿಯ ಕಡೆ . ಮಾಮೂಲಿಯಂತೆ ಹೊರಡುವ ಕಡೆ ದಿನದವರೆಗೆ ಟ್ರಿಪ್ fix ಆಗಿರಲಿಲ್ಲ . ಇದೇ ತಿಂಗಳ 11 ನೇ ತಾರೀಖು,ಶನಿವಾರ ಊಟಿಗೆ ಹೋಗುವುದೆಂದು decide ಮಾಡಿದ್ದರೂ ಶುಕ್ರವಾರ ಮಧ್ಯಾನ್ಹದವರೆಗೆ confirm ಆಗಿರಲ್ಲಿಲ್ಲ.ಕಾರಣ vehicle arrangement ಆಗಿರಲಿಲ್ಲ .ನಮ್ಮ ಅಣ್ಣನ ಒಂದು ಮಾರುತಿ 800 ಕಾರ್ ಇತ್ತಾದರೂ ಅದು ಊಟಿ ತಲುಪುತ್ತದೆ ಎಂಬ ನಂಬಿಕೆ ಯಾರಲ್ಲೂ ಇರಲಿಲ್ಲ .ಅಂತೂ ಕೊನೆಗೆ jai ಎಂದು ಅದರಲ್ಲೇ ಊಟಿಗೆ ಹೋಗುವುದೆಂದು ತೀರ್ಮಾನಿಸಿ,ಶುಕ್ರವಾರ ರಾತ್ರಿ ನಾನು,ಆದಿ (ನಮ್ಮ ಚಿಕ್ಕಮ್ಮನ ಮಗ) ಸುಬ್ಬು ಹಾಗು ಕಾರ್ತಿಕ್ (ನನ್ನ ಸ್ನೇಹಿತರು) ಬೆಂಗಳೂರಿಗೆ ಹೊರೆಟೆವು.ಅಲ್ಲಿ ನನ್ನ ತಮ್ಮಂದಿರಾದ ರಾಜು ಹಾಗು ಸುಮಂತ್ ನಮ್ಮನ್ನು join ಆಗುವವರಿದ್ದರು .ನಮ್ಮ ಪ್ಲಾನ್ ಪ್ರಕಾರ ಶನಿವಾರ ಬೆಳೆಗ್ಗೆ 7 ಘಂಟೆಗೆ ನಾವು ಬೆಂಗಳೂರು ಬಿಡಬೇಕಿತ್ತು.ಆದರೆ ನಾವು ಬೆಂಗಳೂರು ತಲುಪಿದ್ದೇ ಬೆಳೆಗ್ಗೆ 7 ಘಂಟೆಗೆ .ನಾವು ನಮ್ಮ relation ಮನೆಗೆ ಹೋಗಿ ರೆಡಿಯಾಗುವಾಗ 9 ಘಂಟೆ...