-ಕಾಡೊಡಲ ಕಣ್ಣಿಂದ- 'ಕಾಡೊಡಲ ಕಣ್ಣಿಂದ' ಎಂಬ ಕವನಗಳ Series ಅನ್ನು ಇಂದಿನಿಂದ ನಮ್ಮ ಪ್ರಕೃತಿ ಪ್ಯಾರಡೈಸ್ ನಲ್ಲಿ ಪ್ರಕಟಿಸುತ್ತಿದ್ದೇನೆ .ಈ ಕವನಗ ಕರ್ತೃ 'ವಿಜಯ ಹಾಲಪ್ಪನ್' .ಇವರು ನಮ್ಮ ಬ್ಲಾಗ್ಗಾಗಿ ಈ ಕವನ ಸಂಕಲನವನ್ನು ರಚಿಸಿಕೊಡುವುದಾಗಿ ತಿಳಿಸಿದ್ದಾರೆ .ಮೂಲತಃ ಮಲ್ನಾಡ್ ನವರಾದ ವಿಜಯ ಹಲಪ್ಪನ್ ಈಗ ಮಾಯಸಂದ್ರ ದಲ್ಲಿ ನೆಲೆಸಿದ್ದಾರೆ.ಇವರ ಕವನಗಳು ಹಲವು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿವೆ .ಪ್ರಕೃತಿಯ ಬಗ್ಗೆ ಕವನಗಳನ್ನು ರಚಿಸಿ ನಮಗೆ ನೀಡಲು ನಿರ್ಧರಿಸಿರುವ ವಿಜಯ ಹಲಪ್ಪನ್ ರವರಿಗೆ RAGAT PARADISE ನಿಂದ ಧನ್ಯವಾದಗಳು .ಈ ಕವನಗಳನ್ನು Series ರೂಪದಲ್ಲಿ ನಮ್ಮ ಬ್ಲಾಗ್ ನಲ್ಲಿ ಪ್ರಕಟಿಸಲಾಗುವುದು ಕಾಡೊಡಲ ಕಣ್ಣಿಂದ-1 ~ತುಂಗೆಯ ಮಡಿಲಿನಿಂದ~ ಎಲ್ಲಿ ಹುಟ್ಟಿ ಬಂದೆಯೇ ಕಾಡೊಡಲ ಕಣ್ಣಿಂದ ಎಂತು ಉಕ್ಕಿ ಹರಿದೆಯೇ ನಾಡೊಡಲ ಜಾಡಿಂದ ಹೇಗೆ ಹಾಡಿ ಕುಣಿದೆಯೇ ಮಳೆಗಾಲದ ಮಾಡಿಂದ ಎಂತು ತುಂಬಿ ಬಂದೆಯೇ ವನದ ಮಡಿಲ ಮಣ್ಣಿಂದ ಬಿದಿರು ಮೆಳೆಯೇ ತುಂಬು ಮರವ ಎಂತು ನೀನು ತಬ್ಬುವೆ ಕುಣಿದು ಕುಣಿದು ತಣಿಯದಂತ ನಿನ್ನದೆಂತ ದಾಹವೇ ಅರಿತ ಬಯಕೆತನದ ಬಳಿಗೆ ಎಂತ ಮೌನ ರಾಗವೇ ಸದ್ದೇ ಇರದ ಶಾಂತ ರೀತಿ ನಿನ್ನೋಬಳದೇ ತುಂಗೆ ಇಂತ ಕಾಂತಿ ಮರೆಯಲೆಂತು ಮಲೆಯ ಮಳೆಯ ಕೊಳೆಯ ಕಾದಿರುವೆ ಸದಾ ನೆನಪ ಕಾಡೊಡಲ ಕಣ್ಣಿಂದ -ಪ್ರಕೃತಿಯನ್ನು ರಕ್ಷಿಸಿ-
Posts
Showing posts from August, 2011
- Get link
- X
- Other Apps
By
ragat paradise
-
-ಕಾಡು ನಾಶ- .ಹೆಚ್ಚುತ್ತಿರುವ ಜನಸಂಖ್ಯೆ,ನಗರೀಕರಣ ಚಟುವಟಿಕೆಗಳು ಪ್ರಕೃತಿಯ ಅಮೂಲ್ಯ ವರವಾದ ಕಾಡನ್ನು ಎಗ್ಗಿಲ್ಲದೆ ನಾಶ ಮಾಡುತ್ತಾ ಸಾಗಿವೆ .ಪಶ್ಚಿಮ brazil ನ randonia ಎಂಬ ಪ್ರದೇಶದಲ್ಲಿ ಇತ್ತೀಚಿಗೆ ನಡೆದ ಸಮೀಕ್ಷೆಯಲ್ಲಿ ಕಾಡು ನಾಶದ ತೀವ್ರತೆಯನ್ನು ಸ್ಪಷ್ತ್ತವಾಗಿ ಗುರುತಿಸಬಹುದಾಗಿದೆ .ಒಂದಾನೊಂದು ಕಾಲದಲ್ಲಿ 208,000 square kilometers ನಷ್ಟು ವಿಸ್ತಾರವಿದ್ದ ಕಾಡು ಸಂಪತ್ತು ಇಂದು ಅರ್ಧದಷ್ಟು ನಾಶವಾಗಿ ಹೋಗಿದೆ .ಹೆಚ್ಚಿನ ಕಾಡು ಕೃಷಿ ಚಟುವಟಿಕೆಗಳಿಗೆ ಬಲಿಯಾಗಿದೆ .ಈ ಪ್ರದೇಶದಲ್ಲಿ ನಾಸಾ ತೆಗೆದ ಚಿತ್ರಗಳು ಇಲ್ಲಿನ ಕಾಡು ನಾಶದ ಸ್ಪಷ್ಟ ಚಿತ್ರಣವನ್ನು ನೀಡುತ್ತವೆ .ಈ ಚಿತ್ರ 2000 ನೇ ಇಸವಿಯಲ್ಲಿ ನಾಸಾ ತೆಗೆದ ಚಿತ್ರ.ಇದರಲ್ಲಿ ಕಾಡು ನಾಶದ ಆರಂಭವನ್ನು ಕಾಣಬಹುದು .ಈ ಚಿತ್ರ 2010 ರಲ್ಲಿ ತೆಗೆದದ್ದು.ಇದರಲ್ಲಿ ಕಾಡಿನ ನಾಶದ ತೀವ್ರತೆಯನ್ನು ಸ್ಪಷ್ಟವಾಗಿ ಗುರುತಿಸಬಹುದು .Image Courtesy of NASA -ಪ್ರಕೃತಿಯನ್ನು ರಕ್ಷಿಸಿ-
- Get link
- X
- Other Apps
By
ragat paradise
-
-ವಾರಾಹಿ @ ಕಟ್ಟಿನಮಡಿಕೆ- .ಇತ್ತೀಚಿಗೆ ನಮ್ಮ ಟೀಂ ಕಟ್ಟಿನಮಡಿಕೆ ಎಂಬ ಸ್ಥಳಕ್ಕೆ ಟ್ರಿಪ್ ಹೋಗಿದ್ದೆವು .ಇಲ್ಲಿನ ಅದ್ಭುತ ಆಕರ್ಷಣೆ ವಾರಾಹಿ . ವಾರಾಹಿ ಇಲ್ಲಿ ಪುಟ್ಟ ಜಲಪಾತಗಳಾಗಿ ನರ್ತಿಸುತ್ತಾ ಹರಿಯುತ್ತಾಳೆ .ವಾರಾಹಿ ನದಿ ಜನ್ಮ ತಾಳುವುದು ಇಲ್ಲಿನ ಒಂದು ಗುಡ್ಡ ಪ್ರದೇಶದಲ್ಲಿ .ನಾವು ಭೇಟಿ ನೀಡಿದ ಸಮಯ ಮಳೆಗಾಲವಾಗಿದ್ದರಿಂದ ಆಗ ವಾರಾಹಿ ಮೈದುಂಬಿ ಹರಿಯುತ್ತಿದ್ದಳು .ಇಲ್ಲಿನ ಹೆಚ್ಚು ಪ್ರದೇಶಗಳನ್ನು ನಮ್ಮ ಮೊಬೈಲ್ ಕ್ಯಾಮರ ಕಣ್ಣಲ್ಲಿ ಸೆರೆಹಿಡಿಯಲು ಮಳೆರಾಯ ಬಿಡಲಿಲ್ಲ.ವಿಪರೀತ ಮಳೆ,ಭೋರ್ಗರೆವ ನೀರು,ಜಾರುವ ಕಲ್ಲು ಬಂಡೆಗಳು ನಮಗೆ ವರಾಹಿಯ ದಾರಿಯಲ್ಲಿ ಹೆಚ್ಚು ಕ್ರಮಿಸಲು ಬಿಡಲಿಲ್ಲ .ಇಲ್ಲೊಂದು ಕಡೆ ವಾರಾಹಿ ಸ್ವಲ್ಪ ಎತ್ತರದಿಂದ ಭೋರ್ಗರೆದು ಕೆಳಕ್ಕೆ ದುಮ್ಮಿಕ್ಕುತ್ತಾಳೆ.ಇಲ್ಲಿ ನಾವು ಸೆರೆಹಿಡಿದ ಕೆಲವು ಇಮೇಜ್ಗಳು ಈ ಪೋಸ್ಟ್ ನಲ್ಲಿ (ಈ ಎಲ್ಲ ಚಿತ್ರಗಳನ್ನು ನನ್ನ ಮೊಬೈಲ್ ನಲ್ಲಿ ತೆಗೆದಿದ್ದು) -ಪ್ರಕೃತಿಯನ್ನು ಉಳಿಸಿ-
- Get link
- X
- Other Apps
By
ragat paradise
-
- ಕಾಗೆ ಗೂಡು- .ಪ್ರಕೃತಿ ತನ್ನ ಜೀವಿಗಳಿಗೆ ಬದುಕಲು ಬೇಕಾದ ಕೌಶಲ್ಯಗಳನ್ನು ಎಷ್ಟು ಅದ್ಭುತವಾಗಿ ಕರುಣಿಸಿರುತ್ತದೆ ಎಂಬುದಕ್ಕೆ ಈ ಕಾಗೆ ಗೂಡು ಒಂದು ಸಾಕ್ಷಿ .ಯಾವುದೇ ಇಂಜಿನೀಯರ್ ಪದವಿ ಪಡೆಯದ,ಮೇಸ್ತ್ರಿ ಕೆಲಸ ಗೊತ್ತಿಲ್ಲದ 'ಕಾಗೆ'ಗಳು ಅವುಗಳ ಗೂಡುಗಳನ್ನು ಅತ್ಯಂತ ವ್ಯವಸ್ತಿತವಾಗಿ ಕಟ್ಟಿರುತ್ತವೆ .ಇತ್ತೀಚಿಗೆ ನಗರ ಪ್ರದೇಶಗಳಲ್ಲಿ ಇವುಗಳಿಗೆ ಗೂಡು ಕಟ್ಟಲು ಬೇಕಾದ ಸಾಮಗ್ರಿಗಳು ದೊರೆಯದ ಕಾರಣ,ತಂತಿ ಹಾಗು ಇನ್ನಿತರ ಮಾನವ ನಿರ್ಮಿತ ವಸ್ತುಗಳಿಂದ ಇವುಗಳು ಗೂಡು ಕಟ್ಟಿ ಬದುಕುತ್ತಿರುವುದನ್ನು ಇತ್ತೀಚೆಗೆ ಒಂದು ಪತ್ರಿಕೆಯಲ್ಲಿ ಓದಿದ್ದೆ .ಪ್ರಕೃತಿಯಲ್ಲಿ 'ಜಾಡಮಾಲಿಯಾಗಿ' ಕಾರ್ಯನಿರ್ವಹಿಸುವ ಇವುಗಳು ಬದಲಾದ ಪ್ರಕೃತಿಯಲ್ಲಿ ಬದುಕಲು ಅನುಸರಿಸುವ ಕೌಶಲ್ಯ ನಿಜಕ್ಕೂ ಇವುಗಳ ಸಾಮರ್ಥ್ಯವನ್ನು ತೋರಿಸುತ್ತದೆ -ಪ್ರಕೃತಿಯನ್ನು ಉಳಿಸಿ-