-ಕಾಡೊಡಲ ಕಣ್ಣಿಂದ-
'ಕಾಡೊಡಲ ಕಣ್ಣಿಂದ' ಎಂಬ ಕವನಗಳ Series ಅನ್ನು ಇಂದಿನಿಂದ ನಮ್ಮ ಪ್ರಕೃತಿ ಪ್ಯಾರಡೈಸ್ ನಲ್ಲಿ ಪ್ರಕಟಿಸುತ್ತಿದ್ದೇನೆ

.ಈ ಕವನಗ ಕರ್ತೃ 'ವಿಜಯ ಹಾಲಪ್ಪನ್' .ಇವರು ನಮ್ಮ ಬ್ಲಾಗ್ಗಾಗಿ ಈ ಕವನ ಸಂಕಲನವನ್ನು ರಚಿಸಿಕೊಡುವುದಾಗಿ ತಿಳಿಸಿದ್ದಾರೆ

.ಮೂಲತಃ ಮಲ್ನಾಡ್ ನವರಾದ ವಿಜಯ ಹಲಪ್ಪನ್ ಈಗ ಮಾಯಸಂದ್ರ ದಲ್ಲಿ ನೆಲೆಸಿದ್ದಾರೆ.ಇವರ ಕವನಗಳು ಹಲವು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿವೆ

.ಪ್ರಕೃತಿಯ ಬಗ್ಗೆ ಕವನಗಳನ್ನು ರಚಿಸಿ ನಮಗೆ ನೀಡಲು ನಿರ್ಧರಿಸಿರುವ ವಿಜಯ ಹಲಪ್ಪನ್ ರವರಿಗೆ RAGAT PARADISE ನಿಂದ ಧನ್ಯವಾದಗಳು

.ಈ ಕವನಗಳನ್ನು Series ರೂಪದಲ್ಲಿ ನಮ್ಮ ಬ್ಲಾಗ್ ನಲ್ಲಿ ಪ್ರಕಟಿಸಲಾಗುವುದು

ಕಾಡೊಡಲ ಕಣ್ಣಿಂದ-1

~ತುಂಗೆಯ ಮಡಿಲಿನಿಂದ~
ಎಲ್ಲಿ ಹುಟ್ಟಿ ಬಂದೆಯೇ
ಕಾಡೊಡಲ ಕಣ್ಣಿಂದ
ಎಂತು ಉಕ್ಕಿ ಹರಿದೆಯೇ
ನಾಡೊಡಲ ಜಾಡಿಂದ


ಹೇಗೆ ಹಾಡಿ ಕುಣಿದೆಯೇ
ಮಳೆಗಾಲದ ಮಾಡಿಂದ
ಎಂತು ತುಂಬಿ ಬಂದೆಯೇ
ವನದ ಮಡಿಲ ಮಣ್ಣಿಂದ


ಬಿದಿರು ಮೆಳೆಯೇ ತುಂಬು ಮರವ
ಎಂತು ನೀನು ತಬ್ಬುವೆ
ಕುಣಿದು ಕುಣಿದು ತಣಿಯದಂತ ನಿನ್ನದೆಂತ ದಾಹವೇ
ಅರಿತ ಬಯಕೆತನದ ಬಳಿಗೆ ಎಂತ ಮೌನ ರಾಗವೇ


ಸದ್ದೇ ಇರದ ಶಾಂತ ರೀತಿ
ನಿನ್ನೋಬಳದೇ ತುಂಗೆ ಇಂತ ಕಾಂತಿ
ಮರೆಯಲೆಂತು ಮಲೆಯ ಮಳೆಯ ಕೊಳೆಯ
ಕಾದಿರುವೆ ಸದಾ ನೆನಪ ಕಾಡೊಡಲ ಕಣ್ಣಿಂದ












-ಪ್ರಕೃತಿಯನ್ನು ರಕ್ಷಿಸಿ-

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....