-Beauties of Western ghats- .ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಜೀವ ವೈವಿಧ್ಯತೆಯ ಸೌಂದರ್ಯ ವರ್ಣನಾತೀತ .ಪಶ್ಚಿಮ ಘಟ್ಟಗಳ ಕಾಡು ಹೆಚ್ಚು ಹೆಚ್ಚು ನಾಶವಾದಂತೆ ಅಲ್ಲಿ ವಾಸಿಸುವ ಪ್ರಾಣಿಗಳು ಈಗ ರಸ್ತೆಯ ಟ್ರಾಫಿಕ್ ಅನ್ನು ಜಾಗರೂಕತೆಯಿಂದ ನಿಭಾಯಿಸಿ ತಮ್ಮ ಜೀವ ಉಳಿಸಿಕೊಳ್ಳಬೇಕಾದ ಪರಿಸ್ತಿತಿ ತಲೆದೂರಿದೆ .ಇತ್ತೀಚಿಗೆ ನಮ್ಮ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕ,ರಸ್ತೆಯನ್ನು ದಾಟುತಿದ್ದ,ಪಶ್ಚಿಮ ಘಟ್ಟಗಳ ವೈವಿಧ್ಯತೆಯನ್ನು ಸಾರುವ ಒಂದು ಪುಟ್ಟ ಹಾವಿನ ಕೆಲವು ಸುಂದರ ಚಿತ್ರಗಳು ಈ ಪೋಸ್ಟ್ ನಲ್ಲಿ .Image Courtesy-Dinesh.jk -ಪ್ರಕೃತಿಯನ್ನು ಉಳಿಸಿ-
Posts
Showing posts from October, 2011
- Get link
- X
- Other Apps
By
ragat paradise
-
-ಮಡಗಾಸ್ಕರ್ ನ Lemurs- . ಪ್ರಕೃತಿ ಸ್ವರ್ಗ ಮಡಗಾಸ್ಕರ್ ನಲ್ಲಿ ಮಾತ್ರ ಕಂಡುಬರುವ Lemur ಗಳೆಂಬ ಸುಂದರ ಜೀವಿಗಳ ಬಗ್ಗೆ ಈ ಪೋಸ್ಟ್ .ಸುಮಾರು ನೂರು ಜಾತಿಯ Lemur ಗಳು ಮಡಗಾಸ್ಕರ್ ನಲ್ಲಿ ಕಂಡುಬರುತ್ತವೆ . 30 ಗ್ರಾಂ ನಿಂದ 10 ಕೆಜಿಯವರೆಗಿನ Lemur ಗಳು ಮಡಗಾಸ್ಕರ್ ನಲ್ಲಿ ಕಂಡುಬರುತ್ತವೆ .ಹೆಚ್ಚಾಗಿ ಮರಗಳ ಮೇಲೆ ವಾಸಿಸುವ ಇವುಗಳು ಹಣ್ಣುಗಳನ್ನು ತಿಂದು ಬದುಕುತ್ತವೆ,ಕೆಲವು ಜಾತಿಯ Lemur ಗಳು ಸಣ್ಣ ಪುಟ್ಟ ಕೀಟಗಳನ್ನು ತಿಂದು ಬದುಕುತ್ತವೆ . Lemur ಗಳು ಗುಂಪಾಗಿ ವಾಸಿಸುವ ಪ್ರಾಣಿಗಳು . Lemur ಗಳ ಸರಾಸರಿ ಜೀವಿತಾವಧಿ 18 ವರ್ಷಗಳು .ಈ ಜೀವಿಗಳಿಗೂ ಮನುಷ್ಯನ ಕಾಟ ತಪ್ಪಿಲ್ಲ,ಕಾಡು ನಾಶದಿಂದಾಗಿ ಹಲುವು ಜಾತಿಯ Lemur ಗಳು ಇಂದು ವಿನಾಶದಂಚಿನಲ್ಲಿವೆ . Lemur ಗಳ ಕೆಲವು ಸುಂದರ ಚಿತ್ರಗಳು Copyrighted- Rhett A. Butler,mongabay.com/wildmadagascar.org -ಪ್ರಕೃತಿಯನ್ನು ರಕ್ಷಿಸಿ-
- Get link
- X
- Other Apps
By
ragat paradise
-
-ತಾಯಿ ಪ್ರೀತಿ- .ಪ್ರಪಂಚದಲ್ಲಿ ತಾಯಿ ಪ್ರೀತಿಗಿಂತ ಮಿಗಿಲಾದ ಪ್ರೀತಿ ಮತ್ತೊಂದಿಲ್ಲವೆಂಬ ಮಾತಿದೆ.ಈ ಮಾತು ಪಕ್ಷಿ ಪ್ರಾಣಿ ಸಂಕುಲಕ್ಕೂ ಅನ್ವಯವಾಗುತ್ತದೆ .ಸಾವಿನಂಚಿನಲ್ಲಿ ಒದ್ದಾಡುತ್ತಿದ್ದ ಮರಿ ಸಿಂಹವನ್ನು ಅದರ ತಾಯಿ ತನ್ನ ಪ್ರಾಣದ ಹಂಗು ತೊರೆದು ರಕ್ಷಿಸಿದ ರೋಚಕ ಸನ್ನಿವೇಶದ ಚಿತ್ರಗಳನ್ನು Jean-Francois Lagrot ಎಂಬ ಛಾಯಾಗ್ರಾಹಕರು ತಮ್ಮ ಕ್ಯಾಮೆರಾ ಕಣ್ಣಿನಿಂದ ಸೆರೆಹಿಡಿದಿದ್ದಾರೆ .ತನ್ನ ಕಂದನ ಮೇಲೆ ಸಿಂಹಿಣಿ ತೋರಿದ ಅ ಅದ್ಭುತ ತಾಯಿ ಪ್ರೀತಿಯನ್ನು ಬಿಂಬಿಸುವ ರೋಚಕ ಚಿತ್ರಗಳು ಈ ಪೋಸ್ಟ್ ನಲ್ಲಿ .These dramatic frames were taken by wildlife photographer Jean-Francois Largot at Kenya's Masai Mara game reserve in August 2011. (Jean-Francois Lagrot) . Courtesy -Jean-Francois Lagrot .ಇನ್ನೇನು ಕೆಳಗೆ ಬೀಳುವ ಪರಿಸ್ಥಿತಿಯಲ್ಲಿದ್ದ ತನ್ನ ಮರಿಯನ್ನು ರಕ್ಷಿಸಲು ಕೆಳಗಿಳಿಯುತ್ತಿರುವ ಸಿಂಹಿಣಿ .ಸಿಂಹಗಳ ಗುಂಪು ಎಷ್ಟು ಒಗ್ಗಟ್ಟಿನಿಂದ ಇರುತ್ತವೆ ಎನ್ನುವುದಕ್ಕೆ ಇದು ಉದಾಹರಣೆ.ಕಷ್ಟದಲ್ಲಿದ್ದ ತಮ್ಮ ಗುಂಪಿನ ಸಿಂಹದ ಮರಿಯನ್ನು ರಕ್ಷಿಸಲು ಇತರ ಸಿಂಹಗಳು ಪ್ರಯತ್ನ ಪಟ್ಟವಾದರೂ ತೀರ ಜಾರಿಕೆ ಇದ್ದ ಕಾರಣ ಅವು ಕೆಳಗಿಳಿಯಲಿಲ್ಲ .ಆದರೆ ಸಿಂಹಿಣಿಯ ತಾಯಿ ಪ್ರೀತಿ ಬಲು ದೊಡ್ಡದು.ತನ್ನ ಪ್ರಾಣವನ್ನೇ ಪಣಕಿಟ್ಟು ತನ್ನ ಮರಿಯನ್ನ...