-ತಾಯಿ ಪ್ರೀತಿ-
.ಪ್ರಪಂಚದಲ್ಲಿ ತಾಯಿ ಪ್ರೀತಿಗಿಂತ ಮಿಗಿಲಾದ ಪ್ರೀತಿ ಮತ್ತೊಂದಿಲ್ಲವೆಂಬ  ಮಾತಿದೆ.ಈ ಮಾತು ಪಕ್ಷಿ ಪ್ರಾಣಿ ಸಂಕುಲಕ್ಕೂ ಅನ್ವಯವಾಗುತ್ತದೆ 

.ಸಾವಿನಂಚಿನಲ್ಲಿ ಒದ್ದಾಡುತ್ತಿದ್ದ ಮರಿ ಸಿಂಹವನ್ನು ಅದರ ತಾಯಿ ತನ್ನ ಪ್ರಾಣದ ಹಂಗು ತೊರೆದು ರಕ್ಷಿಸಿದ ರೋಚಕ ಸನ್ನಿವೇಶದ ಚಿತ್ರಗಳನ್ನು Jean-Francois Lagrot ಎಂಬ ಛಾಯಾಗ್ರಾಹಕರು ತಮ್ಮ ಕ್ಯಾಮೆರಾ ಕಣ್ಣಿನಿಂದ  ಸೆರೆಹಿಡಿದಿದ್ದಾರೆ 

.ತನ್ನ ಕಂದನ ಮೇಲೆ ಸಿಂಹಿಣಿ ತೋರಿದ ಅ ಅದ್ಭುತ ತಾಯಿ ಪ್ರೀತಿಯನ್ನು ಬಿಂಬಿಸುವ ರೋಚಕ ಚಿತ್ರಗಳು ಈ ಪೋಸ್ಟ್ ನಲ್ಲಿ 

.These dramatic frames were taken by wildlife photographer Jean-Francois Largot at Kenya's Masai Mara game reserve in August 2011. (Jean-Francois Lagrot)

.Courtesy-Jean-Francois Lagrot

 .ಇನ್ನೇನು ಕೆಳಗೆ ಬೀಳುವ ಪರಿಸ್ಥಿತಿಯಲ್ಲಿದ್ದ ತನ್ನ ಮರಿಯನ್ನು ರಕ್ಷಿಸಲು ಕೆಳಗಿಳಿಯುತ್ತಿರುವ ಸಿಂಹಿಣಿ 
 .ಸಿಂಹಗಳ ಗುಂಪು ಎಷ್ಟು ಒಗ್ಗಟ್ಟಿನಿಂದ ಇರುತ್ತವೆ ಎನ್ನುವುದಕ್ಕೆ ಇದು ಉದಾಹರಣೆ.ಕಷ್ಟದಲ್ಲಿದ್ದ ತಮ್ಮ ಗುಂಪಿನ ಸಿಂಹದ ಮರಿಯನ್ನು ರಕ್ಷಿಸಲು ಇತರ ಸಿಂಹಗಳು ಪ್ರಯತ್ನ ಪಟ್ಟವಾದರೂ ತೀರ ಜಾರಿಕೆ ಇದ್ದ ಕಾರಣ ಅವು ಕೆಳಗಿಳಿಯಲಿಲ್ಲ
 .ಆದರೆ ಸಿಂಹಿಣಿಯ ತಾಯಿ ಪ್ರೀತಿ ಬಲು ದೊಡ್ಡದು.ತನ್ನ ಪ್ರಾಣವನ್ನೇ ಪಣಕಿಟ್ಟು ತನ್ನ ಮರಿಯನ್ನು ರಕ್ಷಿಸಲು ಧಾವಿಸಿತು 

 .ತನ್ನ ಮರಿ ಇದ್ದ ಜಾಗದ ಬಲ ಭಾಗದಿಂದ ಕೆಳಗಿಳಿದ ಅದು ಮರಿಯನ್ನು ತನ್ನ ಬಾಯಿಯಲ್ಲಿ ಕಚ್ಚಿ ಹಿಡಿದುಕೊಳ್ಳಲು ಯಶಸ್ವಿಯಾಯಿತು
 .ಅತ್ಯಂತ ಜಾಗರೂಕತೆಯಿಂದ ಮರಿಯನ್ನು ಬಾಯಿಯಲ್ಲಿ ಹಿಡಿದು ಅದು ಮೇಲಕ್ಕೇರತೊಡಗಿತು
 .ಕೊನೆಗೂ ತನ್ನ ಮರಿಯನ್ನು ರಕ್ಷಿಸಿಕೊಳ್ಳಲು ಯಶಸ್ವಿಯಾಯಿತು ಸಿಂಹಿಣಿ
.ಇದಕ್ಕೇ ಹೇಳುವುದಲ್ಲವೇ ತಾಯಿ ಪ್ರೀತಿಗಿಂತ ಮಿಗಿಲಾದ ಪ್ರೀತಿ ಮತ್ತೊಂದಿಲ್ಲವೆಂದು ............?????



-ಪ್ರಕೃತಿಯನ್ನು ರಕ್ಷಿಸಿ-

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....