-Your Attention Please........ಇದು 'ದೀಪ ಆರಿಸುವ ಸಮಯ'- .ಇದೇನಿದು ವಿಚಿತ್ರ ಟೈಟಲ್ ಎಂದುಕೊಂಡಿರಾ?? ಹೌದು ಪ್ರತೀ ವರ್ಷದಂತೆ ಈ ವರ್ಷವೂ 'EARTH HOUR' ಕಾರ್ಯಕ್ರಮವು ಇದೇ ಮಾರ್ಚ್ 31 ರಂದು ಮರುಕಳಿಸಲಿದೆ .ಇದರ ಬಗ್ಗೆ ನಿಮಗೆ ಗೊತ್ತಿರಬಹುದು,ಆದರೂ ಮತ್ತೊಮ್ಮೆ ಹೇಳುತ್ತೇನೆ ಕೇಳಿ... .2007 ರಿಂದ ಆರಂಭವಾದ ಈ ಒಂದು ಪರಿಸರ ಸ್ನೇಹಿ ಕಾರ್ಯಕ್ರಮದಲ್ಲಿ ಹಲವಾರು ದೇಶಗಳು,ಸಂಘ ಸಂಸ್ಥೆ ಗಳು ಕೈ ಜೋಡಿಸುತ್ತವೆ. ಪ್ರತೀ ವರ್ಷದ ಮಾರ್ಚ್ 31 ರಂದು ರಾತ್ರಿ 8.30 ರಿಂದ 9.30 ರವರೆಗೆ ವಿದ್ಯುತ್ ದೀಪಗಳನ್ನು ಆರಿಸುವ ಮೂಲಕ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ .ಭೂಮಿಯ ವಾತಾವರಣದ ಮೇಲೆ ಆಗುತ್ತಿರುವ ಬದಲಾವಣೆಯ ವಿರುದ್ದ ಕೈ ಜೋಡಿಸಲು ಇಡೀ ವಿಶ್ವದ ಜನರು ಈ ಕಾರ್ಯಕ್ರಮದ ಮೂಲಕ ಪಣ ತೊಡುತ್ತಾರೆ.ಹಿಂದಿನ ವರ್ಷ ಸುಮಾರು 5,1200 ನಗರಗಳು ಹಾಗು 135 ದೇಶಗಳು ಈ EARTH HOUR ನಲ್ಲಿ ಪಾಲ್ಗೊಂಡು ಒಂದು ಗಂಟೆಗಳ ಕಾಲ ಕತ್ತಲಲ್ಲಿ ಕಾಲ ಕಳೆದಿದ್ದವು .ಈ ಬಾರಿ ಇದನ್ನು ಇನ್ನೂ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಸಂಘಟಕರು ಪ್ರಯತ್ನ ಪಡುತ್ತಿದ್ದಾರೆ .ಬನ್ನಿ...ಈ ಒಂದು ಪರಿಸರ ಸ್ನೇಹಿ ಕಾರ್ಯದಲ್ಲಿ ನಿಮ್ಮ ಕೈ ಜೋಡಿಸಿ .ನೀವು ಮಾಡಬೇಕಾಗಿರುವುದು ಇಷ್ಟೆ... ಮಾರ್ಚ್ 31 ರಂದು ರಾತ್ರಿ 8.30 ರಿಂದ 9.30 ರವರೆಗೆ ನಿಮ್ಮ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ.... ನಿಮ್ಮ ಪರಿಚಯಸ್ಥರಿಗೂ ತಿಳಿಸಿ -...
Posts
Showing posts from March, 2012
- Get link
- X
- Other Apps
By
ragat paradise
-
-ಸಾಮ್ರಾಟ್ ಸಚಿನ್- ಉಪ್ಪಿಗಿಂತ ರುಚಿ ಬೇರೆ ಇಲ್ಲ..... ನಿನಗ್ಯಾರೂ ಸರಿ ಸಾಟಿ ಇಲ್ಲ.... ನೀನು ಹುಟ್ಟಿದ ಮೇಲೇನೆ ಹೊಸ ದಾಖಲೆಗಳು ಹುಟ್ಟಿದವು.... ನೀನು ಕಣ್ಬಿಟ್ಟ ಮೇಲೇನೇ ಕ್ರಿಕೆಟ್ ಲೋಕವೇ ಕಂಗೊಳಿಸಿದ್ದು..... ನೀನು ಇಲ್ಲದೇ ಕ್ರಿಕೆಟ್ ಇಲ್ಲ....ನಿನಿದ್ರೆ ಎಲ್ಲಾ.... ನೀನು ಬ್ಯಾಟ್ ಹಿಡದ ಮೇಲೇನೆ 'ರನ್' ಪ್ರವಾಹ ಹರಿದಿದ್ದು ನೀನು ಬೆಳೆದ ಮೇಲೇನೆ ಕ್ರಿಕೆಟ್ ಗೊಬ್ಬ 'ದೇವರು' ಹುಟ್ಟಿದ್ದು ನೀನು ಇಲ್ಲದೇ ಏನಿಲ್ಲ...ನೀನಿದ್ರೆ ಎಲ್ಲಾ...... ......ಓ ಕ್ರಿಕೆಟ್ ಲೋಕದ ಸಾಮ್ರಾಟನೇ......ನಿನ್ನ ಸಾಧನೆ ಅಮೋಘ...... ...ಎಂದೆಂದೂ ಮಿನುಗುತ್ತಿರು....ಕ್ರಿಕೆಟ್ ಲೋಕವನ್ನು ಬೆಳೆಗುತ್ತಿರು...'ಓ ನಮ್ಮ ಪ್ರೀತಿಯ ಮಿನುಗು ತಾರೆಯೇ'.....
- Get link
- X
- Other Apps
By
ragat paradise
-
-ಆಗಸದಲ್ಲೊಂದು ಅಪರೂಪ- .ಎಂಟು ವರ್ಷಗಳ ನಂತರ ಆಗಸದಲ್ಲೊಂದು ಅಪರೂಪದ ಘಟನೆ ಜರುಗುತ್ತಿದೆ .ಅದೇನೆಂದು ಕೇಳಿದಿರಾ?..ನೀವು ಈಗಾಗಲೇ ಗಮನಿಸಿರಬಹುದು.5 ಹೊಳೆಯುವ ಗ್ರಹಗಳು ಆಗಸದಲ್ಲಿ ಕಾಣುತ್ತಿರುವುದು .ಅಪರೂಪಕ್ಕೆ ಜರುಗುವ ಈ ಘಟನೆಯನ್ನು ನೋಡುವ ಭಾಗ್ಯ ಈಗ ನಮ್ಮದಾಗಿದೆ .ಫೆಬ್ರವರಿ 28 ರಿಂದ ಮಾರ್ಚ್ 7 ರವರೆಗೆ ಈ ವಿಸ್ಮಯವನ್ನು ನೀವು ಆಗಸದಲ್ಲಿ ಕಾಣಬಹುದಾಗಿದೆ.ಈ ವಿಸ್ಮಯವನ್ನು ನೋಡಲು ಯಾವುದೇ ವಿಶೇಷ ಸಾಧನದ ಅವಶ್ಯಕತೆ ಇಲ್ಲ .ಸೂರ್ಯಾಸ್ತದ ಒಂದು ಗಂಟೆಯ ನಂತರ ಬುಧ,ಶುಕ್ರ,ಗುರು ಗ್ರಹಗಳನ್ನು ಕಾಣಬಹುದಾಗಿದೆ.ಬುಧ ಗ್ರಹವನ್ನು ನೋಡುವುದು ಸ್ವಲ್ಪ ಕಷ್ಟ.ಆದರೆ ಹೊಳೆಯುವ ಶುಕ್ರ ಹಾಗು ಗುರು ಗ್ರಹಗಳನ್ನು ಸುಲಭವಾಗಿ ಗುರುತಿಸಬಹುದು.ಅತ್ಯಂತ ಹೊಳೆಯುವ ಗ್ರಹವೇ ಶುಕ್ರ.ಶುಕ್ರನಂತೆಯೇ ಇರುವ ಆದರೆ ಶುಕ್ರನಷ್ಟು ಪ್ರಕಾಶಿಸದ ಗ್ರಹವೇ ಗುರು..ಇವೆರಡು ಗ್ರಹಗಳನ್ನು ರಾತ್ರಿ 9 ಗಂಟೆಯ ವರೆಗೂ ನೋಡಬಹುದು .ಸುಮಾರು 9 ಗಂಟೆಯ ನಂತರ ಮಂಗಳ ಗ್ರಹವನ್ನು ಸ್ಪಷ್ಟವಾಗಿ ಗುರುತಿಸಬಹುದು.ಆಗಸದ ಪೂರ್ವದಲ್ಲಿ ಕೆಂಪಾಗಿ ಕಾಣುವ ಮಂಗಳ ಗ್ರಹ ಮಧ್ಯ ರಾತ್ರಿಯವರೆಗೂ ಗೋಚರಿಸುತ್ತಿರುತ್ತದೆ.ಸರಿ ಸುಮಾರು ಮಧ್ಯ ರಾತ್ರಿಯ ಹೊತ್ತಿಗೆ ಪೂರ್ವದಲ್ಲಿ ನಕ್ಷತ್ರದಂತೆ ಹೊಳೆಯುವ ಹಳದಿ ಗ್ರಹವೊಂದು ಗೋಚರಿಸುತ್ತದೆ ಇದೇ ಶನಿ ಗ್ರಹ .ಹೀಗೆ 5 ಗ್ರಹಗಳನ್ನು ಈ ಸಂದರ್ಭದಲ್ಲಿ ನೋಡಿ ಕಣ್ಣು ತುಂಬಿಕೊಳ್ಳಬಹುದು .ಬಹಳ ಅಪರೂಪಕ್ಕೆ ನಡೆಯುವ ಈ ಸುಂದರ ವಿಸ್ಮಯವನ್ನು Miss ಮಾಡಿ...