-Your Attention Please........ಇದು 'ದೀಪ ಆರಿಸುವ ಸಮಯ'-
.ಇದೇನಿದು ವಿಚಿತ್ರ ಟೈಟಲ್ ಎಂದುಕೊಂಡಿರಾ?? ಹೌದು ಪ್ರತೀ ವರ್ಷದಂತೆ ಈ ವರ್ಷವೂ 'EARTH HOUR' ಕಾರ್ಯಕ್ರಮವು ಇದೇ ಮಾರ್ಚ್ 31 ರಂದು ಮರುಕಳಿಸಲಿದೆ .ಇದರ ಬಗ್ಗೆ ನಿಮಗೆ ಗೊತ್ತಿರಬಹುದು,ಆದರೂ ಮತ್ತೊಮ್ಮೆ ಹೇಳುತ್ತೇನೆ ಕೇಳಿ...
.2007 ರಿಂದ ಆರಂಭವಾದ ಈ ಒಂದು ಪರಿಸರ ಸ್ನೇಹಿ ಕಾರ್ಯಕ್ರಮದಲ್ಲಿ ಹಲವಾರು ದೇಶಗಳು,ಸಂಘ ಸಂಸ್ಥೆ ಗಳು ಕೈ ಜೋಡಿಸುತ್ತವೆ. ಪ್ರತೀ ವರ್ಷದ ಮಾರ್ಚ್ 31 ರಂದು ರಾತ್ರಿ 8.30 ರಿಂದ 9.30 ರವರೆಗೆ ವಿದ್ಯುತ್ ದೀಪಗಳನ್ನು ಆರಿಸುವ ಮೂಲಕ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ
.ಭೂಮಿಯ ವಾತಾವರಣದ ಮೇಲೆ ಆಗುತ್ತಿರುವ ಬದಲಾವಣೆಯ ವಿರುದ್ದ ಕೈ ಜೋಡಿಸಲು ಇಡೀ ವಿಶ್ವದ ಜನರು ಈ ಕಾರ್ಯಕ್ರಮದ ಮೂಲಕ ಪಣ ತೊಡುತ್ತಾರೆ.ಹಿಂದಿನ ವರ್ಷ ಸುಮಾರು 5,1200 ನಗರಗಳು ಹಾಗು 135 ದೇಶಗಳು ಈ EARTH HOUR ನಲ್ಲಿ ಪಾಲ್ಗೊಂಡು ಒಂದು ಗಂಟೆಗಳ ಕಾಲ ಕತ್ತಲಲ್ಲಿ ಕಾಲ ಕಳೆದಿದ್ದವು
.ಈ ಬಾರಿ ಇದನ್ನು ಇನ್ನೂ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಸಂಘಟಕರು ಪ್ರಯತ್ನ ಪಡುತ್ತಿದ್ದಾರೆ
.ಬನ್ನಿ...ಈ ಒಂದು ಪರಿಸರ ಸ್ನೇಹಿ ಕಾರ್ಯದಲ್ಲಿ ನಿಮ್ಮ ಕೈ ಜೋಡಿಸಿ
.ನೀವು ಮಾಡಬೇಕಾಗಿರುವುದು ಇಷ್ಟೆ... ಮಾರ್ಚ್ 31 ರಂದು ರಾತ್ರಿ 8.30 ರಿಂದ 9.30 ರವರೆಗೆ ನಿಮ್ಮ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ.... ನಿಮ್ಮ ಪರಿಚಯಸ್ಥರಿಗೂ ತಿಳಿಸಿ
-SAVE EARTH-
ಖಂಡಿತ..ಈಗಲೇ ಕಂಪ್ಯುಟರ್ ಆಫ್ ಮಾಡ್ತಿನಿ...
ReplyDelete