-ಆಗಸದಲ್ಲೊಂದು ಅಪರೂಪ-
.ಎಂಟು ವರ್ಷಗಳ ನಂತರ ಆಗಸದಲ್ಲೊಂದು ಅಪರೂಪದ ಘಟನೆ ಜರುಗುತ್ತಿದೆ

.ಅದೇನೆಂದು ಕೇಳಿದಿರಾ?..ನೀವು ಈಗಾಗಲೇ ಗಮನಿಸಿರಬಹುದು.5 ಹೊಳೆಯುವ ಗ್ರಹಗಳು ಆಗಸದಲ್ಲಿ  ಕಾಣುತ್ತಿರುವುದು

.ಅಪರೂಪಕ್ಕೆ ಜರುಗುವ ಈ ಘಟನೆಯನ್ನು ನೋಡುವ ಭಾಗ್ಯ ಈಗ ನಮ್ಮದಾಗಿದೆ

.ಫೆಬ್ರವರಿ 28 ರಿಂದ ಮಾರ್ಚ್ 7 ರವರೆಗೆ ಈ ವಿಸ್ಮಯವನ್ನು ನೀವು ಆಗಸದಲ್ಲಿ ಕಾಣಬಹುದಾಗಿದೆ.ಈ ವಿಸ್ಮಯವನ್ನು ನೋಡಲು ಯಾವುದೇ ವಿಶೇಷ ಸಾಧನದ ಅವಶ್ಯಕತೆ ಇಲ್ಲ

.ಸೂರ್ಯಾಸ್ತದ ಒಂದು ಗಂಟೆಯ ನಂತರ ಬುಧ,ಶುಕ್ರ,ಗುರು ಗ್ರಹಗಳನ್ನು ಕಾಣಬಹುದಾಗಿದೆ.ಬುಧ ಗ್ರಹವನ್ನು ನೋಡುವುದು ಸ್ವಲ್ಪ ಕಷ್ಟ.ಆದರೆ ಹೊಳೆಯುವ ಶುಕ್ರ ಹಾಗು ಗುರು ಗ್ರಹಗಳನ್ನು ಸುಲಭವಾಗಿ ಗುರುತಿಸಬಹುದು.ಅತ್ಯಂತ ಹೊಳೆಯುವ ಗ್ರಹವೇ ಶುಕ್ರ.ಶುಕ್ರನಂತೆಯೇ ಇರುವ ಆದರೆ ಶುಕ್ರನಷ್ಟು ಪ್ರಕಾಶಿಸದ ಗ್ರಹವೇ ಗುರು..ಇವೆರಡು ಗ್ರಹಗಳನ್ನು ರಾತ್ರಿ 9 ಗಂಟೆಯ ವರೆಗೂ ನೋಡಬಹುದು

.ಸುಮಾರು 9 ಗಂಟೆಯ ನಂತರ ಮಂಗಳ ಗ್ರಹವನ್ನು ಸ್ಪಷ್ಟವಾಗಿ ಗುರುತಿಸಬಹುದು.ಆಗಸದ ಪೂರ್ವದಲ್ಲಿ ಕೆಂಪಾಗಿ ಕಾಣುವ ಮಂಗಳ ಗ್ರಹ ಮಧ್ಯ ರಾತ್ರಿಯವರೆಗೂ ಗೋಚರಿಸುತ್ತಿರುತ್ತದೆ.ಸರಿ ಸುಮಾರು ಮಧ್ಯ ರಾತ್ರಿಯ ಹೊತ್ತಿಗೆ ಪೂರ್ವದಲ್ಲಿ ನಕ್ಷತ್ರದಂತೆ ಹೊಳೆಯುವ ಹಳದಿ ಗ್ರಹವೊಂದು ಗೋಚರಿಸುತ್ತದೆ ಇದೇ ಶನಿ ಗ್ರಹ

.ಹೀಗೆ 5 ಗ್ರಹಗಳನ್ನು ಈ ಸಂದರ್ಭದಲ್ಲಿ ನೋಡಿ ಕಣ್ಣು ತುಂಬಿಕೊಳ್ಳಬಹುದು

.ಬಹಳ ಅಪರೂಪಕ್ಕೆ ನಡೆಯುವ ಈ ಸುಂದರ ವಿಸ್ಮಯವನ್ನು Miss ಮಾಡಿಕೊಳ್ಳಬೇಡಿ.ಜೀವನದಲ್ಲಿ ಕೆಲಸ ಕಾರ್ಯಗಳು ಇದ್ದದ್ದೇ...ಆದರೆ ಸೌರಮಂಡಲದಲ್ಲಿ ನಮ್ಮ ಭೂಮಿಯ ಅಕ್ಕ ಪಕ್ಕದವರಾದ ಈ ಸುಂದರ ಗ್ರಹಗಳನ್ನು ಒಂದೇ ರಾತ್ರಿಯಲ್ಲಿ ನೋಡುವ ಅವಕಾಶ ಬಹುಷಃ ಎಲ್ಲಾ ಸಮಯದಲ್ಲೂ ಸಿಗಲಾರದು......So Don't Miss It

.ನಿಮಗೆ ಗ್ರಹಗಳನ್ನು ನೋಡಲು ಅನುಕೂಲವಾಗಲಿ ಕೆಳಗಿನ ಚಿತ್ರಗಳನ್ನು ಪೋಸ್ಟ್ ಮಾಡಿದ್ದೇನೆ 
Courtesy-2012 Sky & Telescope

UPDATE-ಕೆಂಪು ಗ್ರಹ ಮಂಗಳ ನಾಳೆ (ಮಾರ್ಚ್ 5) ಕ್ಕೆ ಭೂಮಿಗೆ ಅತ್ಯಂತ ಸಮೀಪದಲ್ಲಿದ್ದು ಅತ್ಯಂತ ಪ್ರಕಾಶಮಾನವಾಗಿ ಗೋಚರಿಸುತ್ತದೆ

Comments

  1. houdu budha graha noduvudakke kasta... ekendare adu yaavagalu suryana samipa iruttade.... ulida grahagalannu nodabahudu.... mahitigagi dhanyavadagalu

    ReplyDelete
  2. ಉತ್ತಮ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು. ನನ್ನ ಬ್ಲಾಗ್ ಗೆ ಬನ್ನಿ.

    ReplyDelete
  3. @Prabhamani nagaraj ಖಂಡಿತಾ ಭೇಟಿ ನೀಡುತ್ತೇನೆ..ಧನ್ಯವಾದಗಳು

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....