Posts

Showing posts from March, 2011
Image
-ಸಿಲಿಕಾನ್ ಸಿಟಿಯಲ್ಲಿ ಮಹಾ ಮಾರಿ- .ಬೆಂಗಳೂರು-ಸಿಲಿಕಾನ್ ಸಿಟಿಯಲ್ಲಿ ಹಬ್ಬಿರುವ ಮಹಾ ಮಾರಿ 'ಪ್ಲಾಸ್ಟಿಕ್' ಬಗ್ಗೆ ಈ ಪೋಸ್ಟ್ .ಇಡೀ ಭೂಮಂಡಲವನ್ನೇ ಆವರಿಸಿರುವ ಪ್ಲಾಸ್ಟಿಕ್ ಎಂಬ ಮಾರಿ ನಮ್ಮ ಸಿಲಿಕಾನ್ ಸಿಟಿಯನ್ನು ಯಾವ ರೀತಿ ಆಕ್ರಮಿಸಿದೆ ಎಂಬುದನ್ನು ನನ್ನ ಸ್ನೇಹಿತೆ ಒಬ್ಬರು ತಮ್ಮ ಕ್ಯಾಮರ ಕಣ್ಣುಗಳಲ್ಲಿ ಸೇರಿಹಿಡಿದಿದ್ದಾರೆ .ಬೆಂಗಳೂರಿನ ಕೋರಮಂಗಲದಲ್ಲಿ ಈ ಕೆಳಗಿನ ಚಿತ್ರಗಳನ್ನು ತೆಗೆಯಲಾಗಿದೆ .ಇದು ಕೇವಲ ಬೆಂಗಳೂರಿನ ಒಂದು areaದ ಕತೆ.ಇನ್ನು ನೂರಾರು areaಗಳಲ್ಲಿ ಇದೇ ತರಹದ ಅಥವಾ ಇದಕ್ಕಿಂತಲೂ ಹದಗೆಟ್ಟ ಪರಿಸ್ಥಿತಿಯನ್ನು ಸಿಲಿಕಾನ್ ಸಿಟಿಯಲ್ಲಿ ಕಾಣಬಹುದಾಗಿದೆ .Image Courtesy-Nevina   .ನೋಡಿದಿರಲ್ಲ,ಹೇಗೆ ಪ್ಲಾಸ್ಟಿಕ್ ಮಾರಿ ಸಿಲಿಕಾನ್ ಸಿಟಿಯನ್ನು ಆವರಿಸುತ್ತಿದೆ ಎಂದು  .ಇದರ ನಡುವೆಯೂ ಒಂದು ಸಂತೋಷದ ವಿಷಯವೆಂದರೆ ಕೇಂದ್ರ ಸರ್ಕಾರದ ಹೊಸ ಕಾನೂನಿನಂತೆ BBMP ವ್ಯಾಪ್ತಿಯಲ್ಲಿ 40 Micron ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಅನ್ನು ನಿಷೇದಿಸಲಾಗಿದೆ.ಈ ಆದೇಶ ಕಟ್ಟು ನಿಟ್ಟಾಗಿ ಜಾರಿಗೆ ಬಂದದ್ದೇ ಆದಲ್ಲಿ ಈ ಪ್ಲಾಸ್ಟಿಕ್ ಮಾರಿಯನ್ನು ಸಿಲಿಕಾನ್ ಸಿಟಿಯಲ್ಲಿ ಹತೋಟಿಯಲ್ಲಿಡಬಹುದು  .ಮುಖ್ಯವಾಗಿ ಕನೂನುಗಳಿಗಿಂತ ಜನರಲ್ಲಿ ಪ್ಲಾಸ್ಟಿಕ್ ದೂರವಿಡುವ ಬುದ್ದಿ ಬರಬೇಕಿದೆ  -ಪ್ರಕೃತಿಯನ್ನು ರಕ್ಷಿಸಿ-
-Extreme ಸೂಪರ್ MOO'N'ATURAL DISASTER ??- .ಸದ್ಯಕ್ಕೆ ಬಿಸಿ ಬಿಸಿ ಚರ್ಚೆಯಾಗುತ್ತಿರುವ ವಿಷಯ ' Extreme ಸೂಪರ್ ಮೂನ್ ' .ಭೂಮಿಯ ಸುತ್ತ ಅಂಡಾಕಾರದಲ್ಲಿ ಸುತ್ತುವ ಚಂದ್ರ ಆಗಾಗ ಭೂಮಿಯ ಹತ್ತಿರ ಬರುತಿರುತ್ತಾನೆ .ಈ ಬಾರಿಯೂ ಚಂದ್ರ ಭೂಮಿಯ ಬಳಿ ಬರಲಿದ್ದಾನೆ,ವಿಷಯ ಕೇವಲ ಇಷ್ಟೇ ಆದರೆ ಇದು ದೊಡ್ಡ ವಿಷಯವಾಗುತ್ತಿರಲಿಲ್ಲ,ಆದರೆ ಈ ಬಾರಿ ಚಂದ್ರ ಭೂಮಿಗೆ ಅತೀ ಸಮೀಪ ಬರಲಿದ್ದಾನೆ .ಮಾರ್ಚ್ 19 ರಂದು ಚಂದ್ರ ಹಾಗು ಭೂಮಿಯ ನಡುವಿನ ಅಂತರ ಕೇವಲ 356,577km .ಈಗಾಗಲೇ ನಿಮಗೆ ತಿಳಿದಂತೆ ಸದ್ಯಕ್ಕೆ ಸುದ್ದಿಯಾಗುತ್ತಿರುವ ವಿಚಾರ 'ಚಂದ್ರ ಭೂಮಿಗೆ ಹತ್ತಿರ ಬಂದರೆ ಭೂಮಿಯಲ್ಲಿ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತವೆ' ಎಂದು.ಈ ವಾದವನ್ನು ಮಂಡಿಸುತ್ತಿರುವವರು ಈ ವಾದಕ್ಕೆ ಪುಷ್ಟಿ ಕೊಡಲು ಈ ಹಿಂದೆ ಚಂದ್ರ ಭೂಮಿಗೆ ಹತ್ತಿರವಾದಾಗ ನಡೆದ ಪ್ರಕೃತಿ ವಿಕೋಪಗಳ ಘಟನೆಯನ್ನು ಸಾಕ್ಷಿ ಕೊಡುತ್ತಾರೆ .ಕಾಕತಾಳಿಯವೆಂದರೆ 'ಚಂದ್ರ ಭೂಮಿಯ ಹತ್ತಿರ ಬರುವ ಸಮಯ ಹತ್ತಿರಾಗುತ್ತಿದ್ದಂತೆ ನಿನ್ನೆ ಜಪಾನ್ ನಲ್ಲಿ ಪ್ರಕೃತಿ ಮುನಿದಿದೆ' ಚಂದ್ರ ಹತ್ತಿರ ಬಂದಾಗ ಭೂಮಿಗೆ ಅಪಾಯ ಎನ್ನುವವವರಿಗೆ ನಿನ್ನೆ ಜಪಾನ್ ನಲ್ಲಿ ನಡೆದ ಘಟನೆ ಅವರ ವಾದಕ್ಕೆ ಮತ್ತಷ್ಟು ಬಲ ತಂದಿದೆ .ಇನ್ನು ಕೆಲವು ಖಗೋಳ ವಿಜ್ಞಾನಿಗಳ ಪ್ರಕಾರ ಈ ಘಟನೆ ಕೇವಲ ಕಾಕತಾಳಿಯ,ಕಾಗೆ ಕೂರುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸರಿಯಾಯಿತು ಎನ್ನುವ ಹಾಗೆ ಈ ಘಟನೆಗೂ...
-ರಕ್ಕಸದಲೆಗಳಿಗೆ   ಜ(ಪಾನ್ )ರ್ಜರಿತವಾಯ್ತು- .'ಪ್ರಕೃತಿ ಮುಂದೆ ಎಲ್ಲವೂ ನಗಣ್ಯ' ಮತ್ತೊಮ್ಮೆ ಸಾಬೀತಾಗಿದೆ .ಇಂದು (11-3-11)ಜಪಾನ್ ನಲ್ಲಿ ಸಂಭವಿಸಿದ ಭೀಕರ ಪ್ರಕೃತಿಯ ಮುನಿಸನ್ನು ನೋಡಿದರೆ ಎಂತವರ ಎದೆಯೂ ಜಲ್ ಎನ್ನದೆ ಇರಲಾರದು .ಸಾಗರದಲ್ಲಿ ಉಂಟಾದ 8 .3 ತೀವ್ರತೆಯ ಭೂಕಂಪ ರಕ್ಕಸ ಅಲೆಗಳನ್ನು ತೀರದ ದಡಗಳಿಗೆ ಅಪ್ಪಳಿಸಿತು ,ಪರಿಣಾಮ ಮನೆಗಳು,ಕಾರುಗಳು,ಮನುಷ್ಯರು ಎಲ್ಲರೂ ನೀರಿನೊಡನೆ ಟೋಟಲ್ washout ಆದರು .ಈ ಘಟನೆಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಟೋಕಿಯದ ತ್ಯಲ ಶುದ್ದೀಕರಣ  ಘಟಕ ಸಂಪೂರ್ಣ ನಾಶವಾಯ್ತು .ಸಾಗರ ತೀರದಲ್ಲೇ ಇದ್ದ 6 nuclear power reactor ಗಳು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿದವು,ಆದರೂ ಒಂದು ಪವರ್ ಪ್ಲಾಂಟ್ ನಲ್ಲಿ ಬೆಂಕಿ ಹಾಗು ಕೂಲರ್ ವ್ಯವಸ್ತೆ ಕೈಕೊಟ್ಟ ಕಾರಣ ವಿಕಿರಣ ಹೊರಹೊಮ್ಮುವ ಅಪಾಯ ಎದುರಾಗಿತ್ತು.ಅದೃಷ್ಟವಶಾತ್ ಹಾಗೇನೂ ಸಂಭವಿಸಲಿಲ್ಲ .ಟೆಕ್ನಾಲಜಿ ಅಭಿವೃದ್ದಿಯ ನಾಗಾಲೋಟದಲಿದ್ದ ಜಪಾನ್ ಅಕ್ಷರಶಃ ಈ ಪ್ರಕೃತಿ ವಿಕೋಪದಿಂದ ಒಂದು ಕ್ಷಣ ತತ್ತರಿಸಿ ಹೋಗಿತ್ತು .ಈ ದುರಂತದಲ್ಲಿ ಅದೆಷ್ಟು ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ (ನಾನು ಈ ಪೋಸ್ಟ್ ಬರೆಯುವ ಹೊತ್ತಿಗೆ ಸುಮಾರು 350 ಜನರು) ಅದೆಷ್ಟು ಜನ ಮನೆ ಮಟ ಕಳೆದುಕೊಂಡು ನಿರಾಶ್ರಿತರಾಗಿದ್ದಾರೂ  ಇನ್ನಷ್ಟೆ ತಿಳಿಯಬೇಕಿದೆ .ಸುನಾಮಿ alert ವ್ಯವಸ್ತೆ ಇದ್ದರೂ ಕೂಡ ಅದು ಜ...
Image
-ಸಿರಿಮನೆ ವೈಭವ - .ಮಲೆನಾಡಿನ ಮಡಿಲಲ್ಲಿರುವ ಸಿರಿಮನೆ ಜಲಪಾತದ ಕೆಲವು ಸುಂದರ ಇಮೇಜ್ಗಳು ಈ ಪೋಸ್ಟ್ನಲ್ಲಿ .ಈ ಜಲಪಾತ ಶೃಂಗೇರಿ ಶಾರದೆಯ ಸನ್ನಿದಿಯಿಂದ ಸ್ವಲ್ಪ ದೂರದಲ್ಲೇ ಇದೆ .ಪ್ರಕೃತಿ ತಾಣಗಳನ್ನು ಪ್ಲಾಸ್ಟಿಕ್ ನಿಂದ ಮುಕ್ತಗೊಳಿಸಿ -ಪ್ರಕೃತಿಯನ್ನು ರಕ್ಷಿಸಿ -
Image
-ಕುದುರೆಮಖ ಕಾಡಿನ ಸೌಂದರ್ಯ- .ಇತ್ತೀಚೆಗೆ ನಾನು ಕುದರೆ ಮುಖ ರಾಷ್ಟ್ರೀಯ ಉದ್ಯಾನವನದ ಕೆರೆಕಟ್ಟೆ ವ್ಯಾಪ್ತಿಯ ಕಾಡಿನಲ್ಲಿ ಅರಣ್ಯ ಇಲಾಖೆ ಕೈಗೊಂಡ 'ಸಿಂಗಳೀಕ' ( Lion Tailed Macaque) ಗಳ ಗಣತಿ ಸರ್ವೆಯಲ್ಲಿ ನಾನು ಪಾಲ್ಗೊಂಡಿದ್ದೆ  .3 ದಿನಗಳ ಕಾಲ ಕಾಡು ಅಲೆಯುತ್ತಾ,ಸಿಂಗಳೀಕ ಗಳನ್ನು ಹುಡುಕುತ್ತ ನನ್ನ ಮೊಬೈಲ್ ನಲ್ಲಿ ತೆಗೆದ ಕೆಲವು ಇಮೇಜ್ ಗಳನ್ನು ಈ ಪೋಸ್ಟ್ ನಲ್ಲಿ ಹಾಕಿದ್ದೇನೆ.ನೋಡಿ ನೀವು ಎಂಜಾಯ್ ಮಾಡಿ  . ಆನೆ ಲದ್ದಿ  .ಮರದ ಮೇಲೆ ಕೆಂದಳಿಳು   .ರಾಮಪತ್ರೆ ಕಾಯಿಯ ಸಿಪ್ಪೆಗಳು  .ಆನೆ ಮುರಿದ ಬಿದಿರು   .ತುಂಗೆಗೆ ಸೇರುವ ವಿಮಲಾ ಹಳ್ಳದಲ್ಲಿ ನಾನು ಹಾಗು ಅರಣ್ಯ ಇಲಾಖೆ ಸಿಬ್ಬಂದಿ . -ಪ್ರಕೃತಿಯನ್ನು ರಕ್ಷಿಸಿ-