-ಸಿಲಿಕಾನ್ ಸಿಟಿಯಲ್ಲಿ ಮಹಾ ಮಾರಿ-
.ಬೆಂಗಳೂರು-ಸಿಲಿಕಾನ್ ಸಿಟಿಯಲ್ಲಿ ಹಬ್ಬಿರುವ ಮಹಾ ಮಾರಿ 'ಪ್ಲಾಸ್ಟಿಕ್' ಬಗ್ಗೆ ಈ ಪೋಸ್ಟ್.ಇಡೀ ಭೂಮಂಡಲವನ್ನೇ ಆವರಿಸಿರುವ ಪ್ಲಾಸ್ಟಿಕ್ ಎಂಬ ಮಾರಿ ನಮ್ಮ ಸಿಲಿಕಾನ್ ಸಿಟಿಯನ್ನು ಯಾವ ರೀತಿ ಆಕ್ರಮಿಸಿದೆ ಎಂಬುದನ್ನು ನನ್ನ ಸ್ನೇಹಿತೆ ಒಬ್ಬರು ತಮ್ಮ ಕ್ಯಾಮರ ಕಣ್ಣುಗಳಲ್ಲಿ ಸೇರಿಹಿಡಿದಿದ್ದಾರೆ
.ಬೆಂಗಳೂರಿನ ಕೋರಮಂಗಲದಲ್ಲಿ ಈ ಕೆಳಗಿನ ಚಿತ್ರಗಳನ್ನು ತೆಗೆಯಲಾಗಿದೆ
.ಇದು ಕೇವಲ ಬೆಂಗಳೂರಿನ ಒಂದು areaದ ಕತೆ.ಇನ್ನು ನೂರಾರು areaಗಳಲ್ಲಿ ಇದೇ ತರಹದ ಅಥವಾ ಇದಕ್ಕಿಂತಲೂ ಹದಗೆಟ್ಟ ಪರಿಸ್ಥಿತಿಯನ್ನು ಸಿಲಿಕಾನ್ ಸಿಟಿಯಲ್ಲಿ ಕಾಣಬಹುದಾಗಿದೆ
.Image Courtesy-Nevina
.ನೋಡಿದಿರಲ್ಲ,ಹೇಗೆ ಪ್ಲಾಸ್ಟಿಕ್ ಮಾರಿ ಸಿಲಿಕಾನ್ ಸಿಟಿಯನ್ನು ಆವರಿಸುತ್ತಿದೆ ಎಂದು
.ಇದರ ನಡುವೆಯೂ ಒಂದು ಸಂತೋಷದ ವಿಷಯವೆಂದರೆ ಕೇಂದ್ರ ಸರ್ಕಾರದ ಹೊಸ ಕಾನೂನಿನಂತೆ BBMP ವ್ಯಾಪ್ತಿಯಲ್ಲಿ 40 Micron ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಅನ್ನು ನಿಷೇದಿಸಲಾಗಿದೆ.ಈ ಆದೇಶ ಕಟ್ಟು ನಿಟ್ಟಾಗಿ ಜಾರಿಗೆ ಬಂದದ್ದೇ ಆದಲ್ಲಿ ಈ ಪ್ಲಾಸ್ಟಿಕ್ ಮಾರಿಯನ್ನು ಸಿಲಿಕಾನ್ ಸಿಟಿಯಲ್ಲಿ ಹತೋಟಿಯಲ್ಲಿಡಬಹುದು
.ಮುಖ್ಯವಾಗಿ ಕನೂನುಗಳಿಗಿಂತ ಜನರಲ್ಲಿ ಪ್ಲಾಸ್ಟಿಕ್ ದೂರವಿಡುವ ಬುದ್ದಿ ಬರಬೇಕಿದೆ
-ಪ್ರಕೃತಿಯನ್ನು ರಕ್ಷಿಸಿ-
ಪ್ರೀತಿಯ ರಾಘು, ಸಿಲಿಕಾನ್ ಸಿಟಿಯ ಸಚಿತ್ರ ವರದಿ ಕಣ್ತೆರೆಸುವಂತಿದೆ. ಇದು ನಗರದ ಬಹುತೇಕ ಎಲ್ಲ ಬಡಾವಣೆಗಳಲ್ಲಿನ ಪರಿಸ್ಥಿತಿ. ಬಿಬಿಎಂ'ಪಿಯವರ ಹೊಸ ಕಾನೂನು ಈ ಪಿಡುಗನ್ನು ಕಡಿಮೆಗೊಳಿಸಬಹುದೆಂದು ಆಶಿಸೋಣ.
ReplyDeleteಧನ್ಯವಾದಗಳು ಸತ್ಯ ಸರ್ ..
ReplyDelete