-ರಕ್ಕಸದಲೆಗಳಿಗೆ  
ಜ(ಪಾನ್ )ರ್ಜರಿತವಾಯ್ತು-
.'ಪ್ರಕೃತಿ ಮುಂದೆ ಎಲ್ಲವೂ ನಗಣ್ಯ' ಮತ್ತೊಮ್ಮೆ ಸಾಬೀತಾಗಿದೆ

.ಇಂದು (11-3-11)ಜಪಾನ್ ನಲ್ಲಿ ಸಂಭವಿಸಿದ ಭೀಕರ ಪ್ರಕೃತಿಯ ಮುನಿಸನ್ನು ನೋಡಿದರೆ ಎಂತವರ ಎದೆಯೂ ಜಲ್ ಎನ್ನದೆ ಇರಲಾರದು

.ಸಾಗರದಲ್ಲಿ ಉಂಟಾದ 8 .3 ತೀವ್ರತೆಯ ಭೂಕಂಪ ರಕ್ಕಸ ಅಲೆಗಳನ್ನು ತೀರದ ದಡಗಳಿಗೆ ಅಪ್ಪಳಿಸಿತು ,ಪರಿಣಾಮ ಮನೆಗಳು,ಕಾರುಗಳು,ಮನುಷ್ಯರು ಎಲ್ಲರೂ ನೀರಿನೊಡನೆ ಟೋಟಲ್ washout ಆದರು

.ಈ ಘಟನೆಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಟೋಕಿಯದ ತ್ಯಲ ಶುದ್ದೀಕರಣ  ಘಟಕ ಸಂಪೂರ್ಣ ನಾಶವಾಯ್ತು

.ಸಾಗರ ತೀರದಲ್ಲೇ ಇದ್ದ 6 nuclear power reactor ಗಳು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿದವು,ಆದರೂ ಒಂದು ಪವರ್ ಪ್ಲಾಂಟ್ ನಲ್ಲಿ ಬೆಂಕಿ ಹಾಗು ಕೂಲರ್ ವ್ಯವಸ್ತೆ ಕೈಕೊಟ್ಟ ಕಾರಣ ವಿಕಿರಣ ಹೊರಹೊಮ್ಮುವ ಅಪಾಯ ಎದುರಾಗಿತ್ತು.ಅದೃಷ್ಟವಶಾತ್ ಹಾಗೇನೂ ಸಂಭವಿಸಲಿಲ್ಲ

.ಟೆಕ್ನಾಲಜಿ ಅಭಿವೃದ್ದಿಯ ನಾಗಾಲೋಟದಲಿದ್ದ ಜಪಾನ್ ಅಕ್ಷರಶಃ ಈ ಪ್ರಕೃತಿ ವಿಕೋಪದಿಂದ ಒಂದು ಕ್ಷಣ ತತ್ತರಿಸಿ ಹೋಗಿತ್ತು

.ಈ ದುರಂತದಲ್ಲಿ ಅದೆಷ್ಟು ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ (ನಾನು ಈ ಪೋಸ್ಟ್ ಬರೆಯುವ ಹೊತ್ತಿಗೆ ಸುಮಾರು 350 ಜನರು) ಅದೆಷ್ಟು ಜನ ಮನೆ ಮಟ ಕಳೆದುಕೊಂಡು ನಿರಾಶ್ರಿತರಾಗಿದ್ದಾರೂ  ಇನ್ನಷ್ಟೆ ತಿಳಿಯಬೇಕಿದೆ

.ಸುನಾಮಿ alert ವ್ಯವಸ್ತೆ ಇದ್ದರೂ ಕೂಡ ಅದು ಜನರನ್ನು ರಕ್ಕಸದಲೆಗಳ ಕಪಿಮುಷ್ಟಿಯಿಂದ ಪಾರು ಮಾಡಲು ಆಗಿಲ್ಲ

.ಭೂಕಂಪ,ಸುನಾಮಿ ಇಂತಹ ಅವದಿಯಲ್ಲಿ ಆಗುತ್ತದೆ ಎಂದು ಭವಿಷ್ಯ ಹೇಳುವ ಪಂಡಿತರಿಗೂ ಏನೂ ಮಾಡಲಾಗಲಿಲ್ಲ

.ಪ್ರಕೃತಿಯೇ ಹಾಗೆ,ನಿನ್ನೆ ಮೊನ್ನೆ ಹುಟ್ಟಿದ ಮಾನವ ಪ್ರಕೃತಿಯ ಭವಿಷ್ಯವನ್ನು ಹೇಳಲಾರ.ಪ್ರಕೃತಿಯನ್ನು ತನ್ನಿಷ್ಟದಂತೆ ಕುಣಿಸಲಾರ. ಪ್ರಕೃತಿ ಆಟ ಮುಗಿದ ಮೇಲೆ ಅದು ಹೀಗಾಯ್ತು,ಹಾಗಾಯ್ತು ಎಂದು ಹೇಳಿಕೊಲ್ಲಳಷ್ಟೇ ಮಾನವನಿಂದ ಸಾದ್ಯ

.ಜಪಾನ್ ಆಗಲಿ,ಅಮೇರಿಕಾ ಆಗಲಿ,ಕೊನೆಗೆ ಭಾರತವೇ ಆಗಲಿ ಪ್ರಕೃತಿ ಮುನಿಸಿಕೊಂಡರೆ ಆಗುವುದು 'ಸಾವಿರ ಸಾವಿರ ಸಾವಿನ ಯಾತ್ರೆ '

.ಜಪಾನ್ ನಲ್ಲಿ ಪ್ರಾಣ ತೆತ್ತ ಅಮಾಯಕ ಜನರ ಆತ್ಮಕ್ಕೆ ಶಾಂತಿ ಸಿಗಲಿ,ಈಗ ಅಲ್ಲಿರುವ ಜನರಿಗೆ ಪ್ರಕೃತಿಯನ್ನು ಉಳಿಸಿ ಬೆಳೆಸಿಕೊಳ್ಳುವ ಬುದ್ದಿ ಬರಲಿ ಎಂದು ಆಶಿಸೋಣ

.ದೇಶ,ಭಾಷೆ,ದನಿಕ,ಬಡವ,ಪಾಪ,ಪುಣ್ಯ ಎಲ್ಲವೂ ಆ ಪ್ರಕೃತಿ ಮಾತೆಯ ಮುಂದೆ ನಗಣ್ಯ............


*ಜಪಾನ್ ನಲ್ಲಿ ಸಂಭವಿಸಿದ ಪ್ರಕೃತಿಯ ಮುನಿಸಿನ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ 

*ಜಪಾನ್ ನಲ್ಲಿ ಸಂಭವಿಸಿದ ಪ್ರಕೃತಿಯ ಮುನಿಸಿನ ವೀಡಿಯೊ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ 



-ಪ್ರಕೃತಿಯನ್ನು ರಕ್ಷಿಸಿ-

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....