-Extreme ಸೂಪರ್ MOO'N'ATURAL DISASTER ??-
.ಸದ್ಯಕ್ಕೆ ಬಿಸಿ ಬಿಸಿ ಚರ್ಚೆಯಾಗುತ್ತಿರುವ ವಿಷಯ 'Extreme ಸೂಪರ್ ಮೂನ್'.ಭೂಮಿಯ ಸುತ್ತ ಅಂಡಾಕಾರದಲ್ಲಿ ಸುತ್ತುವ ಚಂದ್ರ ಆಗಾಗ ಭೂಮಿಯ ಹತ್ತಿರ ಬರುತಿರುತ್ತಾನೆ
.ಈ ಬಾರಿಯೂ ಚಂದ್ರ ಭೂಮಿಯ ಬಳಿ ಬರಲಿದ್ದಾನೆ,ವಿಷಯ ಕೇವಲ ಇಷ್ಟೇ ಆದರೆ ಇದು ದೊಡ್ಡ ವಿಷಯವಾಗುತ್ತಿರಲಿಲ್ಲ,ಆದರೆ ಈ ಬಾರಿ ಚಂದ್ರ ಭೂಮಿಗೆ ಅತೀ ಸಮೀಪ ಬರಲಿದ್ದಾನೆ
.ಮಾರ್ಚ್ 19 ರಂದು ಚಂದ್ರ ಹಾಗು ಭೂಮಿಯ ನಡುವಿನ ಅಂತರ ಕೇವಲ 356,577km
.ಈಗಾಗಲೇ ನಿಮಗೆ ತಿಳಿದಂತೆ ಸದ್ಯಕ್ಕೆ ಸುದ್ದಿಯಾಗುತ್ತಿರುವ ವಿಚಾರ 'ಚಂದ್ರ ಭೂಮಿಗೆ ಹತ್ತಿರ ಬಂದರೆ ಭೂಮಿಯಲ್ಲಿ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತವೆ' ಎಂದು.ಈ ವಾದವನ್ನು ಮಂಡಿಸುತ್ತಿರುವವರು ಈ ವಾದಕ್ಕೆ ಪುಷ್ಟಿ ಕೊಡಲು ಈ ಹಿಂದೆ ಚಂದ್ರ ಭೂಮಿಗೆ ಹತ್ತಿರವಾದಾಗ ನಡೆದ ಪ್ರಕೃತಿ ವಿಕೋಪಗಳ ಘಟನೆಯನ್ನು ಸಾಕ್ಷಿ ಕೊಡುತ್ತಾರೆ
.ಕಾಕತಾಳಿಯವೆಂದರೆ 'ಚಂದ್ರ ಭೂಮಿಯ ಹತ್ತಿರ ಬರುವ ಸಮಯ ಹತ್ತಿರಾಗುತ್ತಿದ್ದಂತೆ ನಿನ್ನೆ ಜಪಾನ್ ನಲ್ಲಿ ಪ್ರಕೃತಿ ಮುನಿದಿದೆ'
ಚಂದ್ರ ಹತ್ತಿರ ಬಂದಾಗ ಭೂಮಿಗೆ ಅಪಾಯ ಎನ್ನುವವವರಿಗೆ ನಿನ್ನೆ ಜಪಾನ್ ನಲ್ಲಿ ನಡೆದ ಘಟನೆ ಅವರ ವಾದಕ್ಕೆ ಮತ್ತಷ್ಟು ಬಲ ತಂದಿದೆ
.ಇನ್ನು ಕೆಲವು ಖಗೋಳ ವಿಜ್ಞಾನಿಗಳ ಪ್ರಕಾರ ಈ ಘಟನೆ ಕೇವಲ ಕಾಕತಾಳಿಯ,ಕಾಗೆ ಕೂರುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸರಿಯಾಯಿತು ಎನ್ನುವ ಹಾಗೆ ಈ ಘಟನೆಗೂ,ಚಂದ್ರ ಭೂಮಿ ಹತ್ತಿರ ಬಂದಿರುದಕ್ಕೂ ಸಂಭಂದವಿಲ್ಲ ಎಂದು
.ಆದರೆ ಕೆಲವು ವಿಜ್ಞಾನಿಗಳ ಈ ವಾದ ಗೊಂದಲಗಳನ್ನು ಸೃಷ್ಟಿಸುತ್ತಿದೆ,ಅವರು ಯಾವುದೂ ಒಂದು ಸತ್ಯವನ್ನು ಜಗತ್ತಿಗೆ ಮರೆ ಮಾಚುತಿದ್ದಾರೆಯೇ ಅನ್ನಿಸುತ್ತಿದೆ.ಏಕೆಂದರೆ ಪ್ರತಿ ಸರಿ 'ಕಾಗೆ ಕುತಾಗ ಟೊಂಗೆ ಮುರಿಯುವುದಿಲ್ಲ' ಈ ಹಿಂದೆ ಹಲವಾರು ಬಾರಿ ಚಂದ್ರ ಭೂಮಿಗೆ ಸಮೀಪ ಬಂದಾಗ ಕೆಲವು ದಿನಗಳ ಅಂತರದಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿವೆ
.ಈ ಚಂದ್ರ ಹತ್ತಿರ ಬರುವುದಕ್ಕೂ,ಭೂಮಿಯಲ್ಲಿ ಪ್ರಕೃತಿ ವಿಕೋಪ ಸಂಭವಿಸುವುದಕ್ಕೂ scientific ಕಾರಣಗಳಿವೆ
.ಸೂರ್ಯನ ಸುತ್ತ ಸುತ್ತುವ ಭೂಮಿ ಸೂರ್ಯನ ಗುರುತ್ವ ಶಕ್ತಿಯಿಂದ ಪ್ರಭಾವಕೊಳಗಾಗಿರುತ್ತದೆ,ಹಾಗೆ ಚಂದ್ರನ ಗುರುತ್ವಾಕರ್ಷಣ ಶಕ್ತಿ ಭೂಮಿಯ ಮೇಲೆ ತನ್ನ ಪ್ರಬಾವವನ್ನು ಬೀರುತ್ತದೆ,ಈ ಕಾರಣಕ್ಕಾಗಿಯೇ ಹುಣ್ಣಿಮೆ ದಿನದಂದು ಸಮುದ್ರದಲ್ಲಿ ಅಲೆಗಳ ಏರಿಳಿತ ಮಾಮೂಲಿ ದಿನಗಳಿಗಿಂತ ಜಾಸ್ತಿ ಇರುವುದು
.ಭೂಮಿಯ ಮೇಲೆ ಚಂದ್ರನ ಗುರುತ್ವಾಕರ್ಷಣೆ ಪ್ರಭಾವದ ಬಗ್ಗೆ ಈಗಾಗಲೇ ಅಧ್ಯಯನಗಳು ನಡೆದಿವೆ,ನಡೆಯುತ್ತಿವೆ
.ಚಂದ್ರ ಭೂಮಿ ಸಮೀಪ ಬಂದಾಗ ಅವನ ಗುರುತ್ವ ಶಕ್ತಿಯ ಪರಿಣಾಮವಾಗಿ ಭೂಮಿಯ ಮೇಲೆ ಅದು ಕೆಲವು ಪರಿಣಾಮಗಳನ್ನು ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ,ಚಂದ್ರನ ಗುರುತ್ವ ಶಕ್ತಿ ಭೂಮಿಯ ಮೇಲೆ ಜಾಸ್ತಿ ಇರುವ ಕಾರಣ ಅದು ಭೂಮಿಯ ಒಳ ಪದರಗಳ ಮೇಲೆ ಪ್ರಭಾವ ಬೀರಿ ಕೆಲವೆಡೆ ಭೂಕಂಪ,ಜ್ವಾಲಾಮುಖಿ ಸಂಭವಿಸಬಹುದು.ಇದನ್ನೇ ಕೆಲ ವಿಜ್ಞಾನಿಗಳು ಹೇಳಿದ್ದಾರೆಯೇ ಹೊರತು ಚಂದ್ರ ಭೂಮಿ ಹತ್ತಿರ ಬಂದರೆ ಭೂಮಿಯಲ್ಲಿ ಪ್ರಳಯವಾಗುತ್ತದೆ,ಭೂಮಿ ನಾಶ ಆಗುತ್ತದೆ ಎಂದು ಎಲ್ಲಿಯೂ ಹೇಳಲಿಲ್ಲ
.ಈ ವಿಷಯವನ್ನು ಜನಗಳಲ್ಲಿ ಸರಿಯಾಗಿ ತಲುಪಿಸುವ ಕಾರ್ಯ ನಡೆಯುತ್ತಿಲ್ಲ,ಬದಲಾಗಿ ಈ ವಿಷಯಕ್ಕೆ ದಿನಕ್ಕೊಂದು ಬಣ್ಣ ಬಳಿದು,ಚಂದ್ರ ಹತ್ತಿರ ಬಂದರೆ ಭೂಮಿಗೆ ಅಪಶಕುನ ಅಂತ ಏನೇನೂ ಹೇಳಿ ಜನಗಳಲ್ಲಿ ಭಯ ತರಿಸುವ ಕೆಲಸ ನಡೆಯುತ್ತಿದೆ
.ಕೇವಲ ಚಂದ್ರ ಭೂಮಿಗೆ ಹತ್ತಿರ ಬಂದ ಅಂತ ಭೂಮಿಯ ಜೀವಚರಗಳ ವಿನಾಶದ ಬಗ್ಗೆ ಚಿಂತಿಸುವ ಜನಗಳಲ್ಲಿ ಮಾನವನೇ ದಿನೇ ದಿನೇ ಪರಿಸರ ನಾಶದ ಮೂಲಕ ಭೂಮಿಯಲ್ಲಿರುವ ಜೀವ ಸಂಕುಲವನ್ನು ವಿನಾಶದ ಅಂಚಿಗೆ ತಲುಪಿಸಿದ್ದಾನೆ ಎನ್ನುವ ಸತ್ಯ ಏಕೆ ಅರ್ಥವಾಗುತ್ತಿಲ್ಲ ????
.ಚಂದ್ರನಿಂದ ಭೂಮಿಗೆ ಅಪಾಯವಾಗುವ ಸಾದ್ಯತೆ ಇದೆಯೋ ಇಲ್ಲವೂ ಅಂತ ನಿಖರವಾಗಿ ಹೇಳಲಾಗದಿದ್ದರೂ ಒಂದು ವಿಷಯವನ್ನಂತೂ ಅತ್ಯಂತ ನಿಖರವಾಗಿ ಹೇಳಬಹುದು.ಅದೆನಂತೀರಾ? 'ಮಾನವನಿಂದ ಭೂಮಿಗೆ ಅಪಾಯ'
.ನಾನು ಆಗಲೇ ಹೇಳಿದಂತೆ ಅಕಸ್ಮಾತ್ ಚಂದ್ರನಿಂದ ಭೂಮಿಯ ಕೆಲೆವೆಡೆ ಭೂಕಂಪ,ಜ್ವಲಾಮುಖಿಯಂತಹ ಘಟನೆ ನಡೆಯಬಹುದಾದರೂ ಅವುಗಳನ್ನು ತಪ್ಪಿಸಲು ನಮ್ಮ ಕೈಯಲ್ಲಿ ಸಾದ್ಯವಿಲ್ಲ.so ಈ 'ಸೂಪರ್ ಮೂನ್'ಬಗ್ಗೆ ತಲೆ ಕೆಡಿಸಿಕೊಳ್ಳದಿರಿ.ಮಾರ್ಚ್ 19 ರಂದು ಎಲ್ಲ ದಿನಗಳಿಗಿಂತ ಹೆಚ್ಚು ದೊಡ್ಡವಾಗಿ ಕಾಣುವ ಚಂದ್ರನನ್ನು ನೋಡಿ ಆನಂದಿಸಿ
-ಪ್ರಕೃತಿಯನ್ನು ರಕ್ಷಿಸಿ-
ಪ್ರೀತಿಯ ರಾಘು, ನಿಮ್ಮ ಅಭಿಪ್ರಾಯಗಳು ಸಮಯೋಚಿತವಾಗಿವೆ. "ಮಾನವನಿಂದ ಭೂಮಿಗೆ ಅಪಾಯವಿದೆ" ಎನ್ನುವ ಕಟುಸತ್ಯ ಮಾತ್ರ ನಿಜ. ಬೇರೆ ಹೆಚ್ಚು ತಲೆಕೆಡಿಸಿಕೊಳ್ಳದೆ ಅಂದು ಚಂದ್ರನನ್ನು ನೋಡಿ ಆನಂದಿಸುವುದೇ ಒಳಿತು.
ReplyDeleteಖಂಡಿತ...ನಿಮ್ಮ ಮಾತುಗಳಿಗೆ ಧನ್ಯವಾದಗಳು....
ReplyDelete