-ಸುಡುವ ಸಹರಾ-
.ಪ್ರಪಂಚದ ಎರಡನೇ ಅತಿ ದೊಡ್ಡ ಮರುಭೂಮಿ ಸಹರಾ ದ ಬಗ್ಗೆ ಕೆಲವೊಂದು ಇಂಟರೆಸ್ಟಿಂಗ್ Facts ಗಳು ಈ ಪೋಸ್ಟ್ ನಲ್ಲಿ.ಒಟ್ಟು ವಿಸ್ತೀರ್ಣ 9,400,000 km²
.ಸಹರಾ ಮರುಭೂಮಿಯ ಸರಹದ್ದು-ಪಶ್ಚಿಮದಲ್ಲಿ atlantic ಸಾಗರ,ಉತ್ತರದಲ್ಲಿ Atlas Mountains ಹಾಗು Mediterranean Sea,ಪೂರ್ವದಲ್ಲಿ Red Sea ಹಾಗು Egypt ,ಪಶ್ಚಿಮದಲ್ಲಿ Sudan ಹಾಗು niger ನದಿಯ ಕಣಿವೆಗಳು
(image courtesy-Luca Galuzzi - www.galuzzi.it)
.ಇಲ್ಲಿನ ಕೆಲವು ಮರಳಿನ ದಿಬ್ಬಗಳು 180 ಮೀಟರ್ ವರೆಗೆ ಎತ್ತರವಾಗಿರುತ್ತವೆ
.ಕೆಲವೊಮ್ಮೆ ಸಹರಾ ಮರುಭೂಮಿಯ ಮರಳಿನ ಕಣಗಳು uk ಹಾಗು ಜರ್ಮನಿಯ ವರೆಗೆ ಗಾಳಿಯ ಮುಖಾಂತರ ತಲುಪುತ್ತವೆ
.ಸಹರಾ ಮರುಭೂಮಿಯ ಅತ್ಯಂತ ಎತ್ತರದ ಶಿಖರ Emi Koussi .ಇದು 3,415 m ಎತ್ತರವಿದೆ
.ಅತ್ಯಂತ ಒರಟಾದ ಹವಾಮಾನ ಸಹರಾ ಮರುಭೂಮಿಯದ್ದು.ಇಲ್ಲಿ ಬೀಸುವ ಬಿರುಗಾಳಿಯು ಕೆಲವು ಪ್ರದೇಶದ ಚಿತ್ರಣವನ್ನೇ ಬದಲಿಸುತ್ತದೆ
.ಇಲ್ಲಿ ಬೀಳುವ ಮಳೆಯ ಪ್ರಮಾಣ ಅತ್ಯಂತ ಕಡಿಮೆ.ಅರ್ದದಷ್ಟು ಭಾಗದಲ್ಲಿ 20 mm ಗಿಂತಲೂ ಕಡಿಮೆ ಮಳೆ ಬಿದ್ದರೆ ಇನ್ನರ್ದ ಪ್ರದೇಶದಲ್ಲಿ 10 cm ಗೂ ಕಡಿಮೆ ಮಳೆ ಬೀಳುತ್ತದೆ
.ಇಲ್ಲಿಯೂ ಕೆಲ ಪ್ರದೇಶದಲ್ಲಿ ಜನವಸತಿ ಇದೆ .Berbers ಜನಾಂಗದವರು ಅನಾದಿಕಾಲದಿಂದಲೂ ಇಲ್ಲಿ ವಾಸಿಸುತ್ತಿದ್ದಾರೆ
.ಇಂತಹ ಸುಡುವ ಸಹರಾ ಮರುಭೂಮಿಯಲ್ಲೂ ಕೂಡ 500 ಜಾತಿಯ ಸಸ್ಯಗಳು ಬೆಳೆಯುತ್ತವೆ
.ವಾರ್ಷಿಕ ಸರಾಸರಿ ಉಷ್ಣಾಂಶ 30 c ಗಿಂತಲೂ ಜಾಸ್ತಿ ಇರುತ್ತದೆ.ಅತ್ಯಂತ ಬಿಸಿಯಾದ ತಿಂಗಳುಗಳಲ್ಲಿ ಉಷ್ಣಾಂಶ 50 c ಅನ್ನು ಮೀರಿಸುತ್ತದೆ
( image courtesy-Florence Devouard ( wiki User:Anthere)
.ಚಳಿಗಾಲದಲ್ಲಿ freezing ಪಾಯಿಂಟ್ ಗಿಂತಲೂ ಕಡಿಮೆ ತಾಪಮಾನ ದಾಖಲಾಗುತ್ತದೆ.ಇದೇ ಸಹರಾ ಮರುಭೂಮಿಯ ಹವಾಮಾನಾದ ವಿಶೇಷ
.ಹಲವಾರು ಮರುಭೂಮಿಯ ಹವಾಮಾನಕ್ಕೆ ಹೊಂದಿಕೊಳ್ಳುವ ಪ್ರಾಣಿಗಳೂ ಕೂಡ ಸಹರಾದಲ್ಲಿವೆ.ಒಂಟೆ ಹಾಗು ಮೇಕೆ ಇಲ್ಲಿನ ಪ್ರಮುಖ ಸಾಕು ಪ್ರಾಣಿಗಳು.ಇನ್ನುಳಿದಂತೆ ಇಲ್ಲಿ ಕಂಡು ಬರುವ ಪ್ರಾಣಿಗಳೆಂದರೆ Saharan cheetah,sand vipers,scorpions,monitor lizards
.ಸಹರಾ ದ ವಿಸ್ತೀರ್ಣದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ವಿಜ್ಞಾನಿಗಳು ಉಪಗ್ರಹ ಚಿತ್ರಗಳ ಮೂಲಕ ಅಧ್ಯಯನ ಮಾಡುತಿದ್ದಾರೆ.ಕೆಲವು ಕಡೆ ಸಹರಾದ ವಿಸ್ತೀರ್ಣ ಕಡಿಮೆಯಾಗುತ್ತಿದ್ದು ಇನ್ನೂ ಕೆಲವು ಕಡೆ ಹಿಗ್ಗುತ್ತಿದೆ
.ಒಟ್ಟಿನಲ್ಲಿ ಸುಡುವ ಸಹರಾ ಭೂಮಿಯ ಒಂದು ಅದ್ಭುತ ಕೌತುಕ ಪ್ರದೇಶ
- ಪ್ರಕೃತಿಯನ್ನು ಉಳಿಸಿ-
chennagide
ReplyDelete