ಕಾರುಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ
ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ |
ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧ ಮುಕ್ತಿ
ಎಂದು ಆದೇವು ನಾವು ಮುಕ್ತ ಮುಕ್ತ ಮುಕ್ತ ||
ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ
ಎಲ್ಲುಂಟು ಆಚೆ ತೀರ |
ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ
ಎಲ್ಲುಂಟು ಆಚೆ ತೀರ ||
ಏರು ನದಿಗೆ ಇದಿರಾಗಿ ಈಜಿ ದಡ ಸೇರಬಹುದೆ ಜೀವಾ
ದಾಟಿ ಈ ಪ್ರವಾಹ |
ತಾನು ನೊಂದು ತಿಳಿ ಬೆಳಕ ಬೀರುತಿದೆ ಒಂದು ಇರುಳ ದೀಪ
ನಿಶ್ಚಲದ ಮೂರ್ತ ರೂಪ ||
ದೂರದಿಂದಲೆ ಜೀವ ಹಿಂಡುತಿದೆ ಕಾಣದೊಂದು ಹಸ್ತ
ಆದೇವೆ ಬಂಧ ಮುಕ್ತ |
ದೂರದಿಂದಲೆ ಜೀವ ಹಿಂಡುತಿದೆ ಕಾಣದೊಂದು ಹಸ್ತ
ಆದೇನೆ ಬಂಧ ಮುಕ್ತ ||
image courtesy BIJU.P.B [wildtvm@gmail.com]
ರಘು...
ReplyDeleteಬಹಳ ಸುಂದರ...
ಅರ್ಥಗರ್ಭಿತ ಸಾಲುಗಳು...
ಅಭಿನಂದನೆಗಳು...