
-AMAZING AMAZON- .ನಭೋಮಂಡಲ ದಲ್ಲಿ ಸಣ್ಣ ಸಾಸಿವೆ ಕಾಳಿನಂತೆ ಕಾಣುವ ನಮ್ಮ ಭೂಮಿಯಲ್ಲಿ ನಾವು ಜೀವಮಾನವಿಡೀ ನೋಡಿದರೂ ಮುಗಿಸಲಾರದಷ್ಟು ಅದ್ಭುತಗಳಿವೆ .ಅಂತಹ ಸಹಸ್ರ,ಸಹಸ್ರ ಪ್ರಕೃತಿಯ ಅದ್ಭುತಗಳಲ್ಲಿ ಅತೀ ಅದ್ಭುತ ಒಂದರ ಬಗ್ಗೆ ನಾನು ಈ ಪೋಸ್ಟ್ನಲ್ಲಿ ಬರೆದಿದ್ದೇನೆ .AMAZON -ಈ ಹೆಸರನ್ನು ನೀವು ಈಗಾಗಲೇ ಕೇಳಿರಬಹುದು.ಹೌದು ಮನುಷ್ಯ ಮಾತ್ರರಿಗೆ ಇದನ್ನು ಒಂದು ಜನ್ಮದಲ್ಲಿ ಪೂರ್ತಿ ಅರ್ಥ ಮಾಡಿಕೊಳ್ಳಲ್ಲು ಆಗದ ಒಂದು ಪ್ರಕೃತಿಯ ಅದ್ಭುತ ಕೊಡುಗೆ ಈ ನಮ್ಮ Amazon ನದಿ .ಈ ಮಹಾ ನದಿಯ ಬಗ್ಗೆ ನಾನು ಸಾವಿರ ಬ್ಲಾಗ್ ತೆಗೆದು,ಲಕ್ಷ ಲಕ್ಷ ಲೇಖನಗಳನ್ನು ಬರೆದರೂ ಅದು ಕಡಿಮೆಯೇ .ನೀವು ಈಗಾಗಲೇ Amazon ಬಗ್ಗೆ ತಿಳಿದಿದ್ದರೆ ಇನ್ನೊಮ್ಮೆ ಇದನ್ನು ಓದಿ ಆನಂದಿಸಿ.ತಿಳಿದಿಲ್ಲವಾದರೆ ಇದನ್ನು ಓದಿ ಆಮೇಲೆ ನಿಮಗೇನೇ ಗೊತ್ತಾಗುತ್ತದೆ ಪ್ರಕೃತಿಯ ಮಹಿಮೆ .ನಾನು ಈ ನದಿಯ ಬಗ್ಗೆ ಇಲ್ಲಿ ಬರೆದ ವಿವರಗಳು ಕೇವಲ ೦.0000001 percent ಅಷ್ಟೆ .ಪ್ರಪಂಚದ ಅತ್ಯಂತ ದೊಡ್ಡದಾದ ನದಿ ಈ Amazon .ಇರುವ ಸ್ಥಳ South America .ಪೆರುವಿನ Andes ಪರ್ವತದಲ್ಲಿ ಈ ನದಿ ಸಣ್ಣ ಪ್ರಮಾಣದಲ್ಲಿ ಉಗಮವಾಗುತ್ತದೆ.ಈ ತೊರೆಯನ್ನು Apurimac River ಎಂದು ಕರೆಯುತ್ತಾರೆ .Amazon ನದಿಯ drainage basin (ಜಲಾನಯನ ಪ್ರದೇಶ) ನ ಒಟ್ಟು ವಿಸ್ತೀರ್ಣ 7,050,000 square kilometres .Amazon ನದಿಯು south america ದಲ್ಲಿ ಹುಟ್ಟಿ Guyana, Ecuador, Venezue...