
-ಹಳಿಗಳ ಮೇಲೆ ಹೆಣವಾಯಿತು ಗಜ ಪಡೆ- .ಸೆಪ್ಟೆಂಬರ್ 22 ರಾತ್ರಿ ಪಶ್ಚಿಮ ಬಂಗಾಳದ Binnaguri ಹಾಗು Banarhat ರೈಲ್ವೆ stations ವ್ಯಾಪ್ತಿಯಲ್ಲಿ 7 ಆನೆಗಳು ವೇಗವಾಗಿ ಚಲಿಸುತ್ತಿದ್ದ ಗೂಡ್ಸ್ ರೈಲಿಗೆ ಸಿಕ್ಕಿ ದಾರುಣವಾಗಿ ಮೃತಪಟ್ಟಿವೆ .ಹಳಿಗಳನ್ನು ದಾಟುತ್ತಿದ್ದ ಆನೆಗಳ ಹಿಂಡ್ಡಿನಲ್ಲಿದ್ದ ಎರಡು ಮರಿ ಆನೆಗಳ ಕಾಲುಗಳು ಹಳಿಗಳ ನಡುವೆ ಸಿಕ್ಕಿ ಹಾಕಿಕೊಂಡಿದೆ.ಅದನ್ನು ಬಿಡಿಸಲು ಉಳಿದ ಆನೆಗಳು ಪ್ರಯತ್ನ ಪಡುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಗೂಡ್ಸ್ ರೈಲು ಆನೆಗಳಿಗೆ ಹೊಡೆದ ಪರಿಣಾಮ 7 ಆನೆಗಳು ಮೃತಪಟ್ಟಿವೆ .ರೈಲ್ವೆ ಇಲಾಖೆ ಅದಿಕಾರಿಗಳ ಪ್ರಕಾರ ಅವರಿಗೆ ಅಂದು ಆನೆಗಳ ಹಿಂಡು 'denotified' area ದಲ್ಲಿ ಸಂಚರಿಸುತ್ತಿದ್ದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಯಾವುದೇ ಮಾಹಿತಿ ಇರಲಿಲ್ಲ .ಸಾಧಾರಣವಾಗಿ ‘ notified forested area ’ ಅಥವಾ ‘ elephant corridor ’ ಗಳಲ್ಲಿ ರೈಲುಗಳು ನಿಧಾನವಾಗಿ,ಹಾಗು ಪ್ರಾಣಿಗಳಿಗೆ ಎಚ್ಚರಿಕೆ ನೀಡಲು whistle ಮಾಡುತ್ತಾ ಸಂಚರಿಸುತ್ತವೆ .ಈ ೭ ಆನೆಗಳಿಗೆ ಹೊಡೆದ ಗೂಡ್ಸ್ ರೈಲು 70 km/h ಗಿಂತಲೂ ವೇಗವಾಗಿ ಚಲಿಸುತ್ತಿತ್ತು .ರೈಲ್ವೆ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ ‘ ನಾವು 2 ದಿನಗಳ ಹಿಂದೆಯೇ ಅರಣ್ಯ ಇಲಾಖೆಗೆ ಅನೆಗಳ ಹಿಂಡು ಆ ಪ್ರದೇಶದಲ್ಲಿ ಸಂಚರಿಸುತ್ತಿರುವುದರ ಬಗ್ಗೆ ಮಾಹಿತಿ ನೀಡಿದ್ದೇವೆ,ಆದರೆ ಅವರು ಕ್ರಮ ಕೈಗೊಳಲ್...