-ಗಂಗಾ-
.ಗಂಗಾ-ಭಾರತದಲ್ಲಿ ಹರಿಯುವ ಅತ್ಯಂತ ದೊಡ್ಡದಾದ ನದಿ
.ಗಂಗಾ ನದಿ ಭಾರತದ ಪವಿತ್ರವಾದ ನದಿಗಳಲ್ಲಿ ಪ್ರಮುಖವಾದುದು
.ಗಂಗಾ ನದಿಯು ಹಿಮಾಲಯದ ಗಂಗೋತ್ರಿಯಲ್ಲಿ ಹುಟ್ಟಿ 1558 ಮೈಲಿಗಳಷ್ಟು (2507 ಕಿ.ಮಿ) ದೂರವನ್ನು ಕ್ರಮಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ
.ಗಂಗಾ ನದಿಯ ಆಳ -52 feet ನಿಂದ 100 feet.ಗಂಗಾ ನದಿಯು ಭಾರತದ ರಾಷ್ಟ್ರೀಯ ನದಿಯಾಗಿದೆ
.ಹೃಷಿಕೇಶ್ ,ಹರಿದ್ವಾರ,ವಾರಣಾಸಿ,ಪ್ರಯಾಗ ಮುಂತಾದ ಪ್ರಮುಖ ಕ್ಷೇತ್ರಗಳು ಈ ಗಂಗಾ ನದಿಯ ತೀರದಲ್ಲಿವೆ
.ಗಂಗಾ ನದಿಗೆ ಹಲವಾರು ಉಪನದಿಗಳು ಬಂದು ಸೇರುತ್ತವೆ.ಅವುಗಳಲ್ಲಿ ಪ್ರಮುಖವಾದವು Kosi, Son, Gandaki ಮತ್ತು Ghaghra
.ಬಾಂಗ್ಲಾದೇಶವನ್ನು ತಲುಪಿದ ಮೇಲೆ ಅಲ್ಲಿ ಜಮುನ ನದಿಯನ್ನು ಸೇರುವವರೆಗೂ ಗಂಗಾ ನದಿಯ ಪ್ರಮುಖವಾದ ಕವಲನ್ನು ಪದ್ಮ ನದಿ ಯೆಂದು ಕರೆಯುತ್ತಾರೆ
.ಸಾಗರಕ್ಕೆ ಗಂಗಾ ನದಿಯ ನೀರಿನ ಬಿಡುಗಡೆ - 12,015 m³/s
.ಪ್ರಸಿದ್ದವಾದ ಕುಂಬ ಮೇಳದಂತಹ ಆಚರಣೆಗಳು ಈ ನದಿಯ ತೀರದಲ್ಲಿ ನಡೆಯುತ್ತವೆ
.ಗಂಗಾ ನದಿಗೆ ಪ್ರಮುಖವಾಗಿ 2 ಆಣೆಕಟ್ಟುಗಳನ್ನು ಕಟ್ಟಿದ್ದಾರೆ.ಒಂದು ಹರಿದ್ವಾರದ ಬಳಿ,ಮತ್ತೊಂದು Farakka ಎಂಬುವಲ್ಲಿ.
.ಗಂಗಾ ನದಿಯ ಒಟ್ಟು ಜಲಾನಯನ ಪ್ರದೇಶ 907,೦೦೦ km²
.ಉತ್ತರ ಭಾರತದ ಕೃಷಿಯ ಜೀವಾಳು ಈ ಗಂಗಾ ನದಿ
.ಗಂಗಾ ನದಿಯು dolphin ನಂತಹ ಜೀವಿಗಳಿಗೂ ಆವಾಸ ಸ್ಥಾನವಾಗಿದೆ
.ಭಾರತದ ಅರ್ದಕ್ಕಿಂತಲೂ ಹೆಚ್ಚು ಜನರ ಜೀವನವನ್ನು ನಿಯಂತ್ರಿಸುವ ಈ ನಮ್ಮ ಗಂಗೆ ಇಂದಿನ ದಿನಗಳಲ್ಲಿ ಹೆಚ್ಚು ಕಲುಶಿತವಾಗುತ್ತಿದ್ದಾಳೆ
.ಪ್ರಪಂಚದಲ್ಲಿ ಅತ್ಯಂತ ಕಲುಷಿತಗೊಳ್ಳುತ್ತಿರುವ ನದಿಗಳ ಸಾಲಿನಲ್ಲಿ ನಮ್ಮ ಗಂಗಾ ನದಿಯು ಸೇರಿದೆ
.ನದಿ ತೀರದಲ್ಲಿ ಕಾರ್ಖಾನೆಗಳ ಚಟುವಟಿಕೆಗಳಿಂದ ,ಹಾಗು ಪುಣ್ಯ ಕ್ಷೇತ್ರಗಳಲ್ಲಿ ಜನರಿಂದ ಇಂದು ಗಂಗೆಯು ಹೆಚ್ಚು ಕಲುಶಿತವಾಗುತ್ತಿದ್ದಾಳೆ
.ನದಿಯ ಮಾಲಿನ್ಯದ ಪರಿಣಾಮ ಇಂದು ಗಂಗಾ ನದಿ dolphin ಗಳು ವಿನಾಶದ ಅಂಚಿಗೆ ತಲುಪಿವೆ
.ವಿಶ್ವ ಜಾಗತಿಕ ತಾಪಮಾನ ಹೆಚ್ಚಳದ ಕಾರಣ ಇಂದು ಗಂಗಾ ನದಿಯ ಮೂಲ ಸ್ಥಾನ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ
.ಇದು ಹೀಗೆ ಮುಂದುವರಿದರೆ 2035 ರ ಹೊತ್ತಿಗೆ ಗಂಗೆಯು ಇತಿಹಾಸದ ಪುಟಗಳಲ್ಲಿ ಸೇರುವುದರಲ್ಲಿ ಅನುಮಾನವಿಲ್ಲ
.ಸೊರಗಿ ಹೋಗುತ್ತಿರುವ ನಮ್ಮ ಗಂಗೆಯನ್ನು ರಕ್ಷಿಸಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ
.ಗಂಗಾ ನದಿಯ ಮಾಲಿನ್ಯವನ್ನು ನಿಯಂತ್ರಿಸದಿದ್ದರೆ ಮುಂದೆ ಖಂಡಿತ ಬಹು ದೊಡ್ಡ ಅಪಾಯಗಳು ಎದುರಾಗಬಹುದು
.ಗಂಗಾ ನದಿಯನ್ನು ರಕ್ಷಿಸುವ ವಿದಾನಗಳ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
-ಗಂಗಾ ನದಿಯನ್ನು ಉಳಿಸಿ-
Share this post with your friends
Comments
Post a Comment