-OPERATION ಕಿಂಗ್ 'K '-
.ನಮ್ಮ ಬ್ಲಾಗ್ನಲ್ಲಿ 'ಕಿಂಗ್ ಇನ್ ಮೈ ಹೋಂ' post ಮಾಡಿ 3 ದಿನದ ಒಳಗೇನೆ ಮತ್ತೊಮ್ಮೆ ಕಿಂಗ್ ನಮ್ಮ ಕಣ್ಣಿಗೆ ಬಿದ್ದಿದ್ದಾನೆ .ಈ ಸರಿ ಕಿಂಗ್ ನಮಗೆ ದರ್ಶನ ಕೊಟ್ಟಿದ್ದು ನಮ್ಮ ಊರ ಸಮೀಪವಿರುವ ಸೂರ್ಳಿ ಎಂಬಲ್ಲಿ
.ಇಲ್ಲಿನ ಸತೀಶ್ ಎಂಬುವರ ಮನೆಯ ಕೊಟ್ಟಿಗೆಯಲ್ಲಿ ಕಿಂಗ್ ಬೇಟೆಯನ್ನರಸುತ್ತ ಬಂದಿದ್ದ
.ಕಿಂಗ್ ಅನ್ನು ನೋಡಿ ಗಾಬರಿಗೊಂಡ ಅವರ ಮನೆಯವರು ಹಾವು ಹಿಡಿಯುವ 'ಜಾನಿ' ಎಂಬುವರಿಗೆ ಕರೆ ಮಾಡಿ ವಿಷಯ ತಿಳಿಸಿದರು
.ನಾವು (ನಾನು,ದಿನೇಶ್) ವಿಷಯ ತಿಳಿದು ಅವರ ಮನೆಗೆ ಹೋದಾಗ ಸಮಯ 4.30pm
.ನಾವು ಅಲ್ಲಿಗೆ ಹೋದಾಗ ನೋಡಿದ ದೃಶ್ಯ ನಮಗೆ ಒಂದು ಕ್ಷಣ ಗಾಬರಿಯನ್ನು ಉಂಟು ಮಾಡಿತು.ಏಕೆಂದರೆ ಜನರ ಗಲಾಟೆಗೆ ಬೆದರಿ ಕಿಂಗ್ ಅಲ್ಲೇ ಇದ್ದ ಕಟ್ಟಿಗೆಗಳ ಸಂದಿಯಲ್ಲಿ ಅಡಗಿ ಕುಳಿತಿದ್ದ.ಅವನ ತಲೆ ಕಟ್ಟಿಗೆಗಳ ಸಂದಿಯಲ್ಲಿದ್ದರೆ ಇತ್ತ ಕಡೆ ಜಾನಿ ಮತ್ತು ಇನ್ನೊಬ್ಬರು ಅದರ ಬಾಲವನ್ನು ಹಿಡಿದು ಹೊರಗೆ ಎಳೆಯಲು ಪ್ರಯತ್ನಿಸುತ್ತಿದ್ದರು
.ತಕ್ಷಣ ದಿನೆಶಣ್ಣ ಅದನ್ನು ಹಾಗೆ ಮಾಡದಿರಲು ಅವರಿಗೆ ಸೂಚಿಸಿದರು,ಏಕೆಂದರೆ ಕಿಂಗ್ ತಲೆ ಕಟ್ಟಿಗೆಗಳ ಒಳಗಿದ್ದ ಕಾರಣ ಹೊರಗಿನಿಂದ ಬಾಲವನ್ನು ಎಳೆದರೆ ಅದಕ್ಕೆ ಅಪಾಯವಾಗುವ ಸಾಧ್ಯತೆಗಳಿತ್ತು
.ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಲಿಂಗರಾಜು ರವರು ಪರಿಸ್ಥಿತಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು
.ನಾವು ಉರಗ ತಜ್ನ್ಯ ಗೌರಿ ಶಂಕರ್ ಅವರಿಗೆ ಕರೆ ಮಾಡಿ ಅವರ ಸಲಹೆಯನ್ನು ಪಡೆದೆವು
.ಗೌರಿ ಅದನ್ನು ಹಿಡಿಸದಂತೆ ನಮಗೆ ಸಲಹೆ ಮಾಡಿದರು,ಅದು ಸ್ವಲ್ಪ ಹೊತ್ತಿನ ನಂತರ ತಾನಾಗಿಯೇ ಅಲ್ಲಿಂದ ತೆರೆಳುತ್ತದೆ ಅದಕ್ಕೆ ಅದನ್ನು ಹಿಡಿಯದಂತೆ ಸಲಹೆ ಮಾಡಿದರು
.ಈ ವಿಷಯವನ್ನು ಆ ಮನೆಯವರಿಗೆ ತಿಳಿಸಿದೆವು.ಆದರೆ ಅದಕ್ಕೆ ಅವರು ಸುತರಾಂ ಒಪ್ಪಲಿಲ್ಲ,ಪ್ರಕೃತಿ ಸಹಜವಾದ ಭಯ ಮತ್ತು ಆ ಹಾವನ್ನು ಹಿಡಿಸದಿದ್ದರೆ ಅವರ ಮನೆಗೆ ಬರುವ ಕೆಲಸದ ಜನರ ವಿರೋಧ.ಈ ಕಾರಣಗಳಿಗಾಗಿ ಅವರು ಆ ಹಾವನ್ನು ಹಿಡಿಯುವಂತೆ ಮನವಿ ಮಾಡಿದರು
.ಕೊನೆಗೆ ಕಿಂಗ್ ನ safety ಹಾಗು ಮನೆಯವರ safety ಯನ್ನು ಗಣನೆಗೆ ತೆಗೆದುಕೊಂಡು ಆ ಹಾವನ್ನು ಹಿಡಿಸಲು ಲಿಂಗರಾಜು ರವರು ಅನುಮತಿ ನೀಡಿದರು
.ಆದರೆ ಅದನ್ನು ಹಿಡಿಯುವುದು ಅಷ್ಟು ಸುಲಭದ ಮಾತಾಗಿರಲಿಲ್ಲ
.ಕಿಂಗ್ ಕಟ್ಟಿಗೆ ರಾಶಿಯ ಕೆಳೆಗೆ ಇದ್ದ ಕಾರಣ ಇಡಿ ಕಟ್ಟಿಗೆ ರಾಶಿಯನ್ನು ತೆಗೆಯಲಾಯಿತು
.ಅಂತೂ ಕೊನೆಗೆ ಕಟ್ಟಿಗೆ ರಾಶಿಯ ಕೆಳೆಗೆ ಹೆದರಿ ಕುಳಿತಿದ್ದ ನಮ್ಮ ಕಿಂಗ್ ಅನ್ನು ಜಾನಿಯವರು ಒಂದು ಬಟ್ಟೆಯ ಸಹಾಯದಿಂದ ಹಿಡಿದರು
.ಹಿಡಿದ ಕಿಂಗ್ ಅನ್ನು ಚೀಲಕ್ಕೆ ತುಂಬಿ ಲಿಂಗರಾಜು ರವರ ಸಮ್ಮುಖದಲ್ಲಿ ಅರಣ್ಯಕ್ಕೆ ಬಿಡಲಾಯಿತು
.ಕೆಲ ಹೊತ್ತು ಬೇರೆಯ ಲೋಕದಲ್ಲೇ ಇದ್ದ ಕಿಂಗ್ ಚೀಲದಿಂದ ಬಿಟ್ಟ ತಕ್ಷಣ ಒಮ್ಮೆ ಸುತ್ತಲಿನ ಜಾಗವನ್ನು ದಿಟ್ಟಿಸಿ ನೋಡಿ ನಂತರ ಸರ ಸರನೆ ಹೊಸ ಪರಿಸರಕ್ಕೆ ತೆರಳಿದನು
.ಹೀಗೆ ಕಿಂಗ್ ಅನ್ನು safe ಆಗಿ ಅರಣ್ಯಕ್ಕೆನೋ ಬಿಡಲಾಯಿತು.ಆದರೆ ಪ್ರಶ್ನೆ ಅವನು ಮತ್ತೆ ಮತ್ತ್ಯಾರೋ ಮನೆಗೆ ಹೋಗುವುದಿಲ್ಲವೆಂದು ಗ್ಯಾರಂಟಿ ಏನು?
.ಇತ್ತೀಚಿನ ದಿನಗಳಲ್ಲಿ ಕಿಂಗ್ ಮನುಷ್ಯರು ವಾಸ ಮಾಡುವ ಸ್ಥಳಗಳಲ್ಲಿ ಜಾಸ್ತಿ ಕಾಣಿಸಿಕೊಳ್ಳುತ್ತಿದ್ದಾನೆ
.ಕಿಂಗ್ ಅನ್ನು ನಮ್ಮ ಮನೆಗಳ ಹತ್ತಿರ ಆಹ್ವಾನ ಮಾಡಿದವರು ಯಾರು? ಉತ್ತರ ಸಿಂಪಲ್ ನಾವೇ ಮನುಷ್ಯರು
.ಹೆಚ್ಚುತ್ತಿರುವ ಬೇಡಿಕೆಗಳಿಗಾಗಿ ಅರಣ್ಯ ನಾಶ ಕಿಂಗ್ ನ ನೆಲೆಯನ್ನೇ ನಾಶ ಮಾಡುತ್ತಿದೆ,ಅದೂ ಅಲ್ಲದೆ ಬಹಳಷ್ಟು ಕಾರಣಗಳಿಗಾಗಿ ಇದು ಕಿಂಗ್ ಗೆ ಅರಣ್ಯದಲ್ಲಿ ಅವನ ಊಟದ ಮೆನು ಸಿಗುತ್ತಿಲ್ಲ
.ಹೀಗಾಗಿಯ ಕಿಂಗ್ ಆಹಾರವನ್ನು ಅರಸುತ್ತ ಮನುಷ್ಯ ವಾಸ ಮಾಡುವ ಸ್ಥಳಗಳಲ್ಲಿ ಪ್ರತ್ಯಕ್ಷನಾಗುತ್ತಿದ್ದಾನೆ
.ಈಗಂತೂ ಮನುಷ್ಯ ವಾಸ ಮಾಡುವ ಸ್ಥಳಗಳಲ್ಲಿ ಕಿಂಗ್ ಕಾಣುವಿಕೆ ಸಾಮಾನ್ಯವಾಗಿದೆ
.ನಾನು ಈ ಪೋಸ್ಟ್ ಅನ್ನು ಬರೆದು,ಅದನ್ನು ನೀವು ಓದುವ ಹೊತ್ತಿಗೆ ಮತ್ತೊಂದು ಕರೆ ನಮಗೆ ಬರಬಹುದು 'ಹಲೋ ಸರ್ ನಮ್ಮ ಮನೆಯ ಹತ್ತಿರ ಕಾಳಿಂಗ ಬಂದಿದೆ,ದಯವಿಟ್ಟು ಬೇಗ ಬನ್ನಿ..............
image courtesy-DINESH.JK
Comments
Post a Comment