-ಹಳಿಗಳ ಮೇಲೆ ಹೆಣವಾಯಿತು ಗಜ ಪಡೆ-
.ಸೆಪ್ಟೆಂಬರ್ 22 ರಾತ್ರಿ ಪಶ್ಚಿಮ ಬಂಗಾಳದ Binnaguri ಹಾಗು Banarhat ರೈಲ್ವೆ stations ವ್ಯಾಪ್ತಿಯಲ್ಲಿ 7 ಆನೆಗಳು ವೇಗವಾಗಿ ಚಲಿಸುತ್ತಿದ್ದ ಗೂಡ್ಸ್ ರೈಲಿಗೆ ಸಿಕ್ಕಿ ದಾರುಣವಾಗಿ ಮೃತಪಟ್ಟಿವೆ
.ಸೆಪ್ಟೆಂಬರ್ 22 ರಾತ್ರಿ ಪಶ್ಚಿಮ ಬಂಗಾಳದ Binnaguri ಹಾಗು Banarhat ರೈಲ್ವೆ stations ವ್ಯಾಪ್ತಿಯಲ್ಲಿ 7 ಆನೆಗಳು ವೇಗವಾಗಿ ಚಲಿಸುತ್ತಿದ್ದ ಗೂಡ್ಸ್ ರೈಲಿಗೆ ಸಿಕ್ಕಿ ದಾರುಣವಾಗಿ ಮೃತಪಟ್ಟಿವೆ
.ಹಳಿಗಳನ್ನು ದಾಟುತ್ತಿದ್ದ ಆನೆಗಳ ಹಿಂಡ್ಡಿನಲ್ಲಿದ್ದ ಎರಡು ಮರಿ ಆನೆಗಳ ಕಾಲುಗಳು ಹಳಿಗಳ ನಡುವೆ ಸಿಕ್ಕಿ ಹಾಕಿಕೊಂಡಿದೆ.ಅದನ್ನು ಬಿಡಿಸಲು ಉಳಿದ ಆನೆಗಳು ಪ್ರಯತ್ನ ಪಡುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಗೂಡ್ಸ್ ರೈಲು ಆನೆಗಳಿಗೆ ಹೊಡೆದ ಪರಿಣಾಮ 7 ಆನೆಗಳು ಮೃತಪಟ್ಟಿವೆ
.ರೈಲ್ವೆ ಇಲಾಖೆ ಅದಿಕಾರಿಗಳ ಪ್ರಕಾರ ಅವರಿಗೆ ಅಂದು ಆನೆಗಳ ಹಿಂಡು 'denotified' area ದಲ್ಲಿ ಸಂಚರಿಸುತ್ತಿದ್ದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಯಾವುದೇ ಮಾಹಿತಿ ಇರಲಿಲ್ಲ
.ಸಾಧಾರಣವಾಗಿ ‘notified forested area’ ಅಥವಾ ‘elephant corridor’ ಗಳಲ್ಲಿ ರೈಲುಗಳು ನಿಧಾನವಾಗಿ,ಹಾಗು ಪ್ರಾಣಿಗಳಿಗೆ ಎಚ್ಚರಿಕೆ ನೀಡಲು whistle ಮಾಡುತ್ತಾ ಸಂಚರಿಸುತ್ತವೆ
.ಈ ೭ ಆನೆಗಳಿಗೆ ಹೊಡೆದ ಗೂಡ್ಸ್ ರೈಲು 70km/h ಗಿಂತಲೂ ವೇಗವಾಗಿ ಚಲಿಸುತ್ತಿತ್ತು
.ರೈಲ್ವೆ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ ‘ನಾವು 2 ದಿನಗಳ ಹಿಂದೆಯೇ ಅರಣ್ಯ ಇಲಾಖೆಗೆ ಅನೆಗಳ ಹಿಂಡು ಆ ಪ್ರದೇಶದಲ್ಲಿ ಸಂಚರಿಸುತ್ತಿರುವುದರ ಬಗ್ಗೆ ಮಾಹಿತಿ ನೀಡಿದ್ದೇವೆ,ಆದರೆ ಅವರು ಕ್ರಮ ಕೈಗೊಳಲ್ಲಿಲ್ಲ’ ಎಂದು
.ಇದೇ ಪ್ರದೇಶದಲ್ಲಿ 3 ತಿಂಗಳ ಹಿಂದೆ ರೈಲು ಹೊಡೆದ ಪರಿಣಾಮ 1 ಆನೆ ಮೃತಪಟ್ಟಿತ್ತು
.ಒಟ್ಟಿನಲ್ಲಿ ರೈಲ್ವೆ ಇಲಾಖೆಯ ತಪ್ಪೋ ಅಥವಾ ಅರಣ್ಯ ಇಲಾಖೆಯವರ ತಪ್ಪೋ..7 ಆನೆಗಳ ಜೀವವಂತೂ ಹೊರಟು ಹೋಗಿದೆ
.1987 ರ ನಂತರ ಭಾರತದಲ್ಲಿ ಇದುವರೆಗೂ 150 ಕ್ಕೂ ಹೆಚ್ಚು ಆನೆಗಳು ಈ ರೀತಿಯ ರೈಲು ಅಪಘಾತದಿಂದ ಮೃತ ಪಟ್ಟಿವೆ
.ಇನ್ನಾದರೂ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಹಾಗು ಕೇಂದ್ರ ರೈಲ್ವೆ ಇಲಾಖೆ ಈ ತರಹದ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನನ್ನು ಜಾರಿಗೆ ತರಬೇಕಿದೆ
.ಇದು ಆನೆಗಳ ವಿಷಯವಾದ್ದರಿಂದ ಪ್ರಪಂಚದಾದ್ಯಂತ ಸುದ್ದಿ ಮಾಡಿದೆ.ಆದರೆ ಇದೇ ರೀತಿ ದಿನ ನಿತ್ಯ ಎಷ್ಟೋ ಸಣ್ಣ ಪುಟ್ಟ ಪ್ರಾಣಿಗಳು ರೈಲ್ವೆ ಹಳಿಯಲ್ಲೋ,ರಸ್ತೆಯಲ್ಲೋ ಅಪಘಾತದಿಂದಾಗಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿವೆ.ಇವನೆಲ್ಲ ಕೇಳುವವರು ಯಾರು?
.ಇದು ಆನೆಗಳ ವಿಷಯವಾದ್ದರಿಂದ ಪ್ರಪಂಚದಾದ್ಯಂತ ಸುದ್ದಿ ಮಾಡಿದೆ.ಆದರೆ ಇದೇ ರೀತಿ ದಿನ ನಿತ್ಯ ಎಷ್ಟೋ ಸಣ್ಣ ಪುಟ್ಟ ಪ್ರಾಣಿಗಳು ರೈಲ್ವೆ ಹಳಿಯಲ್ಲೋ,ರಸ್ತೆಯಲ್ಲೋ ಅಪಘಾತದಿಂದಾಗಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿವೆ.ಇವನೆಲ್ಲ ಕೇಳುವವರು ಯಾರು?
.ಅಮಾಯಕ ಪ್ರಾಣಿಗಳು ಮಾನವನ ಚಟುವಟಿಕೆಗಳಿಂದ ತಮ್ಮ ಪ್ರಾಣ ಕಳೆದುಕೊಳ್ಳುವುದು ಎಷ್ಟು ಸರಿ?
(ವಿಶೇಷ ಸೂಚನೆ –ಕೆಳಗಿನ ಚಿತ್ರಗಳು ನಿಮ್ಮ ಕೋಮಲ ಮನಸ್ಸಿನ ಭಾವನೆಗಳನ್ನು ಘಾಸಿಗೊಳಿಸಬಹುದು...ಆದ್ದರಿಂದ ಈ ಚಿತ್ರಗಳನ್ನು ನೋಡದಿರುವುದೇ ಒಳಿತು)
IMAGES COURTESY-1.wildlifetrustofindia.org,2,3.thehindu.com.,4.infostreams.blogspot.com,5.elephantfamily.org
Share this post with your friends
Comments
Post a Comment