-ಜಿರಾಫೆಗಳ ಲೋಕದಲ್ಲಿ-
.ಚತುಷ್ಪಾದಿ ಪ್ರಾಣಿಗಳಲ್ಲೇ ಅತ್ಯಂತ ಎತ್ತರದ ಪ್ರಾಣಿ ಜಿರಾಫೆ.ಇವುಗಳ ಬಗ್ಗೆ ಕೆಲವೊಂದು ಇಂಟರೆಸ್ಟಿಂಗ್ factsಗಳು ಈ ಪೋಸ್ಟ್ನಲ್ಲಿ

.ಮಧ್ಯ ಆಫ್ರಿಕಾದ ಚಾಡ್ ನಿಂದ ಹಿಡಿದು ದಕ್ಷಿಣ ಆಫ್ರಿಕಾದವರೆಗೂ ಇವುಗಳು ಕಂಡುಬರುತ್ತವೆ

.ಪ್ರಕೃತಿಯಲ್ಲಿ ಸ್ವಚ್ಚಂದವಾಗಿ ಆಫ್ರಿಕಾದಲ್ಲಿ ಮಾತ್ರ ಕಂಡುಬರುತ್ತವೆ

.ವ್ಯಜ್ನ್ಯಾನಿಕ ಹೆಸರು Camelopardalis 

.20 ಅಡಿ ಎತ್ತರದವರೆಗೆ ಬೆಳೆಯಬಲ್ಲವು
.ಪ್ರಾಯದ ಗಂಡು ಜಿರಾಫೆಯ ತೂಕವೆಷ್ಟು ಗೊತ್ತೇ ? ಬರೋಬ್ಬರಿ 1,200 kg .ಹೆಣ್ಣು ಜಿರಾಫೆ 830 kg ವರೆಗೆ ತೂಗಬಲ್ಲವು

.ಹುಟ್ಟುವಾಗಲೇ ಇವುಗಳಿಗೆ ಕೋಡುಗಳಿರುತ್ತದೆ.ಹುಟ್ಟುವಾಗಲೇ ಕೋಡು ಹೊಂದಿರುವ ಏಕೈಕ ಪ್ರಾಣಿ ಜಿರಾಫೆ

.ಮುಂಗಾಲುಗಳು ಹಿಂಗಾಲುಗಳಿಗಿಂತ 10 ಪ್ರತೀಶತ ಉದ್ದವಾಗಿರುತ್ತದೆ 

.ದಿನವೊಂದಕ್ಕೆ 10 gallon ನಷ್ಟು ನೀರನ್ನು ಕುಡಿಯಬಲ್ಲವು

.ದಿನವೊಂದಕ್ಕೆ 75 ಪೌಂಡ್ ಆಹಾರ ಸೇವಿಸಬಲ್ಲವು

.acacia ಎಲೆಗಳನ್ನು ತಿನ್ನಲು ಹೆಚ್ಚು ಇಷ್ಟ ಪಡುತ್ತವೆ
.ಇವುಗಳ ನಾಲಿಗೆಯ ಉದ್ದವೇ 18 ಅಂಗುಲವಿರುತ್ತದೆ

.ನಾಲಿಗೆಯ ಬಣ್ಣ ಕಪ್ಪು 

.ಬಾಲವು 8 ಅಡಿಯವರೆಗೆ ಬೆಳೆಯಬಲ್ಲದು 

.ಹುಟ್ಟಿದ ಜಿರಾಫೆ 6 ಅಡಿಯವರೆಗೆ ಉದ್ದವಿರುತ್ತದೆ

.ಇವುಗಳ ಪ್ರತೀ ನಡಿಗೆಯೂ 15 ಅಡಿಯನ್ನು cover ಮಾಡಬಲ್ಲದು 

.ಇವುಗಳ ನಿದ್ರಾ ಸಮಯ ದಿನವೊಂದಕ್ಕೆ ಕೇವಲ 30 ನಿಮಿಷದಿಂದ 1 ಘಂಟೆ 

.ಇವುಗಳ ಗುಂಪನ್ನು herd ಎಂದು ಕರೆಯುತ್ತಾರೆ 

.ಬೆಳೆದ ಗಂಡು ಜಿರಫೆಯನ್ನು ಬುಲ್ ಎಂತಲೂ,ಹೆಣ್ಣನ್ನು cow ಎಂತಲೂ,ಮರಿಗಳನ್ನು calf ಎಂತಲೂ ಕರೆಯುತ್ತಾರೆ 

.20 ರಿಂದ 25 ವರ್ಷಗಳವರೆಗೆ ಬದುಕಬಲ್ಲವು 

.ಇವುಗಳ ಮೇಲಿರುವ ಕಲೆಗಳಿಂದ ಇವುಗಳ ವಯಸ್ಸನ್ನು ತಿಳಿಯಬಹುದು.ಈ ಕಲೆ ಹೆಚ್ಚು dark ಇದ್ದಷ್ಟೂ ಜಿರಾಫೆಗೆ ಹೆಚ್ಚು ವಯಸ್ಸಾಗಿದೆಯೆಂದರ್ತ
.ಘಂಟೆಗೆ 60 km ನಷ್ಟು ನಡೆಯಬಲ್ಲವು 

.ಇವುಗಳ ಹೃದಯದ ತೂಕ 25 ಪೌಂಡ್ 

.ಹೃದಯ ಬಡಿತ ಪ್ರತೀ ನಿಮಿಷಕ್ಕೆ 170 ಬಾರಿ 

.ಹೃದಯವು ನಿಮಿಷಕ್ಕೆ 16 gallon ನಷ್ಟು ರಕ್ತವನ್ನು pump ಮಾಡುತ್ತದೆ 

.ದೃಷ್ಟಿ ಶಕ್ತಿ ಅತ್ಯಂತ ಚುರುಕಾಗಿರುತ್ತದೆ 

.ಹೆಣ್ಣಿನ ಗರ್ಭಾವಸ್ಥೆಯ ಅವಧಿ 15 ತಿಂಗಳು 

.ಸಾಮಾನ್ಯವಾಗಿ ಒಂದು ಮರಿಯು ಹುಟ್ಟುತ್ತದೆ 

.ಪ್ರಾಣಿ ಪ್ರಪಂಚದಲ್ಲಿ ಇವುಗಳ ಏಕೈಕ ಶತ್ರು ಸಿಂಹ.ಬಹಳ ವಿರಳವಾಗಿ ಹೈನಗಳ ಗುಂಪು ಇವುಗಳ ಮೇಲೆ ದಾಳಿ ಮಾಡುತ್ತವೆ 

.ಇವುಗಳ ಒಂದು ಬಲವಾದ ಒದೆ ಸಿಂಹದ ತಲೆ ಚಿಪ್ಪನ್ನು ಪುಡಿ ಮಾಡಬಲ್ಲದು 

.9 ಜಾತಿಯ ಜಿರಾಫೆಗಳಲ್ಲಿ 2 ಜಾತಿಯ ಜಿರಾಫೆಗಳನ್ನು 'ಅಪಾಯದಂಚಿನಲ್ಲಿರುವ ಜಿರಾಫೆ'ಗಳೆಂದು ಗುರುತಿಸಲಾಗಿದೆ (ಪಶ್ಚಿಮ ಆಫ್ರಿಕಾದ ಜಿರಾಫೆ ಹಾಗು Rothschild's ಜಿರಾಫೆ )

.ಜಿರಾಫೆಗಳು ಪ್ರಕೃತಿಯ ಸುಂದರ ಹಾಗು ಅತ್ಯಂತ ಕೌತುಕ ಗುಣಗಳನ್ನು ಹೊಂದಿರುವ ಪ್ರಾಣಿ.ಇವುಗಳನ್ನು ಮಾಂಸ ಹಾಗು ಚರ್ಮಕ್ಕೆ ಭೇಟೆಯಾಡಲಾಗುತ್ತಿದೆ

.ಆಫ್ರಿಕಾದ ಕೆಲವು ಭಾಗಗಳಲ್ಲಿ ಅವುಗಳ ಸಂಖ್ಯೆ ಕ್ಷೀಣಿಸುತ್ತಿದ್ದರೂ ಕೆಲವು ಭಾಗಗಳಲ್ಲಿ ವೃದ್ದಿಸುತ್ತಿದೆ

.ಇನ್ನೊಮ್ಮೆ ನೀವು zoo ನಲ್ಲಿ ಜಿರಾಫೆಯನ್ನು ನೋಡಿದಾಗ ಈ fact ಗಳು ನಿಮ್ಮ ಮನದಲ್ಲಿ ಮೂಡಬಹುದು....
. 

-ಪ್ರಕೃತಿಯನ್ನು ರಕ್ಷಿಸಿ-

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....