Saturday, January 8, 2011

-ಕಾಡಿನಿಂದ ನಾಡಿಗೆ ಆನೆ ಪಡೆ -
.ನಿಮಗೆ ನಿತ್ಯವೂ ನ್ಯೂಸ್ ನೋಡುವ ಅಭ್ಯಾಸವಿದ್ದರೆ ಅಥವಾ ಪೇಪರ್ ಓದುವ ಅಭ್ಯಾಸವಿದ್ದರೆ ಒಂದು ವಿಷಯ ನಿಮ್ಮ ಗಮನ ಸೆಳೆದಿರಲೇ ಬೇಕು.ಅದೇ ಕಾಡು ಪ್ರಾಣಿಗಳು ನಾಡಿನ ಕಡೆ ಮುಖ ಮಾಡಿರುವುದು

.ಅತಿವೃಷ್ಟಿ ,ಅನಾವೃಷ್ಟಿ ಯಾ ಜೊತೆಗೆ ರೈತರಿಗೆ ಈಗ ಬೆಳೆದ ಬೆಳೆಗಳನ್ನು ಕಾಡು ಪ್ರಾಣಿಗಳಿಂದ ಉಳಿಸಿಕೊಳ್ಳುವುದು ಕೂಡ ಮುಖ್ಯವಾಗಿದೆ

.ನನ್ನ ಇಂದಿನ ಪೋಸ್ಟ್ ಕೂಡು ಇಂತಹ ಒಂದು ಸಮಸ್ಯೆಯ ಹಿಂದೆ ಸಾಗಿದೆ

.'ಕಾಡಿನಿಂದ ನಾಡಿಗೆ ಆನೆ ಪಡೆ' ಈ ಸಮಸ್ಯೆಗೆ ಮುಖ್ಯ ಕಾರಣವೇ 'ನಾಡನ್ನು ಉದ್ದಾರ ಮಾಡಿ ಈಗ ಕಾಡನ್ನು ಹಾಳು ಮಾಡುತ್ತಿರುವ ಮಾನವ ಪಡೆ '
.ನಾನು ಈ ಪೋಸ್ಟ್ ಬರೆಯುವ 2 ದಿನದ ಹಿಂದಷ್ಟೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಒಂದು ಗ್ರಾಮದಲ್ಲಿ ಒಂದು ಮನ ಕಲಕುವ ಘಟನೆ ನಡೆದಿತ್ತು .2 ಮರಿ ಆನೆಗಳು ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದವು

.ಈ ಸಾವಿಗಿಡಾದ ಮರಿ ಆನೆಗಳ ಮುಂದೆ ನಿಂತು ರೂದಿಸುತ್ತಿದ್ದ ತಾಯಿ ಆನೆಯ ಪರಿಸ್ತಿತಿ ಹೃದಯ ಕಲುಕುವಂತಿತ್ತು

.ಸಾಮಾನ್ಯವಾಗಿ ಆನೆಗಳು ತಮ್ಮ ಮರಿಗಳ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುತ್ತವೆ.ಆನೆಗಳು ಭಾವನಾತ್ಮಕ ಜೀವಿಗಳು.ಆನೆಗಳ ಗರ್ಭಾವಸ್ತೆಯೇ 2 ವರ್ಷ .ಹೀಗಾಗಿ ತಮ್ಮ ಮರಿಗಳ ಬಗ್ಗೆ ತಾಯಿ ಆನೆ ಹೆಚ್ಚಿನ ಕಾಳಜಿ ತೋರಿಸುತ್ತದೆ .ಹಾಗಾಗಿಯೇ ಮೊನ್ನೆ ಆ ತಾಯಿ ಆನೆ ಸತ್ತ ಮರಿಗಳ ಮುಂದೆ ನಿಂತು ರೂದಿಸುತ್ತಾ,ಹತ್ತಿರ
ಬಂದ ಮನುಷ್ಯರ ಮೇಲೆ ಆಕ್ರಮಣ ಮಾಡುತ್ತಿತ್ತು

.ನಿನ್ನೆ ಕೂಡ ಹಾಸನ ಜಿಲ್ಲೆಯಲ್ಲೇ ಮತ್ತೆ 2 ಆನೆಗಳು ಮೃತ ಪಟ್ಟಿವೆ

.ಇಡೀ ಭಾರತದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳು ಇರುವ ಕರ್ನಾಟಕದಲ್ಲಿ ಇಂತಹ ಒಂದು ಘಟನೆ ನಡೆದದ್ದು ನಿಜವಾಗಿಯೂ ದುರಂತವೇ ಸರಿ

.ನೀವು ಕೇಳಬಹುದು ನಾನು ಕೇವಲ ಆನೆಗಳ ಬಗ್ಗೆ ಮಾತಡುತ್ತಿದ್ದೀನಿ.ರೈತರ ಕಷ್ಟಗಳ ಬಗ್ಗೆ ಏಕೆ ಮಾತದುತ್ತಿಲ್ಲವೆಂದು ?ನಿಮ್ಮ ಪ್ರಶ್ನೆ ಸರಿಯಾಗಿಯೇ ಇದೆ .ಆದರೆ ಒಬ್ಬ ಪರಿಸರ ಪ್ರೇಮಿಯಾಗಿ ನಾನು ಮೊದಲ ಪ್ರಾಶಸ್ತ್ಯ ನೀಡುವುದು ಪರಿಸರ ವಿಷಯಗಳ ಬಗ್ಗೆ ಮಾತ್ರ

.ಕೇವಲ ಆನೆಗಳಲ್ಲದೆ ಇತ್ತೀಚಿಗೆ ಚಿರತೆಗಳು ಕೂಡ ನಗರಕ್ಕೆ ದಾಳಿ ಇಟ್ಟು ಜನರಲ್ಲಿ ಆತಂಕ ಮೂಡಿಸಿವೆ.ಕೆಲವು ಪ್ರಾಣ ಸಹಿತ ಬಿಟ್ಟಿವೆ

.ಏಕೆ ಈ ಆನೆಗಳು ನಾಡಿಗೆ ಬರುತ್ತಿವೆ ? ಈ ಪ್ರಶ್ನೆಗೆ ನೇರ ಉತ್ತರ ಕಾಡು ನಾಶ.ಸಸ್ಯಹಾರಿಗಳಾದ ಆನೆಗಳಿಗೆ ದಿನವೊಂದಕ್ಕೆ ಹೆಚ್ಚಿನ ಆಹಾರದ ಅವಶ್ಯಕತೆ ಇದೆ.ಇವುಗಳಿಗೆ ಕಾಡಿನಲ್ಲಿ ಪ್ರಕೃತಿದತ್ತವಾದ ಶತ್ರುಗಳು ಕಡಿಮೆ ಇರುವ ಕಾರಣ ಇವುಗಳು ಸಮಾನ್ಯವಾಗಿಯೇ ಹೆಚ್ಚಿನ ಸಂಖ್ಯೆಯಲ್ಲೇ ಇವೆ

.ನಾಡಲ್ಲಿ ಇದ್ದದ್ದನೆಲ್ಲ ಲೂಟಿ ಮಾಡಿ ಈಗ ಮಾನವ ಎಂಬ ಜೀವಿ ಕಾಡಿನ ಲೂಟಿಗೆ ಇಳಿದಿರುವುದು ಆನೆಗಳಿಗೆ ಕಾಡಿನಲ್ಲಿ ಆಹಾರದ ಕೊರತೆಗೆ ಪ್ರಮುಖ ಕಾರಣ

.ಆನೆಗಳ ಸಂರಕ್ಷಣೆಗೆ ರಾಷ್ಟ್ರೀಯ ಉದ್ಯಾನವನಗಳು ಇದೆಯಾದರೂ ಕೂಡ ಅಲ್ಲಿನ ಹಲವು ಸಮಸ್ಯೆಗಳು ಆನೆಗಳನ್ನು ನಾಡಿನತ್ತ ಮುಖ ಮಾಡುವಂತೆ ಮಾಡಿವೆ .ಇತ್ತೀಚೆಗಷ್ಟೆ ಕನ್ನಡದ ದಿನಪತ್ರಿಕೆ ಕನ್ನಡ ಪ್ರಭ ಒಂದು ವರದಿ ನೀಡಿತ್ತು ರಾಷ್ಟ್ರೀಯ ಉದ್ಯಾನವನ,ಅಭಯಾರಣ್ಯ ಗಳ ಸುತ್ತ ಮುತ್ತಲಿನ ಪರಿಸರ ಲೂಟಿಯಾಗುತ್ತಿರುವ ಬಗ್ಗೆ ವರದಿ ಪ್ರಕಟಿಸಿತ್ತು,ಅರಣ್ಯ ಇಲಾಖೆಗೆ ಇದರ ಬಗ್ಗೆ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳದ ಬಗ್ಗೆ ಅಲ್ಲಿ ಪ್ರಸ್ತಾಪಿಸಲಾಗಿತ್ತು .ಒಂದು ಅಭಯಾರಣ್ಯ ದಲ್ಲಿನ ಜೀವಿಗಳು ತೊಂದರೆ ಇಲ್ಲದೆ ಬದುಕಲು ಆ ಅಭಯಾರಣ್ಯದ ಸುತ್ತ ಮುತ್ತಲಿನ ಪರಿಸರ ಕೂಡ ಮಾನವರ ಕಾರ್ಯ ಚಟುವಟಿಕೆಗಳಿಂದ ಮುಕ್ತವಾಗಿರಬೇಕು.ಹಾಗಿಲ್ಲದಿದ್ದಾಗ ಮಾತ್ರ ಇಂತಹ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ

.ಇನ್ನು ನಾಡಿಗೆ ಬಂದ ಆನೆಗಳ ಸಾವಿನ ಬಗ್ಗೆ ಹೇಳುವುದಾದರೆ ಸಾಮಾನ್ಯವಾಗಿ ಆನೆ ಹಾವಳಿಯಿಂದ ಆಕ್ರೂಶಗೊಂಡ ರೈತರು ತಮ್ಮ ಜಮೀನುಗಳಿಗೆ ವಿದ್ಯುತ್ ಬೇಲಿ ಅಳವಡಿಸಿರುತ್ತಾರೆ .ಈ ವಿದ್ಯುತ್ ಬೇಲಿಯಲ್ಲಿ ನಿಯಮವನ್ನು ಮೀರಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಹರಿಬಿಡುತ್ತಿರುವುದು ಆನೆಗಳ ಸಾವಿಗೆ ಪ್ರಮುಖ ಕಾರಣ

.ಇನ್ನು ಈ ಸಮಸ್ಯೆಯ ಇನ್ನಿತರ ಕಾರಣ ಹುಡುಕುವುದಾದರೆ ಕೆಲವೊಂದು ಅಂಶಗಳು ಇಲ್ಲಿ ಗಮನ ಸೆಳೆಯುತ್ತವೆ

.ಆನೆಗಳ ಹಿತಕ್ಕೆ ಮಾಡಿದ Elephant ಕಾರಿಡಾರ್ ಯೋಜನೆ ಏಕೆ ಹಳ್ಳ ಹಿಡಿದಿದೆ? ಈ ಯೋಜನೆಯನ್ನು ಪ್ರಭಾವಿಯಾಗಿ ಕಾರ್ಯ ರೂಪಕ್ಕೆ ತರಲು ಅರಣ್ಯ ಇಲಾಖೆ ಗೆ ಏಕೆ ಸಾಧ್ಯವಾಗಿಲ್ಲ?

.ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ರಾಜ್ಯ ಹಾಗು ಕೇಂದ್ರ ಸರ್ಕಾರಗಳಿಗೆ ಅಂತಹ ಕಷ್ಟಕರ ವಿಚಾರವೇ? ಕೋಟ್ಯಾಂತರ ಜನರ ಜೀವನವನ್ನು ಕಾಪಾಡುವ ಸರ್ಕಾರಗಳಿಗೆ ಕೆಲವೇ ಸಾವಿರ ಆನೆಗಳ ಹಿತ ಕಾಪಾಡುವುದು ದೊಡ್ಡ ವಿಚಾರವೇ ?

.ಅರಣ್ಯ ಇಲಾಖೆಯಲ್ಲಿ ಇರುವ ಸಿಬ್ಬಂದಿಗಳ ಕೊರತೆ ಈ ಸಮಸ್ಯೆಗೆ ಇನ್ನೊಂದು ದೊಡ್ಡ ಕಾರಣ .ಕೆಲವೇ ಬೆರಳೆಣಿಕೆ ಸಿಬ್ಬಂದಿಗಳನ್ನು ಇಟ್ಟುಕೊಂಡು ಒಂದು ಇಡೀ ಸಂರಕ್ಷಿತ ಪ್ರದೇಶವನ್ನು ಕಾಯುವುದಾದರೂ ಹೇಗೆ ?

.ಆಧುನಿಕ ತಂತ್ರಜ್ಞಾನ ವನ್ನು ಬಳಸಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾದರೂ ಸರ್ಕಾರಗಳು ಏಕೆ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿಲ್ಲ ?

.ನಿಯಮ ಮೀರಿ ವಿದ್ಯುತ್ ಬೇಲಿ ಯಲ್ಲಿ ಹೆಚ್ಚಿನ ವಿದ್ಯುತ್ ಹರಿಸಿ ಕಾಡು ಪ್ರಾಣಿಗಳ ಸಾವಿಗೆ ಕಾರಣರಾಗುತ್ತಿರುವವರನ್ನು ಏಕೆ ಹಿಡಿದು ಶಿಕ್ಷಿಸಲಾಗುತ್ತಿಲ್ಲ ?

.ರಾಷ್ಟ್ರೀಯ ಉದ್ಯಾನವನ,ವನ್ಯ ಜೀವಿ ಸಂರಕ್ಷಣೆಯ ಸುತ್ತ ಮುತ್ತಲಿನ ಪರಿಸರ ಲೂಟಿ ವಿಚಾರ ಕಣ್ಣ ಮುಂದೆ ಇದ್ದರೂ ಸರ್ಕಾರ ಏಕೆ ಕ್ರಮ ಕೈಗೊಳ್ಳುತಿಲ್ಲ? ಯಾವ ಲಾಭಿ ಇದರ ಹಿಂದೆ ಕೆಲಸ ಮಾಡುತ್ತಿದೆ?

.ಬನ್ನೇರುಘಟ್ಟದ ಪ್ರಾಣಿಗಳ ಸರಣಿ ಸಾವಿನಿಂದ ಹಿಡಿದು ಮೊನ್ನೆಯ ಆನೆಯ ಸಾವಿನವರೆಗೆ ದುರಂತಗಳು ನಡೆದರೂ ಬೀದಿಗಿಳಿಯದ ಪ್ರಾಣಿ ರಕ್ಷಕ NGO ಗಳ ನಿಲುವು ಎಷ್ಟರ ಮಟ್ಟಿಗೆ ಸರಿ ?

.ಈ ಸಮಸ್ಯೆಗೆ ಕೇವಲ ಸರ್ಕಾರ ಕಾರಣವಲ್ಲ .ಅಕ್ರಮ ಅರಣ್ಯ ಒತ್ತುವರಿ ಮಾಡಿ ಅಲ್ಲಿ ಜಮೀನು ಮಾಡುವ ಜನಗಳ ಕಾರ್ಯ ಎಷ್ಟರ ಮಟ್ಟಿಗೆ ಸರಿ ?

.ಮಳೆ ,ಬೆಳೆ ನಮಗೆ ಸಮಯ ಸಮಯಕ್ಕೆ ಬೇಕು .ಆದರೆ ಆ ಮಳೆ .ಬೆಳೆ ಕೊಡಬಲ್ಲ ಪರಿಸರ ಸಂರಕ್ಷಣೆಯಲ್ಲಿ ನಮ್ಮ ಕೊಡುಗೆ ಏನು ?

.ಹುಲಿಗಳ ಸಂರಕ್ಷಣೆಗೆಂದು NDTV ಹಾಗು AIRCEL ನವರು ಹಣ ಒಟ್ಟು ಮಾಡಿ RAPID RESPONCE TEAM ಎಂಬ ಹೊಸ ಕಾರ್ಯವಿಧಾನವನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ .ಹೀಗೆಯೇ ನಮ್ಮ ಸರ್ಕಾರ ಅಥವಾ NGO ಗಳು ಇಂತಹ CONCEPT ಗಳನ್ನು ಜಾರಿಗೆ ತರಬಹುದು .ಇದರಿಂದ ಸಮಸ್ಯೆ ಹಿಡಿತಕ್ಕೆ ಬರುವ ಜೊತೆಗೆ ನಿರುದ್ಯೋಗಿ ಜನರಿಗೆ ಕೆಲಸವೂ ಸಿಕ್ಕಂತಾಗುತ್ತದೆ

.ಇದೆಲ್ಲ ಇವತ್ತು ನಮಗೆ ದೊಡ್ಡ ವಿಷಯ ಅನ್ನಿಸದಿರಬಹುದು ಸ್ವಾಮೀ .ಆದರೆ ಇದರ ಪರಿಣಾಮ ಮಾತ್ರ ಮುಂದೆ ಅತ್ಯಂತ ಘೋರವಾಗಿರುತ್ತದೆ

.ಕಾಡು ಪ್ರಾಣಿಗಳ ನಾಡಿನೆಡೆಗೆ ದಾರಿ ಕಾಡಿನ ವಿನಾಶದ ಸ್ಪಷ್ಟ ಸೂಚನೆ,ಇನ್ನಾದರೂ ಸರ್ಕಾರಗಳು ಹಾಗು ನಾಗರೀಕರಾದ ನಾವು ಇದರ ಬಗ್ಗೆ ಎಚ್ಚೆತ್ತುಕೊಳ್ಳುತ್ತಿವಿಯೇ ಎನ್ನುವುದೇ ಇಂದಿನ Million ಡಾಲರ್ ಪ್ರಶ್ನೆ

.ನಮಗೆ ಈ ವಿಷಯ ಸಂಭಂದಿಸಿಲ್ಲ ಎಂದು ಸುಮ್ಮನೆ ನ್ಯೂಸ್ ನೋಡಿ ಮಲಗಿದರೆ ,ಕಾಡಿನ ನಾಶ ಎಗ್ಗಿಲ್ಲದೆ ನಡೆಯಬಹುದು,ರೈತರ ಬೆಳೆ ಕಾಡು ಪ್ರಾಣಿಗಳಿಂದ,ಪ್ರಕೃತಿ ವಿನಾಶದಿಂದ ನಾಶವಾಗಬಹುದು.ಮುಂದಿನ ದಿನಗಳಲ್ಲಿ ನಾವು ಮಾರ್ಕೆಟ್ ಗೆ ಹೋದಾಗ ಗೊತ್ತಾಗುತ್ತದೆ ಇದರ ಎಫೆಕ್ಟ್

.ಪ್ರಕೃತಿಗೆ ನಾವು ತರಿಸಿದ ಕಣ್ಣಿರಿನಿಂದಲೇ ಇಂದು ಈರುಳ್ಳಿ ನಮ್ಮ ಕಣ್ಣಲ್ಲಿ ನೀರು ತರಿಸುತ್ತಿರುವುದು ಅಲ್ಲವೇ...................


-ಪ್ರಕೃತಿಯನ್ನು ರಕ್ಷಿಸಿ-

No comments:

Post a Comment