.ಮತ್ತೆ ಬಂದಿದೆ ಪ್ರಕೃತಿ ಪ್ರಿಯರ ದಿನ ದಿನ...ಅದೇ ವಿಶ್ವ ಪರಿಸರ ದಿನ .ನನಗೆ ಕೆಲವರು ಕರೆ ಮಾಡಿ ಪ್ರಕೃತಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರಕೃತಿಯ slogans ಗಳನ್ನು ನಿಮ್ಮ ಬ್ಲಾಗ್ ನಲ್ಲಿ ಪೋಸ್ಟ್ ಮಾಡಿ ಎಂದು ಕೇಳಿಕೊಂಡಿದ್ದರು.ಈ ತರಹದ ಕನ್ನಡದಲ್ಲಿ ಪ್ರಕೃತಿಯ slogan ಗಳು ಇಂಟರ್ನೆಟ್ ನಲ್ಲಿ ಕಡಿಮೆ ಸಿಗುತ್ತವೆ .ನನಗೂ ಈ ತರಹದ ಒಂದು ಪೋಸ್ಟ್ ಮಾಡಬೇಕೆಂದೆನಿಸಿ ಹಲವಾರು ಕಡೆ ಹುಡುಕಿ ಒಂದಷ್ಟು,ಹಾಗು ನಾನೇ ಯೋಚನೆ ಮಾಡಿದ ಪ್ರಕೃತಿಯ slogans ಗಳನ್ನು ಇಂದಿನ ವಿಶೇಷ ದಿನದಲ್ಲಿ ಪೋಸ್ಟ್ ಮಾಡಿದ್ದೇನೆ.ಇದು ಹಲವರಿಗೆ ಉಪಯೋಗವಾಗಬಹುದು ಎಂಬುದು ನನ್ನ ನಂಬಿಕೆ .ಇಲ್ಲಿ ಕೇವಲ 52 slogans ಗಳನ್ನು ಪೋಸ್ಟ್ ಮಾಡಿದ್ದೇನೆ.ನೀವು ಕೊಡ ಇಂತಹ ಪರಿಸರ ವಿಚಾರದ slogans ಗಳನ್ನು ರಚಿಸಿ ನನ್ನ mail id - acct4rag@gmail.com ಗೆ ಕಳುಹಿಸಬಹುದು.ನಾನು ಅವುಗಳನ್ನು ಈ list ಗೆ ಸೇರಿಸುತ್ತೇನೆ 1.‘ಕಂಡ ಕಂಡಲ್ಲಿ ಪ್ಲಾಸ್ಟಿಕ್ ಎಸೆಯುವ ನೀಚ ಬುದ್ದಿಯನ್ನು ಬಿಡಿ’ ‘ಪರಿಸರವನ್ನು ಸ್ವಚ್ಛವಾಗಿಡಿ’ 2.’ಒಂದು ಪ್ಲಾಸ್ಟಿಕ್ ಭೂಮಿಯಲ್ಲಿ ಕೊಳೆಯಲು ನೂರಾರು ವರ್ಷ ಬೇಕು’’. ‘’ಪ್ಲಾಸ್ಟಿಕ್ ನ ಮರುಬಳಕೆ ಪ್ರಕೃತಿಯಲ್ಲಿ ಪ್ಲಾಸ್ಟಿಕ್ ಹಾವಳಿ ತಡೆಯಲು ಇರುವ ಒಂದು ಉತ್ತಮ ವಿಧಾನ’’ ‘’ತಿಳಿಯಿರಿ,ತಿಳಿಸಿರಿ,ಪ್ರಕೃತಿಯನ್ನು ಉಳಿಸಿರಿ’’ 3.‘’ಪ್ರತೀ ವರ್ಷ 1 Million ಗೂ ಹೆಚ್ಚು ಪಕ್ಷಿಗಳು ಪ್ಲಾಸ್ಟಿಕ್ ಸಂಭಂದಿ ಮಾಲಿನ್ಯದಿಂದಾಗಿ ಸಾಯುತ್ತಿವೆ...
.ಹಾವುಗಳು ಈ ಪದ ಕೇಳಿದರೆ ಬೆಚ್ಚಿ ಬೀಳುವ ಜನರು ಹೆಚ್ಚು ನಮ್ಮ ದೇಶದಲ್ಲಿ .ವರದಿಯೊಂದರ ಪ್ರಕಾರ ನಮ್ಮ ದೇಶದಲ್ಲಿ ಪ್ರತಿ ವರ್ಷಕ್ಕೆ ಸರಿ ಸುಮಾರು 2 ,5೦,೦೦೦ ಜನಗಳು ಹಾವುಗಳಿಂದ ಕಡಿತಕ್ಕೊಳಗಾಗುತ್ತಾರೆ.ಇದರಲ್ಲಿ 5೦,೦೦೦ ಜನರು ಪ್ರಾಣ ಕಳೆದುಕೊಳ್ಳುತ್ತಾರೆ .ಈ ಮಾಹಿತಿಯನ್ನು ನಾನು ಹಾವುಗಳ ಬಗ್ಗೆ ನಿಮ್ಮಲ್ಲಿ ಹೆದರಿಕೆಯನ್ನು ಹುಟ್ಟು ಹಾಕಲು ಹೇಳುತ್ತಿಲ್ಲ .ನಮ್ಮ ದೇಶದಲ್ಲಿ ಹೆಚ್ಚಿನ ಜನರಿಗೆ ಇರುವ ಒಂದು ಭಾವನೆ ಎಂದರೆ ಹಾವುಗಳು ಎಂದರೆ ಕಚ್ಚಿ ಸಾಯಿಸುವ ಜೀವಿಗಳು ಎಂದು.ಈ ವಿಚಾರ ತಪ್ಪು.ಭಾರತದಲ್ಲಿ ಇರುವ ಹಲವಾರು ಹಾವುಗಳ ಜಾತಿಯಲ್ಲಿ ಕಂಡುಬರುವ ವಿಷಪೂರಿತ ಹಾವುಗಳ ಬಗ್ಗೆ ನನ್ನ ಇಂದಿನ ಪೋಸ್ಟ್ .ನೀವು ಈ ವಿಷಯ ಕೇಳಿದರೆ ಆಶ್ಚರ್ಯ ಪಡುತ್ತಿರಿ....ಭಾರತದಲ್ಲಿ ಇರುವ ವಿಷಪೂರಿತ ಹಾವುಗಳ ಜಾತಿ ಎಷ್ಟು ಗೊತ್ತೇ ? ಕೇವಲ 4 .ಹೌದು ನಮ್ಮ ದೇಶದಲ್ಲಿ ಈ 4 ಜಾತಿಯ ಹಾವುಗಳು ಮಾತ್ರ ವಿಷಪೂರಿತ.ಈ 4 ಜಾತಿಯ ಹಾವು ಕಚ್ಚಿದರೆ ಮಾತ್ರ ಮನುಷ್ಯ ಸಾಯುತ್ತನೆಯೇ ಹೊರತು (ಅಗತ್ಯ ಚಿಕೆತ್ಸೆ ಕೊಡಿಸದಿದ್ದಾಗ ) ಬೇರೆ ಎಲ್ಲಾ ಹಾವುಗಳು ವಿಷರಹಿತ .ಈ 4 ಜಾತಿಯ ಹಾವುಗಳು ಯಾವುವೆಂದರೆ 1 .King Cobra ಅಥವಾ ಕಾಳಿಂಗ 2 .Cobra ಅಥವಾ ನಾಗರ ಹಾವು 3 .Viper ಅಥವಾ ಕನ್ನಡಿ ಹಾವು ಅಥವಾ ಕೊಳಕು ಮಂಡಲ 4 .Common krait ಅಥವಾ ಕಡಂಬಳ ಅಥವಾ ಕಟ್ಟು ಹಾವು -King Cobra ಅಥವಾ ಕಾಳಿಂಗ - .ಸಾಮಾನ್ಯವಾಗಿ ಪಶ್ಚಿಮ ಘಟ್ಟದ ತಂಪು ಪ್ರದೇ...
ಅಬ್ಬಬ್ಬಾ ಇದೆಂತಾ ಸೆಖೆ..ಹಿಂದೆಂದಿಗಿಂತಲೂ ಸಹಿಸಲಸಾಧ್ಯವಾದ ಸೆಖೆ..ಎಂತಾ ಬಿಸಿಲು..ಒಂದು ಮಳೆಯಾದರೂ ಬರಬಾರದೇ...! ಹೀಗೆ ಮಾತನಾಡುತ್ತಾ ಇದೇ ಸಮಯದಲ್ಲಿ ಕರೆಂಟ್ ತೆಗುವುವವರಿಗೆ ಒಂದಷ್ಟು ಹಿಡಿ ಶಾಪ ಹಾಕುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ .ಇಂತಹ ಮಾತುಗಳನ್ನು ಕೇಳಿದಾಗ ನನಗನ್ನಿಸುವುದು ಜನಗಳು ಸಮ್ಮನೆ ಸೆಖೆ ,ಮಳೆ ಎನ್ನುತ್ತಾರೆಯೇ ವಿನಃ ಇಂತಹ ಹವಾಮಾನ ವೈಪರೀತ್ಯದ ಮೂಲಗಳ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲವಲ್ಲವೆಂದು .ಹೌದು ಬೇಸಿಗೆ ಬಂತೆಂದರೆ ಇಂತಹ ಮಾತುಗಳನ್ನು ನಾವು ಕೇಳುವುದು ಸಹಜವೇ..ಅದರಲ್ಲಿ ವಿಶೇಷವೇನು ಇಲ್ಲ ಬಿಡಿ ಅನ್ನುತ್ತಿರಾ... ಇದೆ ಖಂಡಿತವಾಗಿಯೂ ವಿಶೇಷವಿದೆ .ಇತ್ತೀಚಿನ ವರ್ಷಗಳ ಬೇಸಿಗೆಗಳು ಹಿಂದೆಂದಿಗಿಂತಲೂ ಹೆಚ್ಚು ಉಷ್ಣತೆಯನ್ನು ಹೊಂದುತ್ತಿರುವುದಲ್ಲದೇ ಸಹಿಸಲು ಅಸಾಧ್ಯವಾದ ಪರಿಸ್ಥಿತಿಯನ್ನು ತಂದಿರುವುದರಲ್ಲಿ ಸಂಶಯವಿಲ್ಲ .ನೀವೀ ಲೇಖನವನ್ನು ಆಫೀಸ್ ನ ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ಓದುತ್ತಿರುವುದಾದರೆ ನಾನು ಹೇಳಿದ ಮಾತು 'ಹೌದಾ' ಎಂದೆನಿಸಬಹುದು .ಆದರೆ ಸ್ವಲ್ಪ ಹೊರ ಬಂದು ಬಿಸಿಲಿಗೆ ಮೈ ಒಡ್ಡಿ ನಿಂತುಕೊಳ್ಳಿ...ನಾನು ಹೇಳುತ್ತಿರುವ ಉರಿ ಭೇಸಿಗೆಯ ಅನುಭವ ಕೆಲವೇ ನಿಮಿಷಗಳಲ್ಲಿ ನಿಮಗೆ ಉಂಟಾಗುತ್ತದೆ .ನಮ್ಮ ಶಿವಮೊಗ್ಗದಲ್ಲೇ ಒಂದು ವಾರದ ಹಿಂದೆ ದಾಖಲಾದ 40 ಡಿಗ್ರೀ ಉಷ್ಣಾಂಶ ಇಲ್ಲಿಯವರನ್ನು ಒಮ್ಮೆ ತಬ್ಬಿಬ್ಬು ಮಾಡಿದ್ದು ಸುಳ್ಳಲ್ಲ .ನೀವು ಮಲೆನಾಡಿ...
ನಿಮ್ಮ ಕ್ಯಾಮರಾ ಕಂಗಳಿಗೊಂದು ಸಲ್ಯೂಟ್.
ReplyDeleteThank u........
ReplyDelete