Wednesday, January 19, 2011

-ನಾಗರಹೊಳೆ ರಾಷ್ಟ್ರೀಯ ಉದ್ಯಾನವನ-

.ನಾಗರಹೊಳೆ ರಾಷ್ಟ್ರೀಯ ಉದ್ಯಾನವನ-ನಮ್ಮ ರಾಜ್ಯದಲ್ಲಿರುವ ಈ ನ್ಯಾಷನಲ್ ಪಾರ್ಕ್ ಅತ್ಯಂತ ಸುಂದರ ಹಾಗು ಹಲವು ಪ್ರಾಣಿಗಳಿಗೆ ಬದುಕು ನೀಡಿರುವ,ಮುಖ್ಯವಾಗಿ ಹುಲಿರಾಯರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಕೃತಿಯ ಸುಂದರ ತಾಣ

.ಇದನ್ನು Rajiv Gandhi National Park ಎಂತಲೂ ಕರೆಯುತ್ತಾರೆ

.ಮೈಸೂರು ಹಾಗು ಕೊಡಗು ಜಿಲ್ಲೆಯಲ್ಲಿ ಹಬ್ಬಿರುವ ಇದು ಮೈಸೂರು ನಗರದಿಂದ 94 km ದೂರದಲ್ಲಿದೆ

.ಇದರ ಉತ್ತರ-ಪಶ್ಚಿಮ ದಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನವಿದೆ.ಕಬಿನಿ ಜಲಾಶಯವು ಈ ಎರಡು ಪಾರ್ಕ್ ಗಳನ್ನು ವಿಭಾಗಿಸಿದೆ

.ಒಟ್ಟು ವಿಸ್ತೀರ್ಣ -643 square kilometres

.ದಟ್ಟ ಹಚ್ಚ ಹಸಿರು ಕಾಡು,ನದಿ ತೊರೆಗಳು,ಕಣಿವೆಗಳು,ಜಲಪಾತಗಳು ಇಲ್ಲಿನ ವಿಶೇಷತೆಗಳು

.ಇಲ್ಲಿನ ಕಾಡುಗಳು ಮುಖ್ಯವಾಗಿ ದಕ್ಷಿಣ ಭಾಗದಲ್ಲಿ moist mixed deciduous forest ,ಪೂರ್ವ ಭಾಗಕ್ಕೆ ಹೋದಂತೆ dry tropical forest ,ಗುಡ್ಡ ಭಾಗದ ಕಣಿವೆಗಳಲ್ಲಿ swamp forest ಕಂಡುಬರುತ್ತವೆ

.ಆನೆಗಳು ಇಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿವೆ .ಆನೆಗಳ ಜೊತೆ ಹುಲಿ,ಚಿರತೆ,ಕಾಡು ನಾಯಿ,ಜಿಂಕೆಗಳು,ಲಂಗೂರ್ ಗಳು ಕಂಡುಬರುತ್ತವೆ (gaur, sambar deer, chital,wild boar. Gray langurs, lion-tailed macaques and bonnet macaques,common muntjac, four-horned antelope, mouse deer)

.ತೇಗ, ಗಂಧ, ಬೀಟೆ, ಸಿಲ್ವರ್ ಓಕ್ ಗಳು ಇಲ್ಲಿ ಕಂಡುಬರುವ ಮರಗಳಲ್ಲಿ ಪ್ರಮುಖವಾದವು

.2000 ನೇ ಇಸವಿಯಲ್ಲಿ ಈ ಪಾರ್ಕ್ ನ ಅಧ್ಯಯನ ಮಾಡಿ ವರದಿ ನೀಡಿದ dr ಉಲ್ಲಾಸ್ ಕಾರಂತರ ಪ್ರಕಾರ ಈ ಪಾರ್ಕಿನಲ್ಲಿ ಮುಖ್ಯವಾಗಿ 3 ಜಾತಿಯ ಭೇಟೆಗಾರ ಪ್ರಾಣಿಗಳು ಸಮನಾದ ಸಂಖ್ಯೆ ಸಾಂದ್ರತೆ ಯಿಂದ ಕೂಡಿವೆ.ಆ 3 ಭೇಟೆಗಾರ ಪ್ರಾಣಿಗಳು ಹುಲಿ,ಚಿರತೆ ಹಾಗು ಕಾಡು ನಾಯಿಗಳು

.ಇನ್ನು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವ ಇತರ ಪ್ರಾಣಿಗಳಲ್ಲಿ ನರಿ,grey mongoose ,striped hyenas,four-horned antelopes,wild pig,palm civet,Indian pangolin,red giant flying squirrel,Indian porcupine ಗಳು ಪ್ರಮುಖವಾದವು

.ಇಲ್ಲಿ ಹೆಚ್ಚಿನ ಸಂಖ್ಯೆಯ ಪಕ್ಷಿ ಸಂಕುಲಗಳು ಕಂಡು ಬರುತ್ತವೆ.ಸುಮಾರು 270 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಇಲ್ಲಿ ಕಂಡುಬರುತ್ತವೆ ಎಂದು ಹೇಳಲಾಗಿದೆ

.ನವಿಲುಗಳು ,ಕಾಡು ಕೋಳಿಗಳು ಇಲ್ಲಿನ ಸೌಂದರ್ಯವನ್ನು ಇಮ್ಮಡಿಸಿವೆ

.ವಿನಾಶದಂಚಿನಲ್ಲಿರುವ Oriental white-backed vulture , ವಿನಾಶದಂಚಿಗೆ ಮುಂದೊಂದು ದಿನ ಹೋಗುವ ಭೀತಿ ಇರುವ greater spotted eagle ,Nilgiri wood-pigeon,oriental white ibis ,greater grey-headed fish-eagle ,red-headed vulture ಗಳು ಇಲ್ಲಿ ಕಂಡು ಬರುತ್ತವೆ

.ಇಲ್ಲಿ ಮಾತ್ರ ಕಂಡು ಬರುವ ಇತರ ಪಕ್ಷಿಗಳು blue-winged parakeet,Malabar grey hornbill,white-bellied treepie

.ಇನ್ನು ಇಲ್ಲಿ ಕಂಡು ಬರುವ ಸರೀಸೃಪಗಳಲ್ಲಿ vine snake ,common wolf snake ,ಕೇರೆ ಹಾವು (rat snake), bamboo pit viper,Russell's viper ,common krait ,ಹೆಬ್ಬಾವು,Indian monitor lizard ,common toad ಗಳು ಪ್ರಮುಖವಾದವು

.ಸುಮಾರು 60 ಜಾತಿಯ ಇರುವೆಗಳು ಇಲ್ಲಿವೆ ಎಂದು ಅಧ್ಯಯನದ ವರದಿಯೊಂದು ಹೇಳುತ್ತದೆ .ಅಪರೂಪದ ಹಾರುವ ಇರುವೆಗಳನ್ನು (Harpegnathos saltator) ಕೂಡ ಇಲ್ಲಿ ಪತ್ತೆ ಹಚ್ಚಿದ್ದಾರೆ .ಇವು 1 metre ವರೆಗೆ ಹಾರಬಲ್ಲವು

.ಇಲ್ಲಿ ಬೀಳುವ ವಾರ್ಷಿಕ ಮಳೆಯ ಪ್ರಮಾಣ 1,440 mm

.ಕಬಿನಿ, ಲಕ್ಷ್ಮಣ ತೀರ್ಥ, ಮತ್ತು ನಾಗರಹೊಳೆ,ಸರತಿ ಹೊಳೆ,balle ಹಳ್ಳ ಗಳು ಇಲ್ಲಿನ ನೀರಿನ ಮೂಲಗಳು

. ಜೇನು ಕುರುಬರು,ಬೆಟ್ಟ ಕುರುಬರು ಇಲ್ಲಿ ವಾಸ ಮಾಡುತ್ತಾರೆ .ಇವರನ್ನು ಹುಲಿ ಹಾಗು ಆನೆಗಳ ಸಂರಕ್ಷಣೆಗಾಗಿ ಬೇರೆಡೆಗೆ ಸ್ಥಳಾಂತರ ಮಾಡುವ ವಿಚಾರ ಹಲವು ವರ್ಷಗಳಿಂದ ಚರ್ಚೆಯಲ್ಲಿ ಇದ್ದು ಇತ್ತೀಚಿನ ವರ್ಷಗಳಲ್ಲಿ ಅದು ಸಾಧ್ಯವಾಗಿದೆ

.ಬೇಸಿಗೆ ಬಂತೆಂದರೆ ಇಲ್ಲಿನ ಕಾಡು ಪ್ರಾಣಿಗಳಿಗೆ ಕಷ್ಟದ ಸಮಯ .ಮುಖ್ಯವಾಗಿ ಸಸ್ಯಾಹಾರಿಗಳಾದ ಆನೆ ,ಜಿಂಕೆ ಮುಂತಾದ ಪ್ರಾಣಿಗಳಿಗೆ ಮೇವು ಕೊರತೆ ಎದುರಾಗುತ್ತದೆ

.ಹಿಂದೆ ಆನೆಗಳು ಈ ಕಾಡಿನಲ್ಲಿ ತಿನ್ನಲು ಆಹಾರದ ಕೊರತೆ ಉಂಟಾದಾಗ ಪಕ್ಕದಲ್ಲೇ ಇರುವ ಬ್ರಹ್ಮಗಿರಿ ಬೆಟ್ಟಕ್ಕೆ ವಲಸೆ ಹೋಗುತ್ತಿದ್ದವು .ಆದರೆ ಇಂದಿನ ದಿನಗಳಲ್ಲಿ ಇವೆರಡರ ಮದ್ಯೆ ಕಾಫೀ ತೋಟಗಳು ಇರುವುದರಿಂದ ಆನೆಗಳು ಕಾಫೀ ತೋಟದಲ್ಲೇ ಬೀಡು ಬಿಟ್ಟು ಆಹಾರ ಪೂರೈಕೆ ಮಾಡಿಕೊಳ್ಳುತ್ತಿವೆ .ಅಲ್ಲಿನ ಜನರು ಇವುಗಳನ್ನು ಪಟಾಕಿ ಸಿಡಿಸಿ ಓಡಿಸುತ್ತಾರೆ

.ಕಬಿನಿಯ ತಟದಲ್ಲಿ ಬೇಸಿಗೆಯ ಸಮಯಕ್ಕೆ ಆಹಾರ ಅರಸಿ ಬರುವ ಇಲ್ಲಿನ ಕಾಡು ಪ್ರಾಣಿಗಳಿಗೆ ಅಲ್ಲಿನ ಹುಲ್ಲು ಒಂದಷ್ಟು ತಿಂಗಳು ಆಹಾರ ಪೂರೈಕೆ ಮಾಡುತ್ತದೆ .ಈ ಸಮಯದಲ್ಲಿ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆನೆ ಹಾಗು ಇತರ ಪ್ರಾಣಿಗಳು ಬೀಡು ಬಿಟ್ಟಿರುತ್ತವೆ ಇದನ್ನು ನೋಡುವುದು ಕಣ್ಣಿಗೆ ಒಂದು ಹಬ್ಬ

.ಬೇಸಿಗೆ ಮುಗಿಯುವವರೆಗೂ ಇಲ್ಲಿರುವ ಪ್ರಾಣಿಗಳು ವರುಣನ ಆಗಮನ ಆದ ನಂತರ ಕಾಡಿಗೆ ಮರಳುತ್ತವೆ

.ಇತ್ತೀಚಿನ ದಿನಗಳಲ್ಲಿ ಕಬಿನಿ ಸುತ್ತ ಮುತ್ತ ಕೃಷಿ ಚಟುವಟಿಕೆಯಿಂದಾಗಿ ಕಬಿನಿಯ ಈ ಜಾಗದಲ್ಲಿ ಹೂಳು ಸೇರುತ್ತಿದೆ.ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಕಬಿನಿಯ ಈ ಪ್ರಾಣಿಗಳ ಬೇಸಿಗೆ ವಾಸದ ಸ್ಥಳ ನಾಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ

.ಮರಗಳ್ಳತನ,ಕಳ್ಳ ಭೇಟೆ,ಜಾನುವಾರುಗಳಿಂದ ಇಲ್ಲಿನ ಕಾಡು ಪ್ರಾಣಿಗಳಿಗೆ ಹಬ್ಬುವ ರೋಗಗಳು,ಕಾಡ್ಗಿಚ್ಚು ಇಲ್ಲಿನ ಪ್ರಮುಖ ಸಮಸ್ಯೆಗಳು
 
.ಇತ್ತೀಚಿನ ದಿನಗಳಲ್ಲಿ ಆಹಾರ ದ ಸಮಸ್ಯೆಯಿಂದ ಇಲ್ಲಿನ ಆನೆಗಳು ಕಾಡು ಬಿಟ್ಟು ನಾಡಿನ ಕಡೆ ಮುಖ ಮಾಡುತ್ತಿವೆ

.ಈ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ಹಾಗು ಸ್ವಯಂ ಸೇವಾ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕಿದೆ.ಹೆಚ್ಚಿನ ಭದ್ರತೆಯನ್ನು ಇಲ್ಲಿ ಕಲ್ಪಿಸಬೇಕಿದೆ 

.ಮಾನವನ ಯಾವುದೇ ಚಟುವಟಿಕೆಗೆ ಇಲ್ಲಿ ಅವಕಾಶ ಕೊಡದೆ ,ಹೆಚ್ಚಿನ ಕಠಿಣ ಕಾನೂನನ್ನು ಜಾರಿಗೆ ತರುವ ಮೂಲಕ ಈ ಪ್ರದೇಶದ ಸಂರಕ್ಷಣೆ ಮಾಡಬೇಕಿದೆ 

.ಇಲ್ಲಿ ಪ್ರವಾಸಿಗರಿಗೆ ಸಫಾರಿ ವ್ಯವಸ್ಥೆ ಇದೆ (ದಿನಕ್ಕೆ 2 ಭಾರಿ) .ಆದರೆ ಪ್ರಾಣಿಗಳ mating ಹಾಗು ಮಳೆಗಾಲದಲ್ಲಿ ಸಫಾರಿ ಇರುವುದಿಲ್ಲ .ಸಂಜೆ 6 ರರಿಂದ ಬೆಳಗ್ಗೆ 6 ರ ವರೆಗೆ ಇಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ

.ನಾಗರಹೊಳೆ ನಮ್ಮ ಏಷಿಯಾ ಖಂಡದಲ್ಲೇ ಒಂದು ಅದ್ಭತ,ಸುಂದರ ರಾಷ್ಟ್ರೀಯ ಉದ್ಯಾನವನ.ಇದು ನಾಶವಾಗದೇ ಬೆಳೆಯಲಿ,ಇಲ್ಲಿನ ಪ್ರಾಣಿ ಪಕ್ಷಿ ಸಸ್ಯ ಸಂಕುಲಗಳ ಸಂತತಿ ಬೆಳೆದು ಉಳಿಯಲಿ ಎಂಬುದೇ ಪ್ರಕೃತಿ ಪ್ರಿಯರ ಆಶಯ

.ವಿ.ಸೂ-ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ದ ಬಗ್ಗೆ ತಿಳಿಸುವ ಒಂದು ಸುಂದರ ಮನಮೋಹಕ documentry -'Nagarahole ' tales from an indian jungle .ಇದು ಲಭ್ಯವಾದಲ್ಲಿ ಒಮ್ಮೆ ತಪ್ಪದೆ ನೋಡಿ 

ಮಾಹಿತಿ ಕೃಪೆ-wikipedia 

-ಪ್ರಕೃತಿಯನ್ನು ರಕ್ಷಿಸಿ-

No comments:

Post a Comment