-ಪ್ರಕೃತಿ PARADISE ನಲ್ಲಿ ಶತಕ-
.ಪ್ರಿಯ ಓದುಗ ಮಿತ್ರರೇ ನಿಮ್ಮ ಈ ಪ್ರಕೃತಿಯ RAGAT PARADISE ಗೆ ಈಗ 100 ಪೋಸ್ಟ್ ಗಳನ್ನು ಹೊಂದಿದ ಗರಿ

.ನನ್ನ ಈ ಬ್ಲಾಗ್ನಲ್ಲಿ ಕೆಲವೇ ತಿಂಗಳುಗಳ ಅವದಿಯಲ್ಲಿ 100 ಪೋಸ್ಟ್ ಬರೆದಿದ್ದೇನೆ ಎಂದರೆ ನನಗೆ ಒಮ್ಮೆಲೇ ಆಶ್ಚರ್ಯವಾಗುತ್ತೆ

.ಮೊದಲು ಬರೆಯಲು ಕುಳಿತಾಗ ವಿಷಯಗಳಿಗಾಗಿ ತಡವಡಿಸುತ್ತಿದ್ದೆ,ಕೇವಲ ಪ್ರಕೃತಿ ಬಗ್ಗೆ ಮಾತ್ರ ಲೇಖನವನ್ನು ಬರೆದು ಬ್ಲಾಗ್ Update ಮಾಡುವುದು ನನಗೆ ಮೊದಲು ಸುಲಭದ ಮಾತಾಗಿರಲಿಲ್ಲ .ಆದರೆ ಆ ಪ್ರಕೃತಿ ಮಾತೆಯೇ ನನ್ನ ಮನಸ್ಸಿನಲ್ಲಿ ವಿಷಯಗಳನ್ನು ಕರುಣಿಸಿ ಇಲ್ಲಿಯವರೆಗೆ ಪೋಸ್ಟ್ ಬರೆಯಲು ಸಹಕರಿಸಿದ್ದಾಳೆ ಎಂಬುದು ನನ್ನ ನಂಬಿಕೆ

.ಇದರ ಜೊತೆಗೆ ಈ ನನ್ನ ಬ್ಲಾಗ್ ಎಂಬ ಕಾಡಿನಲ್ಲಿ ಪೋಸ್ಟ್ ಎಂಬ ಮರಗಳಿಗೆ Comment ಎಂಬ ನೀರನ್ನು ಹಾಕಿ ಬೆಳಸಿದ್ದು ನೀವು..ನನ್ನ ಪ್ರಿಯ ಓದುಗ ಮಿತ್ರರು.ನಿಮ್ಮ ಅಭಿಮಾನಕ್ಕೆ ನಾನೆಂದೂ ಚಿರಋಣಿ

.ಹಾಗೆ ನೋಡಿದರೆ ನನ್ನ ಬ್ಲಾಗ್ ಪೋಸ್ಟ್ ಗಳಿಗೆ Comment ಗಳು ಕಡಿಮೆ ಎಂದೇ ಹೇಳಬಹುದು.ಇದಕ್ಕೆ ಜನರಿಗೆ ಪ್ರಕೃತಿಯ ಮೇಲೆ ಆಸಕ್ತಿ ಕಡಿಮೆ ಅಥವಾ ನಾನು ಬರೆಯುವ ಶ್ಯಲಿ ಅವರಿಗೆ ಹಿಡಿಸದೆ ಇದ್ದಿರಬಹುದು,ಬಟ್ ಅವುಗಳಿಗೆ ನಾನೆಂದು ತಲೆ ಕೆಡಿಸಿಕೊಂಡಿಲ್ಲ.ನನ್ನ ಬ್ಲಾಗ್ ಪೋಸ್ಟ್ ಓದುವ ಪ್ರಕೃತಿ ಬಗ್ಗೆ ಆಸಕ್ತಿ ಇಲ್ಲದ ಜನರಿಗೆ atleast ಅದನ್ನು ಓದಿದ ಮೇಲೆ ಪ್ರಕೃತಿ ಮೇಲೆ ಸ್ವಲ್ಪವಾದರೂ ಆಸಕ್ತಿ ,ಪ್ರೀತಿ ಮೂಡಿದರೆ ನನ್ನ ಪ್ರಯತ್ನ ಸಾರ್ಥಕ

.'I am not the best,But i am not like the rest' ಈ ವಾಕ್ಯವನ್ನು ನಂಬಿರುವವನು ನಾನು.so ನನ್ನ ಬ್ಲಾಗ್ ಕೊಡ ಅಷ್ಟೇ different ಆಗಿರಬೇಕೆಂಬುದೇ ನನ್ನ ಆಸೆ.ಇದು ಕೆಲವರಿಗೆ ಇಷ್ಟ ಆಗಬಹುದು,ಇಷ್ಟ ಆಗದೆಯೂ ಇರಬಹುದು .ಈ ಇಷ್ಟ ಪಡುವ ಜನರೇ ಈ ಬ್ಲಾಗಿನ ಆಸ್ತಿ ,ಅವರಿಗಾಗಿ i am always here

.ನನ್ನ ಬ್ಲಾಗಿನ ಓದುಗ ಮಿತ್ರರಿಗೂ,ಹೊಸ ಓದುಗರಿಗೆ ನನ್ನ ಪೋಸ್ಟ್ ಪರಿಚಯಿಸುವ ಕನ್ನಡ ಬ್ಲಾಗರ್ಸ್ ತಂಡಕ್ಕೆ ನನ್ನ ಹೃತ್ಪೂರ್ವಕ ವಂದನೆಗಳು 

.ನಿಮ್ಮ ಪ್ರೀತಿ ಪ್ರಕೃತಿಯ ಮೇಲೆ ಹಾಗು ನನ್ನ ಬ್ಲಾಗಿನ ಮೇಲೆ ಸದಾ ಇರಲೆಂದು ಆಶಿಸುತ್ತೇನೆ.........
ಇಂತಿ ನಿಮ್ಮ ಗೆಳೆಯ-ರಾಘು




.ವಿ ಸೂ-ಇಲ್ಲಿಯವರೆಗೆ RAGAT PARADISE ನಲ್ಲಿ ಪ್ರಕಟವಾದ ಎಲ್ಲಾ ಪೋಸ್ಟ್ ಗಳನ್ನು ಮುಂದಿನ ಪೋಸ್ಟ್ ನಲ್ಲಿ ಪಟ್ಟಿ ಮಾಡಿ ನಿಮ್ಮ ಮುಂದೆ ತರುತ್ತೇನೆ.ಅಲ್ಲಿಯವರೆಗೆ stay cool ......tc

-ಪ್ರಕೃತಿಯನ್ನು ರಕ್ಷಿಸಿ-

Comments

  1. ವಾಹ್ ರಾಘು!!! ಶತಕದ ಸಂಭ್ರಮಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಪ್ರಕೃತಿ ಕುರಿತಾದ ಲೇಖನಗಳು ನನಗಂತೂ ಬಲು ಇಷ್ಟ. ಜೊತೆಗೆ ಅದ್ಬುತ ಫೋಟೋಗಳು, ಉಪಯುಕ್ತ ಮಾಹಿತಿ ಎಲ್ಲವೂ ಸಂಗ್ರಹಯೋಗ್ಯವಾದವುಗಳು. ನಿಮ್ಮನ್ನು "ರಘು" ಎಂದು ಕರೆಯುತ್ತಿದ್ದುದಕ್ಕೆ ಕ್ಷಮೆ ಇರಲಿ.

    ReplyDelete
  2. ನಿಮ್ಮ ಪ್ರೀತಿ ಪೂರ್ವಕ ಮಾತುಗಳಿಗೆ ಧನ್ಯವಾದಗಳು ಸತ್ಯ ಸರ್...

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....