-ಸತ್ತು ಬಿದ್ದವು ಸಾವಿರಾರು ಪಕ್ಷಿಗಳು-
.ಅಂದು ಹೊಸ ವರ್ಷಾಚರಣೆಯ ಸಂಭ್ರಮ ಇಡೀ US ನಲ್ಲಿ ಮನೆ ಮಾಡಿತ್ತು ಅದೇ ರಾತ್ರಿ US ನ Arkansas ನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ red-winged blackbirdಗಳು  ಆಗಸದಿಂದ ಕೆಳಗೆ ಬಿದ್ದು ಪ್ರಾಣ ಬಿಟ್ಟಿದ್ದವು

.CNN ವರದಿಗಳ ಪ್ರಕಾರ ಸುಮಾರು 5 ,೦೦೦ ಪಕ್ಷಿಗಳು ಹೀಗೆ ಪ್ರಾಣ ಬಿಟ್ಟಿವೆ

.ಈ ಪಕ್ಷಿಗಳ ಸಾವು ಇನ್ನೂ ನಿಗೂಢವಾಗಿದೆ

.ಈ ಪಕ್ಷಿಗಳ ಸಾವಿನ ಬಗ್ಗೆ ಈಗಾಗಲೇ ಹಲವಾರು ತಜ್ಞರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.ಅವುಗಳಲ್ಲಿ ಕೆಲವನ್ನು ಇಲ್ಲಿ ಪೋಸ್ಟ್ ಮಾಡಿದ್ದೇನೆ

.'Karen Rowe ' ಪಕ್ಷಿ ತಜ್ಞರು Arkansas Game and Fish Commission ಇವರ ಪ್ರಕಾರ ಈ ಪಕ್ಷಿಗಳ ಸಾವಿಗೆ 'ಸಿಡಿಲು' ಕಾರಣವಾಗಿರಬಹುದು ಇವರ ಅಭಿಪ್ರಾಯಕ್ಕೆ ಪುಷ್ಟಿ ಕೊಡುವಂತೆ ಈ ರಾಜ್ಯದಲ್ಲಿ ಶುಕ್ರವಾರ ಬಲವಾದ ಸುಂಟರಗಾಳಿ ಬೀಸಿತ್ತು

.ಇನ್ನೂ ಹಲವರ ಪ್ರಕಾರ ಹೊಸ ವರ್ಷದ ಪ್ರಯುಕ್ತ ಸಿಡಿಸಲಾದ ಪಟಾಕಿಗಳ ಸದ್ದಿಗೆ ಹೆದರಿ ಇವುಗಳು ಪ್ರಾಣ ಬಿಟ್ಟಿರಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಈ ವಾದಕ್ಕೆ ಪುಷ್ಟಿ ಕೊಡುವಂತೆ ಇಲ್ಲಿನ ನಿವಾಸಿಗಳು ಹೇಳುವ ಪ್ರಕಾರ ಅಂದು ರಾತ್ರಿ ಪಟಾಕಿಗಳ ಸದ್ದು ಕೇಳಿದ ನಂತರ ಸ್ವಲ್ಪ ಸಮಯದಲ್ಲಿ ಪಕ್ಷಿಗಳು ಆಗಸದಿಂದ ಮಳೆಯಂತೆ ಬೀಳಲಾರಂಭಿಸಿದವು,ಅವುಗಳು ವಿಚಿತ್ರವಾಗಿ ಆಡಲಾರಂಭಿಸಿ ಒಂದಕ್ಕೊಂದು ಡಿಕ್ಕಿ ಹೊಡೆದು ಕೊಳ್ಳುತ್ತಿದ್ದವು.ಮನೆಯ ಗಾಜುಗಳಿಗೆ,ಕಿಟಕಿಗಳಿಗೆ,ಮರಗಳಿಗೆ ಕೆಲವು ಡಿಕ್ಕಿ ಹೊಡೆದು ಪ್ರಾಣ ಬಿಟ್ಟರೆ ಕೆಲವು ನೇರವಾಗಿ ನೆಲಕ್ಕೆ ಹೊಡೆದು ಪ್ರಾಣ ಬಿಟ್ಟಿವೆ

.ಇನ್ನೂ ಕೆಲವರ ಪ್ರಕಾರ ಈ ಪಕ್ಷಿಗಳ ಸಾವಿಗೆ ಕಾರಣ ವಿಷ .ಆದರೆ ಈ ವಾದವನ್ನು Beebe ಪೋಲಿಸ್ ಅಧಿಕಾರಿಗಳು ತಳ್ಳಿಹಾಕಿದ್ದಾರೆ.ಏಕೆಂದರೆ ಸತ್ತ ಪಕ್ಷಿಗಳನ್ನು ತಿಂದ ನಾಯಿ ಹಾಗು ಬೆಕ್ಕುಗಳಲ್ಲಿ ಯಾವುದೇ ವ್ಯತಿರಿಕ್ತವಾದ ಪರಿಣಾಮವಾಗಿಲ್ಲ

.ಇನ್ನೊಂದು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪಕ್ಷಿಗಳ ದೇಹಗಳ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ

.ಈಗಾಗಲೇ ಸತ್ತ ಪಕ್ಷಿಗಳ ದೇಹವನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿದೆ .necropsy ಯ ಮೂಲಕ ಇವುಗಳ ಸಾವಿನ ರಹಸ್ಯ ಭೇದಿಸಲು ವಿಜ್ಞಾನಿಗಳು ಪ್ರಯತ್ನ ಮಾಡುತ್ತಿದ್ದಾರೆ

.ಕಾರಣಗಳು ಏನೇ ಇರಬಹುದು ಆದರೆ ಸಾವಿರಾರು ಮುಗ್ದ ಪಕ್ಷಿಗಳ ಜೀವ ಹೊರಟು ಹೋಗಿದೆ 

.ಅಕಸ್ಮಾತ್ ಹೊಸ ವರ್ಷದ ಸಂಭ್ರಮಾಚರಣೆಯ ಸಮಯದಲ್ಲಿ ಸಿಡಿಸಿದ ಪಟಾಕಿಗಳ ಆರ್ಭಟಕ್ಕೆ ಈ ಪಕ್ಷಿಗಳ ಪ್ರಾಣ ಹೋಗಿದ್ದರೆ ನಿಜವಾಗಿಯೂ ಇದು  ಮಾನವನ ತೆವಲಿನಿಂದಾದ ದೊಡ್ಡ ದುರಂತವೇ ಸರಿ..... 


 info courtesy-BBC,CNN

-ಪ್ರಕೃತಿಯನ್ನು ಉಳಿಸಿ-

Comments

  1. tumba besara agta ide,
    mugdha jeevigala saalu tumbalaarada nashta alve?

    ReplyDelete
  2. khandita,mukha praanigala savige beleye illa......

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....