-ಸಾವಿನ ಕಾಡು-
.'ಸಾವಿನ ಕಾಡು'-ಹೌದು ಇದು ಅಕ್ಷರಶಃ ಅತಿಮಾನುಷ ಶಕ್ತಿಗಳಿಂದ ಕೂಡಿದ ಒಂದು ನೈಜ ಕಾಡಿನ ಕತೆ.ಈ ಸಾವಿನ ಕಾಡು ಇರುವುದು ಜಪಾನ್ ನಲ್ಲಿ
.ಈ ಭಯಾನಕ ಕಾಡಿನ ಹೆಸರು-Aokigahara
.ವಿಚಿತ್ರವೆಂದರೆ ಈ ಸ್ಥಳ ಆತ್ಮಹತ್ಯೆಗೆ ಪ್ರಸಿದ್ದಿ
.ಈ ಕಾಡು ಪ್ರಪಂಚದ ಎರಡನೆ ಪ್ರಸಿದ್ದವಾದ ಆತ್ಮಹತ್ಯೆ ಸ್ಥಳ.ಮೊದಲನೆಯದು San Francisco's Golden Gate Bridge
.2002 ನೆ ಇಸವಿಯಲ್ಲಿ ಈ ಪ್ರದೇಶದಲ್ಲಿ 78 ಸತ್ತ ಮನುಷ್ಯರ ದೇಹಗಳು ಸಿಕ್ಕಿವೆ
.ಮತ್ತೊಂದು ವಿಚಿತ್ರವೆಂದರೆ ಈ ಪ್ರದೇಶದಲ್ಲಿ ಕಾಡುಪ್ರಾಣಿಗಳು ತೀರ ಕಡಿಮೆ,ಇಲ್ಲವೆಂದೇ ಹೇಳಬಹುದು
.ಇಲ್ಲಿನ ಸತ್ಯ ತಿಳಿಯಲೋ ಅಥವಾ ಬೇರೆ ಬೇರೆ ಕಾರಣಗಳಿಂದ ಈ ಕಾಡನ್ನು ಪ್ರವೇಶ ಮಾಡಿದವರು ನಿಗೂಡವಾಗಿ ಕಣ್ಮರೆಯಾಗಿದ್ದಾರೆ
.1950 ರಿಂದ ಇಲ್ಲಿಯವರೆಗೆ 500 ಕ್ಕೂ ಹೆಚ್ಚು ಜನರು ಈ ಕಾಡಿನಲ್ಲಿ ಪ್ರಾಣ ಬಿಟ್ಟಿದ್ದಾರೆ
.ಅತಿಮಾನುಷ ಶಕ್ತಿಗಳು ಇಲ್ಲಿವೆ ಎಂದು ಹೇಳಲು ಹಲಾವಾರು ಪುರಾವೆಗಳು ವಿಜ್ಞಾನಿ ಗಳಿಗೆ ಸಿಕ್ಕಿವೆ
.ಇಲ್ಲಿನ ಜನರು ಹಗಲು ಹೊತ್ತಿನಲ್ಲಿ ಸಹ ಈ ಕಾಡನ್ನು ಪ್ರವೇಶಿಸಲು ಹೆದರುತ್ತಾರೆ
.2003 ರಲ್ಲಿ ಅತಿ ಹೆಚ್ಚು ಅಂದರೆ 100 ಜನರು ಇಲ್ಲಿ ಪ್ರಾಣ ಕಳೆದು ಕೊಂಡಿದ್ದಾರೆ
.ಇಲ್ಲಿನ ಸರ್ಕಾರ ಇಲ್ಲಿನ ಕೆಲವು ಪ್ರದೇಶಗಳನ್ನು ನಿರ್ಬಂದಿತ ಪ್ರದೇಶವೆಂದು ಘೋಷಣೆ ಮಾಡಿದೆ
.ಪ್ರತಿ ವರ್ಷ ಇಲ್ಲಿನ ಸರ್ಕಾರ ಪೋಲಿಸ್ ,ಪತ್ರಕರ್ತರು,ಹಾಗು ಸ್ವಯಂ ಸೇವಕರ ನೆರವಿನಿಂದ ಈ ಕಾಡಿನಲ್ಲಿ ಸತ್ತ ದೇಹಗಳ ಹುಡುಕಾಟ ನಡೆಸುತ್ತದೆ
.ಒಮ್ಮೆ ಇಲ್ಲಿನ ರಹಸ್ಯವನ್ನು ಭೇದಿಸಲು ಅಮೆರಿಕಾದ ವಿಜ್ಞಾನಿಗಳ ತಂಡ ಈ ಕಾಡಿನಲ್ಲಿ ಅತ್ಯಾಧುನಿಕ ಉಪಕರಣಗಳೊಂದಿಗೆ ಒಂದು ರಾತ್ರಿ ಕಳೆದಿತ್ತು .ಅವರಿಗೂ ಇಲ್ಲಿನ ಭೀಕರ ಅನುಭವಗಳಾಯಿತು ಆದರೆ ಇಲ್ಲಿನ ರಹಸ್ಯವನ್ನು ಭೇದಿಸಲಾಗಲಿಲ್ಲ
.ಆ ರಾತ್ರಿ ಇಲ್ಲಿ ಇವರಿಗೆ ಕೇಳಿದ ವಿಚಿತ್ರ ಶಬ್ದಗಳನ್ನು ನಂತರ ಕೂಲಂಕುಶವಾಗಿ ಪರಿಶೀಲನೆ ಮಾಡಿದಾಗ ಇವರು ಗಾಬರಿಗೊಳಗಾದರು.ಏಕೆಂದರೆ ಆ ಶಬ್ದಗಳ ವಿಸ್ಕೃತ ಅರ್ಥ 'GET LOST' 'GET LOST' ಎಂಬುದಾಗಿ ಇತ್ತು
.ಇಲ್ಲಿಗೆ ಭೇಟಿ ನೀಡಿದವರು ಹೇಳುವ ಪ್ರಕಾರ 'GPS 'ಗಳು ಸಹ ಇಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ
.ವಿಜ್ಞಾನ,ತಂತ್ರಜ್ಞಾನಗಳು ಮುಂದುವರಿದ ಈ ಕಾಲದಲ್ಲೂ ಸಹ Aokigahara ಕಾಡು ಎಲ್ಲದಕ್ಕೂ ಸವಾಲೆಸೆದು ನಿಂತಿದೆ
.ನಾವು ಎಷ್ಟೇ ಮುಂದುವರಿದರೂ ಕೂಡ ಪ್ರಕೃತಿಯ ಕೆಲವು ರಹಸ್ಯಗಳನ್ನು ಭೇದಿಸಲಾಗುವುದಿಲ್ಲ .ಅದಕ್ಕೆ ಈ Aokigahara ಕಾಡು ಒಂದು ಜೀವಂತ ಸಾಕ್ಷಿ
-IMAGE COURTESY-wiki,www.weirdasianews.com
Share this post with your friends
ಉತ್ತಮ ಲೇಖನ
ReplyDeleteಧನ್ಯವಾದಗಳು ಸುಬ್ರಮಣ್ಯ.....
ReplyDelete