-ಮಂಗಗಳ ಬಗ್ಗೆ ನಿಮಗೆಷ್ಟು ಗೊತ್ತು?
.'ಮಂಗಗಳು' ಮಾನವನಿಗೆ ಹತ್ತಿರದ ಪ್ರಾಣಿಗಳು
.ಇಂತಹ ಮಂಗಗಳ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ
.ಮಂಗಗಳು primate ಕುಟುಂಬಕ್ಕೆ ಸೇರಿದ ಪ್ರಾಣಿಗಳು

.ಸಾಧಾರಣವಾಗಿ ಇವುಗಳು ಯಾವಾಗಲೂ ಗುಂಪಿನಲ್ಲಿ ಇರುತ್ತವೆ
.ಈ ಮಂಗಗಳ primate ಕುಟುಂಬವನ್ನು 2 ವಿಧವಾಗಿ ವಿಂಗಡಿಸಲಾಗಿದೆ.1-New World Monkeys (ಇವುಗಳು ಮಧ್ಯ ಮತ್ತು ದಕ್ಷಿಣ ಅಮೇರಿಕಾದಲ್ಲಿ ಕಂಡುಬರುತ್ತವೆ) 2-Old World Monkeys (ಆಫ್ರಿಕಾ,ಏಷಿಯಾ,ಹಾಗು ಯೂರೋಪಿನ ಕೆಲವು)
.New World Monkey ಹಾಗು Old World Monkey ಇವುಗಳೆರಡರ ನಡುವಿನ ಮುಖ್ಯವಾದ ವ್ಯತ್ಯಾಸ ಅವುಗಳ ಮೂಗು (nose)

.New World Monkey ಯ ಮೂಗು ಚಪ್ಪಟೆ,ಹಾಗು ಅಗಲವಾಗಿರುತ್ತದೆ

.ಮಂಗಗಳಿಗೆ 'ತಾಳ್ಮೆ' ಅನ್ನುವುದು ಇಲ್ಲ

.ಕೆಲವು ಮಂಗಗಳು 35 KG ವರೆಗೆ ಬೆಳೆಯಬಲ್ಲವು

.ಕಾಡು.ಹುಲ್ಲುಗಾವಲು,ಗುಡ್ಡ ಪ್ರದೇಶ ಗಳಲ್ಲಿ ಇವು ಜೀವನ ನಡೆಸುತ್ತವೆ


.ಹಣ್ಣು,ಎಲೆ,ಹುಲ್ಲು (ಕೆಲವು),ಕೀಟಗಳು,ಜೇಡಗಳು ಇವುಗಳ ಆಹಾರ

.ಮಂಗಗಳ ಗುಂಪನ್ನು troop ಎಂದು ಕರೆಯುತ್ತಾರೆ
.ಈ ಭೂಮಿಯಲ್ಲಿ 125 ಜಾತಿಯ ಮಂಗಗಳನ್ನು ಗುರುತಿಸಲಾಗಿದೆ (ಇತ್ತೀಚಿಗೆ ಹೊಸ ಜಾತಿಯ ಮಂಗಗಳು ಪತ್ತೆಯಾಗಿವೆ )
.Squirrel Monkey -ಇದು ದಕ್ಷಿಣ-ಅಮೇರಿಕ ದಲ್ಲಿ ಹೆಚ್ಚಾಗಿ ಕಂಡುಬರುತ್ತದೆ
.ಮಂಗಗಳು ಬಹಳ ಬೇಗ ಕೋಪಕ್ಕೆ ಒಳಗಾಗುತ್ತವೆ
.ಅತ್ಯಂತ ಜೋರಾಗಿ ಕೂಗುವ ಮಂಗ Howler ಎಂಬ ಮಂಗ.ಇದರ ಕೂಗು 10 ಮೈಲಿಗಳವರೆಗೆ ಕೇಳುತ್ತದೆ
.Howler monkey ದಿನದ 80 % ಸಮಯವನ್ನು ವಿಶ್ರಾಂತಿಯಲ್ಲೇ ಕಳೆಯುತ್ತದೆ
.Rhesus Macaque ಹಾಗು Green Monkeys ಇವುಗಳನ್ನು ಹೆಚ್ಚಾಗಿ ಪ್ರಯೋಗಕ್ಕೆ ಉಪಯೋಗಿಸುತ್ತಾರೆ
.'Pygmy Marmoset ' ಇದು ಪ್ರಪಂಚದ ಅತ್ಯಂತ ಸಣ್ಣ ಮಂಗ (4 ರಿಂದ 6 inches ಇರುತ್ತದೆ)
.'male Mandrill ' ಇದು ಅತ್ಯಂತ ದೊಡ್ಡ ಮಂಗ (35 kg ಬೆಳೆಯಬಲ್ಲವು)
.ಮಂಗಗಳು ಬಾಹ್ಯಾಕಾಶಕ್ಕೂ ಹೋಗಿ ಬಂದಿದ್ದಾವೆ.ಬಾಹ್ಯಾಕಾಶಕ್ಕೆ ಹೋಗಿ ಬಂದ ಪ್ರಥಮ ಮಂಗನ ಹೆಸರು Albert II
.ಮಂಗಗಳಿಗೂ ಮನುಷ್ಯರಿಗೆ ಬರುವ tuberculosis,hepatitis ಖಾಯಿಲೆಗಳು ಬರುತ್ತದೆ
.ಮಂಗಗಳಲ್ಲೂ 'ನಿಶಾಚರಿ' ಮಂಗಗಳು ಕೆಲವೆಡೆ ಕಂಡು ಬರುತ್ತದೆ
.Old World Monkey ಗಳಲ್ಲಿ 32 ಹಲ್ಲು ಕಂಡುಬಂದರೆ,New World Monkey ಗಳಲ್ಲಿ 36 ಹಲ್ಲುಗಳು ಕಂಡುಬರುತ್ತದೆ
.'squirrel monkey' 20 ವಿಧಗಳಲ್ಲಿ ಕೂಗಬಲ್ಲದು
.US ಒಂದರಲ್ಲೇ 15,೦೦೦ ಮಂಗಗಳನ್ನು ಮನೆಯಲ್ಲೇ pet ಗಳಾಗಿ ಸಾಕಿದ್ದಾರೆ
.white-faced capuchin ಎಂಬ ಮಂಗ 50 ವರ್ಷಕ್ಕಿಂತ ಜಾಸ್ತಿ ಬದುಕಬಲ್ಲದು
.ಗಿಡಗ,ಹದ್ದು ಹಾಗು ಮನುಷ್ಯರು ಮಂಗಗಳ ಪ್ರಮುಖ ಶತ್ರುಗಳು
.ಮಂಗಗಳ ಮೆದುಳನ್ನು ದಕ್ಷಿಣ ಏಷಿಯಾ,ಚೀನಾ ಹಾಗು ಆಫ್ರಿಕಾಗಳಲ್ಲಿ ಆಹಾರವಾಗಿ ಬಳಸುತ್ತಾರೆ
.ಇತ್ತೀಚಿನ ದಿನಗಳಲ್ಲಿ ಮಂಗಗಳಿಗೆ ಕಾಡುತ್ತಿರುವ ದೊಡ್ಡ ಸಮಸ್ಯೆ 'ಅವುಗಳ ಆವಾಸ ಸ್ಥಾನ' (ಅಂದರೆ ಅವುಗಳು ವಾಸಿಸುವ ಪ್ರದೇಶ) ದ ನಾಶ
.ಅವುಗಳ ಆವಾಸ ಸ್ಥಾನದ ನಾಶದಿಂದಾಗಿ ಇಂದು ಅವುಗಳು ಮನುಷ್ಯರು ವಾಸ ಮಾಡುವ ಸ್ಥಳಗಳತ್ತ ಮುಖ ಮಾಡಿವೆ

.ಕಾಡುಗಳಲ್ಲಿ ಸ್ವಚ್ಚಂದವಾಗಿ ಜೀವನ ನಡೆಸುತ್ತಿದ್ದ ಮಂಗಗಳ ಭವಿಷ್ಯ ಇಂದು ಮಾನವನಿಂದಾಗಿ ಡೋಲಾಯಮಾನವಾಗಿದೆ
.ಪ್ರಕೃತಿಯಲ್ಲಿನ ಸಮತೋಲನವನ್ನು ಕಾಪಾಡುವಲ್ಲಿ ಮಂಗಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ
.ಅಂತಹ ಮಂಗಗಳ ಜೀವನಕ್ಕೆ ಕುತ್ತು ಬಂದರೆ 'ಪ್ರಕೃತಿಯಲ್ಲಿನ ಸಮತೋಲನ' ವ್ಯತ್ಯಾಸವಾಗಿ ಅದು ಮುಂದೆ ಉಳಿದ ಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ
.'ಮಂಗಗಳು'-ಪ್ರಕೃತಿಯ ಸುಂದರ,ಕುತೂಹಲಕಾರಿ ಜೀವಿಗಳು.ಅವುಗಳನ್ನು ರಕ್ಷಿಸುವುದು ಮಾನವನ ಕರ್ತವ್ಯ

-ಬದುಕಿ,ಬದುಕಲು ಬಿಡಿ-ಪ್ರಕೃತಿಯನ್ನು ಉಳಿಸಿ-


Bookmark and Share


Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....