-ರುದ್ರ ರಮಣೀಯ ಪ್ರಕೃತಿ-

.ನೀವು ಜಲಪಾತವನ್ನು ನೋಡಿರುತ್ತೀರಿ.ಆದರೆ ಬೆಂಕಿ ತರಹದ ಜಲಪಾತವನ್ನು ನೋಡಿದ್ದೀರಾ?ನೋಡಿಲ್ಲವೆಂದಾದರೆ ನಮ್ಮ ಈ ಪೋಸ್ಟ್ನಲ್ಲಿ ನೋಡಿ
.ಈ ಪ್ರಸಿದ್ದ ಜಲಪಾತವಿರುವುದು Yosemite National Park, California, USA ನಲ್ಲಿ

.ಇದನ್ನು ಬೆಂಕಿ ಜಲಪಾತವೆಂದು ಸಹ ಕರೆಯುತ್ತಾರೆ


.ಸೂರ್ಯನ ಕಿರಣಗಳು ಈ ಜಲಪಾತದ ೧ ಭಾಗಕ್ಕೆ ಬಿದ್ದಾಗ ಈ ಜಲಪಾತವು ರುದ್ರ ರಮಣೀಯವಾಗಿ ಕಾಣುತ್ತದೆ

.ಆದರೆ ಈ ಸುಂದರ ಘಟನೆಯನ್ನು ವರ್ಷದ ಎಲ್ಲಾ ಸಮಯದಲ್ಲೂ ನೋಡಲಾಗುವುದಿಲ್ಲ

.ಫೆಬ್ರವರಿ ತಿಂಗಳಿನ ಕೊನೆಯ ದಿನಗಳಲ್ಲಿ ಮಾತ್ರ ಈ ಜಲಪಾತದಲ್ಲಿ ಸಂಭವಿಸುವ ಈ ವಿಚಿತ್ರವನ್ನು ನೋಡಬಹುದಾಗಿದೆ

.ಕೆಳಗಿನ ಚಿತ್ರಗಳಲ್ಲಿ ನೀವು ನೋಡಬಹುದು.ಈ ಜಲಪಾತವು ಹಿಮದ ಕರಗುವಿಕೆಯಿಂದ ಉಂಟಾಗಿರುವುದು

.ಡಿಸೆಂಬರ್ ಹಾಗು ಜನವರಿ ಸಮಯದಲ್ಲಿ ಇಲ್ಲಿನ ಹಿಮ ಕರಗಿ ಈ ಜಲಪಾತ ಉಂಟಾಗುತ್ತದೆ

.ಫೆಬ್ರವರಿ ತಿಂಗಳ ಕೊನೆಯ ದಿನಗಳಲ್ಲಿ ಸೂರ್ಯನ ಕಿರಣಗಳು ಈ ಜಲಪಾತದ ಒಂದು ನಿರ್ದಿಷ್ಟ ಜಾಗಕ್ಕೆ ಬಿದ್ದು ಈ ತರಹದ ರೂಪವನ್ನು ಜಲಪಾತಕ್ಕೆ ನೀಡುತ್ತದೆ

.ಈ ಪ್ರಕೃತಿಯ ಅದ್ಬುತವಾದ ಸನ್ನಿವೇಶವನ್ನು ಸೆರೆಹಿಡಿಯಲು ಛಾಯಾಗ್ರಾಹಕರು ವರ್ಷವೆಲ್ಲ ಶ್ರಮ ಪಟ್ಟಿರುತ್ತಾರೆ

.ಆದರೂ ಕೆಲವು ಸಮಯ ಮೋಡ ಹಾಗು ಅಲ್ಲಿನ ಹವಾಮಾನ ವ್ಯಪರೀತ್ಯದಿಂದ ವರ್ಷವೆಲ್ಲಾ ಕಾದರು ಈ ಅದ್ಭುತವನ್ನು ನೋಡಲಾಗುವುದಿಲ್ಲ

.ಈ ಪ್ರಕೃತಿಯ ವಿಚಿತ್ರವನ್ನು ನೋಡಲು ಅದೃಷ್ಟ ಇರಬೇಕು..

.ಎಷ್ಟು ಸುಂದರವಲ್ಲವೇ ಪ್ರಕೃತಿಯ ಈ ವಿಚಿತ್ರಗಳು..................



Share this post with your friends


Bookmark and Share

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....