-ನಮ್ಮ ರಂಗಣ್ಣ ,ನನ್ನ ರಾಜಕೀಯ-
.ನಮಸ್ಕಾರ ನನ್ನ ಬ್ಲಾಗ್ ಓದುಗರಿಗೆ ,ನಾನು ಇಂದಿನ ಪೋಸ್ಟ್ ನಲ್ಲಿ ಪ್ರಕೃತಿ ಬಗ್ಗೆ ಬರೆಯದಿದ್ದರೂ ಪ್ರಕೃತಿ ನಮಗೆ ಕೊಟ್ಟಿರುವ ಒಬ್ಬರು ಗ್ರೇಟ್ ವ್ಯಕ್ತಿ ಬಗ್ಗೆ ಬರೆಯುತ್ತಿದ್ದೇನೆ .ಅವರೇ ನಮ್ಮ ರಂಗನಾಥ್.h.r

.ಇವರು ಸುವರ್ಣ ನ್ಯೂಸ್ 24 *7 ಮುಖ್ಯಸ್ತರು.ಅದಕ್ಕಿಂತ ಹೆಚ್ಚಾಗಿ ಇವರು ಸಮಾಜದ ಬಗ್ಗೆ ಕಾಳಜಿ ಇರುವ ಒಬ್ಬ ಒಳ್ಳೆಯ ವ್ಯಕ್ತಿ

.ನಾನು ಮೊದಲು ರಾಜಕೀಯ,ರಾಜಕಾರಣಿಗಳ ವಿಚಾರ ಅಂದ್ರೆ ಅಸಡ್ಡೆ ಮಾಡ್ತಾ ಇದ್ದೆ , ಆದರೆ ರಾಜಕೀಯದ ಬಗ್ಗೆ ನನಗೆ ಆಸಕ್ತಿ ಮೂಡಿಸಿದ್ದು ನಮ್ಮ ರಂಗನಾಥ್ ರವರ ಮಾತುಗಳು

.ಯಾವ ಪಕ್ಷಕ್ಕೂ ಸಪೋರ್ಟ್ ಮಾಡದೆ ಎಲ್ಲಾ ರಾಜಕಾರಣಿಗಳನ್ನು ತಮ್ಮ ಮಾತುಗಳಿಂದ ಒಂದು ಕ್ಷಣ ದಂಗು ಬಡಿಸುವ ರಂಗಣ್ಣನ ಬುದ್ದಿವಂತಿಕೆ ಹಿಮಾಲಯ ಶಿಖರಗಲಿಗಿಂತ ಎತ್ತರದ್ದು

.ಸುಮ್ಮನೆ ನಿಮ್ಮನ್ನು ಹೊಗಳಲು ಈ ಮಾತುಗಳನ್ನು ಹೇಳುತ್ತಿಲ್ಲ ರಂಗಣ್ಣ.ಈ ಕಾಲದಲ್ಲಿ ಸಮಾಜ ಉದ್ದಾರ ಮಾಡ್ತಿವಿ ಅಂತ ಬರೀ ಪೊಳ್ಳು ಹೊಡ್ಕೊಂಡು ತಿರ್ಗಾಡೋ ಜನರೇ ಹೆಚ್ಚು.ಅಂತದ್ರಲ್ಲಿ ಮೀಡಿಯಾ ದ ಮೂಲಕ ಸಮಾಜವನ್ನು ಒಳ್ಳೆ ದಾರಿಗೆ ತರುವಲ್ಲಿ ನಿಮ್ಮ ಪಾತ್ರ ಪ್ರಮುಖವಾದದ್ದು

.ಬೆಂಗಳೂರು ಮಳೆಯಲ್ಲಿ ತೇಲುತ್ತಿದ್ದಾಗ ನೀವು ಅಲ್ಲಿನ ಜನರ ಕಷ್ಟಗಳಿಗೆ ನಿಮ್ಮ ವಾಹಿನಿಯ ಮೂಲಕ ಸಹಾಯ ಮಾಡಿದ್ದಾಗಿರಬಹುದು,ಅಥವಾ ನಮ್ಮ ರಾಜಕಾರಣಿಗಳ ಮಕ್ಕಳಾಟಗಳನ್ನೂ ಜನರಿಗೆ ತೋರಿಸಿ ಅವರಿಗೆ ರಾಜಕಾರಣಿಗಳ ಬಗ್ಗೆ ಜಾಗೃತಿ ಮೂಡುಸುತ್ತಿರುವ ಕೆಲಸಗಳಾಗಿರಬಹುದು,ಎಲ್ಲವೂ ಅದ್ಭುತ

.ಎಲ್ಲದಕ್ಕಿಂತ ಹೆಚ್ಚಾಗಿ 'ಜುಗಲ್ ಬಂದಿ' ಯಲ್ಲಿ ನೀವು ಗಲ್ಲಗಳಿಗೆ ಕೈ ಇಟ್ಟುಕೊಂಡು ಕುಳಿತುಕೊಂಡು ರಾಜಕಾರಣಿಗಳಿಗೆ ಮಾತಿನ ಬಾಣಗಳನ್ನು ಬಿಡುವ ಪರಿ ಅದು ನಿಜಕ್ಕೂ ಅದ್ಭುತ

.ಅದೂ ನಿಮ್ಮ ಜೊತೆಗೆ ನಮ್ಮ ಮಾತಿನ ಮಲ್ಲ ರಂಗನಾಥ್ ಭಾರದ್ವಾಜ್ ಸೇರಿ ಬಿಟ್ಟರಂತೂ ಮುಗಿದೇ ಹೋಯ್ತು ನಿಮ್ಮಿಬ್ಬರ 'ಜುಗಲ್ ಬಂದಿ ' ಕೇಳಲು ಯೇನೋ ಒಂತರಾ ಗಮ್ಮತ್ತು


.ರಂಗಣ್ಣ ಮೊನ್ನೆ ನಿಮ್ಮ 'ಪಬ್ಲಿಕ್ ವಾಯ್ಸ್ ' ಕಾರ್ಯಕ್ರಮಕ್ಕೆ ಕಾಲ್ ಮಾಡಿ ನಿಮ್ಮ ಜೊತೆ ಮಾತಾಡಬೇಕು ಅನ್ಕೊಂಡೆ,but ಸಾಧ್ಯವಾಗಲಿಲ್ಲ

.so ಅವತ್ತು ನಿಮ್ ಜೊತೆ ಮಾತಾಡಬೇಕು ಅಂತ ಅನ್ಕೊಂಡಿದ್ದ ವಿಚಾರಗಳನ್ನು ಇಲ್ಲಿ ಬರಿತ ಇದೀನಿ

.ಮೊನ್ನೆ ನೀವು ಕೇಳ್ತಾ ಇದ್ರಿ ನಮ್ಮ ರಾಜ್ಯದ ರಾಜ್ಯಕೀಯವನ್ನು ಹೇಗೆ ಸರಿ ಮಾಡಬಹುದು ಎಂದು.ನಿಮ್ಮ ಆ ಪ್ರಶ್ನೆಗೆ ನನ್ನದೇ ಆದ ಕೆಲವು ಅನಿಸಿಕೆಗಳನ್ನು ಬರೆಯುತ್ತಿದ್ದೇನೆ

.ಗೌರೀಶ್ ಅವತ್ತು ಹೇಳ್ತಾ ಇದ್ರು ನಾವು ತರಕಾರಿ ತಗೊಬೇಕಾದ್ರೆ ನೂರು ಸಲ ನೋಡಿ ತಗೋತಿವಿ ಆದರೆ ರಾಜಕಾರಣಿಗಳಿಗೆ ಓಟು ಹಾಕುವಾಗ ಯಾಕೆ ನೋಡಿ ಹಾಕುವುದಿಲ್ಲ ಎಂದು

.ಆದರೆ ರಂಗಣ್ಣ ,ಓಟು ಕೇಳಲು ಬರುವವರೆಲ್ಲಾ ಕೊಳೆತು ಹೋದ ತರ್ಕಾರಿಗಳಾದಾಗ ಯಾರಿಗೆ ಓಟು ಹಾಕೋದು ?

.ಇದನೆಲ್ಲ ನೋಡಿ ಬೇಸತ್ತು ನಾವು ಯುವಕರು ಎಲೆಕ್ಷನ್ ಗೆ ನಿಲ್ಲೋಣ ಅಂದ್ರೆ ಅಲ್ಲೂ ಕಷ್ಟ .ಏಕೆಂದರೆ ನಾವು ಖರ್ಚು ಮಾಡೋ ದುಡ್ಡಿಗೆ ನಮ್ಮೂರಿನ 4 ಓಟು ಬರಬಹುದೇ ವಿನಃ ಹೆಚ್ಚಿನದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ

.ಹಿಂದಿಯಲ್ಲಿ 'ನಾಯಕ್ ' ಅನ್ನೋ 1 ಸಿನಿಮಾ ಇದೆ.ಅದನ್ನು ನೋಡಿದ ಮೇಲೆ ಯಾವುದೇ ಯುವಕನಾದರು ನಾನು 1 ಸಲ cm ಆಗಬಾರದಾ ಅಂತ ಅನ್ಕೊತಾರೆ

.ಹಾಗೇನೆ ಈ ರಾಜಕಾರಣಿಗಳು ನಮಗೆ ಕೊಡಲಿ 2 ದಿನದ ರಾಜ್ಯದ ಅಧಿಕಾರ.ನಾವು ತೋರಿಸುತ್ತಿವಿ ಇವರಿಗೆ ರಾಜ್ಯಭಾರ ಹೇಗೆ ಮಾಡೋದು ಅಂತ

.ಇಂದಿನ ಜನತೆ ಬರೀ ರಾಜಕೀಯ ಹೊಲಸು.ಹೊಲಸು ಅಂತಾರೆ ವಿನಃ ಆ ಹೊಲಸನ್ನು ಸರಿ ಮಾಡೋ ಶಕ್ತಿ ನಮ್ಮಲಿದೆ ಎಂದು ತಿಳಿಯುವುದಿಲ್ಲ

.ರಂಗಣ್ಣ ನಿಮ್ಮಂತಹ ಗುರು,ಹಾಗು ಆರ್ಥಿಕವಾಗಿ ಸಹಾಯ ಮಾಡಲು ಯಾರಾದರು ಸಿದ್ದರಿದ್ದರೆ ಖಂಡಿತ ಇಂದಿನ ಎಷ್ಟೂ ಬಿಸಿ ರಕ್ತದ ಯುವಕರು ರಾಜಕೀಯಕ್ಕೆ ದುಮುಕಲು ಸಿದ್ದರಿದ್ದಾರೆ
.ಇವೆಲ್ಲ ಪ್ರಯತ್ನಗಳನ್ನೂ ಮೀರಿ ಕೊನೆಯಲ್ಲಿ ಇಂದಿನ ರಾಜಕಾರಣದ ಬಗ್ಗೆ ಹೇಳುವುದಾದರೆ ಸಂತೋಷ್ ಹೆಗ್ಡೆ ಹೇಳಿದಂತೆ ಎಲ್ಲದಕ್ಕೂ ಒಂದು ಕೊನೆ ಇರತ್ತೆ

.ಅದು ಮುಗಿದ ಮೇಲೆ ಎಲ್ಲಾ ತಾನಾಗಿಯೇ ಸರಿ ಆಗುತ್ತದೆ ಎಂದು.ನಮಗಿರುವ ಕೊನೆಯ ಆಶಾಭಾವನೆ ಅದೊಂದೆ

.anyway ರಂಗಣ್ಣ ತುಂಬಾ ಮಾತದ್ಬಿಟ್ಟೆ.ಏನ್ ಮಾಡೋದು ಹೇಳಿ ಯಾವುದಕ್ಕೇ ಬರ ಬಂದರೂ ಮಾತಿಗೆ ಬರ ಬರಲ್ಲ

.ಕೊನೆಯದಾಗಿ ರಂಗಣ್ಣ ಕುಲಗೆಟ್ಟು ಹೋಗಿರುವ ರಾಜಕಾರಣದ ಬಗ್ಗೆ ನಮ್ಮಲ್ಲಿ ಜಾಗೃತಿ ಮೂಡಿಸುವ ನಿಮ್ಮ ಹಾಗು ನಿಮ್ಮ ಸುವರ್ಣ ನ್ಯೂಸ್ 24 *7 ಗೆ ಒಳ್ಳೆಯದಾಗಲಿ ಅಂತ ನಮ್ಮ RAGAT PARADISE ಹಾರಯಿಸುತ್ತದೆ

.ಹಾಗೆಯೇ ನಮ್ಮ ಮಾತಿನ ಮಲ್ಲರಾದ ರಂಗನಾಥ್ ಭರದ್ವಾಜ್,ಗೌರೀಶ್ ,ಹಮಿದ್ ಗೂ ಕೂಡ ನಮ್ಮ tanx

.ನಿಮ್ಮ ಜೊತೆ ನಾವಿದ್ದೇವೆ ರಂಗಣ್ಣ ......

.ಪ್ರಿಯ ಓದುಗರೇ ನಾನು ಈ ಪೋಸ್ಟ್ನಲ್ಲಿ ಏನೆ ತಪ್ಪು ಮಾತಾಡಿದ್ದರೆ ದಯವಿಟ್ಟು ಕ್ಷಮೆ ಇರಲಿ........

.ವಿ ಸೂ-ಫೇಸ್ ಬುಕ್ ನಲ್ಲಿ ರಂಗಣ್ಣ ಅವರಿಗಾಗಿ ಒಂದು community ತೆರೆದಿದ್ದೇನೆ.ನೀವು ರಂಗಣ್ಣನ ಫ್ಯಾನ್ ಆಗಿದ್ದರೆ ಬನ್ನಿ join ಆಗಿ ,ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.JOIN ಆಗಲು ಇಲ್ಲಿ ಕ್ಲಿಕ್ ಮಾಡಿ



Bookmark and Share


Comments

  1. ತುಂಬಾ ಚೆನ್ನಾಗಿ ಬರೆದಿದ್ದೀರಿ.

    Thank U..

    ReplyDelete
  2. ತುಂಬಾ ಚೆನ್ನಾಗಿ ಬರೆದಿದ್ದೀರಿ.

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....