-ಹೆಪ್ಪುಗಟ್ಟಿಸುವ ಚಳಿಯಲ್ಲಿ ಯುರೋಪ್-
.ಉತ್ತರ ಯುರೋಪ್ ಜನ ಈಗ ಚಳಿಯಲ್ಲಿ ಸಿಕ್ಕಿ ಅಕ್ಷರಶಃ ತತ್ತರಿಸಿ ಹೋಗುತ್ತಿದ್ದಾರೆ.ಹಿಂದೆಂದೂ ಕಂಡು ಕೇಳರಿಯದಂತಹ ಚಳಿ ಈಗ ಉತ್ತರ ಯುರೋಪ್ ನಲ್ಲಿ
.ನಮ್ಮಲ್ಲಿ ಮಳೆ ಬಿದ್ದ ಹಾಗೆ ಹಿಮ ಬೀಳುತ್ತಿದೆ ಅಲ್ಲಿ
.England,Switzerland,France ಮುಂತಾದ ಯುರೋಪ್ ದೇಶಗಳಲ್ಲಿ ಈಗ ಚಳಿಯದ್ದೇ ಕಾರುಬಾರು
.ವಿಮಾನ ನಿಲ್ದಾಣಗಳು ಬಂದ್ ಆಗಿ ಕುಳಿತಿವೆ.ವಾಹನ ಸವಾರರಿಗಂತೂ ರಸ್ತೆಯಲ್ಲಿ ಚಲಿಸುವುದೇ ಕಷ್ಟವಾಗಿ ಈಗಾಗಲೇ ನೂರಾರು ಅಪಘಾತಗಳಾಗಿವೆ
.BBC ಮೂಲಗಳ ಪ್ರಕಾರ ಈಗಾಗಲೇ ಪೋಲಂಡ್ ನಲ್ಲಿ 8 ಜನ ಕೊರೆಯುವ ಚಳಿಗೆ ಪ್ರಾಣ ಬಿಟ್ಟಿದ್ದಾರೆ
.ಪೋಲಂಡ್ ನಲ್ಲಿ ದಾಖಲಾದ temperature ಎಷ್ಟು ಗೊತ್ತೇ? -20 c
.ನಾವು ಇಲ್ಲಿ 33 c ಕ್ಕಿಂತ ಮೇಲೆ ಹೋದರೆ ac,ಫ್ಯಾನ್ ಗಳಿಗೆ ಮೊರೆ ಹೋಗುತ್ತೇವೆ .20 c ಕ್ಕಿಂತ ಕೆಳಗೆ ಇಳಿದರೆ ಮೈಕೈಗೆಲ್ಲಾ ಬಟ್ಟೆ ಸುತ್ತಿಕೊಳ್ಳುತ್ತೇವೆ.ಅಂತಹದರಲ್ಲಿ -20 c ನಲ್ಲಿ ಅಲ್ಲಿನ ಜನರ ಪರಿಸ್ಥಿತಿ ಹೇಗಿರಬಹುದು ಒಮ್ಮೆ ಯೋಚಿಸಿ
.ಇನ್ನು ರಷ್ಯಾದ ಪರಿಸ್ಥಿತಿ ಹೇಳತೀರದು.ಮೊನ್ನೆ ಸೋಮವಾರ ಅಲ್ಲಿನ ಯಕುಟಿಯಾದ ರಾಜಧಾನಿ ಯಕುಟ್ಸಾಕ್ ನಲ್ಲಿ ತಾಪಮಾನ -40 c ಗೆ ಕುಸಿದಿತ್ತು
.ಇನ್ನು ರಷ್ಯಾದ ರಾಜ್ಯಧಾನಿ Moscow ದಲ್ಲಿ ನಿನ್ನೆ (1 -12-2010 ) ದಾಖಲಾದ ತಾಪಮಾನ - 23 .6 c (1931 ರಿಂದ ಈಚೆಗೆ ದಾಖಲಾದ ಅತೀ ಕನಿಷ್ಟ ತಾಪಮಾನ)
. ಬ್ರಿಟನ್ ನಲ್ಲಿ ಈಗಾಗಲೇ ಸಾವಿರಾರು ಶಾಲೆಗಳು ಮುಚಿದ್ದು ಜನ ಜೀವನ ಅಸ್ಥವ್ಯಸ್ತ ವಾಗಿದೆ
.ಫ್ರಾನ್ಸ್ ನ ಹಲಾವಾರು ನಗರಗಳು freeze ಆಗಿ ಬಿಟ್ಟಿವೆ
.ಇನ್ನು ಜರ್ಮನಿ ಯದ್ದು ಇದೇ ಕತೆ.ಅಲ್ಲಿನ ವರದಿಗಳ ಪ್ರಕಾರ -18 c ಕನಿಷ್ಟ ತಾಪಮಾನ ದಾಖಲಾಗಿದೆ
.ಜಗತ್ತಿನ ಅತ್ಯಂತ ತಂಪು ಪ್ರದೇಶವೆಂದು ಖ್ಯಾತಿ ಪಡೆದಿರುವ ಒಮೈಕಾನ್ ಹಳ್ಳಿಯಲ್ಲಿ ಅತ್ಯಂತ ಕನಿಷ್ಟ -54 c ತಾಪಮಾನ ದಾಖಲಾಗಿದೆ
.ಈ ಮರಗಟ್ಟುವ ಚಳಿ ಇನ್ನು ಕೆಲವು ದಿನ ಹೀಗೆ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ಈಗಾಗಲೇ ಹೇಳಿದ್ದಾರೆ
.ಇದು ಚಳಿಗಾಲದಲ್ಲಿ ಮಾಮೂಲು ಬಿಡಿ ಎಂದು ನೀವು ಹೇಳಬಹುದು.ಆದರೆ ಗಮನಿಸಿ ಈಗ ಅಲ್ಲಿ ಬೀಳುತ್ತಿರುವ ಹಿಮ,ಅಲ್ಲಿನ ಚಳಿ ಹಿಂದಿನ ದಾಖಲೆಗಳನ್ನು ಮೀರುತ್ತಿದೆ.ನಾನು ಈ ಪೋಸ್ಟ್ ಬರೆಯುವ ಹೊತ್ತಿಗಿನ ಮಾಹಿತಿಯನ್ನಷ್ಟೇ ಇಲ್ಲಿ ತಿಳಿಸಿದ್ದೇನೆ.ಇದು ಮುಂದೆ ಇನ್ನೂ ಭೀಕರ ರೂಪ ಪಡೆಯಲೂಬಹುದು ಅಥವಾ ಕಡಿಮೆಯಾಗಬಹುದು.ಒಟ್ಟಿನಲ್ಲಿ ಪ್ರಕೃತಿಯ ಮುನಿಸು ಒಂದೊಂದಾಗಿ ಪ್ರಪಂಚಕ್ಕೆ ಅಪ್ಪಳಿಸುತ್ತಿದೆ
.ನಮ್ಮ ದೇಶದಲ್ಲಿ ಇಂತಹ ಕೊರೆಯುವ ಚಳಿ ಇದುವರೆಗೂ ದಾಖಲಾಗಿಲ್ಲ (ಈಗ ಯುರೋಪ್ ನಲ್ಲಿ ದಾಖಲಾದಷ್ಟು).ನಿಮಗೆ ನೆನಪಿರಬಹುದು ಹಿಂದಿನ ವರ್ಷ ದೆಹಲಿಯಲ್ಲಿ ತಾಪಮಾನ 10 c ಗಿಂತ ಕಡಿಮೆ ಹೋಗಿ ಇಡೀ ರಾಜ್ಯಧಾನಿಯೇ ತತ್ತರಿಸಿ ಹೋಗಿತ್ತು
.ನಾವು ಭಾರತದಲ್ಲಿ ಪ್ರವಾಹ,ಭರ ದಂತಹ ಪ್ರಕೃತಿಯ ವಿಕೋಪಗಳನ್ನು ಹೊರತುಪಡಿಸಿ ಇಂತಹ ರಾಕ್ಷಸ ಚಳಿ,ಹಿಮಪಾತ ಮುಂತಾದವುಗಳು ಕಡಿಮೆಯೆಂದೇ ಹೇಳಬಹುದು
.ಆದರೆ ಯಾರಿಗೆ ಗೊತ್ತು ಮುಂದೊಂದು ದಿನ ನಮ್ಮ ಊರಿನಲ್ಲೂ ಇಂತಹ ಘಟನೆ ಸಂಭವಿಸಿದರೂ ಆಶ್ಚರ್ಯ ಪಡಬೇಕಿಲ್ಲ
.ಒಂದೆಡೆ ವಿಜ್ಞಾನಿಗಳು ಈಗಿನ ವಾಯು ಮಾಲಿನ್ಯ ಹೀಗೆ ಮುಂದುವರಿದರೆ 21 ನೇ ಶತಮಾನದಲ್ಲಿ ಜಾಗತಿಕ ತಾಪಮಾನ 4 c ನಷ್ಟು ಹೆಚ್ಚಾಗಿ ಜಗತ್ತು ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.ಅದಕ್ಕೆ ಪುಷ್ಟಿ ಎನ್ನುವಂತೆ 2010 ಅತ್ಯಂತ ಬಿಸಿಯಾದ ವರ್ಷ ಎಂದು ಈಗಾಗಲೇ ಅಂತರಾಷ್ಟ್ರೀಯ ವರದಿಗಳು ಹೇಳಿವೆ
.ಪ್ರಕೃತಿಯನ್ನು ಹಿಡಿತದಲ್ಲಿಟುಕೊಳಲ್ಲು ಪ್ರಯತ್ನ ಮಾಡುತ್ತಿರುವ ಮಾನವನಿಗೆ ಈಗ ಒಂದೊಂದಾಗಿ ಪ್ರಕೃತಿಯ ಇನ್ನೊಂದು ಮುಖದ ಪರಿಚಯವಾಗುತ್ತಿದೆ...
(ಮಾಹಿತಿ ಕೃಪೆ -BBC ,CNN ,PTI )
-ಪ್ರಕೃತಿಯನ್ನು ಉಳಿಸಿ-
Comments
Post a Comment