-ಕಾಡಿನ ಸಾಮ್ರಾಟ್ ಸಿಂಹಗಳು-
.ಕಾಡಿನ ರಾಜ,ಬಲಿಷ್ಟ, ಸುಂದರ ಪ್ರಾಣಿ, ಸಿಂಹಗಳ ಕಿರುಪರಿಚಯ ಈ ಪೋಸ್ಟ್ ನಲ್ಲಿ

.ಸಿಂಹಗಳ ಕುಟುಂಬ Felidae (Panthera leo)



.ಸುಮಾರು 10,೦೦೦ ವರ್ಷಗಳ ಹಿಂದೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಇವುಗಳು ಈಗ ಪ್ರಪಂಚದ ಕೆಲವು ಭಾಗಗಳಲ್ಲಿ ಮಾತ್ರ ಕಂಡುಬರುತ್ತವೆ


.ದೇಹವೇ 5 ರಿಂದ 8 ಅಡಿ ಉದ್ದವಾಗಿದ್ದು .ಬಾಲವು 24 ರಿಂದ 40 ಅಂಗುಲ ಉದ್ದವಿರುತ್ತದೆ


.4 ಅಡಿ ಎತ್ತರದವರೆಗೆ ಬೆಳೆಯಬಲ್ಲವು


.ಬಲಿಷ್ಟವಾದ ಇವುಗಳು 250 kg ವರೆಗೆ ತೂಗಬಲ್ಲವು.ಹೆಣ್ಣು ಸಿಂಹಗಳಿಗಿಂತ ಗಂಡು ಸಿಂಹಗಳು ತೂಕದಲ್ಲಿ ,ಗಾತ್ರದಲ್ಲಿ ದೊಡ್ದದಾಗಿರುತ್ತವೆ



.ಇದರ ತಲೆ ಬುರುಡೆ ಹಾಗು ಹುಲಿಯ ತಲೆ ಬುರುಡೆ ಸಾಮಾನ್ಯವಾಗಿ ಹೆಚ್ಚು ಕಡಿಮೆ ಸಮನಾದ ಗುಣ ಲಕ್ಷಣಗಳನ್ನು ಹೋಲುತ್ತದೆ


.ಇನ್ನು ಗಂಡು ಸಿಂಹದ ತಲೆ ಹಾಗು ಕುತ್ತಿಗೆಯ ಸುತ್ತ ಕೇಸರವಿರುವುದರಿಂದ ಅದು ಗಂಡು ಸಿಂಹಕ್ಕೆ ಅತ್ಯಂತ ಸುಂದರ ಹಾಗು ಅದ್ಭುತವಾದ ಸೌಂದರ್ಯವನ್ನು ತಂದುಕೊಟ್ಟಿದೆ


.ಪ್ರಪಂಚದಾದ್ಯಂತ 7 ಜಾತಿಯ ಸಿಂಹಗಳನ್ನು ಗುರುತಿಸಲಾಗಿದೆ .ಅವುಗಳು African lion,Asiatic lion,American Lion,Mountain Lion,Cave lion ಹಾಗು White lion


.ಹೆಚ್ಚಾಗಿ ಇವು ಹುಲ್ಲುಗಾವಲು ಹಾಗು ದಟ್ಟ ಕಾಡುಗಳಲ್ಲಿ ಕಂಡು ಬರುತ್ತವೆ


.ನಮ್ಮ ದೇಶದಲ್ಲಿ ಕೆಲವು northwestern ಭಾಗಗಳಲ್ಲಿ ಕಂಡು ಬರುತ್ತವೆ .ಮುಖ್ಯವಾಗಿ Gir Forest National Park (359 lions as of 2006 survey) ಇಲ್ಲಿ ನಮ್ಮ ದೇಶದಲ್ಲೇ ಅತ್ಯಂತ ಹೆಚ್ಚು ಸಿಂಹಗಳು ಕಂಡುಬರುತ್ತದೆ .ಇದು ಬಿಟ್ಟರೆ ನಮ್ಮ ದೇಶದ ಮತ್ತೆಲ್ಲಾ ಭಾಗಗಳಲ್ಲಿ ಸಿಂಹಗಳು ನಶಿಸಿ ಹೋಗಿವೆ


.ಸಿಂಹಗಳು ಗುಂಪಿನಲ್ಲಿ ವಾಸಿಸುವ ಪ್ರಾಣಿಗಳು , 15 ಸಿಂಹಗಲಿಗಿಂತಲೂ ಹೆಚ್ಚು ಸಿಂಹಗಳು ಗುಂಪಿನಲ್ಲಿರುತ್ತವೆ .ಇವುಗಳ ಗುಂಪನ್ನು prides ಎಂದು ಕರೆಯುತ್ತಾರೆ


.ಗುಂಪಿನಲ್ಲಿ ಇರುವ ಗಂಡು ಸಿಂಹಗಳು maturity ಹೊಂದಿದಾಗ ಅವುಗಳನ್ನು ಉಳಿದ ಸಿಂಹಗಳು ಗುಂಪಿನಿಂದ ಹೊರ ಹಾಕುತ್ತವೆ .ಹೊರ ಬಿದ್ದ ಸಿಂಹ (nomads ಎಂದು ಕರೆಯುತ್ತಾರೆ ) ತನ್ನ ಸ್ವಂತ ಶಕ್ತಿಯಿಂದ ಬೆಳೆದು ನಂತರ ಮತ್ತೆ ಗುಂಪಿನಲ್ಲಿ ಸೇರಿಕೊಳ್ಳುತ್ತದೆ

.ಗುಂಪಿನ ಹೆಣ್ಣು ಸಿಂಹಗಳೇ ಹೆಚ್ಚು ಭೇಟೆಯಾಡುತ್ತವೆ.ಗಂಡು ಸಿಂಹಗಳು ಹೆಚ್ಚಾಗಿ ಗುಂಪಿಗೆ ರಕ್ಷಣೆ ನೀಡುತ್ತವೆ 


.ಸಮಾನ್ಯವಾಗಿ ಸಿಂಹಗಳು 10 ರಿಂದ 14 ವರ್ಷಗಳವರೆಗೆ ಬದುಕಬಲ್ಲವು. ಮನುಷ್ಯ ನ ಹಿಡಿತದಲ್ಲಿರುವ (zoo)ಸಿಂಹಗಳು 20 ವರ್ಷಗಳಿಗಿಂತ ಜಾಸ್ತಿ ಬದುಕುತ್ತವೆ


.ಇವುಗಳ ಆಹಾರ ಹಲವಾರು ಪ್ರಾಣಿಗಳನ್ನು ಒಳಗೊಂಡಿರುತ್ತದೆ .ಅವುಗಳಲ್ಲಿ zebras, wild buffaloes, giraffes, rhinos, hippos, wildebeest ,deers ಮತ್ತು small rodents 


.ಕೆಲವೊಮ್ಮೆ ಇವುಗಳು hyna ಹಾಗು ಮನುಷ್ಯವಾಸಿಸುವ ಜಾಗಗಳ ಹತ್ತಿರ ಬಂದು ದನಗಳನ್ನು ತಿನ್ನುವುದೂ ಉಂಟು

.ಒಂದು ಊಟದಲ್ಲಿ 30 kg ವರೆಗೆ ಮಾಂಸವನ್ನು ತಿನ್ನಬಲ್ಲವು


.ಹೆಣ್ಣು ಸಿಂಹಕ್ಕೆ ದಿನವೊಂದಕ್ಕೆ 5 kg ಮಾಂಸದ ಅವಶ್ಯಕತೆ ಇದ್ದರೆ,ಗಂಡು ಸಿಂಹಕ್ಕೆ 7 kg ಮಾಂಸದ ಅವಶ್ಯಕತೆ ಇದೆ 


.ಹೆಚ್ಚಿನ ಸಮಯವನ್ನು ವಿಶ್ರಾಂತಿಯಲ್ಲೇ ಕಳೆಯುವ ಇವುಗಳ ದಿನಕ್ಕೆ 20 ಗಂಟೆ ತಮ್ಮ ಕರ್ತ್ಯಗಳನ್ನು ಸ್ಥಗಿತಗೊಳಿಸಿ ಆರಾಮಾಗಿ ಇರುತ್ತವೆ 



.ರಾತ್ರಿ ವೇಳೆ ಕಾರ್ಯಾಚರಣೆ ಮಾಡುವ ಇವುಗಳು ದಿನವೊಂದಕ್ಕೆ 2 ಗಂಟೆ ನಡೆಯುವುದರಲ್ಲೂ ಹಾಗು 50 ನಿಮಿಷ ಊಟ ಮಾಡುವುದರಲ್ಲೂ ಕಳೆಯುತ್ತವೆ

.ಗಂಟೆಗೆ 80 km ವೇಗದಲ್ಲಿ ಓಡಬಲ್ಲವು


.ಇವುಗಳು ಪ್ರತಿಸ್ಪರ್ಧಿಗಳನ್ನು ಸಹಿಸುವುದಿಲ್ಲ .ಹಾಗಾಗಿಯೇ ಕೆಲವೊಮ್ಮೆ ಚಿರತೆ,ಹೈನ ಹಾಗು ಚೀತಾಗಳ ಮೇಲೆ ಮುಗಿಬಿದ್ದು ಅವುಗಳನ್ನು ಮುಗಿಸಿಬಿಡುತ್ತವೆ


.ಆನೆಗಳ ಮೇಲೆ ಮುಗಿಬೀಳುವುದೂ ಉಂಟು .ಆದರೆ ಸಾಮಾನ್ಯವಾಗಿ ಆನೆಗಳ ತಂಟೆಗೆ ಹೋಗುವುದಿಲ್ಲ


.ಸಾಮಾನ್ಯವಾಗಿ 4 ನೇ ವಯಸ್ಸಿಗೆ ಹೆಣ್ಣು ಸಿಂಹಗಳು ಲೈಂಗಿಕ ಪ್ರಬುದ್ದತೆಯನ್ನು ಹೊಂದಿರುತ್ತದೆ .mating ವರ್ಷದ ಯಾವುದೇ ಸಮಯವಾದರೂ ಸಂಭಿಸಬಹುದು .ಗರ್ಭಾವಸ್ಥೆ ಯ ಅವಧಿ 110 ದಿನಗಳು


.ಸಾಮಾನ್ಯವಾಗಿ 1 ರಿಂದ 4 ಮರಿಗಳಿಗೆ ಸಿಂಹಿಣಿ ಜನ್ಮ ನೀಡುತ್ತಾಳೆ .ಹುಟ್ಟಿದಾಗ ಮರಿ 1 ರಿಂದ 2 kg ಯಷ್ಟು ತೂಗುತ್ತದೆ ಮರಿಗಳನ್ನು cubs ಎಂದು ಕರೆಯುತ್ತಾರೆ



.ಹೆಚ್ಚಿನ ಸನ್ನಿವೇಶದಲ್ಲಿ 80 percent ಮರಿಗಳು ಹಲವಾರು ಕಾರಣಗಳಿಂದ 2 ವರ್ಷ ಅವಧಿಗೆ ಮುನ್ನವೇ ಪ್ರಾಣ ಕಳೆದು ಕೊಳ್ಳುತ್ತವೆ



.ಮೊದಲ 3 ತಿಂಗಳು ಅಮ್ಮನ ಹಾಲನ್ನೇ ಕುಡಿದು ಬದುಕುವ ಮರಿಗಳು ನಂತರ ಮಾಂಸದ ರುಚಿ ನೋಡುತ್ತವೆ



.ಸಿಂಹಗಳು ಮನುಷ್ಯರನ್ನು ತಿಂದು ನರಭಕ್ಷಕಗಳಾದ ಘಟನೆಗಳು ಹೊರ ದೇಶಗಳಲ್ಲಿ ಸಂಭವಿಸಿವೆ .ಇದರಲ್ಲಿ 'Tsavo maneaters' ಗಳ ಘಟನೆ ಅತ್ಯಂತ ಪ್ರಸಿದ್ದಿಯಾಗಿದೆ .1898 ರಲ್ಲಿ ಕೀನ್ಯಾದ Tsavo ನದಿಗೆ ಸೇತುವೆ ಕಟ್ಟುವ ಕೆಲಸದ ಸಮಯದಲ್ಲಿ ಕೆಲಸ ಮಾಡುವ 28 ಕೆಲಸಗಾರರನ್ನು ಸಿಂಹಗಳು ಕೊಂದು ತಿಂದಿದ್ದವು

 
.ಸಿಂಹಗಳು ಈಗ ಅಪಾಯದಂಚಿನಲ್ಲಿರುವ ಪ್ರಾಣಿಗಳು 


.ಪ್ರಪಂಚದಲ್ಲಿ ಒಟ್ಟು 21,೦೦೦ ಸಿಂಹಗಳಿವೆ ಎಂದು ಹೇಳಲಾಗಿದೆ 

.ಆಫ್ರಿಕಾದ ಸಿಂಹಗಳಿಗೆ ಹೋಲಿಸಿದರೆ ಏಷಿಯಾದ ಸಿಂಹಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿವೆ.ಏಷಿಯಾ ದ ಸಿಂಹಗಳು ಇಂದು ಕಣ್ಮರೆಯ ಅಂಚಿನಲ್ಲಿವೆ

.ಅವಾಸ ಸ್ಥಾನ ನಾಶ ಹಾಗು ಮಾನವನ ಜೊತೆಗಿನ ಘರ್ಷಣೆ ಇವೆರಡು ಸದ್ಯ ಸಿಂಹಗಳನ್ನು ಕಾಡುತ್ತಿರುವ ಸಮಸ್ಯೆಗಳು


.ಸದ್ಯಕ್ಕೆ ಪ್ರಪಂಚದ ಹಲವು ನ್ಯಾಷನಲ್ ಪಾರ್ಕ್ ಗಳು ಸಿಂಹಗಳಿಗೆ ಆಶ್ರಯ ತಾಣಗಳಾಗಿವೆ


.'ಕಾಡಿನ ಸಾಮ್ರಾಟ್ -ಸಿಂಹಗಳು ' ಈ ಭೂಮಿಯನ್ನು ಬಿಟ್ಟು ಹೋಗದಿರಲಿ ಎಂಬುದೇ ಪ್ರಕೃತಿ ಪ್ರಿಯರ ಆಶಯ.....


-ಪ್ರಕೃತಿಯನ್ನು ಸಂರಕ್ಷಿಸಿ -

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....