Tuesday, December 7, 2010

-ಚಿರತೆ-
.ದೊಡ್ಡ ಬೆಕ್ಕಿನ ಜಾತಿಯ ಪ್ರಾಣಿಗಳಲ್ಲಿ ಅತ್ಯಂತ ಬಲಶಾಲಿಯಾದ,ಅತ್ಯಂತ ಚಾಣಾಕ್ಷತೆಯ ಕಾಡಿನ ಸುಂದರ ಜೀವಿ ಚಿರತೆಯ ಹಿಂದೆ ಸಾಗಿದೆ ನನ್ನ ಈ ಪೋಸ್ಟ್

.ಚಿರತೆಯ ಕುಟುಂಬ-Felidae

. IUCN ಚಿರತೆಯಲ್ಲೇ 9 ಉಪ ಜಾತಿಗಳನ್ನು ಗುರುತಿಸಿದೆ.ಅವುಗಳಲ್ಲಿ African leopard ,Indian leopard,Javan leopard ,Arabian leopard ,Amur leopard ಗಳು ಪ್ರಮುಖವಾದವು

.cheetah ಹಾಗು jaguar ಗಳು ಚಿರತೆಯನ್ನೇ ಹೋಲುವ ಇತರ ಪ್ರಾಣಿಗಳು

 .ಸಾಮಾನ್ಯವಾಗಿ ಚಿರತೆಳು 4.25 ರಿಂದ 6.25 ಅಡಿಯವರೆಗೆ ಉದ್ದವಾಗಿರುತ್ತದೆ.ಬಾಲವು 60 ರಿಂದ 110 cm ವರೆಗೆ ಬೆಳೆಯುತ್ತದೆ

.ಗಂಡು ಚಿರತೆಗಳು ಹೆಣ್ಣು ಚಿರತೆಗಳಿಗಿಂತ 30 % ಹೆಚ್ಚು ತೂಗುತ್ತವೆ

.ಗಂಡು ಚಿರತೆಗಳು 30 ರಿಂದ 91 kg ಹಾಗು ಹೆಣ್ಣು ಚಿರತೆಗಳು 23 ರಿಂದ 60 kg ವರೆಗೆ ಬೆಳೆಯಬಲ್ಲವು

.ಇವುಗಳು ಹೆಚ್ಚಾಗಿ ರಾತ್ರಿ ಸಮಯದಲ್ಲಿ ಹೆಚ್ಚಾಗಿ ಕಾರ್ಯಾಚರಣೆ ಮಾಡುತ್ತವೆ

.ಸಾಮಾನ್ಯವಾಗಿ ಹಗಲು ಹೊತ್ತು ಮರಗಳ ಮೇಲೆ ವಿಶ್ರಾಂತಿ ತೆಗೆದುಕೊಳ್ಳುತ್ತವೆ

.ಹುಲ್ಲುಗಾವಲು,ಗುಡ್ಡಗಾಡು ಮುಂತಾದ ಹೆಚ್ಚಿನ ಜಾಗಗಳಲ್ಲಿ ಇವು ವಾಸಿಸುತ್ತವೆ

.ಚಿರತೆಗಳು ಮರ ಹತ್ತುವುದರಲ್ಲಿ ಎತ್ತಿದ ಕೈ,ತನ್ನ ಭಾರಕ್ಕಿಂತ 3 ಪಟ್ಟು ಅಧಿಕ ಭಾರದ ಭೇಟೆಯನ್ನು ಬಾಯಲ್ಲಿ ಕಚ್ಚಿಕೊಂಡು ಸರಾಗವಾಗಿ ಮರ ಏರಬಲ್ಲವು

.ಚಿರತೆಗಳು ಅತ್ಯುತ್ತಮವಾಗಿ ಈಜುತ್ತವೆ

.ಹುಲಿಗಳಿಗೆ ಹೋಲಿಸಿದರೆ ಚಿರತೆಗಳಿಗೆ ನೀರೆಂದರೆ ಅಷ್ಟಕಷ್ಟೆ.ಇವುಗಳು ಸಾಮಾನ್ಯವಾಗಿ ನೀರನ್ನು ಇಷ್ಟಪಡುವುದಿಲ್ಲ

.ಕಾಡಿನಲ್ಲಿ ಇವುಗಳು ಜಾಡು ಹಿಡಿಯುವುದು ಅತ್ಯಂತ ಕಷ್ಟ .ನಿಗೂಡತೆಯ ಪ್ರಾಣಿಗಳು ಇವುಗಳು

.ಘಂಟೆಗೆ 58 kilometer ವೇಗದಲ್ಲಿ ಓಡಬಲ್ಲವು

.ಇವುಗಳು ಒಂದೇ ಜಾಗದಲ್ಲಿ 3 ದಿನಕ್ಕಿಂತ ಜಾಸ್ತಿ ವಾಸಿಸುವುದಿಲ್ಲ.ತಮ್ಮ ಜಾಗದ ವ್ಯಾಪ್ತಿಯನ್ನು urine ಮತ್ತು claw ಮಾರ್ಕ್ ಗಳ ಮೂಲಕ ಗುರುತಿಸುತ್ತವೆ

.ಇದು ಅತ್ಯಂತ ಯಶಸ್ವೀ ಭೇಟೆಗಾರ.ಇದರ ಆಹಾರ ಹೆಚ್ಚಿನ ಸಸ್ಯಾಹಾರಿ ಪ್ರಾಣಿಗಳನ್ನೊಳಗೊಂಡಿರುತ್ತದೆ

.ಇವುಗಳೂ ಹುಲಿಯಂತೆ ಕೊಂದ ಭೇಟೆಯನ್ನು ನಂತರದ ಭೂಜನಕ್ಕಾಗಿ ಮುಚ್ಚಿಡುತ್ತವೆ

.ಹೆಣ್ಣು ಚಿರತೆ 2 ರಿಂದ 3 ಮರಿಗಳಿಗೆ ಜನ್ಮ ನೀಡುತ್ತದೆ.ಮರಿಗಳಿಗೆ ಹುಟ್ಟಿದ 6 ನೇ ಅಥವಾ 7 ನೇ ವಾರದಲ್ಲಿ ಮಾಂಸದ ರುಚಿಯನ್ನು ತಾಯಿ ತೋರಿಸುತ್ತಾಳೆ

.ಸಾಮಾನ್ಯವಾಗಿ 18 ರಿಂದ 20 ವರ್ಷಗಳವರೆಗೆ ಬದುಕಬಲ್ಲವು

.ಕಪ್ಪು ಚಿರತೆಗಳು ವಿರಳವಾಗಿ ಕಂಡುಬರುತ್ತವೆ

.ಹಿಮಾಲಯದಲ್ಲಿ ಇರುವ ಚಿರತೆಗಳನ್ನು snow leopard ಎಂದು ಕರೆಯುತ್ತಾರೆ.ಇವುಗಳು ಅತ್ಯಂತ ಚಳಿಯನ್ನು ಎದುರಿಸಿ ಬದುಕಬಲ್ಲವು

.ಮನುಷ್ಯನನ್ನು ತಿನ್ನುವ ಚಿರತೆಗಳು ಹಿಂದಿನ ಕಾಲದಲ್ಲಿ ಇದ್ದವು.ಈಗಲೂ ಇವೆ

.ಹಿಂದಿನ ತಿಂಗಳಲ್ಲೇ (ನವೆಂಬರ್,2010 ) ನಮ್ಮ ಕರ್ನಾಟಕದಿಂದಲೇ ಮನುಷ್ಯನನ್ನು ತಿಂದ ಚಿರತೆಯೊಂದನ್ನು ಹಿಡಿದಿದ್ದರು

.ಸಾಮಾನ್ಯವಾಗಿ ಮನುಷ್ಯನ ತಂಟೆಗೆ ಚಿರತೆಗಳು ಬರುವುದಿಲ್ಲ.ಕಾಡಿನಲ್ಲಿ ಆಹಾರ ಸಿಗದಾದಾಗ ನಾಡಿನೆಡೆ ಮುಖ ಮಾಡುವು ಇವುಗಳು ಮೊದಲು ಸಾಕು ಪ್ರಾಣಿಗಳನ್ನು ಹಿಡಿಯಲು ಶುರು ಮಾಡುತ್ತವೆ.ನಂತರ ಸುಲಭವಾಗಿ ಸಿಗುವ ಮನುಷ್ಯನ ಮೇಲೆ ಆಕ್ರಮಣ ಮಾಡುತ್ತವೆ.ಒಮ್ಮೆ ಮನುಷ್ಯನ ರಕ್ತದ ರುಚಿ ನೋಡಿದರೆ ಮುಗಿಯಿತು.ಅಮೇಲೆ ಅತ್ಯಂತ ಚಾಣಾಕ್ಷತನದ ನರಭಕ್ಷಕಗಳಾಗಿ ಪರಿವರ್ತನೆ ಹೊಂದುತ್ತವೆ

.ಅತ್ಯಂತ ಕಳವಳಕಾರಿ ಸಂಗತಿಯೆಂದರೆ ಹುಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಚಿರತೆಗಳು ಭೂಮಿಯಿಂದ ಕಣ್ಮರೆಯಾಗುತ್ತಿದೆ

.ಇವುಗಳು ಕೂಡ ಮನುಷ್ಯನ 'ವಿನಾಶದಂಚಿನಲ್ಲಿರುವ ಪ್ರಾಣಿಗಳ' ಪಟ್ಟಿಗೆ ಸೇರಿಯಾಗಿದೆ

.ವಾರಾಕೊಮ್ಮೆಯಾದರು ಚಿರತೆಗಳ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಬಾರದೇ ಇರಲಾರದು

.ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಮಾನವನು ಕಾಡಿನಲ್ಲಿ ಇಡುವ ಉರುಳುಗಳಿಗೆ ಸಿಕ್ಕಿ,ಪ್ರಾಣಿಗಳನ್ನು ಅಟ್ಟಿಸಿಕೊಂಡು ಬಂದು ನಾಡಿನಲ್ಲಿ ಬಾವಿಗಳಲ್ಲಿ ಬಿದ್ದು ಚಿರತೆಗಳು ಪ್ರಾಣ ಬಿಡುತ್ತಿವೆ

.'ಹುಲಿ ರಕ್ಷಣೆಗೆ' ಶತಾಯ ಗತಾಯ ಪ್ರಯತ್ನ ಮಾಡುತ್ತಿರುವವರಿಗೆ ಚಿರತೆಗಳ ಕೂಗು ಕೇಳುತ್ತಿಲ್ಲವೇನೂ.....

.ಮುಂದಿನ ದಿನಗಳಲ್ಲಿ ಹುಲಿಗಿಂತಲೂ ಕಡಿಮೆ ಸಂಖ್ಯೆಗೆ ಚಿರತೆಗಳು ಇಳಿದರೂ ಆಶ್ಚರ್ಯ ಪಡಬೇಕಿಲ್ಲ

.ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕಿದೆ.ಹುಲಿ ಸಂರಕ್ಷಣೆಗೆ ತೆಗೆದುಕೊಂಡ ಕ್ರಮಗಳನ್ನು ಚಿರತೆಗಳ ರಕ್ಷಣೆಗೂ ಮಾಡಬೇಕಿದೆ.ನಗರಕ್ಕೆ ನುಗ್ಗುತ್ತಿರುವ ಚಿರತೆಗಳ ಬಗ್ಗೆ ಸೂಕ್ತ ರೀತಿಯಲ್ಲಿ ಅಧ್ಯಯನ ನಡೆಸಿ,ಅವುಗಳ ಆವಾಸ ಸ್ಥಾನವನ್ನು ಉಳಿಸುವತ್ತ ಹೆಜ್ಜೆ ಇಡಬೇಕಿದೆ

.ಚಿರತೆಗಳ ರಕ್ಷಣೆಯಲ್ಲಿ ಸರ್ಕಾರಗಳ ಪಾತ್ರವೆಷ್ಟು ಮುಖ್ಯವೂ ಅಷ್ಟೇ ಮುಖ್ಯವಾದ ಪಾತ್ರ ನಾಗರೀಕರಾದ ನಮ್ಮ ಮೇಲಿದೆ.ಚಿರತೆ ಊರಿಗೆ ಬಂತೆಂದರೆ ಗಲಾಟೆ.ದೊಂಬಿ ಮಾಡಿ ಅವುಗಳಿಗೆ ಹಿಂಸಿಸದೆ ಸಂಭಂದಪಟ್ಟವರಿಗೆ ಮಾಹಿತಿ ಮುಟ್ಟಿಸಿ ಅವುಗಳನ್ನು ಸುರಕ್ಷಿತ ಪ್ರದೇಶಕ್ಕೆ ಬಿಡಬೇಕಿದೆ

.ಕಾಡು ಉಳಿದರೆ ಚಿರತೆಗಳು ಉಳಿಯುತ್ತವೆ.ಆದ್ದರಿಂದ ಮುಖ್ಯವಾಗಿ ಕಾಡನ್ನು ಇಂದು ರಕ್ಷಿಸಬೇಕಿದೆ
.ಕಾಡನ್ನು ರಕ್ಷಿಸೋಣ,ಚಿರತೆಯನ್ನು ಉಳಿಸೋಣ..........


 3 Image courtesy-photos8.com


-ಪ್ರಕೃತಿಯನ್ನು ರಕ್ಷಿಸಿ-

No comments:

Post a Comment