Thursday, December 9, 2010

-ಬಿ ಆರ್ ಟಿ ಯಲ್ಲಿ ಹುಲಿ ಸಂರಕ್ಷಣೆ v/s ಸೋಲಿಗರ ಬದುಕು-
.ನಿನ್ನೆ ಕನ್ನಡದ ದಿನಪತ್ರಿಕೆ 'ಕನ್ನಡ ಪ್ರಭದಲ್ಲಿ' ಬಿ ಆರ್ ಟಿ ವನ್ಯಧಾಮದ ಬಗ್ಗೆ ಒಂದು ಸುದ್ದಿ ಪ್ರಕಟವಾಗಿತ್ತು.ಆ ಸುದ್ದಿಯ ಬಗ್ಗೆ ಈ ಪೋಸ್ಟ್ನಲ್ಲಿ ಬರೆದಿದ್ದೇನೆ

.ನಿಮಗೆ ಬಿ ಆರ್ ಟಿ ವನ್ಯಧಾಮ ಗೊತ್ತಿರಬಹುದು.ಗೊತ್ತಿಲ್ಲದಿದ್ದರೆ ಒಂದು ಸಣ್ಣ ಪರಿಚಯ ಮಾಡಿಕೊಡುತ್ತೇನೆ.ಈ ಬಿ ಆರ್ ಟಿ ಅಥವಾ ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನಲ್ಲಿರುವ ಒಂದು ಬೆಟ್ಟ ಶ್ರೇಣಿ.ಇದನ್ನು 'ವನ್ಯಜೀವಿ ಸಂರಕ್ಷಣೆ ಕಾಯ್ದೆ'ಯಡಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ

.ಇದು ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಸಂಗಮದಲ್ಲಿ ಇರುವುದರಿಂದ ಇಲ್ಲಿನ ಕಾಡು ಹಲವು ವ್ಯಷಿಷ್ಟತೆಯಿಂದ ಕೂಡಿದೆ

.ಇದರ ಈಗಿನ ಒಟ್ಟು ವಿಸ್ತೀರ್ಣ 539.52 km²

.26 ಜಾತಿಯ ಸಸ್ತನಿಗಳ ಜೊತೆಗೆ ಇಲ್ಲಿ ಹಲವಾರು ಪ್ರಾಣಿಗಳಿವೆ.sambhar, chital,barking deer ,leopards, wild dogs, lesser cats and sloth bears ಗಳಂತಹ ಪ್ರಾಣಿಸಮೂಹದಿಂದ ಕೂಡಿದೆ ಬಿ ಆರ್ ಟಿ

.ಇಷ್ಟೇ ಅಲ್ಲದೆ ನಮ್ಮ ಹುಲಿರಾಯನ ಸಂತತಿಯೂ ಇಲ್ಲಿದೆ.2006 ರಲ್ಲಿ ನಡೆದ ಹುಲಿ ಗಣತಿ ಪ್ರಕಾರ ಇಲ್ಲಿ ಒಟ್ಟು 37 ಹುಲಿಗಳಿವೆ ಎಂದು ಹೇಳಲಾಗಿದೆ

.ಇಲ್ಲಿ ವಾಸ ಮಾಡುವ ಜನಾಂಗವೇ ಸೋಲಿಗರು.ಇವರು ಈ ಕಾಡಿನಲ್ಲಿ ನೂರಾರು ವರ್ಷಗಳಿಂದ ಬದುಕು ನಡೆಸುತ್ತಿದ್ದಾರೆ
.ಇವಿಷ್ಟು ಬಿ ಆರ್ ಟಿ ಯ ಬಗ್ಗೆ ಕಿರು ಪರಿಚಯ

.ಈಗ ವಿಷಯಕ್ಕೆ ಬರೋಣ.ಯಾವಾಗ ಇಲ್ಲಿ ಹುಲಿಗಳ ಸಂಖ್ಯೆ 30 ರ ಮೇಲಿದೆ ಎಂದು ಗೊತ್ತಾಯಿತೋ ಆಗ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ಇಲ್ಲಿನ ಪ್ರಕೃತಿ ಮಹತ್ವ ಅರಿತು ಹುಲಿಗಳ ರಕ್ಷಣೆಗಾಗಿ ಇದನ್ನು 'ಹುಲಿ ಸಂರಕ್ಷಿತ ಅರಣ್ಯ'ವನ್ನಾಗಿ ಘೋಶಿಸ ಬೇಕೆಂದು ಕೇಂದ್ರ ಪರಿಸರ ಇಲಾಖೆಗೆ ಪ್ರಸ್ತಾವನೆ ಕಳುಹಿಸಿತ್ತು

.ಭೂಮಿಯಿಂದಲೇ ಕಣ್ಮರೆಯಾಗುತ್ತಿರುವ ಹುಲಿಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಈ ನಿರ್ಧಾರವೇನೂ ಒಳ್ಳೆಯದೇ ಇತ್ತು .ಆದರೆ ಸಮಸ್ಯೆ ಆಗ ಶುರುವಾಗಿತ್ತು

.ಒಂದು ಪ್ರದೇಶವನ್ನು 'ಹುಲಿ ಸಂರಕ್ಷಿತ ಅರಣ್ಯ' ಎಂದು ಘೋಷಣೆ ಮಾಡಿದ ಬಳಿಕ ಆ ಪ್ರದೇಶ ಸಂಪೂರ್ಣ ಹುಲಿಗಳ ರಾಜ್ಯವಾಗುತ್ತದೆ.ಅಲ್ಲಿ ಮಾನವರ ವಾಸ ಹಾಗು ಇತರೆ ಅವನ ಇತರೇ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ .ಆಗ ಅದು ಹುಲಿಗಳ ಸಾಮ್ರಾಜ್ಯ ಮಾತ್ರ

.ಇಲ್ಲಿ ಆಗಿರುವ ಸಮಸ್ಯೆ ಎಂದರೆ ಅಕಸ್ಮಾತ್ ಬಿ ಆರ್ ಟಿ ಯನ್ನು 'ಹುಲಿ ಸಂರಕ್ಷಿತ ಅರಣ್ಯ'ವನ್ನಾಗಿ ಮಾಡಿದರೆ ಅಲ್ಲಿ ನೂರಾರು ವರ್ಷಗಳಿಂದ ಬದುಕು ನಡೆಸುತ್ತಿರುವ ಸಾವಿರಾರು ಸೋಲಿಗರು ತಮ್ಮ ನೆಲೆಯನ್ನು ಬಿಟ್ಟು ಬೇರೆಡೆಗೆ ಹೋಗಬೇಕಾಗುತ್ತದೆ

.ಕಾಡಿನಲ್ಲೇ ಹುಟ್ಟಿ,ಕಾಡಿನ ಜೊತೆಗೆ ಬೆಳೆದು,ಕಾಡನ್ನೇ ನಂಬಿಕೊಂಡಿರುವ ಸೋಲಿಗರು ಅರಣ್ಯ ಇಲಾಖೆಯ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರು .ಅವರ ಪರವಾಗಿ ಹಲವಾರು ಹೋರಾಟಗಳು ಶುರುವಾದವು


.ಈ ವಿಷಯ ಅರಣ್ಯ ಇಲಾಖೆ ಹಾಗು ಸೋಲಿಗರು ಮತ್ತು ಅವರ ಪರದವರ ನಡುವಿನ ತಿಕ್ಕಾಟಕ್ಕೆ ಕಾರಣವಾಯಿತು.ಈ ಜಗಳದಲ್ಲಿ ನಡುವೆ ಹಲವಾರು ವಿಷಯಗಳು ಕೂಡ ಬಂದು ಹೋದವು

.ಈಗ ಈ ವಿವಾದಕ್ಕೆ ಒಂದು ಪರಿಹಾರ ಸೂತ್ರವನ್ನು ಡಾ ! ಸುದರ್ಶನ್ (ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಮುಖ್ಯಸ್ಥರು ) ನೀಡಿದ್ದಾರೆ .ಅವರ ಸೂತ್ರದಂತೆ ಬಿ ಆರ್ ಟಿ ಯನ್ನು 'ಹುಲಿ ಸಂರಕ್ಷಿತ ಅರಣ್ಯ' ವನ್ನಾಗಿ ಮಾಡುವ ಬದಲು ಅದನ್ನು 'ಸಮುದಾಯ ಆಧಾರಿತ ಹುಲಿ ಸಂರಕ್ಷಿತ ಅರಣ್ಯ'ವನ್ನಾಗಿ ಮಾಡಬೇಕೆಂದು

.ಹಿಗೆಂದರೇನು ಎಂದು ನೀವು ಕೇಳಬಹುದು.ಇದು ತುಂಬಾ ಸಿಂಪಲ್ .ಸೋಲಿಗರನ್ನು ವಕ್ಕಲೆಬ್ಬಿಸದೆ ಅವರನ್ನು ಕೂಡ ಹುಲಿ ಸಂರಕ್ಷಣೆ ಯಲ್ಲಿ ಬಳಸಿಕೊಳ್ಳುವುದು.ಅವರಿಗೆ ಇದರ ಮಹತ್ವ ವನ್ನು ತಿಳಿಸಿಕೊಟ್ಟು ,ಅವರ ಜೀವನಕ್ಕೆ ಅಧಾರವಾಗುವಂತೆ ಅಲ್ಲೇ ಅರಣ್ಯ ಪ್ರವಾಸೋದ್ಯಮದ ಮೂಲಕ ಉಪ ಕಸುಬು ಕಲ್ಪಿಸುವುದು.ಅವರ ಜೀವನವನ್ನು ಉತ್ತಮ ಗೋಳಿಸುವುದರ ಜೊತೆಗೆ ಅವರ ಸಹಾಯದಿಂದ ಹುಲಿ ಸಂರಕ್ಷಣೆಯ ಮಹತ್ತರವಾದ ಗುರಿಯನ್ನು ಸಾಧಿಸುವುದು

.ಈ ಪ್ರಸ್ತಾವ ಸದ್ಯಕ್ಕೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಸಚಿವರಾದ ಜೈ ರಾಮ್ ರಮೇಶ್ ಮುಂದಿದೆ

.ಈ ವಿಚಾರಗಳ ಬಗ್ಗೆ ಸ್ಪಷ್ಟವಾಗಿ ಇದೇ ಸರಿ ಇದೇ ತಪ್ಪು ಎಂದು ಹೇಳಬೇಕಾದರೆ ಆ ವಿಷಯಗಳ ಬಗ್ಗೆ ಆಳವಾದ ಅರಿವು ಅಗತ್ಯ .ಅದರ ಬಗ್ಗೆ ಇದೇ ಸರಿ ಇದೇ ತಪ್ಪು ಎಂದು ಹೇಳುವಷ್ಟು ದೊಡ್ಡವನು ನಾನಲ್ಲ .ಆದರೆ ನನ್ನ ಯೋಚನೆ ಮಟ್ಟಿಗೆ ನನ್ನ ವಯಕ್ತಿಕ ಅಭಿಪ್ರಾಯದಲ್ಲಿ ಹೇಳುವುದಾದರೆ ಈ ಪ್ರಸ್ತಾವನೆ ನಿಜಕ್ಕೂ ಒಂದು ಒಳ್ಳೆಯ ಮಾರ್ಗ

.ಕಾಡಿನ ಹಾಗು ಕಾಡು ಪ್ರಾಣಿಗಳ ಮಹತ್ವ ತಿಳಿದಿರುವ ಸೋಲಿಗರು ಅದೇ ಕಾಡಿನಲ್ಲಿರುವ ಹುಲಿಗಳ ಸಂತತಿಗೆ ಕುತ್ತು ತರಲಾರರು.ಅವರಿಗೆ ಕಾಡಿನ ಬಗ್ಗೆ ಇರುವ ಅಪಾರ ಜ್ಞಾನ ಅದು ಬೆಲೆ ಕಟ್ಟಲಾಗದಂತಹ ವಿಷಯ

.ಅವರ ಈ ಕಾಡಿನ ಅಪಾರ ಜ್ಞಾನವನ್ನು ಪ್ರತ್ಯಕ್ಷವಾಗಿಯೂ ಅಥವಾ ಪರೋಕ್ಷವಾಗಿಯೋ ಬಳಸಿಕೊಂಡಲ್ಲಿ ಖಂಡಿತ ಹುಲಿ ಸಂರಕ್ಷಣೆಗೆ ಯಶಸ್ಸು ಸಿಗುತ್ತದೆ ಎಂಬುದು ನನ್ನ ಭಾವನೆ

.ಅರಣ್ಯ ಇಲಾಖೆಯ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಸೋಲಿಗರನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ಖಂಡಿತ ಇದು ಯಶಸ್ವಿಯಾಗುವುದರಲ್ಲಿ ಎರಡು ಮಾತಿಲ್ಲ 
 
.ಇದರ ಬಗ್ಗೆ ಬಗ್ಗೆ ಎಷ್ಟೇ ಮಾತನಾಡಿದರೂ ಈಗ ಚೆಂಡು ಇರುವುದು ಜೈ ರಾಮ್ ರಮೇಶ್ ಅಂಗಳದಲ್ಲಿ.ಅವರು ತೆಗೆದುಕೊಳ್ಳುವ ನಿರ್ಧಾರವನ್ನು ಕಾದು ನೋಡ ಬೇಕಿದೆ


.ಒಟ್ಟಿನಲ್ಲಿ ನಮ್ಮ ಹುಲಿರಾಯನ ಸಂತತಿಯೂ ಬೆಳೆಯಲಿ,ಸೋಲಿಗರ ಬದುಕು ಮೂರಾಬಟ್ಟೆಯಾಗದೆ ಹಸನಾಗಲಿ ಎಂಬುದೇ ನಮ್ಮ ಆಶಯ...........................

-ಪ್ರಕೃತಿಯನ್ನು ಉಳಿಸಿ-

2 comments:

  1. vanypraani mitrare, Dr.sudharshan ivara salahe oppuvantaddu. nimma vichaara saha sahamatavide. Adare pravaasodhyamada hesarinalli parisara dourjanya, soligara pramaanikate, mugdhate balasikondu akrma mattu avyvaharagalu nadeyabaradu. pravaasakke banda janarE huligalagiruttare. ee modalu ide reeti abhayaaranyagalannu pravasodyamakke balasikondaaga durupayoga padisikond udhaharanegalive oppuvira?

    ReplyDelete
  2. nimma vichaara oppuvantadde

    praanigalu amoolya

    avugala rakshane nammellara hone

    ReplyDelete