-ಪ್ರಕೃತಿಯ  ದಿನದಂದು-
.ಈ ಪೋಸ್ಟ್ ನಾನು ಮತ್ತು ನಮ್ಮ ಹುಡುಗರು 2010 ರ ವಿಶ್ವ ಭೂ ದಿನಾಚರಣೆ ಮತ್ತು ಪರಿಸರ ದಿನ ಗಳಲ್ಲಿ ಪ್ರಕೃತಿಗಾಗಿ ಮಾಡಿದ ಒಂದು ಒಳ್ಳೆ ಕೆಲಸದ ಬಗ್ಗೆ

.'ಪ್ರಕೃತಿ ದಿನಗಳಲ್ಲಿ' ನಾನು ಗಿಡ ನೆಟ್ಟಿದ್ದು ಈ ವರ್ಷವೇ ಪ್ರಥಮ

.ಇಷ್ಟು ವರ್ಷಗಳವರೆಗೆ ನಾನು ಪ್ರಕೃತಿಯ ದಿನಗಳಲ್ಲಿ ನನ್ನ Mob RAGAT ನಲ್ಲಿ ಪ್ರಕೃತಿಯ ಬಗ್ಗೆ ಅರಿವು ಮೂಡಿಸುವ ಸಂದೇಶವನ್ನು ಹಾಕುತ್ತಿದ್ದೆ.ಆದರೆ ಈ ವರ್ಷವೇ ಗಿಡ ನೆಡುವ ಕಾರ್ಯಾಚರಣೆಗೆ ಇಳಿದಿದ್ದು

.ಮೊದಲು 'Earth day ' ಯಂದು ನಾನು ಮತ್ತೆ ನಮ್ಮ ಚಿಕ್ಕಮ್ಮನ ಮಗ ಆದಿ ತೋಟಗಾರಿಕೆ ಇಲಾಖೆಯಿಂದ 2 ಗಿಡ ತಂದು ನೆಟ್ಟಿದ್ದೆವು

.ನಂತರ 'ಪರಿಸರ ದಿನದಂದು' ನಮ್ಮ ಅಡ್ಡಾದ ಹುಡುಗರನೆಲ್ಲಾ   ಹಿಡಿದು ಮತ್ತೆ ಇನ್ನೊಂದೆಡೆ ತೋಟಗಾರಿಕೆ ಇಲಾಖೆಯಿಂದ ಒಳ್ಳೆಯ 10 ಗಿಡಗಳನ್ನು ತಂದು ನೆಟ್ಟಿದ್ದೆವು

.ಬೆಳೆದ ಗಿಡಗಳ ಈಗಿನ ಪರಿಸ್ತಿತಿಯ ಬಗ್ಗೆ ಪೋಸ್ಟ್ ನ ಕೊನೆಯಲ್ಲಿ ಬರೆದಿದ್ದೇನೆ .ಈ ಮಾತನ್ನು ಏಕೆ ಹೇಳಿದೆ ಎಂದರೆ 'ಪ್ರಕೃತಿಯ ದಿನಗಳಲ್ಲಿ ' ಗಿಡ ನೆಡುವವರ ಸಂಖ್ಯೆಗೇನೂ ಕಡಿಮೆ ಇಲ್ಲ .ಆದರೆ ವಿಪರ್ಯಾಸ ಎಂದರೆ ಈ ವರ್ಷ ಗಿಡ ನೆಟ್ಟ ಜಾಗದಲ್ಲೇ ಮುಂದಿನ ವರ್ಷ ಮತ್ತೊಂದು ಗಿಡ ನೆಡಬೇಕಾದ ಪರಿಸ್ತಿತಿ ಬರುವುದು (ಅಂದರೆ ನೆಟ್ಟ ಗಿಡ ವಾರದೊಳಗೆ ಚಟ್ಟ ಸೇರುತ್ತದೆ ಎಂದು )

.so ಈ ವರ್ಷ ನಮ್ಮ ದಿನ 'ಪ್ರಕೃತಿಯ ದಿನದಂದು' ಮಾಡಿದ ಕಾರ್ಯಾಚರಣೆಯ ಇಮೇಜ್ ಗಳನ್ನು upload ಮಾಡಿದ್ದೇನೆ .ನೋಡಿ ಖುಷಿ ಬಂದ್ರೆ ನೀವು ಒಂದು ಗಿಡ ನೆಟ್ಟು ಬಿಡಿ

-ವಿಶ್ವ ಭೂ ದಿನಾಚರಣೆ-
ಗಿಡಗಳೊಂದಿಗೆ ನಾನು
ಆದಿ












ಗಿಡವನ್ನು ನೆಟ್ಟು ಅದಕ್ಕೆ ನೀರು ಹಾಕುವುದರಲ್ಲಿ ಏನೂ ಆನಂದ 
ಸಪೋಟ ಗಿಡ
ಮಾವು

.ಈ ಗಿಡಗಳು 2 ತಿಂಗಳು ಚೆನ್ನಾಗಿ ಬೆಳೆದು ಚಿಗುರಿದ್ದವು

.ಆದರೆ ದುರಾದೃಷ್ಟವಶಾತ್ ಒಮ್ಮೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಜನ ಸಪೋಟ ಗಿಡವನ್ನು ತಿಳಿಯದೆ ಕಿತ್ತು ಬಿಸಾಟಿದ್ದರು

.ಅದ್ದೂರಿಯಾಗಿ ನೆಟ್ಟ ಒಂದು ಗಿಡವನ್ನು ಉಳಿಸಲಾಗಲಿಲ್ಲ 
.i am sorry dear nature ......

.ಇನ್ನೊಂದು ಗಿಡ ಚೆನ್ನಾಗಿ ಬೆಳೆಯುತ್ತಿದೆ 

-ವಿಶ್ವ ಪರಿಸರ ದಿನಾಚರಣೆ-
ತೋಟಗಾರಿಕೆ ಇಲಾಖೆ
.ಈ ಸಾರಿ ನಾವು ಅಂಗನವಾಡಿಯಲ್ಲೂ ಗಿಡ ನೆಡಲು ಹೋಗಿದ್ದೆವು

.ಪುಟ್ಟ ಮಕ್ಕಳನ್ನು  ನಮ್ಮ ಗಿಡ ನೆಡುವ ಕಾರ್ಯಾಚರಣೆಯಲ್ಲಿ ಬಳಸಿಕೊಂಡೆವು 



.ಹೊಂಡ ತೆಗೆಯುತ್ತಿರುವ ಆದಿ,ಕಾರ್ತಿಕ್
.ಮಕ್ಕಳ ಕೈಯಿಂದ ಗಿಡ ನೆಡಿಸುವ ಕೆಲಸ









.ಪ್ರಕೃತಿ ಬಗ್ಗೆ ಜಾಗೃತಿಗೆ ಒಳ್ಳೆ ಚಿತ್ರ

.ನಮ್ಮ ಟೀಂ

.ಗಿಡಗಳೊಂದಿಗೆ ನಾವು


.ಪರಿಸರ ದಿನದಂದು ನೆಟ್ಟ ಎಲ್ಲಾ ಗಿಡಗಳು ಈಗ ಚೆನ್ನಾಗಿ ಬೆಳುಯುತ್ತಿವೆ 

.ಹೀಗೆ ಈ ವರ್ಷನೆಟ್ಟ ಗಿಡಗಳ ಸಂಖ್ಯೆ ಕಡಿಮೆ ಆದರೂ ಪ್ರಕೃತಿಗೆ ನೀಡಿದ ಸಣ್ಣ ಕೊಡುಗೆ ನೀಡಿದ ತೃಪ್ತಿ ನನ್ನಲ್ಲಿದೆ

.so ನೀವು ಒಂದು ದೊಡ್ಡ ಮನಸ್ಸು ಮಾಡಿ.ಬಿಡುವಿದ್ದಾಗ ಮನೆಯ ತೂಟದಲ್ಲೋ ಅಥವಾ ಗಿಡವನ್ನು ಚೆನ್ನಾಗಿ ನೋಡಿಕೊಳ್ಳುವ ಶಾಲೆಗಳಲ್ಲೋ,ಅಂಗನವಾಡಿಗಳಲ್ಲೋ ಒಂದೆರಡು ಗಿಡ ನೆಡಿ.ಅದನ್ನು ಬೆಳೆಸಿ

.ಸುಮ್ಮನೆ ಏನೂ ಮಾಡದೇ ಇರುವುದಕ್ಕಿಂತ atleast ಇಂತಹ  ಸಣ್ಣ ಪುಟ್ಟ ಕೆಲಸ ಮಾಡುವುದರಿಂದ  ಪ್ರಕೃತಿಗೆ ಎಷ್ಟೋ ಉಪಕಾರವಾಗುತ್ತದೆ 

.ನೀವು ಗಿಡ ನೆಡ್ತೀರ ಆಲ್ವಾ................????

-ಪ್ರಕೃತಿಯನ್ನು ರಕ್ಷಿಸಿ-

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....