Sunday, December 5, 2010

-ಇಸ್ರೇಲ್ ನಲ್ಲಿ ಕಾಡ್ಗಿಚ್ಚಿನ ರುದ್ರ ನರ್ತನ -
.'ಇಸ್ರೇಲ್ ನಲ್ಲಿ ಕಾಡ್ಗಿಚ್ಚು ' ಈ ಸುದ್ದಿಯನ್ನು ನಾನು ಮೊದಲು ಕೇಳಿದಾಗ ಅಷ್ಟೇನೂ ಗಮನ ಕೊಡಲಿಲ್ಲ .ಎಲ್ಲೊ ಪ್ರಕೃತಿ ಸಹಜವಾಗಿ ಕಾಡ್ಗಿಚ್ಚು ಅಂದುಕೊಂಡಿದ್ದೆ

.ಆದರೆ ಈ ಸಂಜೆ ನಾನು ಇದರ ಬಗ್ಗೆ ಗಮನ ಹರಿಯಿಸಿದಾಗ ಗೊತ್ತಾಯಿತು ಇದು ಸಾಧಾರಣವಾದ ಕಾಡ್ಗಿಚ್ಚು ಅಲ್ಲವೆಂದು

.ಈ ಗುರುವಾರ ಸಣ್ಣದಾಗಿ ಹಬ್ಬಿದ ಕಾಡ್ಗಿಚ್ಚು ಈಗ ಅಕ್ಷರಶಃ ಇಸ್ರೇಲ್ ನ ನಿದ್ದೆಗೆಡಿಸಿದೆ

.ಇದೀಗ ಇಸ್ರೇಲ್ ಲಿನ ಉತ್ತರ ಭಾಗದತ್ತ ಹಬ್ಬುತ್ತಿರುವ ಕಾಡ್ಗಿಚ್ಚನ್ನು ಆರಿಸಲಾಗದೆ ಇಸ್ರೇಲ್ ಕೈ ಚೆಲ್ಲಿ ಕುಳಿತಿದೆ

.ಈಗಾಗಲೇ ಹಲವು ದೇಶಗಳು ಇಸ್ರೇಲ್ ನೆರವಿಗೆ ಬಂದಿದ್ದು ಕಾಡ್ಗಿಚ್ಚನ್ನು ಆರಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.ಆದರೂ ಬೆಂಕಿ ಹಿಡಿತಕ್ಕೆ ಸಿಕ್ಕುತ್ತಿಲ್ಲ

.ಈಗಾಗಲೇ 41 ಮಂದಿ ಕಾಡ್ಗಿಚ್ಚಿನ ಕೆನ್ನಾಲಿಗೆಗೆ ಬಲಿಯಾಗಿದ್ದಾರೆ

.ಅದಕ್ಕಿಂತಲೂ ಮುಖ್ಯವಾಗಿ ಇಸ್ರೇಲ್ ನ 8 ,೦೦೦ acre ಅರಣ್ಯ ಸುಟ್ಟು ಭಸ್ಮವಾಗಿದೆ

.ಈಗಾಗಲೇ 17 ,೦೦೦ ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರಿಸಲಾಗಿದೆ

.ಮೊದಲೇ ಬರಗಾಲದಲ್ಲಿ ಬೆಂದು ಹೋಗಿರುವ ಇಸ್ರೇಲ್ ಗೆ ಇದು ಇನ್ನಷ್ಟು ದೊಡ್ಡ ಹೊಡೆತವಾಗಿದೆ

.ಕಳವಳಕಾರಿ ಸಂಗತಿ ಎಂದರೆ ಈ ಬೆಂಕಿಯ ಹಿಂದೆ ಮಾನವನ ಕೈವಾಡವಿರುವ ಶಂಕೆ ವ್ಯಕ್ತವಾಗುತ್ತಿದೆ.ಈಗಾಗಲೇ ಈ ಬಗ್ಗೆ ಇಸ್ರೇಲ್ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ

.ನಾನು ಈ ಪೋಸ್ಟ್ ಬರೆಯುವ ಹೊತ್ತಿಗಿನ updates ಅನ್ನು ಮಾತ್ರ ಇಲ್ಲಿ ಬರೆದಿದ್ದೇನೆ .ಈ ಕಾಡ್ಗಿಚ್ಚು ಇನ್ಯಾವ ಮಟ್ಟ ಮುಟ್ಟುತ್ತದೋ ಆ ದೇವರಿಗೇ ಗೊತ್ತು

.ಈ ಕಾಡ್ಗಿಚ್ಚು ಬೇಗ ಶಾಂತವಾಗಲಿ ಎಂದು ಹಾರೈಸೋಣ.ಹಾಗೆ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಕಾಡ್ಗಿಚ್ಚನ್ನು ಆರಿಸಲು ಪ್ರಯತ್ನಿಸುತ್ತಿರುವ ಧೀರರಿಗೆ ನಮ್ಮ ಸಲಾಂ

.ಇಸ್ರೇಲ್ ನ ಕಾಡ್ಗಿಚ್ಚಿನ ರುದ್ರ ನರ್ತನದ ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

No comments:

Post a Comment